ಆಹಾರ ಪದಾರ್ಥಗಳಲ್ಲಿ ಉಗುಳುವುದು ಮತ್ತು ಮೂತ್ರ ವಿಸರ್ಜನೆಯಂತಹ ಅಸಹ್ಯಕರ ಕೃತ್ಯಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಉತ್ತರ ಪ್ರದೇಶದ ಬರೇಲಿಯಿಂದ ಇಂತಹುದ್ದೇ ಘಟನೆ ಮತ್ತೆ ಬೆಳಕಿಗೆ ಬಂದಿದೆ. ಜಿಲ್ಲೆಯ ಪ್ರೇಮ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಷರೀಫ್ ಖಾನ್ ಎಂಬ ಮುಸ್ಲಿಂ ತರಕಾರಿ ವ್ಯಾಪಾರಿ ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿ ಹಿಂದೂ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ. ಜನರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೀಡಿಯಾ ರಿಪೋರ್ಟ್ಸ್ ಗಳ ಪ್ರಕಾರ, ಶರೀಫ್ ಖಾನ್ ಶುಕ್ರವಾರ (ಸೆಪ್ಟೆಂಬರ್ 16, 2022) ತರಕಾರಿ ಬಂಡಿಯೊಂದಿಗೆ ರಸ್ತೆಯ ಬದಿಯಲ್ಲಿ ನಿಂತಿದ್ದ. ಅಲ್ಲಿ ತರಕಾರಿ ಬಂಡಿಯ ಮೇಲೆ ಇಟ್ಟಿದ್ದ ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಈತ ಈ ರೀತಿ ಮಾಡುವುದನ್ನು ನೋಡಿದ ವ್ಯಕ್ತಿಯೊಬ್ಬರು ಘಟನೆಯ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.
ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜನಕ್‌ಪುರಿಯಲ್ಲಿರುವ ಕೈಲಾಶ್ ಆಸ್ಪತ್ರೆ ಬಳಿ ಹೋಗಿತ್ತಿದ್ದೆ ಆಗ ನನ್ನ ಕಣ್ಣು ರಸ್ತೆ ಬದಿಯಲ್ಲಿ ನಿಂತಿದ್ದ ತರಕಾರಿ ಮಾರುವವರ ಮೇಲೆ ಬಿತ್ತು. ತಳ್ಳುವ ಗಾಡಿಯ ನೆಪದಲ್ಲಿ ತರಕಾರಿ ಮಾರಲು ಬಂದಿದ್ದ ವ್ಯಕ್ತಿಯೊಬ್ಬ ತರಕಾರಿ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಎಂದು ಕರ್ಮಾಚಾರಿ ನಗರದ ನಿವಾಸಿ ಹಿಂದೂ ಜಾಗರಣ ಮಂಚ್ ಕಾರ್ಯಕರ್ತ ದುರ್ಗೇಶ್ ಗುಪ್ತಾ ಹೇಳಿದ್ದಾರೆ.
ಈ ಘಟನೆಯನ್ನು ಕಾರಿನಲ್ಲಿ ಕುಳಿತು ವಿಡಿಯೋ ಮಾಡಿದ್ದೇನೆ. ಇದಾದ ನಂತರ, ತರಕಾರಿ ಮಾರಾಟಗಾರನನ್ನು ಮಾತನಾಡಿಸಲು ಅವನ ಬಳಿ ಹೋದಾಗ, ಅವನು ತನ್ನ ಹೆಸರು ಶರೀಫ್ ಖಾನ್ ಎಂದು ಮತ್ತು ಆತನ ವಿಳಾಸ ಪರ್ತಾಪುರ್ ಚೌಧರಿ ಎಂದು ಹೇಳಿದನು. ತರಕಾರಿ ಮೇಲೆ ಮೂತ್ರ ವಿಸರ್ಜನೆ ಯಾಕೆ ಮಾಡುತ್ತಿದ್ದೀಯ? ಎಂದು ಷರೀಫ್‌ಗೆ ಕೇಳಿದಾಗ ಆತ ನನ್ನನ್ನೇ ಬೈಯಲಾರಂಭಿಸಿದನು ಎಂದು ದುರ್ಗೇಶ್ ತಿಳಿಸಿದರು.
ಗಲಾಟೆಯನ್ನು ಕಂಡು ಹತ್ತಾರು ಮಂದಿ ಅಲ್ಲಿ ಜಮಾಯಿಸಿ ಷರೀಫ್ ಖಾನ್‌ನ್ನ ಥಳಿಸಿದ್ದಾರೆ. ಬಳಿಕ ಪ್ರೇಮ್‌ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ಪ್ರೇಮ್ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಷರೀಫ್‌ನ್ನ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಶರೀಫ್ ತನಗೆ ಮೂತ್ರ ವಿಸರ್ಜನೆ ಬಂದಿತ್ತು ಹಾಗಾಗಿ ತಳ್ಳುವ ಗಾಡಿಯ ಬಳಿಯೇ ವಿಸರ್ಜನೆ ಮಾಡಿದ್ದೇನೆ ಹೊರತು ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿಲ್ಲ ಎಂದು ಪೋಲಿಸರಿಗೆ ತಿಳಿಸಿದ್ದಾನೆ. ಜನರ ಪ್ರಕಾರ, ಷರೀಫ್ ಖಾನ್ ಹಿಂದೂ ಜನಸಂಖ್ಯೆಯಿರುವ ಜನಕಪುರಿ ಮತ್ತು ರಾಜೇಂದ್ರನಗರ ಪ್ರದೇಶಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಬರುತ್ತಿದ್ದ ಎಂದು ಹೇಳಿದ್ದಾರೆ.
ಪ್ರೇಮ್ ನಗರ ಪೊಲೀಸ್ ಠಾಣೆಯ ಎಸ್‌ಎಸ್‌ಐ ವೀರೇಂದ್ರ ಪ್ರತಾಪ್ ಸಿಂಗ್ ಮಾತನಾಡಿ, ಶರೀಫ್ ಖಾನ್ ಎಂಬ ತರಕಾರಿ ಮಾರಾಟ ಮಾಡುವವನ ವಿರುದ್ಧ ತರಕಾರಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಜನರು ಆರೋಪಿಸಿದ್ದಾರೆ. ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತಹರೀರ್ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಲಾಗುತ್ತಿದೆ ಎಂದರು.