“ನಾವು ನಿಮ್ಮ ಮಿತ್ರರು ಶತ್ರುಗಳಲ್ಲ, ನೀವೇ ನಮ್ಮನ್ನ ದೂರ ಮಾಡದ್ರಿ”: ಉದ್ಧವ್ ಠಾಕ್ರೆ… ನಿತೀಶ್, ಮಮತಾ, ಕೇಜ್ರಿವಾಲ್ ಬಳಿಕ I.N.D.I.A ನಿಂದ ಶಿವಸೇನೆ ಕೂಡ ಹೊರಕ್ಕೆ?

in Uncategorized 81 views

ಶಿವಸೇನಾ (ಯುಬಿಟಿ) ಅಧ್ಯಕ್ಷ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ಸಿಂಧುದುರ್ಗದ ಸಾವಂತ್ ವಾಡಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಬಿಜೆಪಿಯನ್ನು ಹಲವಾರು ಬಾರಿ ಗೇಲಿ ಮಾಡಿದರು ಆದರೆ ಪ್ರಧಾನಿ ಮೋದಿಯ ಬಗ್ಗೆ ಮೃದುವಾಗಿ ಮಾತನಾಡುತ್ತಾ, ಸ್ವಲ್ಪ ವಿಚಿತ್ರವಾದ ಸಂಗತಿಯನ್ನು ಹೇಳಿದರು. ನಾವು ಮಿತ್ರರು, ನಿಮ್ಮ ಶತ್ರುಗಳಲ್ಲ, ಇಂದಿಗೂ ಮಿತ್ರರು ಎಂದು ಹೇಳಿದರು.

Advertisement

ಠಾಕ್ರೆ ಹೇಳಿಕೆ ನಂತರ ಸಾಕಷ್ಟು ಊಹಾಪೋಹಗಳು ಎದ್ದಿವೆ. ಇತ್ತೀಚೆಗಷ್ಟೇ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಎನ್​ಡಿಎಗೆ ಮರಳಿದ್ದು, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸುತ್ತದೆ ಎಂದು ಕೇಜ್ರಿವಾಲ್ ಘೋಷಿಸಿದ್ದು ಅತ್ತ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕೂಡ I.N.D.I.A ಒಕ್ಕೂಟದಿಂದ ಹೊರಬಂದಿದ್ದು ಇದೀಗ ಉದ್ಧವ್ ಅವರ ಹೇಳಿಕೆಯಿಂದ ಹಲವು ಅರ್ಥಗಳನ್ನು ಕಲ್ಪಿಸಿಕೊಳ್ಳಲಾಗುತ್ತಿದೆ. ಉದ್ಧವ್ ಠಾಕ್ರೆ ಅವರ ಶಿವಸೇನೆ ದೀರ್ಘಕಾಲದಿಂದ ಎನ್​ಡಿಎ ಭಾಗವಾಗಿದೆ, ಆದರೆ ಕೆಲವು ವರ್ಷಗಳ ಹಿಂದೆ ಬಿಜೆಪಿ ಹಾಗೂ ಶೀವಸೇನೆ ನಡುವೆ ಘರ್ಷಣೆ ನಡೆದಿತ್ತು. ಈಗ ಶಿವಸೇನೆ ವಿರೋಧ ಪಕ್ಷದ ಇಂಡಿಯಾ ಒಕ್ಕೂಟದ ಭಾಗವಾಗಿದೆ. ನಮ್ಮ ಹಿಂದುತ್ವ ಹಾಗೂ ಕೇಸರಿ ಧ್ವಜ ಇನ್ನೂ ಹಾಗೆಯೇ ಇದೆ ಎಂದರು.

ನಾನು ಪ್ರಧಾನಿ ಮೋದಿಗೆ ಹಿಂದೂ ಶತ್ರುವಾಗಿರಲಿಲ್ಲ ಈಗಲೂ ಕೂಡ ಅಲ್ಲ, ಸೇನೆಯೊಂದಿಗಿನ ಸಂಬಂಧವನ್ನು ಮುರಿಯಲು ಮೋದಿ ನಿರ್ಧರಿಸಿದ್ದಾರೆ. ಉದ್ಧವ್ ಠಾಕ್ರೆ ಕೊಂಕಣದಲ್ಲಿ ಪ್ರವಾಸ ನಡೆಸುತ್ತಿದ್ದಾರೆ, ಲೋಕಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದಾರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.

ಯಾವುದೇ ಚುನಾವಣೆಗಿಂತ ಭಿನ್ನವಾಗಿ 2024ರ ಸಾರ್ವತ್ರಿಕ ಚುನಾವಣೆಯು ಅತ್ಯಂತ ಪ್ರಮುಖ ಚುನಾವಣೆಯಾಗಿದೆ. ಮುಂಬರುವ ಚುನಾವಣೆಗೂ ಮುನ್ನ ಒಗ್ಗಟ್ಟಿನಿಂದ ಇರುವಂತೆ ತಮ್ಮ ಕಾರ್ಯಕರ್ತರಿಗೆ ಮನವಿ ಮಾಡಿರುವ ಠಾಕ್ರೆ ನಮಗೆ ತೊಂದರೆ ನೀಡಿದವರಿಗೆ ಮುಂದಿನ ಪೀಳಿಗೆ ಅವರ ಹೆಸರನ್ನು ನೆನಪಿಸಿಕೊಳ್ಳದಂತಹ ಕಠಿಣ ಪಾಠವನ್ನು ಕಲಿಸಲಾಗುತ್ತದೆ. ನಾವು ಹಿಂದುತ್ವ ಹಾಗೂ ಎರಡು ಧರ್ಮಗಳ ನಡುವೆ ಬೆಂಕಿ ಹಚ್ಚುವುದಿಲ್ಲ ಎಂದು ತಿಳಿದ ಮುಸ್ಲಿಮರು ನಮ್ಮೊಂದಿಗೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.

Advertisement
Share this on...