“ನಿಮ್ಮ ವೋಟುಗಳು ನಷ್ಟವಾಗಲಿ ಆದರೆ ಆ ಅಂಬೇಡ್ಕರಗೆ ಮಾತ್ರ ನಿಮ್ಮ ಮತ ಹಾಕಬೇಡಿ”, ಹೀಗೆ ಯಾರು ಹೇಳಿದ್ದರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 1,833 views

ನಿಮ್ಮ ವೋಟುಗಳು ನಷ್ಟವಾಗಲಿ ಆದರೆ ಅಂಬೇಡ್ಕರಗೆ ಮಾತ್ರ ನಿಮ್ಮ ಮತ ಹಾಕಬೇಡಿ ಅಂತ 1952 ರಲ್ಲಿ CPI (Communist Party of India) ಸಂಸ್ಥಾಪಕ ಸದಸ್ಯ ಅಂಬೇಡ್ಕರ್ ವಿ’ರುದ್ಧ ಪ್ರಚಾರ ಮಾಡಿದ್ದ.

Advertisement

ಹೀಗೆ ಹೇಳಿದ್ದು ಕಮ್ಯುನಿಸ್ಟ್ ಪಾರ್ಟಿಯ ಸಂಸ್ಥಾಪಕ ಸದಸ್ಯ, ಆತನ ಅಮಿತ್ ಡಾಂಗೆ ಅಂತ. ಈತನ ಈ ಕರೆಯಿಂದ ಸೆಂಟ್ರಲ್ ಬಾಂಬೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಡಾ.ಅಂಬೇಡ್ಕರ್‌ರವರು ಕಾಂಗ್ರೆಸ್ಸಿನ ನಾರಾಯಣ್ ಕಜ್ರೋಲ್ಕರ್ ಅವರ ಎದುರು 15 ಸಾವಿರ ಮತಗಳ ಅಂತರದಲ್ಲಿ ಸೋಲನುಭವಿಸಬೇಕಾಯಿತು.

ಇತಿಹಾಸದ ಪುಟ ತಿರುವಿ ನೋಡಿದರೂ ಸರಿ ವರ್ತಮಾನದ ಕಮ್ಯುನಿಸ್ಟ್‌ರ ವರ್ತನೆಯನ್ನ ಗಮನಿಸಿಯಾದರು ನೋಡಿ, ನಿಮಗೆ ಸ್ಪಷ್ಟವಾಗಿ ಕಾಣದಿದ್ದರೂ ದ-ಲಿ-ತ-ರನ್ನ ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಅನ್ನೋದು ಅರ್ಥವಾಗುತ್ತೆ. ತಾವು ದೇವರಂತ ಪೂಜಿಸೋ ಅಂಬೇಡ್ಕರ್‌ರವರನ್ನ ಕಮ್ಯುನಿಸ್ಟರು ಕಾಂಗ್ರೆಸ್ಸಿಗರು ಯಾವ ರೀತಿಯಲ್ಲಿ ಅವಮಾನ ಮಾಡಿದ್ದರು ಯಾವ ರೀತಿ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದರು ಅನ್ನೋದು ದಲಿತ ಬಂಧುಗಳಿಗೆ ಬಹುಶಃ ಗೊತ್ರಿಲ್ಲದೆಯೇ ಕಾಂಗ್ರೆಸ್ ಕಮ್ಯುನಿಸ್ಟ್ ಪಕ್ಷಗಳ ಬೆಂಬಲಕ್ಕೆ ಈಗಲೂ ನಿಂತಿದ್ದಾರೆ ಅನ್ಸತ್ತೆ.

ಅಂಬೇಡ್ಕರ್‌ರವರ ಆದರ್ಶಗಳನ್ನ ತತ್ವಸಿದ್ಧಾಂತಗಳನ್ನ ಚಾಚೂ ತಪ್ಪದೆ ಪಾಲಿಸುತ್ತೇವೆ ಅನ್ನೋ ಸೋ ಕಾಲ್ಡ್ ದಲಿತವಾದಿಗಳು ಬಹುಶಃ ಅಂಬೇಡ್ಕರರ ಜೀವನ ಚರಿತ್ರೆಯ ಬಗ್ಗೆ ಹಾಗು ಅವರ ಆಡಿದ್ದ ಮಾತುಗಳನ್ನ ಓದಿರೋದೆ ಇಲ್ಲ ಅನಿಸುತ್ತೆ. ಹಾಗೇನಾದರೂ ಓದಿದ್ದರೆ ಅಂಬೇಡ್ಕರ್’ರವರು ಹೇಳಿದ್ದ “ಇತಿಹಾಸವನ್ನ ಯಾರು ಮರೆಯುತ್ತಾರೋ ಆತ ಇತಿಹಾಸ ಸೃಷ್ಟಿಸಲಾರ” ಅನ್ನೋ ಮಾತನ್ನ ಪಾಲಿಸಿ ಸ್ವಲ್ಪ ಇತಿಹಾಸದ ಬಗ್ಗೆ ಗಮನಹರಿಸಿರುತ್ತಿದ್ದರೇನೋ.

