ಕೋಲ್ಕತ್ತಾದ ವಿವಾಹಿತ ಸಿಖ್ ಮಹಿಳೆಯೊಬ್ಬರು ಗುರುನಾನಕ್ ಅವರ ಜನ್ಮದಿನವನ್ನು ಆಚರಿಸಲು ಪಾಕಿಸ್ತಾನಕ್ಕೆ ಹೋಗಿದ್ದರು, ಆದರೆ ಅಲ್ಲಿ ಪಾಗಲ್ ಪ್ರೇಮಿಯೊಬ್ಬನ ಬಲೆಗೆ ಬಿದ್ದು ಇಸ್ಲಾಂಗೆ ಮತಾಂತರಗೊಂಡರು. ಇದಾದ ನಂತರ ಆಕೆ ಭಾರತಕ್ಕೆ ಹಿಂತಿರುಗದಿರಲು ನಿರ್ಧರಿಸಿದರು. ಅಷ್ಟೇ ಅಲ್ಲ, ಮಹಿಳೆ ಲಾಹೋರ್ನ ಮುಸ್ಲಿಂ ವ್ಯಕ್ತಿಯನ್ನು ಮದುವೆಯೂ ಆಗಿದ್ದಾಳೆ. ಈ ಮಹಿಳೆ ಮೊದಲ ಸಿಖ್ ಗುರು ನಾನಕ್ ದೇವ್ ಜಿ ಅವರ ಜನ್ಮ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಸಿಖ್ ಗುಂಪಿನೊಂದಿಗೆ ಕರ್ತಾರ್ಪುರ ಸಾಹಿಬ್ಗೆ ಹೋಗಿದ್ದರು, ಆದರೆ ಅಲ್ಲಿಗೆ ಹೋದ ನಂತರ ಅವರು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಇಸ್ಲಾಂಗೆ ಮತಾಂತರಗೊಂಡರು.
ಆದರೆ, ಮಹಿಳೆ ಹಿಂತಿರುಗಲು ಇಷ್ಟವಿಲ್ಪದಿದ್ದರೂ, ಪಾಕಿಸ್ತಾನದ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಅಲ್ಲಿ ಉಳಿಯಲು ಸಾಧ್ಯವಾಗದ ಕಾರಣ ಆಕೆ ಹಿಂತಿರುಗಬೇಕಾಯಿತು. ಶುಕ್ರವಾರ (ನವೆಂಬರ್ 26, 2021) ವಾಘಾ-ಅಟ್ಟಾರಿ ಗಡಿಯಿಂದ ಸಿಖ್ ಬ್ಯಾಚ್ ಹಿಂದಿರುಗಿದಾಗ, ಪಾಕಿಸ್ತಾನದ ಆಡಳಿತವು ಮಹಿಳೆಯನ್ನೂ ಭಾರತಕ್ಕೆ ವಾಪಸ್ ಕಳುಹಿಸಿತು. ರಂಜಿತ್ ಕೌರ್ (ಹೆಸರು ಬದಲಾಯಿಸಲಾಗಿದೆ) ಲಾಹೋರ್ ನಿವಾಸಿ ಮುಹಮ್ಮದ್ ಇಮ್ರಾನ್ ಎಂಬಾತನನ್ನ ವಿವಾಹವಾದರು. ಸುದ್ದಿ ಮೂಲಗಳ ಪ್ರಕಾರ ಸಿಖ್ ಮಹಿಳೆ ಕಿವುಡ ಮತ್ತು ಮೂಕಳಾಗಿದ್ದು ಆಕೆಗೆ ಕೇಳಲು ಅಥವ ಮಾತನಾಡಲು ಸಾಧ್ಯವಿಲ್ಲ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ.
‘ಝೀ ನ್ಯೂಸ್’ನ ಸುದ್ದಿಯ ಪ್ರಕಾರ, ಈ ಮಹಿಳೆಯ ಪತಿ ಕೂಡ ಕಿವುಡ ಮತ್ತು ಮೂಕನಾಗಿದ್ದಾನೆ. ಅಲ್ಲದೆ, ಈಕೆ ಮರುಮದುವೆಯಾದ ಮಹಮ್ಮದ್ ಇಮ್ರಾನ್ ಕೂಡ ಕಿವುಡ ಮತ್ತು ಮೂಕನಾಗಿದ್ದಾನೆ. ಆಕೆ ಅದಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಇಮ್ರಾನ್ ಜೊತೆ ಸಂಪರ್ಕದಲ್ಲಿದ್ದಳು, ಇದು ಆಕೆಯ ಪತಿಗೂ ತಿಳಿದಿತ್ತು. ಪಾಕಿಸ್ತಾನಕ್ಕೆ ಹೋದ ನಂತರ, ಮಹಿಳೆ ‘ಆಫೀಸ್ ಆಫ್ ಜಸ್ಟಿಸ್ ಆಫ್ ಪೀಸ್’ ನಲ್ಲಿ ಅರ್ಜಿ ಸಲ್ಲಿಸಿದರು ಮತ್ತು ತನ್ನ ಸಿಖ್ ಪತಿಯ ಸಮ್ಮುಖದಲ್ಲೇ ಇಮ್ರಾನ್ನ್ನ ವಿವಾಹವಾದಳು. ಅಲ್ಲದೆ, ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ ಆಕೆ ತನ್ನ ಹೆಸರನ್ನು ‘ಪರ್ವೀನ್ ಸುಲ್ತಾನಾ’ ಎಂದು ಬದಲಾಯಿಸಿಕೊಂಡಿದ್ದಾಳೆ.
