ತಾಯಿ ತೀರಿಹೋದರು ಎಂಬ ಸುದ್ದಿ ಕೇಳಿದ ಬಳಿಕವೂ ಅದರ ಬಗ್ಗೆ ಯೋಚಿಸದೆ 15 ಕೋವಿಡ್ ರೋಗಿಗಳ ಜೀವ ಉಳಿಸಲು ಓಡಿಹೋದ ಯುವಕ: ಹ್ಯಾಟ್ಸಾಫ್

in Uncategorized 138 views

ಲಕ್ನೋ: ದೇಶದಲ್ಲಿ ಕರೋನಾ ರಣಕೇಕೆ ಹಾಕುತ್ತಿದೆ, ಪ್ರತಿ ನಿತ್ಯ ಆಸ್ಪತ್ರೆಗಳಿಗೆ ದೌಡಾಯಿಸುತ್ತಿರುವ ರೋಗಿಗಳನ್ನು ಮನೆ ಮಠ ಬಿಟ್ಟು ವೈದ್ಯರು ಜೀವ ಪಣಕ್ಕಿಟ್ಟು ಆರೈಕೆ ಮಾಡುತ್ತಿದ್ದಾರೆ. ಹಗಲು ರಾತ್ರಿ ಬಿಡುವಿಲ್ಲದೆ ಶ್ರ‍ಮಿಸುತ್ತಿದ್ದಾರೆ. ಕರೋನಾ ವಾರಿಯರ್ಸ್ ಗಳಾದ ವೈದ್ಯಕೀಯ ಸಿಬ್ಬಂದಿಗಳು ದಿನವಿಡೀ ಪಿಪಿಇ ಕಿಟ್ ಧರಿಸಿ ಉಸಿರು ಗಟ್ಟವಂತೆ ಇದ್ದರೂ ರೋಗಿಗಳ ಪ್ರಾಣರಕ್ಷಣೆ ಮಾಡುತ್ತಿದ್ದಾರೆ. ಇಂತಹ ಕರೋನಾ ವಾರಿಯರ್ಸ್ ಗಳಾದ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಸರಿಯಾಗಿ ಊಟ ಮಾಡಲು ಕೂಡ ಕಷ್ಟ ಪಡುತ್ತಿದ್ದಾರೆ. ಅದ್ರಲ್ಲೂ ಸರ್ಕಾರಿ ಆಸ್ಪತ್ರೆಗಳ ವೈದ್ಯರ, ಅದೇ ರೀತಿ ಸಿಬ್ಬಂದಿಗಳ ಕಷ್ಟ ಹೇಳತೀರದ್ದಾಗಿದೆ.

Advertisement

ಆಂಬುಲೆನ್ಸ್‌ ಚಾಲಕರೋರ್ವರು ತಾವು ಎಂದಿನಂತೆ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭ ತನ್ನ ತಾಯಿ ಮೃತಪಟ್ಟ ಬಗ್ಗೆ ಸುದ್ದಿ ತಿಳಿದರೂ ತನ್ನ ಕರ್ತವ್ಯ ಮುಂದುವರಿಸಿ ಒಟ್ಟು 15 ಕೋವಿಡ್ ಸೋಂಕಿತ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ ಘಟನೆ ಮಥುರಾದಲ್ಲಿ ನಡೆದಿದೆ.

