“ನನಗೆ ಸೂರಜ್ ಬಿಟ್ಟು ಬದುಕೋಕೆ ಸಾಧ್ಯವಿಲ್ಲ”: ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಮತಾಂತರವಾಗಿ ಸೂರಜ್‌ನನ್ನ ಮದುವೆಯಾದ #ಮೊಮಿನ್_ಖಾತೂನ್

in Uncategorized 27,163 views

ಗುರುವಾರ ಉತ್ತರ ಪ್ರದೇಶದ ಅಜಂಗಢ ವಿಶಿಷ್ಟ ಪ್ರೇಮಕಥೆಗೆ ಸಾಕ್ಷಿಯಾಗಿದ್ದು, ಮುಸ್ಲಿಂ ಯುವತಿಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರಗೊಂಡು ತನ್ನ ಪ್ರೇಮಿಯನ್ನು ಮದುವೆಯಾಗಿದ್ದಾಳೆ. ಹುಡುಗಿಯ ಹೆಸರು ಮೊಮಿನ್ ಖಾತೂನ್, ಹಿಂದೂ ಹುಡುಗನ ಹೆಸರು ಸೂರಜ್. ಇಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.

Advertisement

ಮಕ್ಕಳ ಹಠದೆದುರು ಪೋಷಕರು ಸದಾ ತಲೆಬಾಗುತ್ತಾರೆ.‌ ಅಷ್ಟೇ ಅಲ್ಲದೆ ಒಂದು ವೇಳೆ ಪ್ರೀತಿಯು ನಿಜವಾಗಿದ್ದರೆ ಅಂತಹ ಪ್ರೇಮಿಗಳು ಒಂದಾಗೇ ಆಗುತ್ತಾರೆ ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳು ನಮಗೆ ಕಾಣಸಿಗುತ್ತವೆ.‌ ಇಂತಹುದೇ ಒಂದು ಪ್ರೇಮಗಾಥೆ ಉತ್ತರಪ್ರದೇಶದ ಆಜಂಗಢ್ ನಲ್ಲಿ. ಈ ಮದುವೆಯ ಸುದ್ದಿ ಈಗ ಉತ್ತರಪ್ರದೇಶ ರಾಜ್ಯದಿಂದ ಹಿಡಿದು ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ಮದುವೆ ಚರ್ಚೆಯಾಗಲು ಕಾರಣ ವಧು ಹಾಗು ವರರ ಭಿನ್ನ ಧರ್ಮಗಳಾಗಿವೆ.

ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಧರ್ಮದ ಸಂಕೋಲೆಯನ್ನ ಮುರಿದು ತಮ್ಮ ಪ್ರೀತಿಯನ್ನು ಪರಿಪೂರ್ಣ ಅಂತ್ಯಕ್ಕೆ ಕೊಂಡೊಯ್ದು ಹಿಂದೂ ಪದ್ಧತಿಯಂತೆ ವಿವಾಹವಾದರು. ಹುಡುಗಿಯ ಹೆಸರು ಮೊಮಿನ್ ಖಾತೂನ್ ಮುಸ್ಲಿಂ ಸಮುದಾಯದವಳಾಗಿದ್ದರೆ, ಹುಡುಗ ಸೂರಜ್ ಹಿಂದೂ ಧರ್ಮವನಾಗಿದ್ದಾನೆ.

ಉತ್ತರ ಪ್ರದೇಶದ ಅಜಂಗಢದಲ್ಲಿ ವಾಸಿಸುತ್ತಿರುವ ಸೂರಜ್ ಮತ್ತು ಮೊಮಿನ್ ಖಾತೂನ್ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಅಜಂಗಢದ ಅಟ್ರೌಲಿಯಾ ಪ್ರದೇಶದ ಖಾನ್‌ಪುರ್ ಫತೇಹ್ ಗ್ರಾಮದಲ್ಲಿ ವಾಸಿಸುವ ಸೂರಜ್, ಹೈದರ್‌ಪುರ ಖಾಸ್ ಗ್ರಾಮದ ಮೊಮಿನ್ ಖಾತೂನ್ ಎಂಬ ಮುಸ್ಲಿಂ ಹುಡುಗಿಯನ್ನು ಪ್ರೀತಿಸುತ್ತಿದ್ದನು. ಇಬ್ಬರ ಪ್ರೀತಿ ಎಷ್ಟರಮಟ್ಟಿಗೆ ಬೆಳೆಯಿತೆಂದರೆ ಇಬ್ಬರೂ ಒಟ್ಟಿಗೇ ಬದುಕುತ್ತೇವೆ, ಸಾಯುತ್ತೇವೆ ಎಂದು ಪ್ರತಿಜ್ಞೆ ಮಾಡಿದರು. ಎರಡು ವರ್ಷಗಳಲ್ಲಿ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು

ಇಬ್ಬರ ಪ್ರೀತಿಗೆ ದೊಡ್ಡ ಅಡ್ಡಿಯಾಗಿದ್ದು ಇಬ್ಬರ ಧರ್ಮಗಳು. ಸೂರಜ್ ಮತ್ತು ಮೋಮಿನ್ ಖಾತೂನ್ ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದು, ಆರಂಭದಲ್ಲಿ ಕುಟುಂಬದವರೂ ಅಡ್ಡಿಯಾದರು, ಆದರೆ ಇಬ್ಬರ ದೃಢ ಸಂಕಲ್ಪಕ್ಕೆ ಯಾರೂ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ ಮತ್ತು ಈ ಜೋಡಿ ಮದಯವೆಯಾಗುವುದನ್ನ ಕುಟುಂಬದ ಸದಸ್ಯರೂ ತಡೆಯಲು ಸಾಧ್ಯವಾಗಲಿಲ್ಲ.

