“ತನ್ನ ಮದುವೆಗೆಂದು ವಿದೇಶದಿಂದ ಬಂದು ಬರೋಬ್ಬರಿ 50 ಲಕ್ಷ ಖರ್ಚು ಮಾಡಿ ಕಪರೋನಾ ಗೆದ್ದಳು ಆದರೆ…” ಕಣ್ಣೀರಲ್ಲಿ ಕುಟುಂಬ

in Kannada News/News 347 views

ಪೆದ್ದಪಲ್ಲಿ​:

Advertisement
ವೈವಾಹಿಕ ಜೀವನದಲ್ಲಿ ಕಾಲಿಡಲು ಸ್ವದೇಶಕ್ಕೆ ಆಗಮಿಸಿದ್ದ ಯುವತಿಗೆ ಕೋವಿಡ್ ಸೋಂಕು ತಗುಲಿ ಅದರಿಂದ ಗುಣಮುಖಳಾಗಿ  ಮತ್ತೆ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೋದಾವರಿಯಲ್ಲಿ ನಡೆದಿದೆ.

ಸ್ಥಳೀಯ ಎನ್​​ಟಿಪಿಸಿ ಕೃಷ್ಣನಗರದ ಪೆಂಡ್ಯಾಲ ರವೀಂದ್ರ ​ರೆಡ್ಡಿ ಎಂಬವರ ಮಗಳು ನರಿಷ್ಮರೆಡ್ಡಿ (28) ಹೈದರಾಬಾದ್​ನಲ್ಲಿ ಎಂಜಿನಿಯರಿಂಗ್​ ಪದವಿ ಪಡೆದು ಏಳೂವರೆ ವರ್ಷಗಳ ಹಿಂದೆ ಅಮೆರಿಕಗೆ ತೆರಳಿದ್ದರು. ಮೇ ತಿಂಗಳ ಕೊನೆಯಲ್ಲಿ ಮದುವೆ ನಿಶ್ಚಯವಾಗಿದ್ದರಿಂದ ಸ್ವಗ್ರಾಮಕ್ಕೆ ಹಿಂದಿರುಗಿದ್ದರು

ಕೆಲಸದ ನಿಮಿತ್ತ ನರಿಷ್ಮ ಚೆನ್ನೈಗೆ ಹೋಗಿ ಬಂದ ಮೇಲೆ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇದಕ್ಕಾಗಿ ಚಿಕಿತ್ಸೆ ಪಡೆದ ಅವರು ಕೋವಿಡ್​ನಿಂದ ಸಂಪೂರ್ಣ ಗುಣಮುಖರಾಗಿದ್ದರು. ಇದಾದ ಬಳಿಕ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. 40 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ ಯುವತಿ ಸಾವನ್ನಪ್ಪಿದ್ದಾಳೆ.

ಮಗಳ ಚಿಕಿತ್ಸೆಗೆ ಸುಮಾರು 50 ಲಕ್ಷ ರೂ ಖರ್ಚು ಮಾಡಿದ್ದೇವೆ. ಆದ್ರೂ ಆಕೆ ಬದುಕುಳಿಯಲಿಲ್ಲ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಕ್ಕಳ ಆಸರೆ ಕಸಿದ ಕೊರೋನಾ, “ತಂಗಿ ತಮ್ಮನಿಗೆ ಹೇಗೆ ಧೈರ್ಯ ಹೇಳಲಿ?”

ಬೀದರ್‌: ‘ಶಿಕ್ಷಕರಾಗಿದ್ದ ತಂದೆ–ತಾಯಿ ಇಬ್ಬರೂ ಕೋವಿಡ್‌ನಿಂದ ನಮ್ಮನ್ನು ಅಗಲಿದ್ದಾರೆ. ಸಂತಸ ತುಂಬಿದ ಮನೆ ಖಾಲಿಯಾಗಿದೆ. ತಾಯಿ ನೆನಪಾಗುತ್ತಲೇ ತಮ್ಮ ಕಣ್ಣೀರಿಡುತ್ತಿದ್ದಾನೆ. ತಂಗಿ, ತಮ್ಮ ಇನ್ನೂ ಚಿಕ್ಕವರು. ಅವರಿಗೆ ಹೇಗೆ ಧೈರ್ಯ ಹೇಳಬೇಕು ಎನ್ನುವುದು ಅರ್ಥವಾಗುತ್ತಿಲ್ಲ. ನನಗೂ ದಿಕ್ಕು ತೋಚುತ್ತಿಲ್ಲ…’

