Kareena Kapoor Khan On Indian Railways
ಕರೀನಾ ಖಾನ್ಳ ಆ ಪಾತ್ರವನ್ನ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಆದರೆ ನಟಿ ತನ್ನ ‘ಗೀತ್’ ಪಾತ್ರದ ಬಗ್ಗೆ ಎಂತಹ ಮಾತುಳನ್ನಾಡಿದಾಳಂದ್ರೆ ಆಕೆಯ ಆ ಹೇಳಿಕೆಯಿಂದ ಇದೀಗ ತಾನೇ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಆಗುತ್ತಿದ್ದಾಳೆ.
ಭಾರತೀಯ ರೇಲ್ವೆ ಬಗ್ಗೆ ಕರೀನಾ ಖಾನ್ ಹೇಳಿದ್ದೇನು?
ಕರೀನಾ ಕಪೂರ್ ಖಾನ್ನ ‘ಜಬ್ ವಿ ಮೆಟ್’ ಚಿತ್ರದ ‘ಗೀತ್’ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಳು. ಆಕೆಯ ಪಾತ್ರವು ಭಾರೀ ಮೆಚ್ಚುಗೆ ಪಡೆದಿತ್ತು. ಚಿತ್ರದಲ್ಲಿ, ಕರೀನಾ ನಾಯಕ ನಟ ಶಾಹಿದ್ ಕಪೂರ್ ಅವರನ್ನು ರೈಲಿನಲ್ಲಿ ಭೇಟಿಯಾಗುತ್ತಾಳೆ. ಜಬ್ ವಿ ಮೆಟ್ ಚಿತ್ರದಲ್ಲಿ ತಾನು ನಟಿಸಿದ ‘ಗೀತ್’ ಪಾತ್ರದಿಂದಾಗಿ ಭಾರತೀಯ ರೈಲ್ವೆಯ ಆದಾಯ ಹೆಚ್ಚಾಗಿದೆ ಎಂದು ನಟಿ ಈಗ ಹೇಳಿದ್ದಾಳೆ.
‘ಅಬ್ ಕೇಸ್ ತೋ ಬನತಾ ಹೈ’ನ ಇತ್ತೀಚಿನ ಎಪಿಸೋಡ್ ನಲ್ಲಿ, ಕರೀನಾ ಕಪೂರ್ ಖಾನ್ ತನ್ನ ‘ಗೀತ್’ ಪಾತ್ರವನ್ನ ನೆನಪಿಸಿಕೊಳ್ಳುತ್ತ, ತನ್ನ ಆ ಪಾತ್ರದಿಂದಲೇ ಭಾರತೀಯ ರೈಲ್ವೆಯ ಆದಾಯವನ್ನು ಹೆಚ್ಚಿಸಿಕೊಳ್ಳುವಂತೆ ಸಹಾಯ ಮಾಡಿದೆ ಎಂದು ಹೇಳಿದ್ದಾಳೆ. ಕರೀನಾ ಮಾತನಾಡುತ್ತ- ನನ್ನ ಗೀತ್ ರೋಲ್ ಪ್ಲೇ ಆದ ನಂತರ ಹರೇಮ್ (Harem) ಪ್ಯಾಂಟ್ಗಳ ಸೇಲ್ (ಮಾರಾಟ) ಮತ್ತು ಭಾರತೀಯ ರೈಲ್ವೆಯ ಆದಾಯ ಎರಡೂ ಹೆಚ್ಚಾಗಿದೆ ಎಂದಿದ್ದಾಳೆ.
ಕರೀನಾ ಖಾನ್ಳ ಈ ಹೇಳಿಕೆ ಸದ್ಯ ಚರ್ಚೆಯಲ್ಲಿದೆ. ಭಾರತೀಯ ರೈಲ್ವೇ ಬಗ್ಗೆ ಗೇಲಿ ಮಾಡಿದ್ದಕ್ಕಾಗಿ ಕರೀನಾ ಖಾನ್ನ್ನ ಜನ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಕರೀನಾಳನ್ನ ಟ್ರೋಲ್ ಮಾಡುವ ಮೂಲಕ ಯೂಸರ್ ಒಬ್ಬರು – “ಜಬ್ ವಿ ಮೆಟ್ನಲ್ಲಿ ಗೀತ್ ಪಾತ್ರವನ್ನು ನಿರ್ವಹಿಸುವ ಮೂಲಕ ಅವರು ಭಾರತೀಯ ರೈಲ್ವೆಯ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಿದರು ಎಂದು ಕರೀನಾ ಕಪೂರ್ ಹೇಳುತ್ತಾರೆ. ಈ ಬಾಲಿವುಡ್ ಸೆಲೆಬ್ಗಳು ರಿಯಾಲಿಟಿಯಿಂದ ತುಂಬಾ ದೂರದಲ್ಲಿದ್ದಾರೆ ಮತ್ತು ಜನರು ತಮ್ಮ ಜೊತೆ ಏಕೆ ಕನೆಕ್ಟ್ ಆಗ್ತಿಲ್ಲ ಅಂತಲೂ ಅವರು ಆಶ್ಚರ್ಯ ಪಡುತ್ತಾರೆ” ಎಂದು ಕಮೆಂಟ್ ಮಾಡಿದ್ದಾರೆ.
ಇಮ್ತಿಯಾಜ್ ಅಲಿ ನಿರ್ದೇಶನದ ಜಬ್ ವಿ ಮೆಟ್ ಚಿತ್ರದಲ್ಲಿ ಕರೀನಾ ಅವರನ್ನು ಗೀತ್ ಆಗಿ ತೋರಿಸಲಾಗಿತ್ತು. ಅವಳು ತುಂಬಾ ತಮಾಷೆಯ ಮತ್ತು ಪಟಪಟ ಮಾತನಾಡುವ ಹುಡುಗಿಯಾಗಿದ್ದು, ರೈಲಿನಲ್ಲಿ ಶಾಹಿದ್ ಕಪೂರ್ನ ದುಃಖದ ಪಾತ್ರವಾದ ಆದಿತ್ಯ ಕಶ್ಯಪ್ಗೆ ಡಿಕ್ಕಿ ಹೊಡೆಯುತ್ತಾಳೆ. ಮತ್ತೊಂದೆಡೆ, ಕರೀನಾ ಅವರ ವರ್ಕ್ ಫ್ರಂಟ್ ಬಗ್ಗೆ ಮಾತನಾಡುವುದಾದರೆ, ಇತ್ತೀಚೆಗೆ ಕರೀನಾ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಂಡಿದ್ದಳು. ಪಾಸಿಟಿವ್ ರಿವೀವ್ ಗಳ ಹೊರತಾಗಿಯೂ ಸೋಶಿಯಲ್ ಮೀಡಿಯಾಗಳಲ್ಲಿ #BoycottLSC ನಿಂದಾಗಿ ಮಕಾಡೆ ಮಲಗದೆ.