ತಿರುಪತಿಯ ಈ ಭಿಕ್ಷುಕನ ಬಳಿ ಸಿಕ್ಕಿತು ಅಪಾರ ಪ್ರಮಾಣದ ಹಣ: ಒಟ್ಟು ಮೊತ್ತ ಕೇಳಿ ದಂಗಾದ ಅಧಕಾರಿಗಳು

in Kannada News/News 322 views

ತಿರುಮಲ: ದಿನ ನಿತ್ಯದ ಊಟಕ್ಕಾಗಿ ಭಿಕ್ಷೆ ಬೇಡುವುದೇ ಆತನ ಕೆಲಸ. ಆತನನ್ನು ನೋಡಿದವರು ಕಡುಬಡವನೆಂದು ಹಣ ನೀಡಿ ಅಯ್ಯೋ ಪಾಪ ಅಂದುಕೊಂಡವರೇ ಹೆಚ್ಚು. ಆದರೆ, ಅದೇ ಭಿಕ್ಷುಕ ಇಂದು ಲಕ್ಷಾಧಿಪತಿ ಅಂತಾ ಗೊತ್ತಾದಾಗ ಯಾರಾದರೂ ಸರಿ ಹುಬ್ಬೇರಿಸದೇ ಇರಲಾರರು. ಹೌದು, ಅಂಥದ್ದೇ ಒಂದು ಘಟನೆ ತಿರುಪತಿಯಲ್ಲಿ ನಡೆದಿದೆ.

ಶ್ರೀಮಂತ ದೇವರೆಂದೇ ಖ್ಯಾತಿಯಾಗಿರುವ ತಿಮ್ಮಪ್ಪನ ಸನ್ನಿಧಿ ಇರುವ ತಿರುಪತಿಯಲ್ಲಿ ಭಿಕ್ಷುಕನೊಬ್ಬನ ಮನೆಯಲ್ಲಿ ಬರೋಬ್ಬರಿ 6 ಲಕ್ಷ ರೂಪಾಯಿ ಹಣ ಪತ್ತೆಯಾಗಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಭಿಕ್ಷುಕನನ್ನು ಶ್ರೀನಿವಾಸ್​ ಎಂದು ಗುರುತಿಸಲಾಗಿದೆ. ಈತ ತಿರುಪತಿಯ ಶೇಷಾಚಲ ನಗರದ ನಿವಾಸಿ. ತಿರುಪತಿಗೆ ಬರುತ್ತಿದ್ದ ವಿಐಪಿಗಳ ಬಳಿ ಭಿಕ್ಷೆ ಬೇಡುತ್ತಿದ್ದ. ಈತನಿಗೆ ತಿರುಪತಿ ವಲಸಿಗ ಕ್ಯಾಟಗರಿ ಅಡಿಯಲ್ಲಿ ಶೇಷಾಚಲ ನಗರದಲ್ಲಿ ಮನೆಯನ್ನು ಮಂಜೂರು ಮಾಡಲಾಗಿತ್ತು.

ಆದಾಗ್ಯೂ ಶ್ರೀನಿವಾಸನ್​ ಅನಾರೋಗ್ಯದಿಂದಾಗಿ ಕಳೆದ ವರ್ಷ ಮೃತಪಟ್ಟಿದ್ದಾರೆ. ಆತನ ಯಾವುದೇ ಕುಟುಂಬ ಸದಸ್ಯರು ಇಲ್ಲದಿರುವುದಿಂದ ಟಿಟಿಡಿ ಅಧಿಕಾರಿಗಳು ನಿನ್ನೆ ಭಿಕ್ಷುಕನ ಮನೆಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದಾಗ ಎರಡು ಟ್ರಕ್​ ಬಾಕ್ಸ್​ ಪತ್ತೆಯಾಗಿದೆ. ಅವುಗಳನ್ನು ತೆರೆದು ನೋಡಿದಾಗ ಕಂತೆ ಕಂತೆ ನೋಟುಗಳು ಸಹ ಪತ್ತೆಯಾಗಿವೆ.

ಕಂತೆ ನೋಟುಗಳನ್ನು ಎಣಿಸಿದಾಗ ಅದರಲ್ಲಿ ಬರೋಬ್ಬರಿ 6 ಲಕ್ಷ ರೂಪಾಯಿ ಹಣವಿತ್ತು. ಹಣವನ್ನು ಟಿಟಿಡಿ 5 ಸಿಬ್ಬಂದಿ ಎಣಿಸಿದರು. ಅಂದಹಾಗೆ ಭಿಕ್ಷುಕ ಶ್ರೀನಿವಾಸನ್​, ಅನೇಕ ವರ್ಷಗಳವರೆಗೆ ತಿರುಮಲ ಬೆಟ್ಟದಲ್ಲಿ ವಾಸವಿದ್ದ. ಆದರೆ, ಟಿಟಿಡಿಯ ಯೋಜನೆಯಂತೆ ಭಿಕ್ಷುಕನನ್ನು ಬಲವಂತವಾಗಿ ಹೊರದೂಡಲಾಗಿತ್ತು. ಅಲ್ಲದೆ, ಆತನನ್ನು ತಿರುಪತಿ ವಲಸಿಗ ಎಂದು ಶೇಷಾಚಲ ಕಾಲನಿಯಲ್ಲಿ ಮನೆಯೊಂದನ್ನು ಕೊಡಲಾಗಿತ್ತು. ಅಲ್ಲಿಯೇ ಉಳಿದಿದ್ದ ಶ್ರೀನಿವಾಸ್​ ಅನಾರೋಗ್ಯಕ್ಕೀಡಾಗಿ ಕಳೆದ ವರ್ಷವೇ ಮೃತಪಟ್ಟಿದ್ದಾನೆ.

