ಕನ್ನಡ ನಟ ಅರ್ಜುನ್ ಸರ್ಜಾ ಕುಟುಂಬ ಆಂಜನೇಯ ಸ್ವಾಮಿಯ ಅಪಾರ ಭಕ್ತರು. ಸರ್ಜಾ ಕುಟುಂಬ ಮತ್ತೊಂದು ಮಹತ್ತರ ಕಾರ್ಯ ಮಾಡಿದೆ. ಅರ್ಜುನ್ ಸರ್ಜಾ ಚೆನ್ನೈನಲ್ಲಿ ಆಂಜನೇಯ ದೇವಸ್ಥಾನ ನೀಡಿದ್ದಾರೆ. ಅವರ ಕನಸಿನ ದೇವಸ್ಥಾನದ ಉದ್ಘಾಟನಾ ಕಾರ್ಯಕ್ಕೆ ಈಗ ದಿನಾಂಕ ಫಿಕ್ಸ್ ಆಗಿದೆ.
ಚೆನ್ನೈನಲ್ಲಿ ದೇವಸ್ಥಾನ ನಿರ್ಮಿಸುವುದು ಅರ್ಜುನ್ ಸರ್ಜಾ ಅವರ ಅನೇಕ ವರ್ಷದ ಕನಸು. ಇದೀಗ ನನಸಾಗುವ ಸಮಯ ಹತ್ತಿರಬಂದಿದೆ. ಬೃಹತ್ ಆಂಜನೇಯ ವಿಗ್ರಹ ಸ್ಥಾಪಿಸಿದ್ದು, ದೇವಸ್ಥಾನದ ಕೆಲಸ ಸಂಪೂರ್ಣವಾಗಿದೆ. ಇದೀಗ ಉದ್ಘಾಟನೆಗೆ ಸಿದ್ಧವಾಗಿದ್ದು ಅದ್ದೂರಿಯಾಗಿ ಕುಂಭಾಭಿಷೇಕ ನಡೆಯಲಿದೆ.
ಈ ಬಗ್ಗೆ ನಟ ಅರ್ಜುನ್ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬಹುದಿನಗಳ ಕನಸು ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯ ಸಂಪೂರ್ಣವಾಗಿದೆ ಎಂದಿದ್ದಾರೆ. ಜುಲೈ 1 ಮತ್ತು 2ರಂದು ಉದ್ಘಾಟನೆ ಕಾರ್ಯ ಇಟ್ಟುಕೊಂಡಿರುವುದಾಗಿ ಸರ್ಜಾ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ…
ಸ್ನೇಹಿತರು, ಕುಟುಂಬದವರನ್ನು ಆಹ್ವಾನಿಸುವ ಆಸೆ ಇತ್ತು
ದೇವಸ್ಥಾನದ ಕುಂಭಾಭಿಷೇಕ ಕಾರ್ಯಕ್ಕೆ ಎಲ್ಲರನ್ನೂ ಆಹ್ವಾನ ಮಾಡಬೇಕು ಎನ್ನುವ ಆಸೆ ಇತ್ತು ಆದರೆ ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಕುಂಭಾಭಿಷೇಕ ಕಾರ್ಯಕ್ರಮವನ್ನು ಲೈವ್ ಮೂಲಕ ಎಲ್ಲರಿಗೂ ತಲುಪಿಸುವ ವ್ಯವಸ್ಥೆ ಮಾಡಿರುವುದಾಗಿ ಅರ್ಜುನ್ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
‘ನನ್ನ ಬಹುದಿನಗಳ ಆಸೆ, ನನ್ನ ಕುಟುಂಬದಿಂದ ನಿರ್ಮಾಣವಾಗುತ್ತಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯ ಪರಿಪೂರ್ಣವಾಗಿದೆ. ಈ ದೇವಸ್ಥಾನದ ಕುಂಭಾಭಿಷೇಕ ಸಮಾರಂಭ ಜುಲೈ 1 ಮತ್ತು 2ರಂದು ಚೆನ್ನೈನಲ್ಲಿ ನಡೆಯುತ್ತಿದೆ. ಎಷ್ಟೋ ಜನ ನನ್ನ ಫ್ರೆಂಡ್ಸ್, ಕುಟುಂಬ, ಭಕ್ತಾದಿಗಳು ಎಲ್ಲರನ್ನು ಕರೆದು ಅದ್ದೂರಿಯಾಗಿ ಸಮಾರಂಭ ಮಾಡಬೇಕು ಎನ್ನುವ ಆಸೆ ಇತ್ತು’ ಎಂದಿದ್ದಾರೆ.
‘ಆದರೆ ಈಗ ಇರುವ ಪರಿಸ್ಥಿತಿ ಎಲ್ಲರಿಗೂ ಗೊತ್ತು. ಕೊರೊನಾ ಕಾರಣದಿಂದ ಯಾರನ್ನೂ ಆಹ್ವಾನ ಮಾಡಲು ಆಗುತ್ತಿಲ್ಲ. ಆದರೂ ಜನರಿಗೆ ಮಿಸ್ ಆಗಬಾರದು ಎನ್ನುವ ಕಾರಣಕ್ಕೆ ಯೂಟ್ಯೂಬ್ ನಲ್ಲಿ ಲೈವ್ ಸ್ಟ್ರೀಮ್ ಮಾಡುತ್ತಿದ್ದೇವೆ.’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಅರ್ಜುನ್ ಸರ್ಜಾ ಅವರ ಈ ಉತ್ತಮ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡಿಗರ ಪ್ರೀತಿ ಸದಾ ನಿಮ್ಮ ಜೊತೆ ಇರುತ್ತೆ ಎಂದು ಹೇಳುತ್ತಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಮಲಯಾಳಂನ ಮರಕ್ಕರ್, ತಮಿಳಿನ ಫ್ರೆಂಡ್ಸ್ ಸೇರಿದಂತೆ ಇನ್ನು ಮೂರ್ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.