ತಮ್ಮ ಬಳಿಯಿರುವ ಸಿಆರ್‌ಪಿಎಫ್ ಯೋಧನನ್ನ ಬಿಟ್ಟು ಕಳಿಸಲು ಈ ಷರತ್ತನ್ನ ಮುಂದಿಟ್ಟ ನಕ್ಸಲರು: ಪತ್ನಿ ಹೇಳಿದ್ದೇನು ಗೊತ್ತಾ?

in Kannada News/News 355 views

ನವದೆಹಲಿ: ಛತ್ತೀಸ್ಗಢದ ಮಾವೋವಾದಿ-ವಿ ರೋ ಧಿ ನ-ಕ್ಸ-ಲಿ-ಯರಿಗಾಗಿ ನಡೆಸಿದ ಆಪರೇಷನ್ ನಲ್ಲಿ ಕಾ-ಣೆ-ಯಾಗಿರುವ ಯೋ-ಧ ರಾಕೇಶ್ವರ ಮನ್ಹಾಸ್ ಅವರ ಪತ್ನಿ ಮೀನು ಮನ್ಹಾಸ್ ಅವರನ್ನು ಸಂಭಾಳಿಸುವ ಪ್ರಯತ್ನ ನಡೆಯುತ್ತಿದೆ. ಅದೇ ಸಮಯದಲ್ಲಿ, ರಾಕೇಶ್ವರ ಮನ್ಹಾಸ್ ಅವರ ನಾಲ್ಕು ವರ್ಷದ ಮಗಳು ರಾಘವಿ, ಪಾಪಾ ಶೀಘ್ರದಲ್ಲೇ ಮನೆಗೆ ಬರುತ್ತಾರೆ ಎಂದು ನಂಬಿ ಕೂತಿದ್ದಾಳೆ. ಯೋ-ಧ ರಾಕೇಶ್ವರ ಮನ್ಹಾಸ್ ಅವರ ಪತ್ನಿ ಮೀನು ಮನ್ಹಾಸ್ ತನಗೆ ಮಧ್ಯಾಹ್ನ ಕರೆಯೊಂದು ಬಂತು ಎಂದು ಹೇಳಿದ್ದಾರೆ. ಆ ವ್ಯಕ್ತಿ ಮಾತನಾಡುತ್ತ, ಅವರು ಛತ್ತೀಸ್‌ಗಢ್ ನಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಂಡರು ಮತ್ತು ರಾಕೇಶ್ವರ ಇರುವ ಸ್ಥಳದ ಬಗ್ಗೆ ತನಗೆ ಒಂದು ಅಂದಾಜು ಇದೆ ಎಂಬ ಸಂಕೇತವನ್ನೂ ನೀಡಿದ್ದನು.

Advertisement

ನ-ಕ್ಸ-ಲ-ರು ಮಾಧ್ಯಮ ವರದಿಗಾರರಿಗೆ ಫೋನ್ ಮಾಡಿ ಯೋ-ಧ-ನಿಗೆ ಯಾವುದೇ ಹಾ-ನಿ ಮಾಡುವುದಿಲ್ಲ ಎಂದು ಅವರು ಫೋನ್‌ನಲ್ಲಿ ಹೇಳಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಆತನ ಬಿಡುಗಡೆಗೆ ಒಂದು ಷರತ್ತು ಇದೆ. ನಾ-ಪ-ತ್ತೆ-ಯಾದ ಯೋ-ಧ ರಾಜೇಶ್ವರ ಸಿಂಗ್ ಮನ್ಹಾಸ್ ಜಮ್ಮು ಕಾಶ್ಮೀರದ ನಿವಾಸಿ ಮತ್ತು ಕೋ-ಬ್ರಾ ಬೆಟಾಲಿಯನ್ ನ ಭಾಗವಾಗಿದ್ದಾರೆ. ನ-ಕ್ಸ-ಲ-ರು ಪತ್ರಕರ್ತರಿಗೆ ಕರೆ ಮಾಡಿ ರಾಜೇಶ್ವರ ಸಿಂಗ್ ಅವರನ್ನು ಬಿಡಲು ಸಿದ್ಧರಿದ್ದೇವೆ ಆದರೆ ರಾಜೇಶ್ವರ್ ಇನ್ನುಮುಂದೆ ಭ-ದ್ರ-ತಾ ಪ-ಡೆ-ಯಲ್ಲಿ ಮುಂದುವರಿಯುವುದಿಲ್ಲ ಮತ್ತು ಈ ಕೆಲಸವನ್ನು ತೊರೆದು ಬೇರೆ ಯಾವುದಾದರೂ ಕೆಲಸ ಮಾಡುತ್ತೇನೆ ಎಂದಾದರೆ ಮಾತ್ರ ಆತನನ್ನ ಬಿಡುಗಡೆ ಮಾಡುತ್ತೇವೆ ಎಂಬ ಷರತ್ತನ್ನ ಮುಂದಿಟ್ಟಿದ್ದಾರೆ.

