ಸ್ವೀಡನ್ನಲ್ಲಿ ಕುರಾನ್ ಸುಟ್ಟ ಘಟನೆಯನ್ನು ವಿರೋಧಿಸಿ ಕೇರಳದಲ್ಲಿ ಮುಸ್ತಫಾ ಎಂಬ ವ್ಯಕ್ತಿ ಕ್ರಿಶ್ಚಿಯನ್ನರ ಪವಿತ್ರ ಗ್ರಂಥವಾದ ಬೈಬಲ್ ಅನ್ನು ಸುಟ್ಟು ಹಾಕಿದ್ದಾನೆ. ಸೋಶಿಯಲ್ ಮೀಡಿಯಾಗಳ ಮೂಲಕ ವಾತಾವರಣವನ್ನು ಹಾಳು ಮಾಡಲು ಉದ್ದೇಶಪೂರ್ವಕ ಸಂಚು ಮಾಡಲಾಗುತ್ತಿದೆ ಎಂದು ರಾಜ್ಯ ಪೊಲೀಸರು ಹೇಳಿದ್ದಾರೆ. ಕೇರಳವು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಗಮನಾರ್ಹ ಜನಸಂಖ್ಯೆಯನ್ನು ಹೊಂದಿದೆ. ಅಲ್ಲದೇ ಈ ವಿಡಿಯೋವನ್ನು ಮುಸ್ಲಿಮರು ವೈರಲ್ ಮಾಡಿದ್ದಾರೆ. ಸಮಾಜದ ನಂಬಿಕೆಗೆ ಧಕ್ಕೆ ತರಲು ಈ ಕೃತ್ಯ ಎಸಗಲಾಗಿದೆ ಎನ್ನುತ್ತಾರೆ ಪೊಲೀಸರು.
ಕೇರಳ ಪೊಲೀಸರು ಇದೊಂದು ಪಿತೂರಿ ಎಂದು ಕರೆದಿದ್ದಾರೆ. ಕೇರಳದಲ್ಲಿ ಎರಡೂ ಸಮಾಜಗಳು ಒಟ್ಟಿಗೆ ವಾಸಿಸುತ್ತಿದ್ದು, ಈ ದುಷ್ಕೃತ್ಯಗಳ ಮೂಲಕ ಪ್ರಚೋದಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಮ್ಮ ಎಫ್ಐಆರ್ನಲ್ಲಿ ಬರೆದಿದ್ದಾರೆ. ಮುಸ್ತಫಾ ಮೊದಲು ಬೈಬಲ್ ಅನ್ನು ಮೇಜಿನ ಮೇಲೆ ಇರಿಸಿ, ನಂತರ ಅದನ್ನು ಲೈಟರ್ನಿಂದ ಸುಡಲು ಪ್ರಯತ್ನಿಸುವುದನ್ನು ಬಳಿಕ ಅದು ಆಗದಿದ್ದಾಗ ಗ್ಯಾಸ್ ಸ್ಟವ್ ಹೊತ್ತಿಸಿ ಅದರ ಮೇಲೆ ಬೈಬಲ್ ಇಟ್ಟನು ಎಂಬುದನ್ನ ವೀಡಿಯೊದಲ್ಲಿ ಕಾಣಬಹುದು.
ಅಲ್ಲದೆ ವಿಡಿಯೋದಲ್ಲಿ ಪುಸ್ತಕ ಸರಿಯಾಗಿ ಉರಿಯುವಂತೆ ಎಣ್ಣೆ ಸುರಿದು ಹಾಕುತ್ತಿರುವ ದೃಶ್ಯವೂ ಇದೆ. ಮುಸ್ತಫಾ ವಿರುದ್ಧ ಈಗಾಗಲೇ ಪ್ರಚೋದನಕಾರಿ ಕೃತ್ಯಗಳ ಆರೋಪ ಕೇಳಿ ಬಂದಿದೆ. ಕಳೆದ ವರ್ಷ ಕ್ರಿಸ್ಮಸ್ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಈತ ದಾಂಧಲೆ ನಡೆಸಿದ್ದ. ಕಾಸರಗೋಡು ಜಿಲ್ಲೆಯ ಮುನ್ನಾಡ್ನ ಬೇಡ್ಕಂ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾನೆ ಹಾಗು ಆತ ವಿಡಿಯೋ ವೈರಲ್ ಕೂಡ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಸ್ವೀಡನ್ನಲ್ಲಿ ಕೆಲವು ರಾಜಕಾರಣಿಗಳು ಕುರಾನ್ ಅನ್ನು ಸುಟ್ಟುಹಾಕಿದ ಘಟನೆಗಳು ನಡೆದಿದ್ದವು. ಇದನ್ನು ಅನುಸರಿಸಿ ವಿಶ್ವದಾದ್ಯಂತದ ಮುಸ್ಲಿಮರು ಸ್ವೀಡನ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ವೀಡನ್ನ ರಾಜಧಾನಿ ಸ್ಟಾಕ್ಹೋಮ್ನಲ್ಲಿರುವ ಟರ್ಕಿಶ್ ರಾಯಭಾರ ಕಚೇರಿಯ ಹೊರಗೆ ರಾಸ್ಮಸ್ ಪಾಲುದಾನ್ ನೇತೃತ್ವದಲ್ಲಿ ಈ ಕೃತ್ಯ ನಡೆಸಲಾಗಿತ್ತು. ಜನರು ಕುರಾನ್ನ ಪುಟಗಳನ್ನೂ ಹರಿದು ಹಾಕಿದ್ದರು. ಘಟನೆಯನ್ನು ವಿರೋಧಿಸಿ ಲಂಡನ್ನಲ್ಲಿಯೂ ಸ್ವೀಡಿಷ್ ರಾಯಭಾರ ಕಚೇರಿಯ ಹೊರಗೆ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಇರಾನ್ ಸೇರಿದಂತೆ ಹಲವು ಇಸ್ಲಾಮಿಕ್ ದೇಶಗಳಲ್ಲಿ ಸಾವಿರಾರು ಮುಸ್ಲಿಮರು ಬೀದಿಗಿಳಿದಿದ್ದರು.
ಏನಿದು ಸ್ವೀಡನ್ ಘಟನೆ?
ಈ ಬಾರಿ ಪರಸ್ಪರರ ಕಡುವೈರಿಗಳಾದ ಟರ್ಕಿ ಮತ್ತು ಸ್ವೀಡನ್ ನಡುವಿನ ವಿವಾದವು ಕುರಾನ್ಗೆ ಸಂಬಂಧಿಸಿದಂತೆ ಮತ್ತಷ್ಟು ಉಲ್ಬಣಗೊಂಡಿದೆ. NATO ದಲ್ಲಿ ಸ್ವೀಡನ್ ಸೇರ್ಪಡೆಗೆ ಟರ್ಕಿ ಒಂದು ಅಡಚಣೆಯಾಗಿ ಮಾರ್ಪಟ್ಟಿದೆ. ಏತನ್ಮಧ್ಯೆ, ಸ್ವೀಡನ್ನಲ್ಲಿ ಕುರಾನ್ ಸುಟ್ಟ ನಂತರ, ಟರ್ಕಿ ಮತ್ತು ಸ್ವೀಡನ್ ನಡುವಿನ ಸಂಬಂಧದಲ್ಲಿ ಮತ್ತಷ್ಟು ವೈರತ್ವ ಉಂಟಾಗಿದೆ. ಸ್ವೀಡನ್ ರಕ್ಷಣಾ ಸಚಿವರ ಭೇಟಿಯನ್ನು ಟರ್ಕಿ ರದ್ದುಗೊಳಿಸಿದೆ.
ಸ್ವೀಡನ್ನ ಬಲಪಂಥೀಯ ಪಕ್ಷ ‘ಹಾರ್ಡ್ ಲೈನ್’ ನ ನಾಯಕ ರಾಸ್ಮಸ್ ಪಲುದಾನ್ (Hard Line Leader Rasmus Paludan) ಶನಿವಾರ (ಜನವರಿ 21, 2023) ಸ್ಟಾಹೋಮ್ನಲ್ಲಿರುವ ಟರ್ಕಿಶ್ ರಾಯಭಾರ ಕಚೇರಿಯ ಮುಂದೆ ಮುಸ್ಲಿಮರ ಧಾರ್ಮಿಕ ಪುಸ್ತಕವಾದ ಕುರಾನ್ ಅನ್ನು ಸಾರ್ವಜನಿಕವಾಗಿ ಸುಟ್ಟುಹಾಕಿದರು. ಅಷ್ಟೇ ಅಲ್ಲ, ಇಸ್ಲಾಂ ಮತ್ತು ವಲಸೆಯ ಕುರಿತು ಪಲುದಾನ್ ಒಂದು ಗಂಟೆ ಭಾಷಣ ಮಾಡಿದರು.