ಆಂಬುಲೆನ್ಸ್ ಚಾಲಕ ಪ್ರಭಾತ್ ಯಾದವ್ ಎಂದಿನಂತೆ ಕೋವಿಡ್‌ ರೋಗಿಗಳನ್ನು ಮಥುರಾದ ಆಸ್ಪತ್ರೆಗಳಿಗೆ ಕರೆದೊಯ್ಯುತ್ತಿದ್ದು ಈ ವೇಳೆ, ಕುಟುಂಬಸ್ಥರು ಕರೆ ಮಾಡಿ ಪ್ರಭಾತ್ ತಾಯಿ ನಿಧನರಾದ ಸುದ್ದಿ ತಿಳಿಸಿದ್ದಾರೆ. ಆದರೆ ಕೋವಿಡ್‌ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಪ್ರಭಾತ್ ಕೊರೊನಾದ ಈ ಸಂದರ್ಭದಲ್ಲಿ ತನ್ನ ಕರ್ತವ್ಯ ಅತೀ ಮುಖ್ಯ ಎಂದು ಭಾವಿಸಿ ತನ್ನ ಸಮಯಾವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಒಂದು ದಿನದಲ್ಲೇ ಒಟ್ಟು 15 ಕೋವಿಡ್‌ ಸೋಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಭಾತ್ ಯಾದವ್, ತಾಯಿಯ ನಿಧನದ ಸುದ್ದಿ ಕೇಳಿ ನಾನು ನಡುಗುತ್ತಿದ್ದೆ, ಆದರೆ ನಾನು ಮನಸ್ಸು ಗಟ್ಟಿ ಮಾಡಿ ನನ್ನ ಕರ್ತವ್ಯ ಮುಂದುವರಿಸಬೇಕಾಗಿತ್ತು. ನನಗೆ ಒಂದು ಕ್ಷಣಕ್ಕೆ ಏನು ಮಾಡುವುದು ಎಂದು ತೋಚಲಿಲ್ಲ. ಆದರೆ ಕೊರೊನಾದ ಈ ಸಂದರ್ಭದಲ್ಲಿ ನಾನು ಕೆಲಸ ಮುಂದುವರಿಸುವುದೇ ಸೂಕ್ತ ಎಂದು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ನನ್ನ ತಾಯಿ ಮೃತಪಟ್ಟಾಗಿದೆ. ಈ ಸಮಯದಲ್ಲಿ ನಾನು ನನ್ನ ಕೆಲಸ ಮುಂದುವರಿಸಿ ಕೆಲವು ಜನರನ್ನು ಉಳಿಸಲು ಸಾಧ್ಯವಾದರೆ, ನನ್ನ ತಾಯಿಗೆ ಹೆಮ್ಮೆಯಾಗುತ್ತದೆ ಎಂದಿದ್ದಾರೆ.

ಇನ್ನು ಯಾದವ್ ತನ್ನ ಶಿಫ್ಟ್‌ನ ಕೆಲಸ ಮುಗಿಸಿ 200 ಕಿ.ಮೀ ಪ್ರಯಾಣಿಸಿ ತನ್ನ ಗ್ರಾಮ ಮೈನ್‌ಪುರಿಯನ್ನು ತಲುಪಿದ್ದಾರೆ. ಆ ಬಳಿಕ ತನ್ನ ತಾಯಿಯ ಕೊನೆಯ ವಿಧಿಗಳನ್ನು ನೆರವೇರಿಸಿದ ಯಾದವ್ ಮರುದಿನ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ.

ಸುಮಾರು ಒಂಬತ್ತು ವರ್ಷಗಳಿಂದ 108 ಆಂಬುಲೆನ್ಸ್‌ಗಳನ್ನು ಓಡಿಸುತ್ತಿರುವ ಯಾದವ್ ಕಳೆದ ವರ್ಷ ಮಾರ್ಚ್‌ನಲ್ಲಿ ಕೋವಿಡ್ ಕರ್ತವ್ಯಕ್ಕೆ ಆಯ್ಕೆಯಾಗಿದ್ದಾರೆ. ಆದರೆ, ಕಳೆದ ವರ್ಷ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಬಳಿಕ ಯಾದವ್‌ರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿತ್ತು. ಆದರೆ ಈಗ ಮತ್ತೆ ಎರಡನೇ ಕೊರೊನಾ ಅಲೆ ಆರಂಭವಾದ ಹಿನ್ನೆಲೆ ಯಾದವ್‌ ಏಪ್ರಿಲ್‌ನಿಂದ ಮತ್ತೆ ಕೊರೊನಾ ವಾರಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನು ವರದಿಯ ಪ್ರಕಾರ ಯಾದವ್ ತಂದೆ ಕಳೆದ ವರ್ಷ ಜುಲೈನಲ್ಲಿ ಕೋವಿಡ್ -19 ಕಾರಣದಿಂದ ಮೃತಪಟ್ಟಿದ್ದರು. ಆಗಲೂ, ಯಾದವ್ ಮನೆಗೆ ಹೋಗಿ, ತಂದೆಯ ಕೊನೆಯ ವಿಧಿಗಳನ್ನು ನೆರವೇರಿಸಿ ಮತ್ತೆ ಕೆಲಸಕ್ಕೆ ಹಾಜರಾಗಿದ್ದರು.

