ಹರಿಯಾಣದ ಫರಿದಾಬಾದ್ನಲ್ಲಿ ಮತಾಂತರ ಪ್ರಕರಣ ಮುನ್ನೆಲೆಗೆ ಬಂದಿದೆ. ಇರ್ಫಾನ್ ಹಿಂದೂ ಯುವತಿಯನ್ನ ಇಸ್ಲಾಂಗೆ ಮತಾಂತರಗೊಳಿಸಿ ನಂತರ ವಿವಾಹವಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಸಂತ್ರಸ್ತೆ ಬ್ಯಾಂಕ್ ಸಿಬ್ಬಂದಿ ಎಂದು ಹೇಳಲಾಗುತ್ತಿದೆ. ಪ್ರಮುಖ ಆರೋಪಿಯ ಹೆಸರು ಜಾವೇದ್. ಯುವತಿಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಮಗಳು ಸೇರಿದಂತೆ ಒಟ್ಟು 9 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜಾವೇದ್ನ ಕುಟುಂಬ ಸದಸ್ಯರಲ್ಲದೆ, ನಿಕಾಹ್ (ಮದುವೆ) ಮಾಡಿಸಿದ ಖಾಜಿ ಕೂಡ ಆರೋಪಿಗಳಲ್ಲಿ ಸೇರಿದ್ದಾರೆ. ಘಟನೆ ಸೋಮವಾರದಂದು (ನವೆಂಬರ್ 28, 2022) ನಡೆದಿದೆ.
ಈ ಸಂಬಂಧ ಯುವತಿಯ ತಂದೆ ಶುಕ್ರವಾರ (ಡಿಸೆಂಬರ್ 2, 2022) ಫರಿದಾಬಾದ್ನ ಎಸ್ಜಿಎಂ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿಯ ತಂದೆಯ ಪ್ರಕಾರ, ಅವರು ಹಿಂದೂ ಧರ್ಮವನ್ನು ಅನುಸರಿಸುತ್ತಾರೆ. ಅವರಿಗೆ 3 ಮಕ್ಕಳಿದ್ದು, ಹಿರಿಯ ಮಗಳಿಗೆ 22 ವರ್ಷ. ಜಾವೇದ್ ತನ್ನ ಹಿರಿಯ ಮಗಳನ್ನು ಮೋಸ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತಮ್ಮ ಹಿರಿಯ ಮಗಳು ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತೆಯ ತಂದೆಯ ಪ್ರಕಾರ, ಒಂದು ವರ್ಷದ ಹಿಂದೆ ಆರೋಪಿಯು ತನ್ನ ತಾಯಿ, ತಂದೆ ಮತ್ತು ಅವನ ಸಹೋದರನೊಂದಿಗೆ ತನ್ನ ಮನೆಗೆ ಬಂದಿದ್ದನು. ಈ ವೇಳೆ ಜಾವೇದ್ ಕುಟುಂಬದವರು ತಮ್ಮ ಮಗಳನ್ನು ಜಾವೇದ್ ನೊಂದಿಗೆ ಮದುವೆ ಮಾಡಿಕೊಡುವಂತೆ ಕೇಳಿದ್ದರು.
ತಾವು ಈ ಮದುವೆಯನ್ನು ನಿರಾಕರಿಸಿ ತಾವು ಹಿಂದೂ ಎಂದು ಹೇಳಿದ್ದರಿಂದ ಆರೋಪಿಯ ಕುಟುಂಬ ಸದಸ್ಯರು ಕೋಪಗೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಏತನ್ಮಧ್ಯೆ, ಜಾವೇದ್ನ ಸಹೋದರ ಫಿರೋಜ್, ಅಬ್ಬಾ (ತಂದೆ) ಲಿಯಾಕತ್ ಮತ್ತು ಅವರ ತಾಯಿ ಗುಫ್ರಾನ್ ಈಗ ಯುವತಿಯ ಒಪ್ಪಿಗೆಯ ನಂತರ ನಿನ್ನ ಅನುಮತಿಯ ತಮಗೆ ಅಗತ್ಯವಿಲ್ಲ ಎಂದು ಹೇಳಿ ಹೊರಟು ಹೋಗಿದ್ದರು. ಇದರ ನಂತರ, ತಂದೆ ತಮ್ಮ ಮಗಳಿಗೆ ಬಹಳಷ್ಟು ವಿವರಿಸಿದರು, ಆದರೆ ಆಕಡ ಮೌನವಾಗಿದ್ದಳು. ನವೆಂಬರ್ 