ಸುಮಾರು 100 ಜನರ ಸಭೆಯನ್ನುದ್ದೇಶಿಸಿ ಮಾತನಾಡಿದ ಪಲುದಾನ್, “ಅಭಿವ್ಯಕ್ತಿ ಸ್ವಾತಂತ್ರ್ಯ ಇರಬಾರದು ಎಂದು ನೀವು (ಮುಸಲ್ಮಾನರು) ಭಾವಿಸಿದರೆ ನೀವು ಬದುಕೋಕೆ ಬೇರೆ ಸ್ಥಳವನ್ನು ನೋಡಿಕೊಳ್ಳಿ” ಎಂದು ಹೇಳಿದರು. ಸ್ಥಳೀಯ ಜನರಿಗೆ ಇಸ್ಲಾಂನಿಂದ ಹಾಗು ಮುಸಲ್ಮಾನರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಅವರು ಮಾತನಾಡಿದರು.
ವಾಸ್ತವವಾಗಿ, ಟರ್ಕಿಯ ರಾಯಭಾರಿ ಕಚೇರಿಯ ಮುಂದೆ ಈ ಪ್ರತಿಭಟನೆಗಾಗಿ ಪಲುದಾನ್ ಪೊಲೀಸರಿಂದ ಅನುಮತಿ ಪಡೆದಿದ್ದರು. ಪೊಲೀಸರು ಅನುಮತಿ ನೀಡಿದ್ದಲ್ಲದೆ, ಪ್ರತಿಭಟನಾ ಸ್ಥಳದಲ್ಲಿ ಪಲುದಾನ್ ಮತ್ತು ಇತರ ಪ್ರತಿಭಟನಾಕಾರರಿಗೆ ಭದ್ರತೆಯನ್ನೂ ಒದಗಿಸಿದರು. ಪ್ರತಿಭಟನೆಯ ಸಮಯದಲ್ಲಿ ಪಲುದಾನ್ ಕುರಾನ್ ಅನ್ನು ಲೈಟರ್ನಿಂದ ಸುಟ್ಟುಹಾಕಿದರು.
ಪ್ರತಿಭಟನೆಯ ಹಿಂದಿನ ದಿನ ಪೊಲೀಸರು ಅನುಮತಿ ನೀಡಿದ್ದರಿಂದ ಟರ್ಕಿ ಕೆಂಡಾಮಂಡಲವಾಗಿತ್ತು. ಸಮನ್ಸ್ ಕಳುಹಿಸುವ ಮೂಲಕ ಸ್ವೀಡನ್ನ ರಾಯಭಾರಿಯನ್ನು ಕರೆದರು. ಪಲುದಾನ್ಗೆ ಪ್ರತಿಭಟನೆ ನಡೆಸಲು ಏಕೆ ಅವಕಾಶ ನೀಡಲಾಯಿತು ಎಂದು ಟರ್ಕಿ ರಾಯಭಾರಿಯನ್ನು ಕೇಳಿತು. ಟರ್ಕಿಯು ಸ್ವೀಡನ್ ಗೆ ಒಂದೇ ತಿಂಗಳಲ್ಲಿ ಎರಡು ಬಾರಿ ಸಮನ್ಸ್ ನೀಡಿದೆ. ಇದಕ್ಕೂ ಮೊದಲು ಜನವರಿ 12 ರಂದು, ಸ್ವೀಡನ್ನಲ್ಲಿ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರ ಪ್ರತಿಕೃತಿಯನ್ನು ಸುಟ್ಟಿದ್ದಕ್ಕಾಗಿ ಸ್ವೀಡನ್ನ ರಾಯಭಾರಿಯನ್ನು ಕರೆಸಲಾಗಿತ್ತು.
ಪಲುದಾನ್ ಕಳೆದ ವರ್ಷ ಮೇ ತಿಂಗಳಲ್ಲಿ ‘ಬರ್ನ್ ಕುರಾನ್’ ಯಾತ್ರೆ ಆರಂಭಿಸಿದ್ದರು. ಈ ಸಮಯದಲ್ಲಿ ಅವರು ಅದನ್ನು ಸುಡುವಂತೆ ಸ್ವೀಡಿಷ್ ಜನರನ್ನು ಕೇಳಿಕೊಂಡಿದ್ದರು. ಇದರ ನಂತರ ಸ್ವೀಡನ್ನಾದ್ಯಂತ ದಂಗೆಗಳಾಗಿದ್ದವು. ಈ ಗಲಭೆಯಲ್ಲಿ ಅನೇಕ ಜನರು ಸಾವನ್ನಪ್ಪಿದ್ದರು. ಇಷ್ಟೇ ಅಲ್ಲ, ಟರ್ಕಿ ಮತ್ತು ಪಾಕಿಸ್ತಾನ ಎರಡೂ ದೇಶಗಳು ಸ್ವೀಡನ್ ವಿರುದ್ಧ ಅಸಮಾಧಾನ ಹೊರಹಾಕಿದ್ದವು.
