“ನಾವು ಫಿಲ್ಮ್ ಮಾಡಿಲ್ಲಾಂದ್ರೆ entertainment ಕೊಡೋದಾದರೂ ಯಾರು? ಬಾಯ್‌ಕಾಟ್ ಮಾಡದೆ ದಯವಿಟ್ಟು ಬಾಲಿವುಡ್ ಫಿಲಂಗಳನ್ನ ನೋಡಿ”: ಕರೀನಾ ಖಾನ್

in Uncategorized 151 views

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಬಾಯ್‌ಕಾಟ್ ಬಾಲಿವುಡ್’ ಟ್ರೆಂಡ್ ಕುರಿತು ಮಾತನಾಡಿದರು. ಬಾಲಿವುಡ್ ಚಿತ್ರಗಳನ್ನು ಬಾಯ್‌ಕಾಟ್ ಮಾಡುವ ಟ್ರೆಂಡ್ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ‘ಲಾಲ್ ಸಿಂಗ್ ಚಡ್ಡಾ’ ನಟಿ, “ನಾನು ಅದನ್ನು ಒಪ್ಪುವುದಿಲ್ಲ. ಇದು ಸಂಭವಿಸಿದಲ್ಲಿ ನಾವು ನಿಮಗೆ ಹೇಗೆ entertain ಮಾಡೋದಾದರೂ ಹೇಗೆ? ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಮಜಾ ಹೇಗೆ ಇರುತ್ತದೆ? ಒಂದು ವೇಳೆ ಬಾಲಿವುಡ್ ಚಿತ್ರಗಳು ಬರದೇ ಇದ್ದರೆ ನಿಮಗೆ ಮನರಂಜನೆ ಹೇಗಾಗುತ್ತೆ?”. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೊ ಭಾನುವಾರದ್ದು (ಜನವರಿ 22, 2023) ಎಂದು ಹೇಳಲಾಗುತ್ತಿದೆ.

ಆದರೆ, ಇದಕ್ಕೂ ಮುನ್ನ ಕರೀನಾ ಖಾನ್, ಪ್ರೇಕ್ಷಕರನ್ನೇ ಅವಮಾನಿಸುತ್ತ ನಮ್ಮ ಚಲನಚಿತ್ರಗಳನ್ನು ನೋಡಲು ಇಷ್ಟಪಡದವರು ನೋಡಬೇಡಿ, ಬಲವಂತ ಯಾರ್ ಮಾಡ್ತಿದಾರೆ? ಎಂದು ಹೇಳಿದ್ದರು. ಇಂಡಸ್ಟ್ರಿಯಲ್ಲಿ ನೆಪೊಟಿಸಂ (ಸ್ವಜನಪಕ್ಷಪಾತ) ಪ್ರಶ್ನೆಗೆ ಉತ್ತರಿಸಿದ್ದ ಅವರು, “ಪ್ರೇಕ್ಷಕರು ನೆಪೋಟಿಸಂ ನಿಂದ ಬಂದ ನಟ ನಟಿಯರನ್ನೇ ಸ್ಟಾರ್ ಗಳನ್ನಾಗಿ ಮಾಡಿದ್ದಾರೆ. ನೀವು ಚಲನಚಿತ್ರಗಳನ್ನು ವೀಕ್ಷಿಸಲು ಹೋಗದಿದ್ದರೆ ಹೋಗಬೇಡಿ. ಯಾರೂ ನಿಮ್ಮನ್ನು ಬಲವಂತ ಮಾಡಲ್ಲ” ಎಂದಿದ್ದರು.