28, 2022 ರಂದು ತನ್ನ ಮಗಳ ಬ್ಯಾಂಕ್ನಿಂದ ಕರೆ ಬಂದಿದ್ದು, ಆಕೆ ಕಚೇರಿಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದಾದ ನಂತರ ತನ್ನ ಮಗಳನ್ನು ಹುಡುಕಲು ಆರಂಭಿಸಿದಾಗ ಆಕೆ ಜಾವೇದ್ ನನ್ನು ಮದುವೆಯಾಗಿರುವುದು ಗೊತ್ತಾಗಿದೆ ಎಂದು ಯುವತಿಯ ತಂದೆ ತಿಳಿಸಿದ್ದಾರೆ. ಮದುವೆಯ ನಂತರ, ಅವಳು ಫರಿದಾಬಾದ್ ನ್ಯಾಯಾಲಯದಲ್ಲಿ ತನ್ನ ಸ್ವಂತ ತಂದೆಯ ವಿರುದ್ಧವೇ ರಕ್ಷಣೆ ಅರ್ಜಿಯನ್ನು ಸಲ್ಲಿಸಿದಳು. ಈ ಬಗ್ಗೆ ಸೂಚನೆ ಸಿಕ್ಕ ನಂತರ ತಂದೆಗೆ ಮಗಳು ಧರ್ಮವನ್ನ ಬದಲಾಯಿಸಿರುವುದು ತಿಳಿದು ಬಂದಿದೆ. ತಂದೆಯ ಪ್ರಕಾರ, ಹರಿಯಾಣ ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿ ಈ ಮತಾಂತರ ನಡೆದಿದೆ. ಇದರ ಆಧಾರದ ಮೇಲೆ ಸಂತ್ರಸ್ತೆಯ ತಂದೆ ಮದುವೆ ಅಕ್ರಮ ಎಂದು ಹೇಳಿ ಕೇಸ್ ದಾಖಲಿಸಿದ್ದಾರೆ.
ಸಂತ್ರಸ್ತೆಯ ತಂದೆ ಜಾವೇದ್ನ ಕೃತ್ಯ ಕಾನೂನಾತ್ಮಕವಾಗಿ ತಪ್ಪು ಎಂದು ಹೇಳಿದ್ದಾರೆ. ಈ ದೂರಿನಲ್ಲಿ ಅವರು ನಿಕಾಹ್ನ ಸಾಕ್ಷಿ, ನಿಕಾಹ್ ಮಾಡಿಸಿದ ಎರಡನೇ ಸಾಕ್ಷಿ ಇರ್ಷಾದ್, ನಿಕಾಹ್ ನಡೆಸಿದ ಖಾಜಿ ಅಬ್ದುಲ್ ಸಜಾನ್, ನಿಕಾಹ್ ನೋಟರಿ ಮಾಡಿಸಿದ ಈಶ್ವರ ಪ್ರಸಾದ್, ಜಾವೇದ್ನ ಅಪ್ಪ ಲಿಯಾಖತ್, ಜಾವೇದ್ನ ಸಹೋದರ ಫಿರೋಜ್ ಮತ್ತು ಜಾವೇದ್ನ ತಾಯಿಯನ್ನು ಹೆಸರಿಸಿದ್ದಾರೆ. ಯುವತಿಯ ತಂದೆ ಜಾವೇದ್ ಮತ್ತು ತಮ್ಮ ಮಗಳ ಅಪರಾಧಕ್ಕೆ ಅವರೆಲ್ಲರನ್ನೂ ಸಮಾನವಾಗಿ ತಪ್ಪಿತಸ್ಥರು ಎಂದು ಕರೆದಿದ್ದಾರೆ.
ಪ್ರಸ್ತುತ ಹಿಂದೂ ಯುವತಿಯರು ಮುಸ್ಲಿಂ ಯವಕರಿಂದ ಲವ್ ಜಿಹಾದ್ಗೆ ಸಿಲುಕುತ್ತಿದ್ದಾರೆ ಎಂದು ಯುವತಿಯ ತಂದೆ ದೂರಿನಲ್ಲಿ ಬರೆದಿದ್ದಾರೆ. ಎಲ್ಲಾ 9 ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಯುವತಿಯ ತಂದೆ ಒತ್ತಾಯಿಸಿದ್ದಾರೆ. ಧರ್ಮ ಪರಿವರ್ತನೆ ತಡೆ ಕಾಯ್ದೆ 2022 ರ ವಿರುದ್ಧ ಹರಿಯಾಣ ಕಾನೂನು ಸೆಕ್ಷನ್ 12 (1), 12 (5) ರ ಅಡಿಯಲ್ಲಿ ತಂದೆಯ ತಹ್ರೀರ್ನಲ್ಲಿ ಎಲ್ಲಾ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ ಪ್ರತಿ ಕೂಡ ಲಭ್ಯವಿದೆ. ಸೂರ್ಯ ಸಮಾಚಾರದ ವರದಿಯ ಪ್ರಕಾರ, ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.