“ನಾನು ಹುಲಿಯ ಮರಿ, ಮೋದಿಯನ್ನ ಅಧಿಕಾರದಿಂದ ಕೆಳಗಿಸಿಬಿಡ್ತೀನಿ, ಬಿಜೆಪಿಯನ್ನ ಬಂಗಾಳಕೊಲ್ಲಿಗೆ ಎಸೀತೀನಿ”: ಕೆಸಿಆರ್, ತೆಲಂಗಾಣ ಮುಖ್ಯಮಂತ್ರಿ

in Kannada News/News 439 views

ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ಜನಗಾಂವ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೆಸಿಆರ್ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ, ಪ್ರಧಾನಿ ಮೋದಿ ಅವರ ಇತ್ತೀಚಿನ ಹೈದರಾಬಾದ್ ಭೇಟಿಯಿಂದಲೂ ಕೆಸಿಆರ್ ದೂರ ಉಳಿದಿದ್ದರು. ಇದರೊಂದಿಗೆ ಬಜೆಟ್ ಬಗ್ಗೆಯೂ ಕೇಂದ್ರ ಸರ್ಕಾರದ ವಿರುದ್ಧ ಕೆಸಿಆರ್ ಅಸಮಾಧಾನ ವ್ಯಕ್ತಪಡಿಸಿದ್ದರು.

Advertisement

ನಾನು ಹುಲಿಯ ಮಗ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕಿತ್ತೊಗೆಯುತ್ತೇನೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ಜನಗಾಂವ್‌ನಲ್ಲಿ ಹೇಳಿದ್ದಾರೆ. ಟಿಆರ್‌ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಜನಗಾಂವ್‌ನಲ್ಲಿ ಹೊಸ ಕಲೆಕ್ಟರೇಟ್ ಕಟ್ಟಡವನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಅವರು ಈ ವಿಷಯಗಳನ್ನು ಹೇಳಿದರು.

ತೆಲಂಗಾಣ ಅಭಿವೃದ್ಧಿಗೆ ಬೆಂಬಲ ನೀಡುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ವಿಫಲವಾಗಿದೆ ಎಂದು ಕೆಸಿಆರ್ ಆರೋಪಿಸಿದ್ದಾರೆ. ಶೀಘ್ರದಲ್ಲೇ ಎನ್‌ಡಿಎ ಸರ್ಕಾರ ಅಧಿಕಾರದಿಂದ ಕಿತ್ತೊಗೆಯಲಾಗುವುದು ಎಂದರು. ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ನೀವು ನನಗೆ ಆಶೀರ್ವಾದ ಮಾಡಿದರೆ ನಾನು ಹೋರಾಡಲು ಸಿದ್ಧ ಮತ್ತು ದೆಹಲಿಯ ಕೋಟೆಯ ಮೇಲೆ ದಾಳಿ ಮಾಡಲು ಸಿದ್ಧ ಎಂದು ಹೇಳಿದರು. ನರೇಂದ್ರ ಮೋದಿ ಹುಷಾರಾಗಿರಿ… ನಾನು ಹುಲಿಯ ಮಗ.. ಇದು ತೆಲಂಗಾಣ ಎಂದಿದ್ದಾರೆ.

ಕೆಸಿಆರ್ ಮುಂದೆ ಮಾತನಾಡುತ್ತ, “ನೀವು ನಮಗೆ ನ್ಯಾಶನಲ್ ಪ್ರೊಜೆಕ್ಟ್ ನೀಡುವುದಿಲ್ಲ, ವೈದ್ಯಕೀಯ ಕಾಲೇಜೂ ನೀಡುವುದಿಲ್ಲ. ನೀವು ನಮಗೆ ಬೆಂಬಲ ನೀಡದಿದ್ದರೂ ಪರವಾಗಿಲ್ಲ. ನಾವು ನಿಮ್ಮನ್ನು ಅಧಿಕಾರದಿಂದ ದೂರವಿಟ್ಟು ನಮಗೆ ಸಹಾಯ ಮಾಡುವ ಸರ್ಕಾರವನ್ನು ತರುತ್ತೇವೆ” ಎಂದರು.