Advertisement

‘ಲಾಲ್ ಸಿಂಗ್ ಛಡ್ಡಾ’ ಚಿತ್ರದ ಪ್ರೊಮೋಷನ್ ವೇಳೆ ಸೈಫ್ ಅಲಿಖಾನ್ ಅವರ ಬೇಗಂ ಕರೀನಾ ಖಾನ್, ಚಿತ್ರ ಚೆನ್ನಾಗಿದ್ದರೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತದೆ ಮತ್ತು ಎಲ್ಲರ ನಿರೀಕ್ಷೆಗಳನ್ನೂ ಸುಳ್ಳು ಮಾಡುತ್ತದೆ ಎಂದಿದ್ದರು. ಬಾಯ್‌ಕಾಟ್ ನಂತಹ ವಿಷಯಗಳು ಒಳ್ಳೆಯ ಚಿತ್ರದ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಅದನ್ನು (ಬಾಯ್‌ಕಾಟ್ ಟ್ರೆಂಡ್) ಜನ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಅವರು ಹೇಳಿದ್ದರು.

ಸೋಷಿಯಲ್ ಮೀಡಿಯಾ ಯೂಸರ್ ಗಳು ನಟಿಯ ಈ ವಿಷಯವನ್ನು ಇಂದಿಗೂ ಮರೆತಿಲ್ಲ. ಸೋಶಿಯಲ್ ಮೀಡಿಯಾ ಯೂಸರ್ ಗಳು ಕರೀನಾ ಖಾನ್ ರವರ ಎರಡೂ ಹೇಳಿಕೆಗಳ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು “ಕರೀನಾ ಕಪೂರ್ ಅವರ ‘ಮತ್ ದೇಖೋ ನಾ’ದಿಂದ ‘ಹಮ್ ಆಪ್ಕಾ ಮನೋರಂಜನ್ ಕೈಸೆ ಕರೆಂಗೆ’ ವರೆಗಿನ ಪ್ರಯಾಣವನ್ನು ಬರೆದಿದ್ದಾರೆ. ಬಾಲಿವುಡ್ ಜನರಿಗೆ ಮನರಂಜನೆ ನೀಡುತ್ತಿಲ್ಲ, ಬದಲಿಗೆ ಇದು ಸ್ವಜನಪಕ್ಷಪಾತ, ಹಿಂದೂ ಧರ್ಮದ ಮಾನಹಾನಿ, ಲಿಂಗ ಅಸಮಾನತೆ, ಡ್ರಗ್ಸ್, ದುರಹಂಕಾರಕ್ಕಿಂತ ಹೆಚ್ಚೇನೂ ಅಲ್ಲ ಎಂದು ಬರೆದಿದ್ದಾರೆ.

ಮತ್ತೊಬ್ಬ ಯೂಸರ್ ಕಮೆಂಟ್ ಮಾಡುತ್ತ, “ಪ್ರೇಕ್ಷಕರೇ ಇಲ್ಲದಿದ್ದರೆ ನಿಮ್ಮ ಕೆಲಸವಾದರೂ ಏನು? ಪ್ರೇಕ್ಷಕರೇ ಇಲ್ಲದಿದ್ದರೆ ಸ್ಟಾರ್ ಗಳ ಸ್ಟೇಟಸ್ ಏನು? ಪ್ರೇಕ್ಷಕರೇ ಇಲ್ಲದಿದ್ದರೆ ನೀವು ನಿಮ್ಮ ಈ ಭವ್ಯ ಜೀವನದ ಗತಿ ಏನಾಗುತ್ತೆ? ಪ್ರೇಕ್ಷಕರು ನೀವಿಲ್ಲದೆ ಬದುಕುತ್ತಾರೆ ಆದರೆ ಪ್ರೇಕ್ಷಕರಿಲ್ಲ ಅಂತಾದರೆ ನೀವು ಬದುಕೋಕೆ ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬ ಯೂಸರ್ ಕಮೆಂಟ್ ಮಾಡುತ್ತ, “ಈಗ ಆಂಟಿಯ ಸ್ವರವೇ ಬದಲಾಗಿದೆ. ಆದರೆ ನಿಮ್ಮ ಉದ್ದೇಶಗಳನ್ನ ಮರೆಯಬೇಡಿ ಗೆಳೆಯರೇ… ಸುಶಾಂತ್ ಸಿಂಗ್ ರಜಪೂತ ಗೆ ನ್ಯಾಯ ಸಿಗುವವರೆಗೂ #BoycottBollywoodForever” ಎಂದು ಬರೆದಿದ್ದಾರೆ.

