ಉತ್ತರ ಪ್ರದೇಶದ ಬರೇಲಿಯಲ್ಲಿ ಮದುವೆ ಮುರಿದು ಬಿದ್ದ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಯುವಕನ ಮೈಬಣ್ಣ ಮತ್ತು ಶಿಕ್ಷಣವನ್ನು ಪ್ರಶ್ನಿಸಿ ಯುವತಿ ಆತನನ್ನ ಮದುವೆಯಾಗಲು ನಿರಾಕರಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಯುವತಿಯ ಕಡೆಯವರು ಹ-ಲ್ಲೆ ನಡೆಸಿ ತಮ್ಮ ವಸ್ತುಗಳನ್ನೆಲ್ಲಾ ಕಸಿದುಕೊಂಡಿದ್ದಾರೆ ಎಂದು ಯುವಕನ ಸಂಬಂಧಿಕರು ಆರೋಪಿಸಿದ್ದಾರೆ.
ಆಜ್ ತಕ್ ನ ವರದಿಯ ಪ್ರಕಾರ, ಈ ಘಟನೆ ಸುಮಾರು ಆರು ತಿಂಗಳ ಹಳೆಯದು. ದೆಹಲಿಯ ನಿಹಾಲ್ ವಿಹಾರ್ ಪ್ರದೇಶದ ನಿವಾಸಿ ದುರ್ಗಾ ಪ್ರಸಾದ್ ಅವರ ವಿವಾಹವು ಉತ್ತರಪ್ರದೇಶದ ಬರೇಲಿಯ ಯುವಕನೊಂದಿಗೆ ನಿಶ್ಚಯವಾಗಿತ್ತು. ಯವಕನ ಸಂಬಂಧಿಕರು ಬಳಿಕ ಯುವತಿಯ ಮನೆಗೆ ಬಂದರು. ಬಳಿಕ ಯುವತಿ, “ನೀನು ನೋಡಲು ಚೆನ್ನಾಗಿಲ್ಲ, ನೀನು ಹೆಚ್ಚು ವಿದ್ಯಾವಂತನೂ ಅಲ್ಲ ನಿನ್ನ ಮೈಬಣ್ಣ ಕಪ್ಪಾಗಿದೆ. ಮದುವೆಯ ನಂತರ ನನ್ನ ಸ್ನೇಹಿತರು ನನ್ನನ್ನು ಗೇಲಿ ಮಾಡುತ್ತಾರೆ” ಎಂದಳು. ಯುವತಿ ತಾನು ಮದುವೆಯಾಗುವ ವರನಿಗೆ ಬೆದರಿಕೆ ಹಾಕುತ್ತ, “ನೀನು ಈ ಮದುವೆಯನ್ನು ನಿರಾಕರಿಸದಿದ್ದರೆ, ನಾನು ಮದುವೆಯ ನಂತರ ಓಡಿಹೋಗುತ್ತೇನೆ. ಆಗ ನೀನು ಮತ್ತು ನಿಮ್ಮ ಕುಟುಂಬದ ಸದಸ್ಯರ ಮಾನ ಹರಾಜಾಗುತ್ತೆ. ನೀನೇ ಮದುವೆಯನ್ನು ನಿರಾಕರಿಸಿದರೆ ಉತ್ತಮ” ಎಂದಿದ್ದಾಳೆ.