‘ತಂದೆ– ತಾಯಿಯ ಮದುವೆಯ ಬೆಳ್ಳಿ ಮಹೋತ್ಸವದಲ್ಲಿ ಪಾಲ್ಗೊಳ್ಳಲು ರಜೆ ಪಡೆದು ಬೆಂಗಳೂರಿನಿಂದ ಮನೆಗೆ ಬಂದಿದ್ದೆ. ತಾಯಿ ಮೀನಾಕ್ಷಿ ಕೋವಿಡ್‌ನಿಂದ ಕೊನೆಯುಸಿರೆಳೆದ ಒಂದು ತಿಂಗಳಲ್ಲಿ ತಂದೆಯೂ ಕೋವಿಡ್‌ನಿಂದಲೇ ಮೃತಪಟ್ಟರು. ಕುಟುಂಬವೇ ಶೋಕ ಸಾಗರದಲ್ಲಿ ಮುಳುಗುವಂತಾಯಿತು’ ಎಂದು ಹುಮನಾಬಾದ್ ತಾಲ್ಲೂಕಿನ ದುಬಲಗುಂಡಿಯ ಶಿಕ್ಷಕ ದಂಪತಿಯ ಹಿರಿಯ ಮಗಳು ಸುಷ್ಮಾ ಕಣ್ಣೀರು ಹಾಕಿದರು.

‘ತಂದೆ–ತಾಯಿ ಇಬ್ಬರೂ ನಮಗೆ ಆಸರೆಯಾಗಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ನಾನು ಬೆಂಗಳೂರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ. ಒಂದಿಷ್ಟು ಹಣ ಕೂಡಿಟ್ಟು ಮದುವೆಯ ಬೆಳ್ಳಿ ಮಹೋತ್ಸವಕ್ಕೆ ಅಮ್ಮನಿಗೆ ಚಿನ್ನದ ಆಭರಣವನ್ನೇ ಉಡುಗೊರೆ ನೀಡಬೇಕೆಂದಿದ್ದೆ. ಆದರೆ, ನಾನು ಅಂದುಕೊಂಡಂತೆ ಆಗಲಿಲ್ಲ’ ಎಂದು ಮೌನಕ್ಕೆ ಜಾರಿದರು.

‘ಮನೆ ಮನೆ ಸಮೀಕ್ಷೆ ಕೆಲಸದಲ್ಲಿ ತೊಡಗಿದ್ದ ತಂದೆಗೆ ಮೊದಲು ಕೋವಿಡ್‌ ತಗುಲಿತು. ಅವರಿಂದ ನನಗೂ ಕೋವಿಡ್‌ ಬಂತು. ನಮ್ಮನ್ನು ಉಪಚರಿಸುತ್ತಿದ್ದ ತಾಯಿಗೆ ಯಾವಾಗ ಸೋಂಕು ತಗುಲಿತು ಗೊತ್ತಾಗಲಿಲ್ಲ. ಒಂದು ದಿನ ಯಾಕೋ ಮೈಕೈ ನೋವು ಆಗುತ್ತಿದೆ ಎಂದು ಹೇಳಿದಳು. ಎರಡು ದಿನಗಳ ನಂತರ ಹಠಾತ್‌ ಉಸಿರಾಟದಲ್ಲಿ ಏರುಪೇರಾಗಿ ಕೊನೆಯುಸಿರೆಳೆದಳು’ ಎಂದು ತಿಳಿಸಿದರು.

‘ತಾಯಿ ಸಾವಿಗೀಡಾದ ಸುದ್ದಿ ಕೇಳಿ ತಂದೆಗೆ ಹೃದಯಾಘಾತವಾದೀತು ಎನ್ನುವ ಭಯದಿಂದ ಮನೆಮಂದಿಯಲ್ಲ ವಿಷಯವನ್ನು ಬಚ್ಚಿಟ್ಟಿದ್ದೆವು. ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ನಾವು ತಂದೆಯನ್ನಾದರೂ ಉಳಿಸಿಕೊಳ್ಳೋಣ ಎಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೆವು. ಚಿಕಿತ್ಸೆಗಾಗಿ ₹10 ಲಕ್ಷ ಖರ್ಚಾಯಿತು’ ಎಂದು ಹೇಳಿದರು.

‘ತಂದೆ ಆಸ್ಪತ್ರೆಯಲ್ಲಿದ್ದಾಗ ಮೀನಾಕ್ಷಿಯನ್ನು ಫೋನ್‌ನಲ್ಲಿ ಮಾತನಾಡಿಸಿ ಎಂದು ಪದೇ ಪದೇ ಹೇಳುತ್ತಿದ್ದರು. ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಬಂದಿದ್ದರು. ಅಮ್ಮ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಲ್ಲಿ ಮೊಬೈಲ್‌ನಲ್ಲಿ ಮಾತನಾಡಿಸಲು ಅವಕಾಶ ಇಲ್ಲ ಎಂದು ಸ್ವಲ್ಪ ದಿನ ತಳ್ಳಿದೆವು. ನಂತರ ಅವರು ಮತ್ತೆ ಹಾಸಿಗೆ ಹಿಡಿದವರು ಏಳಲೇ ಇಲ್ಲ’ ಎಂದು ಹೇಳಿದರು.

Advertisement
Share this on...