ಬಾಲಿವುಡ್ ನಟ ನಟಿಯರು ತಮ್ಮ ಹೈ ಪ್ರೊಫೈಲ್ ಲೈಫ್ಸ್ಟೈಲ್ ಗಾಗಿ ಹೆಸರುವಾಸಿಯಾಗಿದ್ದಾರೆ. ಆದರೆ ಕೋಟಿಗಟ್ಟಲೆ ಸಂಪತ್ತು ಹೊಂದಿದ್ದರೂ ಕೆಲವು ಸ್ಟಾರ್ ಗಳು ಇದ್ದಾರೆ, ಆದರೂ ಅವರು ಸ್ಟಾರ್ಡಮ್ ನಿಂದ ದೂರವೇ ಇದ್ದು ಸಾಮಾನ್ಯ ವ್ಯಕ್ತಿಯಂತೆ ಬದುಕಲು ಇಷ್ಟಪಡುತ್ತಾರೆ. ಬಾಲಿವುಡ್ನ ಅಂತಹ ಒಬ್ಬ ಸ್ಟಾರ್ ನಟರೇ ನಾನಾ ಪಾಟೇಕರ್.
40 ಕೋಟಿ ಪ್ರಾಪರ್ಟಿಯ ಒಡೆಯ ನಾನಾ ಪಾಟೇಕರ್
ವೆಬ್ಸೈಟ್ ಒಂದರ ಪ್ರಕಾರ, ನಾನಾ ಪಟೇಕರ್ ಸುಮಾರು 40 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇದು ಅವರ ಫಾರ್ಮ್ ಹೌಸ್ ಸೇರಿದಂತೆ ಐಷಾರಾಮಿ ಕಾರುಗಳನ್ನೂ ಒಳಗೊಂಡಿದೆ. ಅಷ್ಟು ಆಸ್ತಿ ಹೊಂದಿದ್ದರೂ, ನಗರದ ಜನನಿಬಿಡ ಪ್ರದೇಶದಿಂದ ದೂರದಲ್ಲಿರುವ ಖಡಕ್ವಾಸ್ಲಾದಲ್ಲಿರುವ ತನ್ನ 25 ಎಕರೆ ಭವ್ಯವಾದ ಫಾರ್ಮ್ ಹೌಸ್ನಲ್ಲಿ ನಾನಾ ಪಟೇಕರ್ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ವಾಸಿಸುತ್ತಾರೆ. ಅವರ ಫಾರ್ಮ್ ಹೌಸ್ 7 ಕೊಠಡಿಗಳು ಮತ್ತು ದೊಡ್ಡ ಹಾಲ್ ಹೊಂದಿದೆ. ಅವರು ಹೆಚ್ಚಿನ ಸಮಯವನ್ನು ತಮ್ಮ ಫಾರ್ಮದ ಹೌಸ್ ನಲ್ಲೇ ಕಳೆಯುತ್ತಾರೆ. ನಾನಾ ಪಟೇಕರ್ ಈ ಫಾರ್ಮ್ ಹೌಸ್ ಸುತ್ತಲೂ ಭತ್ತ, ಗೋಧಿ ಮತ್ತು ಬೇಳೆಗಳನ್ನ ಬೆಳೆಯುತ್ತಾರೆ. ತಮ್ಮ ಬೆಳೆಗಳನ್ನು ಮಾರಾಟ ಮಾಡುವುದರಿಂದ ಸಿಗುವ ಹಣವನ್ನ ಅವರು ಫಾರ್ಮ್ ಹೌಸ್ನಲ್ಲಿ ಕೆಲಸ ಮಾಡುವ ಕಾರ್ಮಿಕರ ನಡುವೆ ವಿತರಿಸುತ್ತಾರೆ. ನಾನಾ ಪಾಟೇಕರ್ ತಮ್ಮ ಫಾರ್ಮ್ ಹೌಸ್ ನಲ್ಲಿ ತಮ್ಮದೇ ರೀತಿಯಲ್ಲಿ ಸಾಮಾನ್ಯ, ಸರಳ ವ್ಯಕ್ತಿಯ ಮನೆಯಂತೆ ಪೀಠೋಪಕರಣಗಳನ್ನು ಹೊಂದಿದ್ದಾರೆ.
