ಕ್ವೀನ್ ಎಲಿಜಬೆತ್ (ಮುಸ್ಲಿಮೇತರ) ಆತ್ಮಕ್ಕೆ ಶಾಂತಿಗಾಗಿ (ಉಮ್ರಾ) ಪ್ರಾರ್ಥಿಸಲು ಮಕ್ಕಾ ಮಸ್ಜಿದ್‌ಗೆ ಹೋದ ಮುಸ್ಲಿಂ ಯುವಕ: ಬಳಿಕ ಆತನ ಜೊತೆ ನಡೆದದ್ದೇ ಘೋರ ದುರಂತ

in Kannada News/News 817 views

ಬ್ರಿಟನ್ ರಾಣಿ ಎಲಿಜಬೆತ್ II (Queen Elizabeth II) ಸಾವಿನ ನಂತರ, ಆಕೆಯ ಹೆಸರಿನಲ್ಲಿ ಉಮ್ರಾ ಮಾಡಲು ಹೋದ ಯೆಮೆನ್ ಪ್ರಜೆಯನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಎಲಿಜಬೆತ್ ಹೆಸರಿನ ಬ್ಯಾನರ್ ಹಿಡಿದು ಮೆಕ್ಕಾ ಮಸೀದಿ ಪ್ರವೇಶಿಸಿದ್ದ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

Advertisement

ಮುಸ್ಲಿಮೇತರ ಕ್ವೀನ್ ಎಲಿಜಬೆತ್‌ಗೆ ಉಮ್ರಾ (Umrah for Queen Elizabeth) ನೆರವೇರಿಸಿದ್ದಕ್ಕಾಗಿ, ಸೋಶಿಯಲ್ ಮೀಡಿಯಾಗಳಲ್ಲಿ ಮುಸ್ಲಿನರು ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲು ಪ್ರಾರಂಭಿಸಿದರು. ಬಂಧಿತ ವ್ಯಕ್ತಿಯನ್ನು ಈಗ ಸೌದಿ ಕಾನೂನುಗಳ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಈ ಪ್ರಕರಣ ಸೋಮವಾರ (ಸೆಪ್ಟೆಂಬರ್ 12, 2022) ರಂದು ನಡೆದಿದೆ.

ಸೆರೆ ಸಿಕ್ಕ ಯೆಮೆನ್ ಪ್ರಜೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆತ ಬಿಳಿ ಬಟ್ಟೆಯನ್ನು ಧರಿಸಿ ಮೆಕ್ಕಾ ಮಸೀದಿಯ ಗೋಡೆಯ ಪಕ್ಕದಲ್ಲಿ ನಿಂತಿದ್ದಾನೆ. ಆತನ ಕೈಯಲ್ಲಿ “ರಾಣಿ ಎಲಿಜಬೆತ್ II ರ ಉಮ್ರಾ, ನಾವು ಅವರನ್ನು ಜನ್ನತ್ ನಲ್ಲಿ ಸ್ವೀಕರಿಸುವಂತೆ ಖುದಾಗೆ (ಅಲ್ಲಾಹು) ಕೇಳಿಕೊಳ್ಳುತ್ತೇವೆ” ಎಂದು ಬರೆದಿರುವ ಬ್ಯಾನರ್ ಇದೆ.

ಬ್ರಿಟನ್‌ನ ರಾಣಿ ಎಲಿಜಬೆತ್‌ಗಾಗಿ ಯುವಕನೊಬ್ಬ ಉಮ್ರಾ ಮಾಡುತ್ತಿರುವುದನ್ನು ಹಾಗು ಉಳಿದವರು ವಿಡಿಯೋ ಮಾಡುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ವೀಡಿಯೊದಲ್ಲಿ, ವ್ಯಕ್ತಿಯು ಬ್ಯಾನರ್‌ನಲ್ಲಿ ಬರೆದ ಪದಗಳನ್ನು ಸ್ವತಃ ಓದಿ ಪುನರಾವರ್ತಿಸುತ್ತಾನೆ.

