ನಮ್ಮ ಊರಲ್ಲಿ ಧ್ವಜಾರೋಹಣ ಮಾಡೋಕೆ ಬಿಡಲ್ಲ ಎಂದ ಕ್ರಿಶ್ಚಿಯನ್ನರು: ಖಡಕ್ ವಾರ್ನಿಂಗ್ ಕೊಟ್ಟ ಸಿಎಂ, ಯಾವ ಊರು ನೋಡಿ

in Uncategorized 167 views

ಕಳೆದ ವರ್ಷದ ಸುದ್ದಿ: ಸ್ಥಳೀಯ ಕ್ರಿಶ್ಚಿಯನ್ನರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಗೋವಾ ಜಿಲ್ಲೆಯ ವಾಸ್ಕೋ ಪಟ್ಟಣದ ಸಮೀಪ ಇರುವ ಸಾವೊ ಜಸಿಂಟೊ ದ್ವೀಪದಲ್ಲಿ ಸ್ವಾತಂತ್ರ್ಯ ದಿನದ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ರದ್ದುಪಡಿಸಿರುವುದಾಗಿ ನೌಕಾಪಡೆ ತಿಳಿಸಿದ್ದು ಇದರ ಬೆನ್ನಲ್ಲೇ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಿಡಿಮಿಡಿಗೊಂಡಿದ್ದು ಧ್ವಜಾರೋಹಣ ಕಾರ್ಯಕ್ರಮ ನಿಗದಿಯಂತೆ ಮುಂದುವರಿಸುವಂತೆ ಸೂಚಿಸಿದ್ದಾರೆ. ಮಾತ್ರವಲ್ಲದೆ ದ್ವೀಪವಾಸಿಗಳಿಗೆ ಯಾವುದೇ “ಭಾರತ ವಿರೋಧಿ ಚಟುವಟಿಕೆಗಳನ್ನು” “ಕಟ್ಟುನಿಟ್ಟಿನ ಕ್ರಮ” ದೊಂದಿಗೆ ನಿಭಾಯಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

Advertisement

75ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ನಡೆಸುತ್ತಿರುವ ‘ಆಜಾದಿ ಕಾ ಅಮೃತ್ ಮಹೋತ್ಸವ’ವದ ಭಾಗವಾಗಿ ಆಗಸ್ಟ್‌ 13 ಮತ್ತು 15ರ ನಡುವೆ ರಾಷ್ಟ್ರದಾದ್ಯಂತ ದ್ವೀಪಗಳಲ್ಲಿ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಲು ರಕ್ಷಣಾ ಸಚಿವಾಲಯ ಉದ್ದೇಶಿಸಿತ್ತು. ಈ ಪ್ಯಾನ್-ಇಂಡಿಯಾ ಉಪಕ್ರಮದ ಭಾಗವಾಗಿ ಗೋವಾ ನೌಕಾ ಪ್ರದೇಶದ ತಂಡವು ಸಾವೊ ಜಾಸಿಂಟೊ ದ್ವೀಪ ಸೇರಿದಂತೆ ಗೋವಾ ದ್ವೀಪಗಳಿಗೆ ಭೇಟಿ ನೀಡಿತು.

ಆದರೆ, ನಿವಾಸಿಗಳು ವಿರೋಧ ವ್ಯಕ್ತಪಡಿಸಿರುವುದರಿಂದ ಸಾವೊ ಜಸಿಂಟೊ ದ್ವೀಪದಲ್ಲಿನ ಯೋಜನೆಯನ್ನು ರದ್ದುಗೊಳಿಸಬೇಕಾಯಿತು ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದರು.

“ನಿಗದಿತ ಕಾರ್ಯಕ್ರಮದಂತೆ ತ್ರಿವರ್ಣ ಧ್ವಜಾರೋಹಣ ನೆರವೇರಿಸುವಂತೆ ನೌಕಾಪಡೆ ಅಧಿಕಾರಿಗಳಿಗೆ ನಾನು ಮನವಿ ಮಾಡಿದ್ದೇನೆ. ದ್ವೀಪದಲ್ಲಿ ಕೆಲವರು ಧ್ವಜಾರೋಹಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ದುರದೃಷ್ಟಕರ ಮತ್ತು ನಾಚಿಕೆಗೇಡಿನ ಸಂಗತಿ ಇಂತಹ “ಭಾರತ ವಿರೋಧಿ” ಕೃತ್ಯಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ್ ಹೇಳಿದ್ದಾರೆ.

ಭಾರತದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದಕ್ಷಿಣ ಗೋವಾದ ಸಾವೊ ಜಸಿಂತೋ ದ್ವೀಪದಲ್ಲಿ ರಾಷ್ಟ್ರಧ್ವಜ ಹಾರಿಸಲು ವಿರೋಧ ವ್ಯಕ್ತಿಪಡಿಸಿದ್ದ ಸ್ಥಳೀಯ ನಿವಾಸಿಗಳಿಗೆ ಗೋವಾ ಸಿಎಂ ಪ್ರಮೋದ್​ ಸಾವಂತ್​ ಖಡಕ್​ ಎಚ್ಚರಿಕೆ ನೀಡಿದ್ದಾರೆ. ನೌಕಾಪಡೆಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಮುಂದುವರೆಸುವಂತೆ ಸೂಚಿಸಿರುವ ಸಾವಂತ್​, ಗೋವಾ ಪೊಲೀಸರು ತತ್ಸಂಬಂಧವಾಗಿ ಪೂರ್ಣ ಸಹಕಾರ ನೀಡವರು ಎಂದಿದ್ದಾರೆ.

ಆಜಾದಿ ಕಾ ಅಮೃತ್ ಮಹೋತ್ಸವ್​ ಕಾರ್ಯಕ್ರಮದ ಅಂಗವಾಗಿ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲು ರಕ್ಷಣಾ ಸಚಿವಾಲಯ ದೇಶದ ಎಲ್ಲ ದ್ವೀಪಗಳಲ್ಲಿ ಆಗಸ್ಟ್​ 13 ರಿಂದ 15 ರ ನಡುವೆ ಧ್ವಜಾರೋಹಣವನ್ನು ಆಯೋಜಿಸಿದೆ. ಆದರೆ, ಈ ಸಂಬಂಧ ದಕ್ಷಿಣ ಗೋವಾ ಜಿಲ್ಲೆಯ ವಾಸ್ಕೋ ಪಟ್ಟಣದಲ್ಲಿರುವ ಸಾವೋ ಜಸಿಂತೋ ದ್ವೀಪಕ್ಕೆ ಭೇಟಿ ನೀಡಿದಾಗ, ಕೆಲವು ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅಲ್ಲಿನ ಕಾರ್ಯಕ್ರಮವನ್ನು ರದ್ದುಗೊಳಿಸುತ್ತಿರುವುದಾಗಿ ಐಎನ್​ಎಸ್​ ಹಂಸದ ಗೋವಾ ಅಧಿಕಾರಿಗಳು ಹೇಳಿಕೆ ನೀಡಿದ್ದರು.

ಈ ಬಗ್ಗೆ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿರುವ ರಾಜ್ಯದ ಸಿಎಂ ಪ್ರಮೋದ್​ ಸಾವಂತ್​, “ಕೆಲವು ವ್ಯಕ್ತಿಗಳು ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವುದು ದುರದೃಷ್ಟಕರ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಆದರೆ, ಇಂಥ ನಡವಳಿಕೆಯನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ನಾನು ಸ್ಪಷ್ಟಪಡಿಸಲಿಚ್ಛಿಸುತ್ತೇನೆ” ಎಂದಿದ್ದಾರೆ.

“ನೌಕಾಪಡೆಗೆ ತಮ್ಮ ಯೋಜನೆಯಂತೆ ಕಾರ್ಯಕ್ರಮ ನಡೆಸಲು ಹೇಳಿದ್ದು, ಗೋವಾ ಪೊಲೀಸರು ಇದಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ” ಎಂದಿರುವ ಸಿಎಂ, “ಈ ತೆರನ ಭಾರತವಿರೋಧಿ ಚಟುವಟಿಕೆಗಳ ಪ್ರಯತ್ನಗಳ ವಿರುದ್ಧ ತಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ಯಾವಾಗಲೂ ರಾಷ್ಟ್ರವೇ ಮೊದಲು” ಎಂದಿದ್ದಾರೆ.

ಇದನ್ನೂ ಓದಿ:

ಗಣರಾಜ್ಯೋತ್ಸವದಂದು ಹಾರಿದ ಇಸ್ಲಾಮಿಕ್ ಧ್ವಜ: “ನಾವು ತ್ರಿವರ್ಣ ಧ್ವಜ ಹಾರಿಸಲ್ಲ ಯಾಕಂದ್ರೆ ಆ ಧ್ವಜ ಮುಸಲ್ಮಾನರು & ಇಸ್ಲಾಂಗೆ….” ಎಂದ ಮೌಲ್ವಿ