ಜನವರಿ 21 ರಂದು, ಟರ್ಕಿಯ ರಾಯಭಾರಿ ಕಚೇರಿಯ ಮುಂದೆ ಪಲುದಾನ್ ಕುರಾನ್ ಅನ್ನು ಸುಟ್ಟುಹಾಕಿದ ನಂತರ ಟರ್ಕಿಗೆ ಸ್ವೀಡನ್ನ ರಕ್ಷಣಾ ಸಚಿವರ ಪ್ರಸ್ತಾಪಿತ ಭೇಟಿಯನ್ನು ಟರ್ಕಿ ರದ್ದುಗೊಳಿಸಿತ್ತು. ಸ್ವೀಡನ್ನ ರಕ್ಷಣಾ ಸಚಿವ ಪಾಲ್ ಜಾನ್ಸನ್ ಅವರು ಜನವರಿ 27, 2023 ರಂದು ಟರ್ಕಿಗೆ ಭೇಟಿ ನೀಡಬೇಕಿತ್ತು.
ಈ ಭೇಟಿಯ ಸಮಯದಲ್ಲಿ, ಜಾನ್ಸನ್ NATO ಗೆ ಸ್ವೀಡನ್ನ ಎಂಟ್ರಿಯ ಬಗ್ಗೆ ಟರ್ಕಿಯ ಅಡ್ಡಿಪಡಿಸುತ್ತಿರುವ ಕುರಿತು ಚರ್ಚಿಸಬೇಕಿತ್ತು. ವಾಸ್ತವವಾಗಿ, ಸ್ವೀಡನ್ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಮಿಲಿಟರಿ ಸಂಘಟನೆಯಾದ NATO ಗೆ ಸೇರಲು ಬಯಸುತ್ತಿದೆ, ಆದರೆ ಟರ್ಕಿ ಪದೇ ಪದೇ ಅದನ್ನು ತಡೆಯುತ್ತಿದೆ. NATO ಸಂಘಟನೆಯಲ್ಲಿರುವ ಎಲ್ಲಾ ಸದಸ್ಯ ರಾಷ್ಟ್ರಗಳ ಒಪ್ಪಿಗೆಯಿದ್ದರೆ ಮಾತ್ರ ಹೊಸ ಸದಸ್ಯರನ್ನು ಅದರಲ್ಲಿ ಸೇರಿಸಿಕೊಳ್ಳಬಹುದು ಎಂಬುದು NATO ದ ನಿಯಮವಾಗಿದೆ.
ಇತ್ತೀಚಿನ ಕುರಾನ್ ಸುಟ್ಟ ಘಟನೆಯ ನಂತರ, ಟರ್ಕಿಯ ರಕ್ಷಣಾ ಸಚಿವ ಹುಲುಸಿ ಅಕಾರ್ ಅವರು ಸಭೆಯು ಅದರ ಪ್ರಾಮುಖ್ಯತೆ ಮತ್ತು ಅರ್ಥವನ್ನು ಕಳೆದುಕೊಂಡಿರುವುದರಿಂದ ಅದನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದರು. ಟರ್ಕಿ ಇದನ್ನು ದ್ವೇಷದ ಅಪರಾಧ ಮತ್ತು ಇಸ್ಲಾಮೋಫೋಬಿಯಾ ಎಂದು ಕರೆದಿದೆ. ಟರ್ಕಿಯ ಹೊರತಾಗಿ, ಕುರಾನ್ ಸುಟ್ಟ ಘಟನೆಯನ್ನು ಪಾಕಿಸ್ತಾನ, ಸೌದಿ ಅರೇಬಿಯಾ, ಜೋರ್ಡಾನ್ ಮತ್ತು ಕುವೈತ್ ಕೂಡ ಖಂಡಿಸಿವೆ.
ಅದೇ ಸಮಯದಲ್ಲಿ, ಸ್ವೀಡನ್ ಸರ್ಕಾರವು ಈ ಪ್ರತಿಭಟನೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ದೂರವಿತ್ತು. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ದಿಷ್ಟ ಪ್ರಾಮುಖ್ಯತೆ ಇದೆ ಎಂದು ಸ್ವೀಡಿಷ್ ಸರ್ಕಾರ ಹೇಳುತ್ತದೆ. ಸ್ವೀಡನ್ ರಕ್ಷಣಾ ಸಚಿವ ಜಾನ್ಸನ್ ಉಭಯ ದೇಶಗಳ ನಡುವೆ ಮತ್ತೊಮ್ಮೆ ಮಾತುಕತೆ ನಡೆಯಲಿದ್ದು, ಎರಡೂ ದೇಶಗಳು ಕಾರ್ಯತಂತ್ರದ ವಿಷಯವನ್ನು ಚರ್ಚಿಸಲು ಸಾಧ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.