ಹುಡುಗಿಯ ಮಾತು ಕೇಳಿ ಆ ಹುಡುಗನ ಒಂದು ಕ್ಷಣ ದಂಗಾಗಿಬಿಟ್ಟ. ತನ್ನ ಮತ್ತು ತನ್ನ ಕುಟುಂಬದ ಮಾನ ಹರಾಜಾಗಗುವುದನ್ನ ತಪ್ಪಿಸಲು ಆತ ಆ ಯುವತಿಯನ್ನ ಮದುವೆಯಾಗಲು ನಿರಾಕರಿಸಿದನು. ವರನು ಮದುವೆಯಾಗಲು ನಿರಾಕರಿಸಿದ ತಕ್ಷಣ ಯುವತಿಯ ಸಂಬಂಧಿಕರು ಕೋಪಗೊಂಡರು. ವರನ ಕಡೆಯವರೊಂದಿಗೆ ಯುವತಿಯ ಕಡೆಯವರು ಅನುಚಿತವಾಗಿ ವರ್ತಿಸಿದ್ದಾರೆ ಹಾಗು ಮನೆಯಲ್ಲಿದ್ದ ಅವರ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲ, ಯುವತಿಯ ಸೋದರ ಮಾವ ವರನ ಕಡೆಯವರಿಗೆ ಬೆದರಿಕೆ ಹಾಕಿ ಬಾಯಿಗೆ ಬಂದಂತೆ ಬೈದಿದ್ದಾರೆ ಎಂಬ ಆರೋಪವೂ ಇದೆ. ಈ ನಡುವೆ ಎರಡೂ ಕಡೆಯ ಜನರು ವಿವಾದ ಬಗೆಹರಿಸಲು ಯತ್ನಿಸಿದರೂ ಕೈಗೂಡಲಿಲ್ಲ ಎಂದು ಹೇಳಲಾಗುತ್ತಿದೆ. ವಧುವಿನ ಸಂಬಂಧಿಕರು ವರನ ಕಡೆಯಿಂದ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಹಣ ನೀಡದಿದ್ದಕ್ಕೆ ವಧುವಿನ ಕಡೆಯವರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸಂಬಂಧಿಕರ ಮಾತುಕತೆಯಿಂದ ಸಮಸ್ಯೆ ಬಗೆಹರಿಯದಿದ್ದಾಗ ವರನ ಕಡೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಎರಡೂ ಕಡೆಯಿಂದ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:
ಮದುವೆಯಾಗುತ್ತಿಲ್ಲ ಲೇಟ್ ಆಗ್ತಿದೆ ಅಂತ ತನ್ನ ಪ್ರೈವೆಟ್ ಪಾರ್ಟ್ನ್ನೇ ಕ-ತ್ತ-ರಿಸಿಕೊಂಡ ಇರ್ಫಾನ್: ಮುಂದಾಗಿದ್ದೇನು ನೋಡಿ
ನೇಪಾಳದಲ್ಲಿ ಬಿಹಾರದ ಯುವಕನೊಬ್ಬ ತನ್ನ ಪ್ರೈವೇಟ್ ಪಾರ್ಟ್ನ್ನೇ ಕ-ತ್ತ-ರಿಸಿಕೊಂಡಿದ್ದಾನೆ. ಮದುವೆಯಾಗುತ್ತಿಲಗಲ್ಲ, ಲೇಟ್ ಆಗುತ್ತಿದೆ ಎಂಬ ಕಾರಣಕ್ಕೆ ಈ ರೀತಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈತನನ್ನು ಇರ್ಫಾನ್ ಶೇಖ್ ಎಂದು ಗುರುತಿಸಲಾಗಿದೆ. ಈತ ಬೇತಿಯಾದ ಸಾಠಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲ ಬರ್ವಾ ಗ್ರಾಮದ ನಿವಾಸಿಯಾಗಿದ್ದು ನೇಪಾಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಈ ಘಟನೆಯ ಬಗ್ಗೆ ನೇಪಾಳ ಪೊಲೀಸರಿಂದ ಮಾಹಿತಿ ಪಡೆದ ನಂತರ, ಸಂಬಂಧಿಕರು ಆತನನ್ನ ಮನೆಗೆ ಕರೆತಂದರು. ಸದ್ಯ ಇರ್ಫಾನ್ನ್ನ ಬೇತಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಆತನ ಸ್ಥಿತಿ ಸುಧಾರಿಸುತ್ತಿದೆ. ಘಟನೆ ನಡೆದು 4 ದಿನಗಳು ಕಳೆದಿದೆ ಎನ್ನಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಬಡತನ, ಮದುವೆ ವಿಳಂಬ ಮತ್ತು 5 ಹಿರಿಯ ಹೆಣ್ಣುಮಕ್ಕಳ ಮದುವೆಯಾಗದಿರುವುದೇ ಕಾರಣ ಎಂದು ಇರ್ಫಾನ್ ತಾಯಿ ಹೇಳಿದ್ದಾರೆ. ತಾನು ಮೊದಲು ತನ್ನ 5 ಹಿರಿಯ ಹೆಣ್ಣುಮಕ್ಕಳನ್ನು ಮದುವೆ ಮಾಡಿಸಲು ಬಯಸಿದ್ದಳು. ಇದರಿಂದಾಗಿ ಇರ್ಫಾನ್ ಮದುವೆ ತಡವಾಗುತ್ತಿತ್ತು. ಆತ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾನೆ ಅಂತ ಗೊತ್ತಿದ್ದರೆ ಮೊದಲು ಆತನದ್ದೇ ಮದುವೆ ಮಾಡಿಸುತ್ತಿದ್ದೆ ಎಂದು ಇರ್ಫಾನ್ ತಾಯಿ ಹೇಳಿದ್ದಾರೆ.