ಯಾತ್ರಿಯಾಗಿ ತಿರುಮಲ ಬೆಟ್ಟಕ್ಕೆ ಬಂದಿದ್ದ ಶ್ರೀನಿವಾಸನ್​ ಭಿಕ್ಷುಕನಾಗಿ ಇಲ್ಲಿಯೇ ಉಳಿದುಕೊಂಡಿದ್ದ. ಆತನ ಮನೆಯಲ್ಲಿ ಕೆಲ 500 ಮತ್ತು 1000 ಮುಖಬೆಲೆಯ ರದ್ದಾದ ನೋಟುಗಳು ಸಹ ಇವೆ. ಅಲ್ಲದೆ, 2000 ರೂಪಾಯಿ ನೋಟುಗಳು ಸಹ ಸಾಕಷ್ಟಿವೆ.

ಮುಂದಿನ ಸುದ್ದಿ: ಕಾಣಿಕೆ ಅಥವ ದೇಣಿಗೆಗಾಗಿ 21, 51, 101 ಹೀಗೆ ಹಣಣ ಮೇಲೆ 1 ರೂ. ಸೇರಿಸಿ ಯಾಕೆ ಕೊಡುತ್ತಾರೆ ಗೊತ್ತಾ? ಏನಿದರ ಹಿಂದಿನ ಅರ್ಥ?

ನಿಮ್ಮ ಮನೆಗೆ ಯಾವುದೋ ದೇವರ ಕಾರ್ಯಕ್ಕೊ ಅಥವಾ ಇನ್ನೋನೋ ಒಳ್ಳೆಯ ಕೆಲಸಕ್ಕಾಗಿ ದೇಣಿಗೆ ಕೇಳಲು ಬರುತ್ತಾರೆ. ಆಗ ನೀವೆಷ್ಟು ಹಣ ಕೊಡುತ್ತೀರಿ? 11, 21, 51, 101 ಅಥವಾ 501 ರೂಪಾಯಿ. ಒಟ್ಟಿನಲ್ಲಿ ಸಮ ಸಂಖ್ಯೆಯ ರೂಪದಲ್ಲಿ ಹಣವನ್ನು ಕೊಡುವುದಿಲ್ಲ.  ಏಕೆ ಹೀಗೆ?

ದೇಣಿಗೆ ಕೊಡುವ ವಿಷಯದಲ್ಲಿ ಮಾತ್ರವಲ್ಲ ವಾಹನ ಖರೀದಿ, ದದೇವರಿಗೆ ಕಾಣಿಕೆ ಹಾಕುವುದರಿಂದ ಹಿಡಿದು  ಸಾಕು ಪ್ರಾಣಿ ಖರೀದಿಯವರೆಗೂ ಹೀಗೆಯೇ. ಕೊನೆಯಲ್ಲಿ 1 ರೂಪಾಯಿ ಬರುವಂತೆಯೇ ಹಣ ಕೊಡುತ್ತಾರೆ.

ತುಂಬಾ ಜನರಿಗೆ ಏಕೆ ಹೀಗೆ ಕೊಡುವುದು ಎಂಬ ಮಾಹಿತಿ ಗೊತ್ತಿಲ್ಲ. ನನ್ನ ಅಜ್ಜ, ಅಪ್ಪ ಹೀಗೆ ಮಾಡ್ತಿದ್ರು ಅದನ್ನೇ ಮುಂದುವರೆಸಿರುವುದಾಗಿ ಹೇಳ್ತಾರೆ.

ಇದರ ಹಿಂದಿರುವುದು ಸಿಂಪಲ್ ಕಾರಣ.. ಆಗಿನ ಕಾಲದಲ್ಲಿ ಹಣವನ್ನು ಕೈಯಿಂದ ಕೈಯಿಗೆ ಕೊಡುತ್ತಿರಲಿಲ್ಲ. ನೆಲದ ಮೇಲೆ ಇಡುತ್ತಿದ್ದರು. ಬರಿ ನೋಟನ್ನು ನೆಲದ ಮೇಲೆ ಇಟ್ಟರೆ ಹಾರಿ ಹೋಗುತ್ತದೆ ಎನ್ನುವ ಕಾರಣಕ್ಕೆ ಅದರ ಮೇಲೆ ಒಂದು ರೂಪಾಯಿ ನಾಣ್ಯ ಇಡುತ್ತಿದ್ದರು.

 

Advertisement
Share this on...
Tags: