“ನಿಕಾಹ್ ಮಾಡಿಕೊಳ್ತೀನಿ ನಿನ್ನ ಗಂಡನಿಗೆ ತಲಾಕ್ ಕೊಡು” ಎಂದು ಬಳಿಕ ಹಿಂದೂ ಯುವತಿಯ ರೇ-ಪ್ ಮಾಡಿ ಎಸ್ಕೇಪ್ ಆದ #ಮೊಹಮ್ಮದ್_ಇಮ್ರಾನ್… “ಬುರ್ಖಾದಲ್ಲಿ ನನಗೆ….”, ಕಣ್ಣೀರಿಟ್ಟ ಹಿಂದೂ ಯುವತಿ

in Uncategorized 2,000 views

ದೇಶದ ರಾಜಧಾನಿ ದೆಹಲಿಯಿಂದ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಐಟಿ ಸೆಕ್ಷರ್‌ನಲ್ಲಿ ಕೆಲಸ ಮಾಡುತ್ತಿರುವ ಹಿಂದೂ ಮಹಿಳೆಯೊಬ್ಬರು ಮೊಹಮ್ಮದ್ ಇಮ್ರಾನ್ ಎಂಬ ಯುವಕ ತನ್ನ ಮೇಲೆ ಅ ತ್ಯಾ ಚಾ ರ ವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಇಮ್ರಾನ್ ನೀಡಿದ ಜೀವ ಬೆದರಿಕೆಯಿಂದ ಪತಿಯಿಂದ ವಿಚ್ಛೇದನ ಪಡೆದಿದ್ದೇನೆ ಎಂದು ಮಹಿಳೆ ಹೇಳುತ್ತಾರೆ. ದೆಹಲಿ ಪೊಲೀಸರು ನವೆಂಬರ್ 29, 2022 ರಂದು ಈ ವಿಷಯದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ತಾನು ತುಂಬಾ ಭಯಭೀತಳಾಗಿದ್ದೇನೆ ಎಂದು ಹೇಳಿರುವ ಸಂತ್ರಸ್ತೆ, ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎಂದು ಹೇಳಿದ್ದಾರೆ.

Advertisement

ಘಟನೆಯ ಕುರಿತು ದೆಹಲಿ ಪೊಲೀಸರ ಮೈದಾನ್ ಗಢಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಸಂತ್ರಸ್ತೆ ಇಮ್ರಾನ್ ಜೊತೆಗಿನ ಸ್ನೇಹ 11 ವರ್ಷ ಹಳೆಯದು ಎಂದು ಹೇಳಿದ್ದಾರೆ. ನೋಯ್ಡಾದಲ್ಲಿ ಕೋಚಿಂಗ್ ಸಮಯದಲ್ಲಿ ಇಬ್ಬರೂ ಭೇಟಿಯಾಗಿದ್ದರು. 2018 ರಲ್ಲಿ, ಅವರು ಅಭಿಷೇಕ್ ಎಂಬ ಯುವಕನನ್ನು ಮದುವೆಯಾಗುತ್ತಾರೆ. ಏತನ್ಮಧ್ಯೆ, ಇಮ್ರಾನ್ ನೊಂದಿಗೂ ಸ್ನೇಹವನ್ನು ಉಳಿಸಿಕೊಂಡಿದ್ದರು. ಸ್ವಲ್ಪ ಸಮಯದ ನಂತರ, ಸಂತ್ರಸ್ತೆಯ ಪತಿ ಅಭಿಷೇಕ್‌ಗೆ ಬಿಹಾರದಲ್ಲಿ ಕೆಲಸ ಸಿಗುತ್ತದೆ ಮತ್ತು ಆಗ ಇಮ್ರಾನ್ ಸಂತ್ರಸ್ತೆಯನ್ನ‌ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೇನೆ ಎಂದು ಮಾತನಾಡಲು ಪ್ರಾರಂಭಿಸುತ್ತಾನೆ.

ಯುವತಿ ನೀಡಿದ ದೂರಿನಲ್ಲಿ, ಇಮ್ರಾನ್ ತನ್ನ ಪತಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಲು ಪ್ರಾರಂಭಿಸಿದನು ಎಂದು ಮಹಿಳೆ ಆರೋಪಿಸಿದ್ದಾರೆ. ಒಂದು ವೇಳೆ ಹಾಗೆ ಮಾಡದಿದ್ದರೆ ಕೊ-ಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾನೆ. ಜೂನ್ 12, 2021 ರಂದು, ಇಮ್ರಾನ್ ದೆಹಲಿಯ ಛತ್ತರ್‌ಪುರದಲ್ಲಿರುವ ಮಹಿಳೆಯ ಮನೆಗೆ ಬಂದರು. ಇಲ್ಲಿ ಸಂತ್ರಸ್ತೆಯ ಒಪ್ಪಿಗೆಯಿಲ್ಲದೆ ಬ ಲ ವಂ ತ ವಾಗಿ ಅ ತ್ಯಾ‌ ಚಾ ರ ವೆಸಗಿದ್ದಾನೆ. ಮಹಿಳೆ ಅಳಲು ಮತ್ತು ವಿರೋಧ ವ್ಯಕ್ತಪಡಿಸಲು ಮುಂದಾದಾಗ, ಅವನು ಸಂತ್ರಸ್ತೆಯನ್ನ ನಿಕಾಹ್ ಮಾಡಿಕೊಂಡು ತನ್ನ ಹೆಂಡತಿಯಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದನು. ಈ ವೇಳೆ ಸುಮಾರು 4 ದಿನಗಳ ಕಾಲ ಇಮ್ರಾನ್ ಆಕೆಯ ಮನೆಯಲ್ಲೇ ತಂಗಿದ್ದನು.

