ನನಗೂ ತಿಮ್ಮಪ್ಪನ ದರ್ಶನ-ಸೇವೆಗೆ ಅವಕಾಶ ಕೊಡಿ ಎಂದು ಅರ್ಜಿ ಸಲ್ಲಿಸಿದ ಮುಸಲ್ಮಾನ ವ್ಯಕ್ತಿ

in Uncategorized 4,177 views

ತಿರುಮಲ ತಿರುಪತಿ: ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಅಯೋಧ್ಯೆಗೆ ತೆರಳಿದ್ದ ಮುಸ್ಲಿಂ ಧರ್ಮಗುರುಗಳ ವಿರುದ್ಧ ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ನಾಯ್ಡುಪೇಟೆ ನಿವಾಸಿ ಹುಸೇನ್ ಭಾಷಾ ಎಂಬ ಮುಸ್ಲಿಂ ವ್ಯಕ್ತಿ (Muslim Devotee) ತಿರುಪತಿ ತಿಮ್ಮಪ್ಪನ ದರ್ಶನ ಮತ್ತು ಸೇವೆಗೆ (Srivari Seva) ಅವಕಾಶ ಮಾಡಿಕೊಡಬೇಕೆಂದು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಯನ್ನು (ಟಿಟಿಡಿ) ಕೋರಿದ್ದಾರೆ. ಇದಕ್ಕೆ ಎಂದಿನಂತೆ ಕೆಲವು ತೀವ್ರವಾದಿ ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ, ಟೀಕೆ ಮಾಡುತ್ತಿದ್ದಾರೆ. ಇದೇ ವೇಳೆ, ವೆಂಕಟೇಶ್ವರನ ಸೇವೆಗೆ (Venkateshwara Darshan) ಮುಂದೆಬಂದ ಮುಸ್ಲಿಂ ಭಕ್ತರ ಸಮರ್ಪಣಾ ಭಾವದ ಬಗ್ಗೆ ಟಿಟಿಡಿ (Tirumala Tirupati Devasthanams -TTD) ಅಧಿಕಾರಿ ಧರ್ಮಾ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಮುಖ್ಯವಾಗಿ ತಿರುಮಲದಲ್ಲಿ ಶ್ರೀವಾರಿ ಸೇವೆ 2000 ರಲ್ಲಿ ಪ್ರಾರಂಭವಾಯಿತು. ಪ್ರಪಂಚದ ವಿವಿಧ ಭಾಗಗಳಿಂದ ಬರುವ ಸಂದರ್ಶಕರಿಗೆ ಸೇವೆಗಳನ್ನು ಒದಗಿಸಲು ಅನೇಕ ಜನರು ಅರ್ಜಿ ಸಲ್ಲಿಸುತ್ತಲೇ ಇರುತ್ತಾರೆ. ಹೀಗಿರುವಾಗ ಈ ಸೇವೆಯಲ್ಲಿ ಪಾಲ್ಗೊಳ್ಳಲು ತನಗೂ ಅವಕಾಶ ನೀಡುವಂತೆ ನಾಯ್ಡುಪೇಟೆಯ ಮುಸ್ಲಿಂ ಭಕ್ತ ಹುಸೇನ್ ಭಾಷಾ ಅವರು ಡಯಲ್ ಯುವರ್ ವೇ ಕಾರ್ಯಕ್ರಮದಲ್ಲಿ ಟಿಟಿಡಿಗೆ ಮನವಿ ಸಲ್ಲಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಧರ್ಮರೆಡ್ಡಿ, ಮುಸ್ಲಿಂ ಭಕ್ತರ ಮನವಿಯ ಕಾರ್ಯಸಾಧ್ಯತೆಯ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ. ಸಾಮಾನ್ಯವಾಗಿ ತಿರುಮಲದಲ್ಲಿ ತಿಮ್ಮಪ್ಪನ ಸೇವೆಯಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಲು ವಿಜಿಲೆನ್ಸ್​​, ಆರೋಗ್ಯ, ಆಹಾರ, ತೋಟಗಾರಿಕೆ, ವೈದ್ಯಕೀಯ, ಲಡ್ಡು ಪ್ರಸಾದ, ದೇವಸ್ಥಾನ, ಸಾರಿಗೆ, ಕಲ್ಯಾಣ ಶಿಬಿರ, ಪುಸ್ತಕ ಮಳಿಗೆಗಳು ಮುಂತಾದ ಟಿಟಿಡಿಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಬಹುದಾಗಿದೆ.

ತಿರುಮಲ ಶ್ರೀವಾರಿ ದೇಗುಲದಲ್ಲಿ ಸೇವೆ ಸಲ್ಲಿಸಲು ನಮಗೆ ಅವಕಾಶ ಮಾಡಿಕೊಡಿ ಎಂಬ ಮುಸ್ಲಿಮರ ಮನವಿಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ, ಶ್ರೀಗಳ ಸೇವೆಗೆ ಮುಸ್ಲಿಮರು ಮುಂದೆ ಬರುತ್ತಿರುವುದಕ್ಕೆ ಭಜರಂಗದಳ ಮುಖಂಡರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Advertisement
Share this on...