ಚಿತ್ರವೊಂದಕ್ಕೆ ಒಂದು ಕೋಟಿ ಚಾರ್ಜ್ ಮಾಡುವ ನಾನಾ ಪಾಟೇಕರ್
ನಾನಾ ಪಾಟೇಕರ್ ಜನಿಸಿದ್ದು ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ. ನಾನಾ ಪಾಟೇಕರ್ ಅವರು “ಗಮನ್” ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಬಾಲಿವುಡ್ ಇಂಡಸ್ಟ್ರಿಯಲ್ಲಿ ಎಲ್ಲರೂ ನಾನಾ ಪಾಟೇಕರ್ ಅವರ ನಟನಾ ಚಾತುರ್ಯ ಹಾಗು ಅವರ ಖಡಕ್ ಮಾತಿನ ಶೈಲಿಗೆ ತಲೆಬಾಗುತ್ತಾರೆ. ನಾನಾ ಪಾಟೇಕರ್ ಅನೇಕ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೆ ಅವರು ಮರಾಠಿ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಸಹಿ ಹಾಕಲು ನಾನಾ ಪಟೇಕರ್ ಸುಮಾರು ಒಂದು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅವರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಈ ಸಮಯದಲ್ಲಿ ಅವರು ಅನೇಕ ಸೂಪರ್ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಾನಾ ಪಾಟೇಕರ್ ಅವರ ಚಲನಚಿತ್ರ ಕ್ರಾಂತಿವೀರ್ (Krantiveer) ನ ಡೈಲಾಗ್ಸ್ ಇನ್ನೂ ಜನರ ನಾಲಿಗೆಯ ಮೇಲೆ ಹರಿದಾಡುತ್ತದೆ. ಅವರ ಅಭಿನಯ ಇಂದಿಗೂ ಮುಂದುವರೆದಿದೆ. ಅವರು ಆಲ್ರೌಂಡರ್ ನಟರಾಗಿದ್ದು, ಆಕ್ಷನ್, ರೋಮ್ಯಾನ್ಸ್ನಿಂದ ಹಿಡಿದು ಕಾಮಿಡಿ ಹೀಗೆ ಎಲ್ಲಾ ಪಾತ್ರಗಳಲ್ಲಿಯೂ ಅತ್ಯುತ್ತಮರಾಗಿದ್ದಾರೆ.
ಸಮಾಜಸೇವೆ ಮಾಡಲು ಜನಪ್ರತಿನಿಧಿಗಳಾಗಬೇಕಾಗಿಲ್ಲ, ಸಚಿವರಾಗಬೇಕಾಗಿಲ್ಲ, ನಿಗಮ ಮಂಡಳಿ ಅಧ್ಯಕ್ಷರಾಗಬೇಕೆಂದೂ ಇಲ್ಲ. ಸಮಾಜಸೇವೆ ಮಾಡಲು ಮೊದಲು ಬೇಕಾಗಿರುವುದು ಮನಸ್ಸು ಎನ್ನುವುದನ್ನು ಬಾಲಿವುಡ್ ನಟ ನಾನಾ ಪಟೇಕರ್ ತೋರಿಸಿಕೊಟ್ಟಿದ್ದಾರೆ.
ಚಿತ್ರನಟನೆಂದರೆ ಅವನಿಗೆ ಒಂದಿಷ್ಟು ಅಭಿಮಾನಿಗಳು ಹಾಗೂ ಅಭಿಮಾನಿ ಸಂಘಗಳು ಇರುವುದು ಸಾಮಾನ್ಯ. ಅವರು ಹೋದಲ್ಲಿ ಬಂದಲ್ಲಿ ಮಾಧ್ಯಮದವರು ಬೆನ್ನು ಹತ್ತುತ್ತಾರೆ, ಅಲ್ಲದೇ ಅವರ ಮನೆಯಲ್ಲಿ ನಾಯಿ , ಮರಿ ಇಟ್ಟರೂ ಅದು ದೊಡ್ಡ ಸುದ್ಧಿಯಾಗುತ್ತದೆ.
ಆದರೆ ಇಂತಹ ಪ್ರಚಾರಗಳಿಂದ ದೂರ ಉಳಿದು ಸರಳ ಜೀವನ ನಡೆಸಿ, ಸಮಾಜಸೇವೆ ಮಾಡುತ್ತಿರುವ ಬಾಲಿವುಡ್ ನಟ ನಾನಾ ಪಾಟೇಕರ್ ಪ್ರಮುಖವಾಗಿ ರಾಜಕಾರಣಿಗಳಿಗೆ ಆದರ್ಶಪ್ರಾಯರಾಗಿದ್ದಾರೆ. ಸದ್ದಿಲ್ಲದೇ ಸಮಾಜಸೇವೆಯಲ್ಲಿ ತೊಡಗಿರುವ ನಾನಾ, ತನ್ನ ಕೈಲಾದ ಮಟ್ಟಿಗೆ ನೊಂದ ಜೀವಗಳಿಗೆ ಸಾಂತ್ವನ ನೀಡುತ್ತಿದ್ದಾರೆ.
