“ದೆಹಲಿ ಪೋಲಿಸರಲ್ಲೂ ನಮ್ಮ ಗೂಢಚಾರರಿದಾರೆ, ನಮ್ಮ ಒಂದೇ ಇಶಾರೆಗೆ ನಿನ್ನನ್ನ….”: ಐಸಿಸ್

in Uncategorized 164 views

ಮಾಜಿ ಕ್ರಿಕೆಟಿಗ ಹಾಗೂ ದೆಹಲಿ ಬಿಜೆಪಿ ಸಂಸದ ಗೌತಮ್ ಗಂಭೀರ್‌ಗೆ ಭ ಯೋತ್ಪಾ ದಕ ಸಂಘಟನೆ ಐಸಿಸ್ ಹೆಸರಿನಲ್ಲಿ ಮತ್ತೊಮ್ಮೆ ಬೆದರಿಕೆ ಹಾಕಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಗೌತಮ್ ಗಂಭೀರ್‌ಗೆ ಇದು ಮೂರನೇ ಬೆದರಿಕೆಯಾಗಿದೆ. ಐಸಿಸ್‌ಗೆ ದೆಹಲಿ ಪೊಲೀಸರಲ್ಲೂ ಗೂಢಚಾರರಿದ್ದಾರೆ ಎಂದು ಈ ಬೆದರಿಕೆಯಲ್ಲಿ ಹೇಳಲಾಗಿದೆ. ಇ-ಮೇಲ್ ಮೂಲಕ ಅವರಿಗೆ ಈ ಬೆದರಿಕೆ ಹಾಕಲಾಗಿದೆ. ಇದರಲ್ಲಿ ಐಪಿಎಸ್ ಶ್ವೇತಾ ಚೌಹಾಣ್ ಅವರ ಹೆಸರೂ ಇದೆ. ಶ್ವೇತಾ ಚೌಹಾಣ್ ಪ್ರಸ್ತುತ ದೆಹಲಿ ಪೊಲೀಸ್‌ನಲ್ಲಿ ಕೇಂದ್ರೀಯ ಡಿಸಿಪಿ ಹುದ್ದೆಯಲ್ಲಿದ್ದಾರೆ.

Advertisement

ಮಾಧ್ಯಮ ವರದಿಗಳ ಪ್ರಕಾರ, ಈ ಬೆದರಿಕೆ ಇಮೇಲ್ ಶನಿವಾರ (27 ನವೆಂಬರ್ 2021) ಮಧ್ಯಾಹ್ನ 1.27 ಕ್ಕೆ ಬಂದಿದೆ. ಕಳುಹಿಸುವವರ yahoo ಖಾತೆಯು [emailprotected] ಆಗಿದೆ. ನಿಮ್ಮ ಪ್ರತಿಯೊಂದು ಮಾಹಿತಿಯನ್ನು ಪಡೆಯುತ್ತಿದ್ದೇವೆ ಎಂದು ಬೆದರಿಕೆಯಲ್ಲಿ ತಿಳಿಸಿದ್ದಾರೆ. ದೆಹಲಿ ಪೊಲೀಸರಲ್ಲೂ ನಮ್ಮ ಜನ ಇದ್ದಾರೆ. ಪೊಲೀಸರು ಮತ್ತು ಐಪಿಎಸ್ ಶ್ವೇತಾ ಚೌಹಾಣ್ ನಮಗೆ ಏನೂ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಬಂದಿದ್ದ ಬೆದರಿಕೆಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಪಿ ಶ್ವೇತಾ ಚೌಹಾಣ್, ಪೊಲೀಸರು ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ತಿಳಿಸಿದ್ದಾರೆ.

ಕಳೆದ ವಾರ ಗೌತಮ್ ಗಂಭೀರ್ ತನ್ನನ್ನು ಕೊ ಲ್ಲು ವ ಬೆದರಿಕೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ನಂತರ ಮೇಲ್ ಮಾಡಿರುವವವರು ತಮ್ಮನ್ನ ತಾವು ಐಸಿಸ್ ಕಾಶ್ಮೀರ ದವರು ಎಂದು ಪರಿಚಯಿಸಿಕೊಂಡು ಬೆದರಿಕೆ ಮೇಲ್ ಕಳುಹಿಸುತ್ತಿದೆ ಎಂದು ಹೇಳಿಕೊಂಡಿದ್ದಾನೆ. ನವೆಂಬರ್ 23 ರ ರಾತ್ರಿ ಗಂಭೀರ್‌ಗೆ ಮೊದಲ ಬೆದರಿಕೆ ಬಂದಿತು. ಮೊದಲ ಇ-ಮೇಲ್‌ನಲ್ಲಿ, ‘ಶೀಘ್ರದಲ್ಲೇ ನಿನ್ನ ಕುಟುಂಬ ಸದಸ್ಯರನ್ನು ಕೊ ಲ್ಲ ಲಾಗುತ್ತದೆ, ನೀನು ನಿನ್ನ ಕುಟುಂಬವನ್ನು ಪ್ರೀತಿಸುತ್ತಿದ್ದರೆ ರಾಜಕೀಯದಿಂದ ದೂರವಿದ್ದುಬಿಡು’. ಈ ಎರಡನೇ ಮೇಲ್ ಅನ್ನು ನವೆಂಬರ್ 24 ರಂದು ಕಳುಹಿಸಲಾಗಿದೆ.

ಎರಡನೇ ಇ-ಮೇಲ್‌ನಲ್ಲಿ ಗೌತಮ್ ಗಂಭೀರ್ ಅವರ ಮನೆಯ ಹೊರಗಿನಿಂದ ಮಾಡಿದ ವೀಡಿಯೊವನ್ನು ಸಹ ಲಗತ್ತಿಸಲಾಗಿದೆ. ತನಿಖೆಯ ವೇಳೆ ದೆಹಲಿ ಪೊಲೀಸರು ಗೂಗಲ್ ನಿಂದ ಬೆದರಿಕೆ ಕಳುಹಿಸಿದವರ ಬಗ್ಗೆ ಮಾಹಿತಿ ಕೇಳಿದ್ದರು. ಇ-ಮೇಲ್ ಕಳುಹಿಸಿದವರ ವಿಳಾಸ ಪಾಕಿಸ್ತಾನದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಬೆದರಿಕೆಗಳ ನಂತರ ಗೌತಮ್ ಗಂಭೀರ್ ಕುಟುಂಬದ ಭದ್ರತೆಯನ್ನು ಹೆಚ್ಚಿಸಲಾಗಿದೆ.

Advertisement
Share this on...