ದೇಶವು ತನ್ನ 74 ನೇ ಗಣರಾಜ್ಯೋತ್ಸವವನ್ನು ಗುರುವಾರ (ಜನವರಿ 26, 2023) ಆಚರಿಸುತ್ತಿತ್ತು. ಮತ್ತೊಂದೆಡೆ, ಉತ್ತರ ಪ್ರದೇಶದ ಬಾರಾಬಂಕಿಯಲ್ಲಿರುವ ಮದರಸಾದಲ್ಲಿ ಇಸ್ಲಾಮಿಕ್ ಧ್ವಜಾರೋಹಣದ ವರದಿಗಳು ಮುನ್ನೆಲೆಗೆ ಬಂದಿವೆ. ಸುಬೇಹಾ ಪೊಲೀಸ್ ಠಾಣೆಯ ಹುಸೇನಾಬಾದ್, ರಾಂಪುರ ಮಜ್ರೆ ಜಮೀನಿಗೆ ಸಂಬಂಧಿಸಿದ ಪ್ರಕರಣವಾಗಿದೆ. ಇಸ್ಲಾಮಿಕ್ ಧ್ವಜಾರೋಹಣವನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತರಾತುರಿಯಲ್ಲಿ ಬಂದು ಮದರಸಾದಿಂದ ಧ್ವಜವನ್ನು ತೆಗೆದರು. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಟಿವಿ 9 ಉತ್ತರ ಪ್ರದೇಶ ಈ ಮದರಸಾದ ವಿಡಿಯೋವನ್ನು ಟ್ವೀಟ್ ಮಾಡಿದೆ. ಮದರಸಾವನ್ನು ಬಲೂನ್‌ಗಳಿಂದ ಅಲಂಕರಿಸಿರುವುದು ಮತ್ತು ಕೆಲವು ಮಕ್ಕಳು ಅಲ್ಲಿ ಜಮಾಯಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಲ್ಲದೆ, ಮದರಸಾದ ಮೇಲೆ ಇಸ್ಲಾಮಿಕ್ ಧ್ವಜ ಹಾರಾಡುತ್ತಿದೆ. ಅಷ್ಟರಲ್ಲಿ ಇಬ್ಬರು ಹದಿಹರೆಯದವರು ಸಿಹಿತಿಂಡಿಗಳೊಂದಿಗೆ ಅಲ್ಲಿಗೆ ಬಂದು ಮಕ್ಕಳಿಗೆ ಹಂಚಲು ಪ್ರಾರಂಭಿಸುತ್ತಾರೆ.

ವರದಿಗಳ ಪ್ರಕಾರ, ಮದರಸಾದ ಹೆಸರು ‘ಅಶ್ರಫುಲ್ ಉಲೂಮ್ ಇಮಾ ಇಮ್ದಾದಿಯಾ ಸಾಕಿನ್’. ಗಣರಾಜ್ಯೋತ್ಸವದಂದು ದೇಶದೆಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸುತ್ತಿದ್ದರೆ, ತ್ರಿವರ್ಣ ಧ್ವಜದ ಬದಲು ಇಸ್ಲಾಮಿಕ್ ಧ್ವಜ ಹಾರಿಸಿದ್ದನ್ನು ಕಂಡು ಗ್ರಾಮದ ಜನತೆ ಕೆಂಡಾಮಂಡಲರಾದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಸುಬೇಹಾ ಪೊಲೀಸರು ಮತ್ತು ಹೈದರ್‌ಗಢ ತಹಸಿಲ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಇಸ್ಲಾಮಿಕ್ ಧ್ವಜವನ್ನು ಕೆಳಗಿಳಿಸಿದರು.

ವರದಿಗಳ ಪ್ರಕಾರ ಧ್ವಜಾರೋಹಣ ಮಾಡಿದ ವ್ಯಕ್ತಿಯನ್ನು ಆಸಿಫ್ ಎಂದು ಗುರುತಿಸಲಾಗಿದೆ. ಮತ್ತೊಂದೆಡೆ, ಮದರಸಾದ ಮೌಲ್ವಿ ತಮ್ಮ ಧರ್ಮದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದಿಲ್ಲ ಎಂದು ಹೇಳುತ್ತಾನೆ. ಪ್ರಕರಣದಲ್ಲಿ ಹಫೀಜ್ ಮೊಹಮ್ಮದ್ ಸೊಹ್ರಾಬ್ ಮತ್ತು ಮೊಹಮ್ಮದ್ ತಬ್ರೇಜ್ ನಿಜಾಮುದ್ದೀನ್ ರಿಜ್ವಾನ್ ಎಂಬಾತರನ್ನ ಪೊಲೀಸರು ಬಂಧಿಸಿದ್ದಾರೆ. ಇಸ್ಲಾಮಿಕ್ ಧ್ವಜವನ್ನು ಹಾರಿಸುವ ವಿಷಯವು ಮುನ್ನೆಲೆಗೆ ಬಂದಿದೆ. ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೈದರ್‌ಗಢ ಸಿಒ ಜೆಎನ್ ಅಸ್ಥಾನಾ ತಿಳಿಸಿದ್ದಾರೆ.

Advertisement
Share this on...