ಮುಹಮ್ಮದ್ ಇಮ್ರಾನ್ ಮೂಲತಃ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ರಾಜನ್ಪುರದವರು. ಈ ಮದುವೆ ನವೆಂಬರ್ 23 ರಂದು ನಡೆದಿತ್ತು ಮತ್ತು ಅದೇ ದಿನ ಮಹಿಳೆ ಪಾಕಿಸ್ತಾನಿ ನ್ಯಾಯಾಲಯಕ್ಕೆ ಹೋಗಿ ತನ್ನ ಸಿಖ್ ಪತಿಗೆ ವಿಚ್ಛೇದನ ನೀಡಿದ್ದಳು. ಇವರಿಬ್ಬರು ಈ ಬ್ಯಾಚ್ನಿಂದ ಭಾರತಕ್ಕೆ ಹಿಂತಿರುಗಿದ ಕೊನೆಯವರು. ಪಾಕಿಸ್ತಾನದ ಆಡಳಿತವು ಆಕೆಗೆ ತೀರ್ಥಯಾತ್ರೆಯ ವೀಸಾದಲ್ಲಿ ಅಲ್ಲಿ ಉಳಿಯಲು ಅವಕಾಶ ನೀಡಲಿಲ್ಲ, ನಂತರ ಮಹಿಳೆ ಪ್ರತ್ಯೇಕವಾಗಿ ಪಾಕಿಸ್ತಾನಕ್ಕೆ ವೀಸಾಕ್ಕೆ ಅರ್ಜಿ ಸಲ್ಲಿಸಬೇಕಾಗಿತ್ತು. ಪಾಕಿಸ್ತಾನದ ಅಧಿಕಾರಿ ರಾಣಾ ಸಜ್ವಾಲ್ ಅವರು ನವೆಂಬರ್ 24 ರಂದು ಮಹಿಳೆಗೆ 100 ರೂಪಾಯಿಗಳ ಅಫಿಡವಿಟ್ ನೀಡಿದ್ದರು ಎಂದು ಖಚಿತಪಡಿಸಿದ್ದಾರೆ.
Married Indian woman, on pilgrimage to Pakistan, gets hitched to Lahore manhttps://t.co/TnHnMFwL6I
— Zee News English (@ZeeNewsEnglish) November 27, 2021
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಿರೋಮಣಿ ಅಕಾಲಿದಳ (ಡೆಮಾಕ್ರಟಿಕ್) ಅಧ್ಯಕ್ಷ ಪರಮ್ಜಿತ್ ಸಿಂಗ್ ಸರ್ನಾ, ಪವಿತ್ರ ಗುರುದ್ವಾರಗಳಲ್ಲಿ ‘ದರ್ಶನ್ ಔರ್ ದೀದಾರ್’ ನಿಂದ ಮಹಿಳೆ ಮತ್ತು ಆಕೆಯ ಪತಿಯನ್ನು ನಿಲ್ಲಿಸುವಂತೆ ಸಿಖ್ ಜಾಥಾಕ್ಕೆ ಮನವಿ ಮಾಡಿದ್ದೇನೆ ಎಂದು ಹೇಳಿದರು. ಸರ್ನಾ ಅವರು ‘ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ’ ಅಧ್ಯಕ್ಷರೂ ಆಗಿದ್ದಾರೆ. ಈ ಘಟನೆಯು ಆತಂಕಕಾರಿಯಾಗಿದ್ದು, ಇಂತಹ ಘಟನೆಗಳಿಂದಾಗಿ ಸಿಖ್ಖರು ತೀರ್ಥಯಾತ್ರೆಗೆ ಪಾಕಿಸ್ತಾನಕ್ಕೆ ಹೋಗುವುದನ್ನು ನಿಷೇಧಿಸಲಾಗಿಬಿಡುವ ಭಯವಿದೆ ಎಂದು ಅವರು ಹೇಳಿದರು. ಈ ಬಗ್ಗೆ ಸಿಖ್ ಸಂಘಟನೆ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
ಇದೇ ರೀತಿಯ ಘಟನೆಯು ಏಪ್ರಿಲ್ 2018 ರಲ್ಲೂ ಬೆಳಕಿಗೆ ಬಂದಿತ್ತು, ಬೈಸಾಖಿ ಹಬ್ಬಕ್ಕಾಗಿ ಪಾಕಿಸ್ತಾನಕ್ಕೆ ತೀರ್ಥಯಾತ್ರೆಗೆ ತೆರಳಿದ್ದ ಸಿಖ್ ಮಹಿಳೆಯೊಬ್ಬರು ಅಲ್ಲಿ ಇಸ್ಲಾಂಗೆ ಮತಾಂತರಗೊಂಡರು ಮತ್ತು ಅವರ ವೀಸಾವನ್ನು ವಿಸ್ತರಿಸಲು ಶಿಫಾರಸು ಮಾಡಿದರು. ಪಂಜಾಬ್ನ ಹೋಶಿಯಾರ್ಪುರದ ಮನೋಹರ್ ಲಾಲ್ ಅವರ ಪುತ್ರಿ ಕಿರಣ್ ಬಾಲಾ ಲಾಹೋರ್ನ ಮೊಹಮ್ಮದ್ ಅಜಮ್ ಅವರನ್ನು ವಿವಾಹವಾದರು. ಲಾಹೋರ್ನ ಜಾಮಿಯಾ ನಿಮಿಯಾ ಸೆಮಿನರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಮಹಿಳೆ ತನ್ನ ಹೆಸರನ್ನು ಅಮ್ನಾ ಬೀಬಿ ಎಂದು ಬದಲಾಯಿಸಿಕೊಂಡಿದ್ದಳು.