ಮಧ್ಯಾಹ್ನ ಮೀನು ಮನ್ಹಾಸ್ ಗೆ ಬಂದಿತ್ತು ಫೋನ್ ಕಾಲ್

ಕುಟುಂಬಸ್ಥರು ರಾಕೇಶ್ ಕಾಡಿನಲ್ಲಿ ದಾರಿ ತಪ್ಪಿರಬಹುದು ಎಂದುಕೊಂಡಿದ್ದರು ಹಾಗು ಶೀಘ್ರದಲ್ಲೇ ವಾಪಸ್ ಬರಬಹುದು ಎಂದುಕೊಂಡಿದ್ದರು.‌ ಆದರೆ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಛತ್ತಿಸಗಢ್ ನಿಂದ ಮಧ್ಯಾಹ್ನ ಮೀನು ಮನ್ಹಾಸ್ ರವರಿಗೆ ಫೋನ್ ಮಾಡಿದ. ಆತ ತಾನೊಬ್ಬ ಸ್ಥಳೀಯ ಮೀಡಿಯಾ ವ್ಯಕ್ತಿಯೆಂದು ಹೇಳಿಕೊಳ್ಳುತ್ತ, ನ-ಕ್ಸ-ಲ-ರಿ-ಗೆ ನೀವೊಂದು ಮನವಿ ಮಾಡಿಕೊಳ್ಳಿ ನಾನು ಅದನ್ನ ಅವರಿಗೆ ತಲುಪಿಸುತ್ತೇನೆ ಎಂದು ಹೇಳಿದನು.

ಫೋನ್ ಮಾಡಿದ ಆ ವ್ಯಕ್ತಿ ತಮಗೆ ವಾಟ್ಸ್ಯಾಪ್ ನಲ್ಲಿ ಹಾಯ್ ಎಂದು ಮೆಸೇಜ್ ಕಳಿಸುತ್ತೇನೆ, ಆ ನಂಬರ್‌ಗೆ ರಾಕೇಶ್ವರ್ ರವರ ಫೋಟೋವನ್ನ ಅದೇ ನಂಬರ್‌ಗೆ ಕಳಿಸುವಂತೆ ಹೇಳಿದ. ಆದರೆ ಅದಾದ ಬಳಿಕ ಆ ವ್ಯಕ್ತಿಯ ಸಂಪರ್ಕ ಸಾಧ್ಯವೇ ಆಗಲಿಲ್ಲ. ತನಗೆ ಫೋನ್ ಮಾಟಿದ ಆ ವ್ಯಕ್ತಿಗೆ ತನ್ನ ಫೋನ್ ನಂಬರ್ ಹೇಗೆ ಸಿಕ್ಕಿತು ಅನ್ನೋದೇ ಮೀನು ರವರಿಗೆ ಅರ್ಥವೇ ಆಗಲಿಲ್ಲ.