ಕಮ್ಯುನಿಸ್ಟ್ ಪಾರ್ಟಿಯನ್ನ, ಕಾಂಗ್ರೆಸ್ಸನ್ನ ಅಥವ ಅವರ ಯಾವ ಸಿದ್ಧಾಂತಗಳನ್ನೂ ಅಂಬೇಡ್ಕರ್ ಒಪ್ಪಿರಲಿಲ್ಲ ಆದರೆ ಇಂದು “ನಾವು ಬಾಬಾಸಾಹೇಬ್ ಅಂಬೇಡ್ಕರರ ಅನುಯಾಯಿಗಳು” ಅನ್ನೋರು ಮಾತ್ರ ಎಗ್ಗಿಲ್ಲದೆ ಕಾಂಗ್ರೆಸ್ & ಕಮ್ಯುನಿಸ್ಟರನ್ನ ಈಗಲೂ ಬೆಂಬಲಿಸುತ್ತಾರೆ

ಅಂಬೇಡ್ಕರರ ಸಿದ್ಧಾಂತಗಳನ್ನ ಕಟುವಾಗಿ ವಿರೋಧಿಸಿದ್ದ/ಈಗಲೂ ವಿರೋಧಿಸುವ ಕಮ್ಯುನಿಸ್ಟ್ ಪಾರ್ಟಿಯವರಿಗೆ ಈಗ ಅದೇನೋ ಅಂಬೇಡ್ಕರರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಅದಕ್ಕೆ ತಾನೇ ‘ಆಜಾದಿ’ ಘೋಷಣೆ ಕೂಗುವ ಕನ್ಹಯ್ಯ ಒಬ್ಬ ಕಾಮ್ರೇಡ್ (ಕಮ್ಯುನಿಸ್ಟ್) ಆದರೂ ಕೂಡ ಮಾತು ಮಾತಿಗೆ ‘ಲಾಲ್ ಸಲಾಂ’ ಜೊತೆ ಜೊತೆಗೆ ಅಂಬೇಡ್ಕರರ ಹೆಸರನ್ನೂ ಉಲ್ಲೇಖಿಸೋದು.

ಹಿಂದೂ ಧರ್ಮ ಬಿಟ್ಟು ಬೌದ್ಧ ಧಮ್ಮ ಸ್ವೀಕರಿಸಿದ್ದ ಡಾ.ಅಂಬೇಡ್ಕರ್:

ಹೌದು,ಅಂಬೇಡ್ಕರ್ ತಮ್ಮ ಜೀವಿತಾವಧಿಯ ಕೊನೆಯ ಘಳಿಗೆಯಲ್ಲಿ ಹಿಂದೂಧರ್ಮವನ್ನು ಬಿಟ್ಟು ನಮ್ಮದೇ ಸೋದರ ಮತವಾದ ಬೌದ್ಧಮತವನ್ನು ಅಪ್ಪಿಕೊಂಡರು. ಆದರೆ ನೆನಪಿರಲಿ, ತಾನು ಹಿಂದೂ ಧರ್ಮವನ್ನು ತ್ಯಜಿಸುತ್ತಿದ್ದೇನೆ ಎಂಬ ವಿಷಯ ಮಿಷನರಿಗಳು ಮತ್ತು ಮುಲ್ಲಾಗಳ ಕಿವಿಗೆ ಬಿದ್ದಾಗ ಅವರು ಅಂಬೇಡ್ಕರ್ ಕೈಕಾಲು ಹಿಡಿದಿದ್ದರು ನಮ್ಮ ಮತಕ್ಕೆ ಮತಾಂತರವಾಗಿರೆಂದು. ಆದರೆ ಅಂಬೇಡ್ಕರ್ ಯಾವುದೇ ಲಾಬಿಗೂ ಬಲಿಯಾಗದೆ ಬೌದ್ಧಮತವನ್ನು ಅಪ್ಪಿಕೊಂಡರು.

