”ತುಂಬಾ ನೋವಾಗ್ತಿದೆ, ನಾವು ಭಿಕ್ಷಾಪಾತ್ರೆ ಹಿಡಿದು ತಿರುಗುತ್ತಿದ್ದೇವೆ, ನಮ್ಮ ಮಿತ್ರ ರಾಷ್ಟ್ರಗಳೂ ನಮ್ಮನ್ನ ಭಿಕಾರಿಗಳ ಥರ ನೋಡ್ತಿವೆ”: ಕಣ್ಣೀರಿಟ್ಟ ಪಾಕ್ ಪ್ರಧಾನಿ

in Uncategorized 334 views

ನವದೆಹಲಿ: ಪಾಕಿಸ್ತಾನದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹವು ನೆರೆಯ ರಾಷ್ಟ್ರದಲ್ಲಿ ಅಪಾರ ಹಾನಿಯನ್ನುಂಟು ಮಾಡಿತ್ತು. ಪಾಕಿಸ್ಥಾನದ ಆರ್ಥಿಕ ಸ್ಥಿತಿ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇಲ್ಲಿನ ಪ್ರವಾಹದಿಂದ ಕೃಷಿ ಭೂಮಿ, ವ್ಯಾಪಾರ, ನಗರ ಪ್ರದೇಶಗಳಿಗೆ ಸಂಪರ್ಕವಿರುವ ರಸ್ತೆಗಳು ಹಾಗೂ ಇಡೀ ಆರ್ಥಿಕತೆಗೆ ಅಪಾರ ಹಾನಿಯಾಗಿತ್ತು. ಈ ನಡುವೆ ಪಾಕಿಸ್ತಾನದ ಹೀನಾಯ ಸ್ಥಿತಿಯ ಮೇಲೆ ದೇಶದ ವಜೀರ್-ಎ-ಆಜಂ (ಪ್ರಧಾನಮಂತ್ರಿ) ಶಹಬಾಜ್ ಷರೀಫ್ ತಮ್ಮ ನೋವು ತೋಡಿಕೊಂಡಿದ್ದಾರೆ. ದೇಶದ ಆರ್ಥಿಕತೆ ಎಷ್ಟು ಹದಗೆಟ್ಟಿದೆ ಎಂದರೆ ಈಗ ನಮ್ಮ ಮಿತ್ರ ರಾಷ್ಟ್ರಗಳೂ ಕೂಡ ಪಾಕಿಸ್ತಾನವನ್ನು ಭಿಕ್ಷುಕನಂತೆ ನೋಡಲಾರಂಭಿಸಿದ್ದಾರೆ ಎಂದಿದ್ದಾರೆ.

Advertisement
ಸ್ಥಳೀಯ ಮಾಧ್ಯಮಗಳ ಪ್ರಕಾರ, ಶಹಬಾಜ್ ಷರೀಫ್ ವಕೀಲರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು, “ಇಂದು ನಾವು ಸೌಹಾರ್ದ ದೇಶಕ್ಕೆ (ಮಿತ್ರ ರಾಷ್ಟ್ರಗಳಿಗೆ) ಹೋದಾಗ ಅಥವಾ ಅವರನ್ನು ಕರೆದಾಗ, ನಾವು ಹಣ ಕೇಳಲು ಅವರ ಬಳಿಗೆ ಹೋಗಿದ್ದೇವೆ ಎಂದು ಅವರು ಭಾವಿಸುತ್ತಾರೆ. ಸಣ್ಣ ಆರ್ಥಿಕತೆಯೂ ಪಾಕಿಸ್ತಾನವನ್ನು ಹಿಂದೆ ಬಿಟ್ಟಿದೆ ಮತ್ತು ನಾವು ಕಳೆದ 75 ವರ್ಷಗಳಿಂದ ಭಿಕ್ಷಾ ಪಾತ್ರೆಗಳೊಂದಿಗೆ ತಿರುಗುತ್ತಿದ್ದೇವೆ” ಎಂದು ಷರೀಫ್ ಹೇಳಿದರು.