ವಿಡಿಯೋದಲ್ಲಿ ಕಂಡ ವ್ಯಕ್ತಿಯನ್ನು ಬಂಧಿಸಿದಾಗ, ಆರೋಪಿಯು ಉಮ್ರಾ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಸೌದಿ ಪೊಲೀಸರು ಒಪ್ಪಿಕೊಂಡಿದ್ದಾರೆ. ಈ ಘಟನೆಯನ್ನು ಸೌದಿ ಸರ್ಕಾರದ ಅಧಿಕೃತ ಟಿವಿ ಚಾನೆಲ್‌ನಲ್ಲಿಯೂ ಪ್ರಸಾರ ಮಾಡಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಉಮ್ರಾ ಮುಸ್ಲಿಮರಿಗೆ ಮಾತ್ರ ಮತ್ತು ಎಲಿಜಬೆತ್ ಕ್ರಿಶ್ಚಿಯನ್ ಸಮುದಾಯದವರಾಗಿದ್ದಾರೆ. ಈಗ ಆರೋಪಿಯ ಬಗ್ಗೆ ಸೌದಿ ಸರ್ಕಾರದ ನ್ಯಾಯಾಲಯ ಯಾವ ನಿರ್ಧಾರ ಕೈಗೊಳ್ಳುತ್ತೋ ಕಾದು ನೋಡಬೇಕಿದೆ.

ಬ್ರಿಟನ್‌ನ ರಾಣಿ ಎಲಿಜಬೆತ್ II (Queen Elizabeth II) ಗುರುವಾರ (ಸೆಪ್ಟೆಂಬರ್ 8, 2022) ಸ್ಕಾಟ್‌ಲ್ಯಾಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಅವರು ಏಪ್ರಿಲ್ 21, 1926 ರಂದು ಜನಿಸಿದ್ದರು, ಅವರ ತಂದೆ ಜಾರ್ಜ್ VI ಮರಣದ ನಂತರ ಕೇವಲ 25 ನೇ ವಯಸ್ಸಿನಲ್ಲಿ ಅವರು 1952 ರಲ್ಲಿ ಬ್ರಿಟನ್ ರಾಣಿಯಾಗಿದ್ದರು.

ಎಲಿಜಬೆತ್ II ಬ್ರಿಟನ್ನಿನ ರಾಣಿ ಮಾತ್ರವಲ್ಲ, ಇತರ 14 ದೇಶಗಳ ರಾಣಿಯೂ ಆಗಿದ್ದರು. ಈ ಪಟ್ಟಿಯಲ್ಲಿ ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಮೈಕಾ, ಬಹಾಮಾಸ್, ಗ್ರೆನಡಾ, ಪಪುವಾ ನ್ಯೂಗಿನಿಯಾ, ಸೊಲೊಮನ್ ದ್ವೀಪಗಳು, ಟುವಾಲು, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಆಂಟಿಗುವಾ ಮತ್ತು ಬಾರ್ಬುಡಾ, ಬೆಲೀಜ್, ಸೇಂಟ್ ಕಿಟ್ಸ್ ಮತ್ತು ನೆವಿಸ್ ಸೇರಿವೆ. ಎಲಿಜಬೆತ್ II ಈ ದೇಶಗಳ ಸಾಂಕೇತಿಕ ಸಾಮ್ರಾಜ್ಞಿಯಾಗಿದ್ದರೂ. ಇಲ್ಲಿನ ಆಡಳಿತದಲ್ಲಾಗಲಿ, ಸರಕಾರದಲ್ಲಾಗಲಿ ಅವರು ಯಾವುದೇ ಹಸ್ತಕ್ಷೇಪ ಮಾಡಿರಲಿಲ್ಲ.

ಕ್ವೀನ್ ಎಲಿಜಬೆತ್ ಪ್ರವಾದಿ ಮೊಹಮ್ಮದ್ ವಂಶಸ್ಥೆ?

ಮಾರ್ಚ್ 2018 ರಲ್ಲಿ, ಮೊರೊಕನ್ ಪತ್ರಿಕೆ ಅಲ್-ಓಸ್ಬೌ (Al-Ousboue) ರಾಣಿಯು ಮುಹಮ್ಮದ್ ಅವರ ಮಗಳಾ ಫಾತಿಮಾಗೆ ಸಂಬಂಧಿಸಿದ್ದಾರೆ ಮತ್ತು ಪ್ರವಾದಿಯ 43 ನೇ ವಂಶಸ್ಥಳು ಎಂದು ಹೇಳಿಕೊಂಡಿದೆ. ಬ್ರಿಟನ್ ರಾಣಿ ಪ್ರವಾದಿಯವರ 43 ನೇ ವಂಶಸ್ಥರು ಎಂದು ಹೇಳಲು TOI ಮೊರೊಕನ್ ವರದಿಯನ್ನು ಉಲ್ಲೇಖಿಸಿತ್ತು.

Advertisement
Share this on...