ಈ ನಡುವೆ ಪತಿಯಿಂದ ಮಹಿಳೆಗೆ ವಿಚ್ಛೇದನಕ್ಕೆ ಕೊನೆಯ ದಿನಾಂಕ ಬಂದಿತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಪತಿ-ಪತ್ನಿ ನಡುವೆ ವಿಚ್ಛೇದನ ಖಚಿತವಾದ ತಕ್ಷಣ ಇಮ್ರಾನ್ ಆಕೆಯನ್ನು ಬ್ಲಾಕ್ ಮಾಡಿದ್ದಾನೆ. ಅಂದಿನಿಂದ ಇಮ್ರಾನ್ ಆಕೆಯನ್ನ ಭೇಟಿಯಾಗಿಲ್ಲ. ಸಂತ್ರಸ್ತೆಯ ಪ್ರಕಾರ, ಇಮ್ರಾನ್ ಮೀರತ್ ನಿವಾಸಿ. ಆತ ನೋಯ್ಡಾದ ಸೆಕ್ಟರ್ 59 ರಲ್ಲಿರುವ ಐಟಿ ಕಂಪನಿಯಾದ ಆರ್ ಸಿಸ್ಟಂನಲ್ಲಿ ಕೆಲಸ ಮಾಡುತ್ತಿದ್ದಾನೆ. ಎಫ್‌ಐಆರ್‌ ದಾಖಲಾದ ನಂತರವೂ ಕಂಪನಿ ಆತನನ್ನ ಕೆಲಸದಿಂದ ವಜಾಗೊಳಿಸಿಲ್ಲ ಎಂದು ಆರೋಪಿಸಲಾಗಿದೆ.

ಬುರ್ಖಾ ಹಾಕಿಕೊಂಡು ಫೋಟೋ ಕಳಿಸು ಎನ್ನುತ್ತಿದ್ದ ಇಮ್ರಾನ್

ಮಾಧ್ಯಮಗಳ ಜೊತೆ ಮಾತನಾಡಿದ ಸಂತ್ರಸ್ತೆ, ಮೊದಲ ಎಫ್‌ಐಆರ್ ಹೆಸರಿನಲ್ಲಿ ಪೊಲೀಸರು ತನ್ನನ್ನು ವಿವಿಧ ಪೊಲೀಸ್ ಠಾಣೆಗಳಲ್ಲಿ ಸಾಕಷ್ಟು ಓಡಾಡುವಂತೆ ಮಾಡಿದರು. ನಂತರ ಪ್ರಕರಣ ದಾಖಲಾಗಿ 20 ದಿನಗಳು ಕಳೆದರೂ ಇಮ್ರಾನ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಬುರ್ಖಾ ಧರಿಸಿರುವ ಫೋಟೋಗಳನ್ನ ಕಳುಹಿಸುವಂತೆ ಇಮ್ರಾನ್ ಆಗಾಗ್ಗೆ ಕೇಳುತ್ತಿದ್ದ ಎಂದು ಸಂತ್ರಸ್ತೆ ಹೇಳಿದ್ದಾರೆ. ಸಂತ್ರಸ್ತೆ ನಮಗೆ ಮೊದಲು ಹಿಂದೂ-ಮುಸ್ಲಿಂ ಎಂಬುದರಲ್ಲಿ ನಂಬಿಕೆ ಇರಲಿಲ್ಲ, ಆದರೆ ಈಗ ಮುಸ್ಲಿಂ ಗ್ಯಾಂಗ್ ಹಿಂದೂ ಹುಡುಗಿಯರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಸಂತ್ರಸ್ತೆ ಭಾವಿಸುತ್ತಾಳೆ. ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376 (2) ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಹಿಳೆಯನ್ನ ಬೆಂಗಳೂರಿಗೆ ಕರೆದೊಯ್ಯುವ ಪ್ಲ್ಯಾನ್ ಇತ್ತು

ಸಂತ್ರಸ್ತೆ ಇಮ್ರಾನ್ ಜೊತೆಗಿನ ತನ್ನ ವಾಟ್ಸಾಪ್ ಚಾಟ್‌ಗಳನ್ನೂ ತೋರಿಸಿದ್ದಾಳೆ. ಈ ಚಾಟಿಂಗ್‌ನಲ್ಲಿ, ಇಮ್ರಾನ್ ತನ್ನ ಸಹೋದರಿಯರ ಮದುವೆ ಮಾಡೋದಿದೆ ಸ್ವಲ್ಪ ವೇಟ್ ಮಾಡು ಎಂದು ಮದುವೆಯನ್ನ ಮುಂದೂಡಿದ್ದ. ಸ್ವಲ್ಪ ಸಮಯದ ನಂತರ ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇನೆ ಎಂದೂ ಇಮ್ರಾನ್ ಹೇಳಿದ್ದ. ಆತ ತನ್ನ ಮತ್ತು ಸಂತ್ರಸ್ತೆ ಇಬ್ಬರ ನಡುವಿನ ಯಾವುದೇ ರೀತಿಯ ರಿಲೇಶನ್ಶಿಪ್ ಗಳ ಫೋಟೋ ಅಥವ ಪೋಸ್ಟ್ ಗಳನ್ನ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲೇಬೇಡ ಎಂದು ಹೇಳಿದ್ದ ಎಂದು ಸಂತ್ರಸ್ತ ಯುವತಿ ತಿಳಿಸಿದ್ದಾಳೆ.

Advertisement
Share this on...