ತನ್ನ ಗಂಡನನ್ನು ಬಿ-ಡು-ಗ-ಡೆ ಮಾಡುವಂತೆ ನ-ಕ್ಸ-ಲ-ರಿಗೆ ಮನವಿ

ಜಮ್ಮು ಬಳಿಯ ಬರ್ನಾಯ್‌ನ ನೇತರ್ ಕೊಥೈ ಗ್ರಾಮದಲ್ಲಿ ರಾಕೇಶ್ವರ್ ಕುಟುಂಬ ಮನೆಯಲ್ಲಿ ವಾಸಿಸುತ್ತಿದ್ದು, ಸಂಬಂಧಿಕರಿಂದ ಸುತ್ತುವರೆದಿರುವ ಮೀನು ತನ್ನ ಪತಿಯ ಶೀಘ್ರ ಮರಳುವಿಕೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ತನ್ನ ಗಂಡನೊಂದಿಗೆ ನ-ಕ್ಸ-ಲ-ರಿಗೆ ಯಾವುದೇ ದ್ವೇ-ಷ-ವಿಲ್ಲದ ಕಾರಣ ಅವರನ್ನ ಬಿ-ಡು-ಗ-ಡೆ ಮಾಡುವಂತೆ ಆಕೆ ನ-ಕ್ಸ-ಲ-ರಿಗೆ ಮನವಿ ಮಾಡಿದ್ದಾರೆ.

ಮೀನು ಕೊನೆಯ ಬಾರಿಗೆ ಶುಕ್ರವಾರ ಸಂಜೆ ರಾಕೇಶ್ವರ ಅವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಾ, ಶನಿವಾರದಂದು ಅವರು ಆಹಾರವನ್ನು ಪ್ಯಾಕ್ ಮಾಡುತ್ತಿದ್ದರು ಮತ್ತು ಆ-ಪ-ರೇ-ಷ-ನ್‌-ಗೆ ಹೋಗುತ್ತಿದ್ದರು ಎಂದು ಹೇಳಿದ್ದರು. ನಂತರ ಸಂಜೆ ನ-ಕ್ಸ-ಲ್ ದಾ-ಳಿ-ಯ ಸುದ್ದಿ ಬಂದಿತು, ಇದರಲ್ಲಿ 22 ಸಿಬ್ಬಂದಿ ಕೊ-ಲ್ಲ-ಲ್ಪ-ಟ್ಟ-ರು ಮತ್ತು ರಾಕೇಶ್ವರ ಇನ್ನೂ ಕಾ-ಣೆ-ಯಾಗಿದ್ದಾರೆ‌.

ಛತ್ತೀಸ್‌ಗಡ್ ಗಿಂತ ಮೊದಲು ಅಸ್ಸಾಂನಲ್ಲಿ ಪೋಸ್ಟಿಂಗ್ ಆಗಿದ್ದ ರಾಕೇಶ್ವರ್

ಸಿಆರ್‌ಪಿಎಫ್‌ನ ಕೋ-ಬ್ರಾ ಘಟಕದ ಭಾಗವಾಗಿರುವ ರಾಕೇಶ್ವರ (35) ಅವರು 2011 ರಲ್ಲಿ ಸೇ-ನೆ-ಯಲ್ಲಿ ಸೇರಿಕೊಂಡರು ಮತ್ತು ಐದು ವರ್ಷಗಳಿಗಿಂತ ಹೆಚ್ಚು ಕಾಲ ಗಣ್ಯರ ಜೊತೆಗಿದ್ದರು. ಅವರ ಕಿರಿಯ ಸಹೋದರ ಸುಮಿತ್ ಮಾತನಾಡುತ್ತ ಛತ್ತೀಸ್‌ಗಢ್ ಗಿಂತ ಮೊದಲು ರಾಕೇಶ್ವರನನ್ನು ಅಸ್ಸಾಂನಲ್ಲಿ ಪೋಸ್ಟಿಂಗ್ ಇತ್ತು ಎಂದು ಹೇಳಿದರು. ಈ ತಿಂಗಳು ತನ್ನ ಸೋದರ ಮಾವನ ಮದುವೆಯಲ್ಲಿ ಪತಿ ಮನೆಗೆ ಬರುವವರಿದ್ದರು ಎಂದು ಮೀನು ಹೇಳಿದ್ದಾರೆ.