‘ಯಾರಾದರೂ ಪಕ್ಷದ ಜನರನ್ನ ಮುಟ್ಟಿದರೆ…’

ರೈತರ ಆದಾಯ ದ್ವಿಗುಣಗೊಳಿಸುವ ಪ್ರಧಾನಿ ಮೋದಿಯವರ ಘೋಷಣೆಯನ್ನು ಲೇವಡಿ ಮಾಡಿದ ಕೆಸಿಆರ್, ಇಂಧನ ಮತ್ತು ರಸಗೊಬ್ಬರ ಬೆಲೆ ಏರಿಕೆಯಿಂದಾಗಿ ರೈತರ ಖರ್ಚು ದ್ವಿಗುಣಗೊಂಡಿದೆ ಎಂದು ಹೇಳಿದರು. ಜನಗಾಂವ್‌ನಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಟಿಆರ್‌ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ ಎಂದರು. ತಮ್ಮ ಪಕ್ಷದವರನ್ನು ಯಾರಾದರೂ ಮುಟ್ಟಿದರೆ ಅವರು ನಾಶವಾಗುತ್ತಾರೆ ಎಂದು ಕೇಸರಿ ಪಕ್ಷಕ್ಕೆ ಎಚ್ಚರಿಕೆ ನೀಡಿದರು.

ವಿದ್ಯುತ್ ಕ್ಷೇತ್ರದ ಸುಧಾರಣೆಗಳಿಗಾಗಿ ಕೆಸಿಆರ್ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು ಮತ್ತು ಯಾವುದೇ ಕಾರಣಕ್ಕೂ ಅದನ್ನು ಜಾರಿಗೆ ತರುವುದಿಲ್ಲ ಎಂದು ಘೋಷಿಸಿದರು. ಕೃಷಿ ಪಂಪ್ ಸೆಟ್ ಗಳಿಗೆ ಮೋಟಾರ್ ಅಳವಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಬಜೆಟ್ ಬಗ್ಗೆ ಪ್ರಧಾನಿ ಮೋದಿಯನ್ನು ದೂರದೃಷ್ಟಿಯಿಲ್ಲದ ನಾಯಕ ಎಂದು ಕೆಸಿಆರ್ ಕರೆದಿದ್ದರು

ಅಗತ್ಯವಿದ್ದರೆ ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ಪಾತ್ರ ವಹಿಸಲು ಸಿದ್ಧ ಎಂದು ಟಿಆರ್‌ಎಸ್ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಕೇಂದ್ರ ಬಜೆಟ್ ಅನ್ನು ಟೀಕಿಸುವಾಗ, ಕೆಸಿಆರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ದೂರದೃಷ್ಟಿಯಿಲ್ಲದ ಪ್ರಧಾನಿ ಎಂದು ಕರೆದಿದ್ದರು ಮತ್ತು ಬಿಜೆಪಿಯನ್ನು ಬಂಗಾಳಕೊಲ್ಲಿಯಲ್ಲಿ ಮುಳುಗಿಸುತ್ತೇವೆ ಎಂದು ಹೇಳಿದ್ದರು. ಇದಲ್ಲದೇ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೈದರಾಬಾದ್ ಭೇಟಿ ಸಮಯದಲ್ಲೂ ತೆಲಂಗಾಣ ಸಿಎಂ ದೂರ ಉಳಿದಿದ್ದರು.

ಮತ್ತೊಂದೆಡೆ, ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಜನಗಾಂವ್ ಭೇಟಿಯ ಸಂದರ್ಭದಲ್ಲಿ ಬಿಜೆಪಿ ಪ್ರತಿನಿಧಿಗಳು ಮತ್ತು ಪಕ್ಷದ ಇತರ ಹಲವು ಕಾರ್ಯಕರ್ತರ ಗೃಹಬಂಧನದ ಬಗ್ಗೆ ಬಿಜೆಪಿಯ ತೆಲಂಗಾಣ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡು ದಿನಗಳಿಂದ ಪೊಲೀಸರು ಜನಗಾಂವ್ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಟಿಆರ್‌ಎಸ್ ಮುಖ್ಯಸ್ಥರನ್ನು ಗುರಿಯಾಗಿಸಿ ಕರೀಂನಗರ ಸಂಸದ ಬಂಡಿ ಸಂಜಯ್ ಕುಮಾರ್ ಮಾತನಾಡುತ್ತ, ಕೆಸಿಆರ್ ಭೇಟಿಯ ವೇಳೆ ಬಿಜೆಪಿ ಕಾರ್ಯಕರ್ತರನ್ನು ಎರಡು ದಿನಗಳ ಕಾಲ ಕಸ್ಟಡಿಯಲ್ಲಿಟ್ಟಿರುವುದು ಅನ್ಯಾಯ ಎಂದು ಹೇಳಿದ್ದಾರೆ. ಬಿಜೆಪಿ ನಾಯಕ ಟಿ ರಾಜಾ ಸಿಂಗ್, ಶಾಸಕರಾದ ಈಟಾಳ ರಾಜೇಂದ್ರ ಮತ್ತು ರಘುನಂದನ್ ರಾವ್ ಅವರ ಬಂಧನವನ್ನು ಅವರು ಖಂಡಿಸಿದರು.

Advertisement
Share this on...