ತಿಂಗಳಿಗೆ ಕೇವಲ 35 ರೂಪಾಯಿಗಳಿಗೆ ಸಿನಿಮಾ ಪೋಸ್ಟರ್, ಚಿತ್ರ ಬಿಡಿಸುವ, ರಸ್ತೆಯ ವಿಭಜಕಗಳಿಗೆ ಮತ್ತು ಝೀಬ್ರಾ ಕ್ರಾಸಿಂಗ್ ಗಳಿಗೆ ಬಣ್ಣ ಬಳಿಯುವ ವೃತ್ತಿ ಮಾಡುತ್ತಿದ್ದ ನಾನಾ, ತದನಂತರ ತನ್ನ ಅದ್ಭುತ ಪ್ರತಿಭೆಯಿಂದಾಗಿ ಬಾಲಿವುಡ್ ಅಂಗಳಕ್ಕೆ ಕಾಲಿರಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಇವರು ನಟನೆಯ ಮೂಲಕ ಅತ್ಯಧಿಕ ಅಭಿಮಾನಿಗಳನ್ನು ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಇದರ ಜೊತೆಗೆ ತನ್ನ ಸಾಮಾಜಿಕ ಕಾರ್ಯಗಳ ಮೂಲಕ ಇನ್ನಷ್ಟು ಅಭಿಮಾನಿಗಳನ್ನು ಹೆಚ್ಚಿಸಿಕೊಂಡಿದ್ದಾರೆ.
ಬಾಲಿವುಡ್ ಚಿತ್ರೋದ್ಯಮದ ಗಣ್ಯಾತಿಗಣ್ಯರು ಇಂದು ಅದ್ದೂರಿ ಜೀವನ ನಡೆಸುತ್ತಿರುವಾಗ, ನಾನಾ ಮಾತ್ರ ತನ್ನ ತಾಯಿಯ ಜೊತೆ 1ಬಿಎಚ್ಕೆ ಫ್ಲ್ಯಾಟ್ ನಲ್ಲಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ವೈಭವಯುತ ಜೀವನ ನಡೆಸುವುದು ಕಷ್ಟವೇನಲ್ಲ, ಆದರೆ ದುಂದುವೆಚ್ಚ ಮಾಡದೇ ಬಡವರ ಏಳಿಗೆಗಾಗಿ ಶ್ರಮಿಸುವ ಪಣತೊಟ್ಟಿರುವುದು ಶ್ಲಾಘನೀಯ.
ನಾನಾ ಅವರಿಂದ ಜನಮೆಚ್ಚುವ ಕೆಲಸ
ಖ್ಯಾತ ನಟನಾಗಿದ್ದರೂ ಇವರ ಬಳಿ ಸ್ವಂತ ಕಾರು ಕೂಡಾ ಇಲ್ಲ ಎಂದರೆ ನಂಬಲೇ ಬೇಕು. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತಿದ್ದ ರೈತರ ಬಗ್ಗೆ ರಾಜಕಾರಣಿಗಳು ಬರಿಯ ಆಶ್ವಾಸನೆ ಹಾಗೂ ಮೊಸಳೆ ಕಣ್ಣೀರು ಸುರಿಸುತಿದ್ದರೆ, ನಾನಾ ಮಾತ್ರ ಜನರು ಮತ್ತು ದೇವರು ಮೆಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ.