ಈ ಬಗ್ಗೆ ಮಾತನಾಡಿರುವ ಮಥುರಾದ 102 ಮತ್ತು 108 ಆಂಬುಲೆನ್ಸ್ ಸೇವೆಗಳ ಪ್ರೋಗ್ರಾಂ ಮ್ಯಾನೇಜರ್ ಅಜಯ್ ಸಿಂಗ್, ಯಾದವ್ ಸಮರ್ಪಿತ ಕೆಲಸಗಾರ. ಯಾದವ್‌ ತಾಯಿಯ ಅಂತ್ಯಕ್ರಿಯೆಯ ನಂತರ ಕೆಲವು ದಿನಗಳ ಕಾಲ ಮನೆಯಲ್ಲಿಯೇ ಇರಿ ಎಂದು ತಿಳಿಸಿದ್ದೆವು. ಆದರೆ ಯಾದವ್‌ ನಿರಾಕರಿಸಿ ಕೆಲಸಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಲಾಕ್ ಡೌನ್ ಆಗಿರುವುದರಿಂದ ಮತ್ತು ಯಾವುದೇ ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದ ಕಾರಣ ಅಜಯ್ ಸಿಂಗ್, ಆಂಬುಲೆನ್ಸ್‌ ಚಾಲಕ ಯಾದವ್ ಮನೆಗೆ ತೆರಳುವ ವ್ಯವಸ್ಥೆ ಮಾಡಿದ್ದರು.

ಕೊರೋನಾ ರೋಗಿಗಳಾಗಿ ಆ್ಯಂಬುಲೆನ್ಸ್ ಡ್ರೈವರ್ ಆದ ನಟ ಅರ್ಜುನ್ ಗೌಡ

ಕನ್ನಡದ ಖ್ಯಾತ ಕಿರುತೆರೆ ಹಾಗು ಸಿನಿಮಾ ನಟರಾದ ಅರ್ಜುನ್ ಗೌಡ ಅವರು ತಮ್ಮ ಕೆಲಸಗಳನ್ನು ಬಿಟ್ಟು ಆo’ಬುಲೆನ್ಸ್ ಡ್ರೈವರ್ ಆಗಿ, ಕ-ರೋನ ರೋ-ಗಿಗಳಿಗೆ ಸಹಾಯ ಆಗಲಿ ಎಂದು ಇದನ್ನು ಮಾಡಿದ್ದಾರೆ! ಇದರ ಬಗ್ಗೆ ಸಂಪೂರ್ಣ ಮಾಹಿತಿ ಗಾಗಿ ಈ ಕೆಳಗಿನ ವಿಡಿಯೋ ನೋಡಿ.

ಕೊರೋನಾ ಸೋಂಕಿತರ ಅಂತಿಮ ಸಂಸ್ಕಾರ ಮಾಡುತ್ತಿರುವ ಜಿಮ್ ರವಿ

ಕನ್ನಡದ ಸಾಕಷ್ಟು ನಟರ ಫೇಮಸ್ ಜಿಮ್ ಟ್ರೈನರ್ ಆದ ಜಿಮ್ ರವಿ ಅವರು ಇವತ್ತು ಮ ಸ ಣ ಕ್ಕೆ ಹೋಗಿ, ಸಾಲು ಸಾಲು ಸು ಡು ತ್ತಿ ರುವ ದೇ-ಹಗಳ ನಡುವೆ ವಿಡಿಯೋ ಮಾಡಿದ್ದಾರೆ, ಜಿಮ್ ರವಿ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ನೋಡಿ

 

Advertisement
Share this on...