ಜಗತ್ತಿನ ಅತ್ಯಂತ ಶ್ರೀಮಂತ ರಾಜ ಈತ: ಅಂಬಾನಿ, ಟಾಟಾ ಕೂಡ ಈತನ ಮುಂದೆ ಏನೇನೂ ಅಲ್ಲ

in Kannada News/News/ಕನ್ನಡ ಮಾಹಿತಿ 194 views

ವಿಶ್ವದಲ್ಲಿ ಇದೀಗ ಅತ್ಯಂತ ಶ್ರೀಮಂತ ವ್ಯಕ್ತಿಗಳಾದ, ಗ್ರೇಟ್ ಬಿಲಿಯನ್, ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ಶಾರುಖ್ ಖಾನ್ ಮುಂತಾದವರು ಅದೆಷ್ಟು ಹಣ ಹೊಂದಿದ್ದಾರೆ ಎಂದರೆ ಇವರ ಬಳಿ ವಿಮಾನಗಳು, ದೊಡ್ಡ ಹೋಟೆಲ್‌ಗಳು, ರೆಸಾರ್ಟ್‌ಗಳು ಹೊಂದಿರುವುದು ಸಾಮಾನ್ಯವಾಗಿದೆ, ಆದರೆ ನಾವು ಈ ಒಬ್ಬ ವ್ಯಕ್ತಿಯ ಬಗ್ಗೆ ನಿಮಗೆ ಪರಿಚಯಿಸುತ್ತಿದ್ದೆವೆ ಈತ ತಾನು ಹೋದಲ್ಲೆಲ್ಲಾ ಚಿನ್ನವನ್ನು ದೋಚುತ್ತಿದ್ದನು.

Advertisement

ಈ ವ್ಯಕ್ತಿಯ ಹೆಸರು ಮನಸಾ ಮೂಸಾ, ಈತನ ನಿಜವಾದ ಹೆಸರು ಮೂಸಾ ಕೀಟಾ, ಈ ವ್ಯಕ್ತಿ ರಾಜನಾದ ನಂತರ ಅವನನ್ನು ಮನಸಾ ರಾಜ ಎಂದು ಕರೆಯಲಾಗುತ್ತಿತ್ತು, ಆ ವ್ಯಕ್ತಿಯ ಬಳಿ ಅದೆಷ್ಟು ಸಂಪತ್ತು ಇತ್ತು ಎಂದರೆ ಯಾರೂ ಸಹ ಅದನ್ನು ಉಹಿಸಲು ಹಾಗೂ ಲೆಕ್ಕಹಾಕಲು ಸಾಧ್ಯವಾಗಿರಲಿಲ್ಲ, ಈ ವ್ಯಕ್ತಿ ಟಿಂಬಕ್ಟು ಪ್ರದೇಶದ ರಾಜನಾಗಿದ್ದ, ಟಿಂಬಕ್ಟು ಆಫ್ರಿಕಾದ ದೇಶವಾದ ಮಾಲಿಯ ಒಂದು ನಗರವಾಗಿದೆ.

ಟಿಂಬಕ್ಟು ನಗರವನ್ನು ಆತ ಹೆಚ್ಚಿನ ಸಂಖ್ಯೆಯ ಚಿನ್ನದ ಸಂಗ್ರಹ ಮಾಡಿ ತನ್ನ ಆಳ್ವಿಕೆ ನಡೆಸಿದ್ದನು ಆ ರಾಜ, ಆತನ ಆಡಳಿತದ ಸಂದರ್ಭದಲ್ಲಿ 1000 ಕೆಜಿ ಚಿನ್ನವನ್ನು ತನ್ನ ಜಾಗದಲ್ಲೆ ಉತ್ಪಾದಿಸುತ್ತಿದ್ದರಂತೆ ಎಂದು ಸ್ಥಳಿಯರು ಗುಪ್ತವಾಗಿ ಮಾತನಾಡುತ್ತಿದ್ದರು,ಅವರ ರಾಜಾಡಳಿತ ಯಾವ ರೀತಿ ಇತ್ತು ಎಂದರೆ ಮಾರಿಟಾನಿಯಾ, ಸೆನೆಗಲ್, ಗ್ಯಾಂಬಿಯಾ, ಗಿನಿಯಾ, ಬುರ್ಕಿನಾ ಫಾಸೊ, ಮಾಲಿ, ನೈಜರ್, ಚಾಡ್ ಮತ್ತು ನೈಜೀರಿಯಾ ಎಲ್ಲಾ ಪ್ರದೇಶಗಳು ಆತನ ಆಳ್ವಿಕೆಯ ಹಿಡಿತದಲ್ಲಿದ್ದವು.

ಕ್ರಿ.ಶ 1312 ರಲ್ಲಿ ಮಾಲಿ ಸಾಮ್ರಾಜ್ಯದ ಆಡಳಿತಗಾರನಾದ ಈ ಮಾನಸಾ ರಾಜ 25 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಅಷ್ಟೇ ಅಲ್ಲದೆ ಟಿಂಬಕ್ಟುವಿನಲ್ಲಿ ಜಿಂಗರೆಬರ್‌ನಂತಹ ಅನೇಕ ಮಸೀದಿಗಳನ್ನು ನಿರ್ಮಿಸಿದ್ದನು, ಆತನ ಬೆಂಗಾವಲಿಗಾಗಿ 80 ಒಂಟೆಗಳ ದಂಡು ಸದಾ ಹಿಂದಿರುತ್ತಿದ್ದವು, ಮತ್ತು ಪ್ರತಿ ಬೆಂಗಾವಲಿನ ಒಂಟೆಯ ಮೇಲೆ 136 ಕೆಜಿ ಚಿನ್ನವಿರುತ್ತಿತ್ತು.

ಅವರು ಒಮ್ಮೆ ಬಡವರಿಗೆ ಅದೆಷ್ಟು ದಾನ ಮಾಡಿದ್ದರು ಎಂದರೆ 100 ಆನೆಗಳ‌ ಮೇಲೆ ಹೊತ್ತೊಯ್ದ ಚಿನ್ನವನ್ನು ದಾನ ಮಾಡು ಆ ಇಡೀ ನಗರವನ್ನು ಅತ್ಯಂತ ಶ್ರೀಮಂತವನ್ನಾಗಿ ಮಾಡಿದ್ದರು, ಹೀಗೆ ಈ ರಾಜ ಹೋದ ಕಡೆಯಲ್ಲೆಲ್ಲ ಬಡವರು ಕಾಣಿಸಿಕೊಂಡರೆ ಅವರಿಗೆ ಸಹಾಯದ ರೂಪದಲ್ಲಿ ಹಣ ನೀಡುವ ಬದಲಾಗಿ ಚಿನ್ನವನ್ನೆ ನೀಡುತ್ತಿದ್ದ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ.

Advertisement
Share this on...