ಆ ತ್ಮ ಹ ತ್ಯೆ ಗೆ ಶರಣಾದ ರೈತರ ಮನೆಗಳಿಗೆ ಭೇಟಿ
ಮಹಾರಾಷ್ಟ್ರದಲ್ಲಿ ಆ ತ್ಮ ಹ ತ್ಯೆ ಗೆ ಶರಣಾದ 62 ರೈತರ ಮನೆಗಳಿಗೆ ಭೇಟಿ ನೀಡಿ ನಾನಾ, ತಲಾ 15 ಸಾವಿರ ರೂಪಾಯಿಗಳನ್ನು ಪ್ರತೀ ಮನೆಗೆ ಈಗಾಗಲೇ ಹಂಚಿದ್ದಾರೆ. ಜೊತೆಗೆ, ಉಳಿದ 112 ಮನೆಗಳಿಗೆ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿ ಆ ತ್ಮ ಹ ತ್ಯೆ ಮಾಡದಂತೆ ತಡೆದು ಧೈರ್ಯ ತುಂಬಿ ಬಂದಿದ್ದಾರೆ. ಜೊತೆಗೆ, ಮಂತ್ರಿಗಳಿಗೆ ಮನವಿಪತ್ರ ನೀಡಿ ಪರಿಹಾರ ಕಾರ್ಯ ಚುರುಕುಗೊಳ್ಳುವಂತೆ ನೋಡಿ ಕೊಂಡಿದ್ದಾರೆ.
ರೈತರ ಪತ್ನಿಯರಿಗೆ ಹೊಲಿಗೆ ಯಂತ್ರ
ನಮ್ಮಲ್ಲಿರುವ ಮಾನವತ್ವದ ಜಾಗೃತಿಗಾಗಿ ನಾವು ಇಂತಹ ಸಮಾಜಸೇವೆಗಳನ್ನು ಮಾಡಲೇಬೇಕು. ನಾನು ಇದನ್ನು ನನಗಾಗಿ ಮಾಡುತ್ತಿಲ್ಲ ಬದಲಿಗೆ ನಮಗೆಲ್ಲರಿಗಾಗಿ ಮಾಡುತ್ತಿರುವೆ, ಬನ್ನಿ ನಾವೆಲ್ಲಾ ಒಟ್ಟು ಸೇರಿ ಸಮಾಜಸೇವೆ ಮಾಡೋಣ ಎಂದು ಹೇಳುವ ನಾನಾ, ರೈತರ ಪತ್ನಿಯರಿಗೆ ಹೊಲಿಗೆ ಯಂತ್ರ ಉಚಿತವಾಗಿ ಒದಗಿಸಿ ಅವರ ಕುಟುಂಬದ ರಕ್ಷಣೆಗೆ ಮುಂದಾಗಿದ್ದಾರೆ .
ಹಲವು ಹಳ್ಳಿಗಳನ್ನು ದತ್ತುಪಡೆದು ಅವುಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಾನಾ, ಬಾಲಿವುಡ್ ಚಿತ್ರ ‘ಪ್ರಹಾರ್, ದಿ ಫೈನಲ್ ಅಟ್ಯಾಕ್’ ಎಂಬ ಚಿತ್ರದಲ್ಲಿ ಸೇನಾ ಆಫಿಸರ್ ಪಾತ್ರ ನಿರ್ವಹಣೆಯಲ್ಲಿ ನೈಜತೆ ಬರಬೇಕೆಂಬ ಉದ್ದೇಶದಿಂದ ಸೇನೆಯಲ್ಲಿ ಮೂರು ವರ್ಷಗಳ ತರಬೇತಿ ಕೂಡಾ ಪಡೆದಿದ್ದರು. ಹಾಗಾಗಿ, ಇವರು ಸೇನೆಯ ಕ್ಯಾಪ್ಟನ್ ಶ್ರೇಯಾಂಕ ಕೂಡಾ ಹೊಂದಿದ್ದಾರೆ .
22 ಕೋಟಿ ಮೊತ್ತ ಸಂಗ್ರಹ
ನಾನಾ ಪ್ರಾರಂಭಿಸಿದ ಚಾರಿಟಿ ಸಂಸ್ಥೆಗೆ ನಾಗರೀಕರಿಂದ ಇದುವರೆಗೆ 22 ಕೋಟಿ ರೂಪಾಯಿ ಮೊತ್ತ ಸಂಗ್ರಹವಾಗಿದೆ. ಇದಲ್ಲದೇ ನಾನಾ, ತನ್ನ 30 ವರ್ಷದ ದುಡಿಮೆಯ 95% ಭಾಗವನ್ನು ಚಾರಿಟಿ ಸಂಸ್ಥೆಗೆ ನೀಡಿದ್ದಾರೆ. ಸಂಗ್ರಹವಾದ ಮೊತ್ತದಿಂದ ರೈತರ ಭೂಮಿಗೆ ನೀರಿನ ವ್ಯವಸ್ಥೆ ಮಾಡುವ ಗುರಿಯನ್ನು ನಾನಾ ಹೊಂದಿದ್ದಾರೆ.