ಪ್ರವಾಹಕ್ಕೂ ಮುನ್ನವೇ ಪಾಕಿಸ್ತಾನದ ಆರ್ಥಿಕತೆ ಸಂಕಷ್ಟ ಎದುರಿಸುತ್ತಿದೆ. 30 ವರ್ಷಗಳಲ್ಲೇ ಅತ್ಯಂತ ಭೀಕರವಾದ ಪ್ರವಾಹದಿಂದ ಪಾಕ್ ಆರ್ಥಿಕತೆ ಮತ್ತಷ್ಟು ಕುಸಿದಿದೆ,  ಈ ಪ್ರವಾಹ 1,400 ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ ಮತ್ತು ಜೂನ್ ಆರಂಭದಿಂದ 3 ಕೋಟೊಗೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ಮಳೆ ಮತ್ತು ಪ್ರವಾಹದಿಂದಾಗಿ ದೇಶವು 40 ಶತಕೋಟಿ ಡಾಲರ್ ಗೂ ಹೆಚ್ಚು ನಷ್ಟವನ್ನು ಅನುಭವಿಸಿದೆ ಎಂದು ಶಹಬಾಜ್ ಷರೀಫ್ ಹೇಳಿದ್ದಾರೆ. ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರಸ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರವಾಹದಿಂದಾಗಿ ಸುಮಾರು 30 ಬಿಲಿಯನ್ ಡಾಲರ್ ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ ಎಂದು ಅಂದಾಜಿಸಿದ್ದಾರೆ.

ಪ್ರವಾಹವು ಪಾಕಿಸ್ತಾನವನ್ನ ಮತ್ತಷ್ಟು ಬರ್ಬಾದ್ ಮಾಡಿದೆ ಆದರೆ ಅದು ಇನ್ನೂ ಭಯೋತ್ಪಾದನೆಯ ಹಾದಿಯನ್ನು ಬಿಡಲು ಸಿದ್ಧವಾಗಿಲ್ಲ. ವಜೀರ್-ಎ-ಆಜಮ್ ಕಣ್ಣೀರು ಹಾಕುತ್ತಿದ್ದಾರೆ, ಪಾಕಿಸ್ತಾನದ ಜನರು ಮತ್ತು ಮಾಧ್ಯಮಗಳು ಸರ್ಕಾರವನ್ನು ಶಪಿಸುತ್ತಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟಾಗಿದೆ. ಅಲ್ಲಿನ ಸ್ಥಳೀಯ ಮಾಧ್ಯಮಗಳು ಪ್ರತಿದಿನ ಶಹಬಾಜ್ ಷರೀಫ್ ಮತ್ತು ಅವರ ಸರ್ಕಾರವನ್ನು ದೂಷಿಸುತ್ತವೆ, ಆದರೆ ಪಾಕಿಸ್ತಾನವು ತನ್ನ ಧೋರಣೆಯನ್ನು ಬದಲಾಯಿಸಲು ಮಾತ್ರ ಬಯಸುತ್ತಿಲ್ಲ.

ಮಾಧ್ಯಮ ವರದಿಗಳ ಪ್ರಕಾರ, ಪಾಕಿಸ್ತಾನದ ಮೂರನೇ ಒಂದು ಭಾಗವು ನೀರಿನಲ್ಲಿ ಮುಳುಗಿದೆ ಮತ್ತು ಪ್ರತಿ 7 ಜನರಲ್ಲಿ ಒಬ್ಬರು ಪ್ರವಾಹದಿಂದ ಪ್ರಭಾವಿತರಾಗಿದ್ದಾರೆ, ಇದು 12 ಟ್ರಿಲಿಯನ್ ಯುಎಸ್ ಡಾಲರ್ ಮತ್ತು ಸುಮಾರು 78,000 ಚದರ ಕಿಲೋಮೀಟರ್ ನಷ್ಟು ಅಂದರೆ 20 ಮಿಲಿಯನ್ ಎಕರೆಗಳಷ್ಟು ನಷ್ಟವನ್ನು ಉಂಟುಮಾಡಿದೆ ಹಾಗು ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿತ್ತು.

Advertisement
Share this on...