ಯಾಕೆ ಹಾಗೆ ಮಾಡಿದರು.? ಯಾಕೆಂದರೆ ಅಂಬೇಡ್ಕರ್ ಈಗಿನವರ ಹಾಗೆ ಅಲ್ಪಸಂಖ್ಯಾತರನ್ನು ನೆಕ್ಕುವ ‘ಬುದ್ದಿಜೀವಿ’ಯಾಗಿರಲಿಲ್ಲ,ಬದಲಿಗೆ ಅವರೊಬ್ಬ ‘ಜ್ಞಾನಜೀವಿ’ಯಾಗಿದ್ದರು. ತನ್ನ ಪರಿಕಲ್ಪನೆಯ ಹಿಂದೂಧರ್ಮಕ್ಕಿಂತ ಇಸ್ಲಾಮ್ ಮತ್ತು ಕ್ರೈಸ್ತಮತಗಳು ಅತ್ಯಂತ ಅಪಾಯಕಾರಿ ಎಂಬ ವಾಸ್ತವ ಸಂಗತಿ ಅವರಿಗೆ ಗೊತ್ತಿತ್ತು.ಈ ಕಾರಣಕ್ಕಾಗಿಯೇ ಅವರು ತನ್ನ ಮತಾಂತರದಿಂದ ಆಗಬಹುದಾದ ಮತ್ತೊಂದು ಧಾರ್ಮಿಕ ವಿಪ್ಲವದಿಂದ ನಮ್ಮನ್ನು ಉಳಿಸಿದರು.

ಭಾರತ ಧರ್ಮದ ಆಧಾರದಲ್ಲಿ ತುಂಡಾಗುವುದಾದರೆ ಇಲ್ಲಿರುವ ಎಲ್ಲಾ ಮುಲ್ಲಾಗಳನ್ನು ಮುಲಾಜಿಲ್ಲದೆ ಪಾಕಿಗೆ ಅಟ್ಟಬೇಕೆಂದವರು ಅವರು. ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡಿ ಆ ಭಾಷೆಗೆ ರಾಷ್ಟ್ರ ಭಾಷೆಯಾಗುವ ಎಲ್ಲಾ ಅರ್ಹತೆಯಿದೆಯೆಂದವರು ಇದೇ ಅಂಬೇಡ್ಕರ್.

ಹಿಂದೂ ಮತ್ತು ಬೌದ್ಧದೇವಾಲಯಗಳ ಮೇಲೆ ಮು-ಸ್ಲಿಂ ಆ-ಕ್ರ-ಮ-ಣ-ಕಾ-ರರ ಮತೀಯ ದಾ-ಳಿ-ಗಳನ್ನು ತಮ್ಮ ಬರವಣಿಗೆಯಲ್ಲಿ ಬಯಲುಗೊಳಿಸಿದವರು ಕೂಡ ಇದೇ ಅಂಬೇಡ್ಕರ್. ಮು-ಸ್ಲಿಂ ತುಷ್ಟೀಕರಣ ಮಾಡದ, ಯಾರಿಗೋ ನೋವಾಗುತ್ತದೆಯೆಂದು ಸತ್ಯವನ್ನು ನುಂಗಿಕೊಳ್ಳದೇ ತೆರೆದಿಟ್ಟು “ನಾನು ಮೊದಲು ಭಾರತೀಯ ಆಮೇಲೂ ಭಾರತೀಯ”ನೆಂದ ರಾಷ್ಟ್ರಭಕ್ತ ಅಂಬೇಡ್ಕರ್ ನನಗೆ ಗಾಂಧಿ, ನೆಹರುಗಿಂತಲೂ ಸರ್ವಶ್ರೇಷ್ಠ ವ್ಯಕ್ತಿ..!

ಅನಿವಾರ್ಯತೆ ಇರುವವರೆಗೆ ಅಂದರೆ ಸೀಮಿತ ಅವಧಿಗೆ ಮಾತ್ರ ಮೀಸಲಾತಿ ಕೊಡಿಸಿದ ಅಂಬೇಡ್ಕರ್ ರನ್ನು ನಾವು ಅರ್ಥ ಮಾಡಿಕೊಂಡದ್ದಕ್ಕಿಂತ ಅಪಾರ್ಥ ಮಾಡಿಕೊಂಡಿರೋದೇ ಹೆಚ್ಚು..!

ಇತಿಹಾಸದ ಅರಿವಿರದ ಮೂರ್ಖರು & ಸ್ವಘೋಷಿತ ಸೆಕ್ಯೂಲರ್ ಜನರು ಕನ್ಹಯ್ಯ, ಉಮರ್ ಖಾಲೀದ್ ನಂತಹ ಕಾಮ್ರೇಡ್’ಗಳನ್ನ ಹೀರೋ ಮಾಡಲು ಹೊರಟಿದ್ದಾರೆ. ಇತಿಹಾಸವನ್ನ ಇವರು ತಿಳಿದುಕೊಳ್ಳುವ ಗೋಜಿಗೆ ಇವರಂತೂ ಹೋಗಲ್ಲ ಆದರೆ ಹಾಗಂತ ಇವರನ್ನ ನಾವೂ ಬಿಡಲ್ಲ. ಸತ್ಯವನ್ನ ಇವರೆದುರು ಬಿಚ್ಚಿಡುತ್ತಲೇ ಇರುತ್ತೇವೆ.

– Vinod Hindu Nationalist, Sunil kumar (sklines)

Advertisement
Share this on...