“ಪ್ರತಿ ವರ್ಷ ಒಂದೊಂದು ಮಗುವನ್ನ ಹೆತ್ತು ಸೈಫ್‌ನ ಎಂಟರ್ಟೇನ್ಮೆಂಟ್ ಆಗ್ತಿದೆ ಹೊರತು ನಮ್ಮದಲ್ಲ” ಎಂದು @delhichatter ಎಂಬ ಯೂಸರ್ ಬರೆದುಕೊಂಡಿದ್ದಾರೆ.

ಅವಿನಾಶ್ ಪಾಟೀಲ್ ಎಂಬ ಯೂಸರ್, “ಎಂಟರ್ಟೇನ್ಮೆಂಟ್ ಬಾಲಿವುಡ್ಡೇ ಯಾಕೆ? ಎಂದರೆ ಮರಾಠಿ ಸಿನಿಮಾ, ಟಾಲಿವುಡ್ ಸಿನಿಮಾ, ಹಾಲಿವುಡ್ ಸಿನಿಮಾಗಳನ್ನೂ ನೋಡಬಹುದು” ಎಂದು ಕಮೆಂಟ್ ಮಾಡಿದ್ದಾರೆ.

ನಿಮ್ಮ ಕಚಡಾ ಸಿನಿಮಾಗಳು ಇಲ್ಲದಿದ್ದಲ್ಲಿ ನಮ್ಮಲ್ಲಿ ನಾಟಕ, ರಾಮಕಥೆ, ಭಜನೆ, ಭರತನಾಟ್ಯ ಅಥವಾ ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳು ಹೆಚ್ಚು ಇರುತ್ತಿದ್ದವು ಎಂದು ಮತ್ತೊಬ್ಬ ಯೂಸರ್ ಬರೆದಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ನಿಧನರಾದಾಗಿನಿಂದಲೂ, ಬಾಲಿವುಡ್ ಚಿತ್ರಗಳನ್ನು ನಿಷೇಧಿಸಲು ಮತ್ತು ಅವುಗಳನ್ನು ಬಾಯ್‌ಕಾಟ್ ಮಾಡುವ ಟ್ರೆಂಡ್ ನಿರಂತರವಾಗಿ ಹೆಚ್ಚುತ್ತಲೇ ಇದೆ. ಬಾಲಿವುಡ್‌ನ ದೊಡ್ಡ ಸ್ಟಾರ್‌ಗಳ ಬಗ್ಗೆಯೂ ಜನರಲ್ಲಿ ಸಾಕಷ್ಟು ಕೋಪ ಕಂಡುಬಂದಿದೆ. ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಮೀರ್ ಖಾನ್ ಸೇರಿದಂತೆ ಹಲವು ದೊಡ್ಡ ಸ್ಟಾರ್ ಗಳ ಚಿತ್ರಗಳು ಬಾಯ್‌ಕಾಟ್ ಆಗಿ ಮಕಾಡೆ ಮಲಗು ಇದೇ ಕಾರಣ. ಇತ್ತೀಚಿನ ದಿನಗಳಲ್ಲಿ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರವನ್ನೂ ಬಹಿಷ್ಕರಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.

‘ಬೇಷರಂ ರಂಗ್’ ಹಾಡು ಬಿಡುಗಡೆಯಾದಾಗಿನಿಂದಲೂ ಚಿತ್ರ ವಿವಾದದ ಸುಳಿಯಲ್ಲಿ ಸಿಲುಕಿತ್ತು. ಇದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದನ್ನು ಜನ ವಿರೋಧಿಸಿದ್ದರು. ಇದಕ್ಕೆ ಹಿಂದೂ ಸಂಘಟನೆಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು. ಚಲನಚಿತ್ರಗಳ ಮೂಲಕ ಬಾಲಿವುಡ್ ಸನಾತನ ಧರ್ಮವನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿದ್ದರು.

Advertisement
Share this on...