ಬಂತಲಾಬ್‌ನ ಸಿಆರ್‌ಪಿಎಫ್ ಕೇಂದ್ರ ಕಚೇರಿಯ ಕಮಾಂಡೆಂಟ್ ಪಿಸಿ ಗುಪ್ತಾ ಅವರು ಸೋಮವಾರ ಮಧ್ಯಾಹ್ನ ರಾಕೇಶ್ವರ್ ಕುಟುಂಬವನ್ನು ಭೇಟಿಯಾದರು ಮತ್ತು ಛತ್ತೀಸ್‌ಗಢದಿಂದ ಅವರು ಯಾವುದೇ ಅಪ್ಡೇಟ್‌ ಪಡೆದರೂ ಅದನ್ನ ಹಂಚಿಕೊಳ್ಳುವುದಾಗಿ ಭರವಸೆ ನೀಡಿದರು. ಇಲಾಖೆ ಮತ್ತು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ ಎಂದರು.

“ನಕ್ಸಲ್ ಅಂಕಲ್ ಪ್ಲೀಸ್ ನನ್ನ ಡ್ಯಾಡಿಯನ್ನ ಬಿಟ್ಟುಬಿಡಿ”

ಕಾ-ಣೆ-ಯಾಗಿರುವ ಸಿಆರ್‌ ಪಿಎಫ್ ಯೋ-ಧ ರಾಕೇಶ್ವರ ಸಿಂಗ್ ಮಿನ್ಹಾಸ್ ಅವರ ಮನೆಯಲ್ಲಿ ಭಾವನಾತ್ಮಕ ಕ್ಷಣವೊಂದು ಕಂಡುಬಂದಿದ್ದು, ರಾಕೇಶ್ವರ್ ಸಿಂಗ್ ರವರ 5 ವರ್ಷದ ಮಗಳು ನ-ಕ್ಸ-ಲ ರಿಗೆ ಅ-ಪ-ಹ-ರಿ&ಸಿರುವ ತನ್ನ ತಂದೆಯನ್ನು ಬಿ-ಡು-ಗ-ಡೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತ, “ದಯವಿಟ್ಟು, ನನ್ನ ತಂದೆಯನ್ನು ಬಿ-ಡು-ಗ-ಡೆ ಮಾಡಿ” ಎಂದು ಛತ್ತೀಸ್‌ಗಢ್ ದಲ್ಲಿ ನಡೆದ ದಾ-ಳಿ-ಯ ನಂತರ ನ-ಕ್ಸ-ಲ್ಸ್‌-ರಿಂದ ಒ-ತ್ತೆ-ಯಾ-ಳಾ ಗಿರುವ ಕೋ-ಬ್ರಾ ಕ-ಮಾಂ-ಡೋ-ನ ಮಗಳು ಐದು ವರ್ಷದ ಶ್ರಾಗ್ವಿ ಪತ್ರ ಬರೆದಿದ್ದಾಳೆ.

ಮಿನ್ಹಾಸ್ ಅವರ ಮಗಳಷ್ಟೇ ಅಲ್ಲದೆ, ಅವರ 7 ವರ್ಷದ ಸೋದರಳಿಯ ಆಕಾಶ್ ಕೂಡ ಚಿಕ್ಕಪ್ಪ ಎಲ್ಲಿದ್ದಾರೆ ಅವರನ್ನ ಕರೆತನ್ನಿ ಎನ್ನುತ್ತಿದ್ದಾನೆ. “ಅಂಕಲ್, ನೀವು ಮಾಧ್ಯಮದಲ್ಲಿದ್ದೀರಿ, ನನ್ನ ಚಿಕ್ಕಪ್ಪ ಎಲ್ಲಿದ್ದಾರೆ ಎಂದು ನಿಮಗೆ ತಿಳಿದಿರಬೇಕು” ಎಂದು ಆತ ತಮ್ಮ ಮನೆಗೆ ಬಂದ ಸುದ್ದಿಗಾರರನ್ನು ಕೇಳುತ್ತಿದ್ದನು.

 

Advertisement
Share this on...