ಈ ಸಂಬಂಧದ ಕುರಿತು ಸಾಕಷ್ಟು ಜಗಳದ ಬಳಿಕ, ಸೂರಜ್ ಮತ್ತು ಮೊಮಿನ್ ಅಂತಿಮವಾಗಿ ಅಟ್ರೌಲಿಯಾದಲ್ಲಿರುವ ಸಮ್ಮೋ ಮಾತಾ ದೇವಾಲಯದ ಆವರಣದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು. ಈ ಮದುವೆಗೂ ಮುನ್ನ ಮುಸ್ಲಿಂ ಯುವತಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ತನ್ನ ಪ್ರಿಯಕರನ ಕೊರಳಿಗೆ ಹಾರ ಹಾಕಿ ಒಟ್ಟಿಗೆ ಬದುಕುವುದಾಗಿ ಶಪಥ ಮಾಡಿದಳು. ಈ ಜೋಡಿಗೆ ಕುಟುಂಬ ಸದಸ್ಯರು ಮತ್ತು ಗಣ್ಯರು ಸುಖಕರ ಜೀವನಕ್ಕಾಗಿ ಆಶೀರ್ವದಿಸಿದರು.

ಈ ಮದುವೆಗೆ ಹುಡುಗನ ಮನೆಯವರಿಂದ ಯಾವುದೇ ಅಭ್ಯಂತರ ಇರಲಿಲ್ಲ ಎನ್ನಲಾಗಿದ್ದು, ಹುಡುಗಿಯ ಮನೆಯವರು ಧರ್ಮದ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಯುವತಿ ತಾನೂ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಪ್ರಿಯಕರ ಸೂರಜ್ ನನ್ನು ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಳು.

ಇಡೀ ಪ್ರದೇಶದಲ್ಲಿ ಈಗ ಈ ಮದುವೆಯದ್ದೇ ಚರ್ಚೆಯಾಗುತ್ತಿದೆ. ಈ ಮದುವೆಯ ವಿಶೇಷವೆಂದರೆ ಸೂರಜ್ ಮತ್ತು ಮೊಮಿನ್ ಖಾತೂನ್ ಹೊಸ ಜೀವನಕ್ಕೆ ಶುಭ ಹಾರೈಸಲು ಎರಡೂ ಕುಟುಂಬ ಸದಸ್ಯರು ಹಾಜರಾಗಿದ್ದರು. ಎರಡೂ ಕುಟುಂಬದವರು ನವದಂಪತಿಗಳನ್ನು ಆಶೀರ್ವದಿಸಿದರು. ಇವರಿಬ್ಬರು ಹೇಗೆ ಹೊಸ ಜೀವನ ಆರಂಭಿಸಲಿದ್ದಾರೆ ಎಂಬುದನ್ನು ಚಿತ್ರಗಳಲ್ಲಿ ಕಾಣಬಹುದು.

ಆದರೆ, ಈ ಜೋಡಿಯ ಮದುವೆ ಇದೀಗ ಕೆಲ ಮುಸ್ಲಿಂ ಮೂಲಭೂತವಾದಿಗಳನ್ನ ಕೆರಳಿಸಿದೆ. ಈ ಮದುವೆಯ ನಂತರ, ಮುಸ್ಲಿಂ ಹುಡುಗಿ ಮೋಮಿನ್ ಮತ್ತು ಹಿಂದೂ ಯುವಕ ಸೂರಜ್‌ಗೆ ಮುಸ್ಲಿಂ ಸಂಘಟನೆಯೊಂದರಿಂದ ಬೆದರಿಕೆ ಬಂದಿದೆ. ಆದರೆ ಈ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌರವ್ ಸಿಂಗ್ ಈ ಜೋಡಿಯ ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ದಂಪತಿಗೆ ಅಪಾಯವಾಗಿರುವ ವಿಚಾರ ಬಯಲಿಗೆ ಬಂದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ನವ ದಂಪತಿಗಳಿಗೆ ಭದ್ರತೆ ಒದಗಿಸುವ ಕುರಿತು ಮಾತುಕತೆ ನಡೆಸಿದ್ದಾರೆ. ಈ ಮದುವೆಯಲ್ಲಿ ಮೊಮಿನ್ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡಿದ್ದರೆ, ಸೂರಜ್ ಕೂಡ ಇದೇ ರೀತಿಯ ಶರ್ಟ್ ಧರಿಸಿದ್ದಾರೆ.

Advertisement
Share this on...