ಇರ್ಫಾನ್ ಗಾಯಗೊಂಡಿರುವ ಬಗ್ಗೆ ನೇಪಾಳ ಪೊಲೀಸರು ಆತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಇರ್ಫಾನ್ ನೇಪಾಳದ ಪೋಖರಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ. ಆತನ ತಂದೆ ಇಂತೇಜಾರ್ ಶೇಖ್ ಅವರ ಪ್ರಕಾರ, ಆತ ಮನೆಗೆ ಬರುವ ಬಗ್ಗೆ ಕರೆ ಮಾಡಿ ತಿಳಿಸಿದ್ದ. ಆದರೆ ಮರುದಿನವೇ ಆತ ತನ್ನ ಖಾಸಗಿ ಅಂಗವನ್ನು ಕ-ತ್ತ-ರಿಸಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ. ಆತನನ್ನ ನೇಪಾಳದ ಬಿರ್ಗುಂಜ್ನಲ್ಲಿರುವ ನಾರಾಯಣಿ ಆಸ್ಪತ್ರೆಯಿಂದ ಬಿಹಾರದ ಬೇತಿಯಾ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಆತನನ್ನು ಕರೆದುಕೊಂಡು ಹೋಗಲು ಸಂಬಂಧಿಕರು ನೇಪಾಳದ ಆಸ್ಪತ್ರೆಗೆ ಹೋದಾಗ ಅಲ್ಲಿಂದ ಆತ ಓಡಿ ಹೋಗಿದ್ದ ಎಂದು ಹೇಳಲಾಗುತ್ತಿದೆ. ಸಾಕಷ್ಟು ಹುಡುಕಾಟದ ನಂತರ, ಆತ ಇಂಡೋ-ನೇಪಾಳ ಅಂತರಾಷ್ಟ್ರೀಯ ಗಡಿಯಲ್ಲಿರುವ ರಕ್ಸಾಲ್ ಬಳಿ ಪತ್ತೆಯಾಗಿದ್ದ. ಕುಟುಂಬಸ್ಥರು ಇರ್ಫಾನ್ನ್ನ ಕೇಳಿದಾಗ ಆತ ನೇಪಾಳದ ಅಂಗಡಿಯಿಂದ ಬ್ಲೇ-ಡ್ ಖರೀದಿಸಿ ತನ್ನ ಖಾಸಗಿ ಅಂಗವನ್ನು ಕ-ತ್ತ-ರಿಸಿ ಎಸೆದಿದ್ದೇನೆ ಎಂದು ಹೇಳಿದ್ದಾನೆ. ಇದಕ್ಕಿಂತ ಹೆಚ್ಚಿಗೆ ಏನನ್ನೂ ಹೇಳುತ್ತಿಲ್ಲ. ಚಿಕಿತ್ಸೆ ನೀಡುತ್ತಿರುವ ಪ್ರಮೋದ್ ತಿವಾರಿ ಇರ್ಫಾನ್ನ ಸ್ಥಿತಿ ಸುಧಾರಿಸುತ್ತಿದೆ ಎಂದು ತಿಳಿಸಿದ್ದಾರೆ.