ನೂರಾರು ವರ್ಷಗಳಿಂದ ಮುಸಲ್ಮಾನರು ಶವ ಹೂಳುತ್ತಿದ್ದ ಸ್ಮಶಾನ ಜಾಗವನ್ನು ತನ್ನದೆಂದು ವ್ಯಕ್ತಿಯೊಬ್ಬರು ಧ್ವಂಸ ಮಾಡಿದ ಘಟನೆ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ. ಪಂಪಣ್ಣಗೌಡ ಎಂಬಾತನಿಂದ ಮುಸಲ್ಮಾನರ ಸ್ಮಶಾನ ಧ್ವಂಸಗೊಳಿಸಿ ಕೃತ್ಯ. ಜಮೀನು ತನಗೆ ಸೇರಿದ್ದೆಂದು, ಇಲ್ಲಿ ಯಾರೂ ಹೂಳುವಂತಿಲ್ಲ ಎಂದು ಎಚ್ಚರಿಕೆ ನೀಡಿ ಧ್ವಂಸಗೊಳಿಸಿರುವ ಪಂಪಣ್ಣಗೌಡ.
ಯಾದಗಿರಿ: ನೂರಾರು ವರ್ಷಗಳಿಂದ ಮುಸಲ್ಮಾನರು ಶವ ಹೂಳುತ್ತಿದ್ದ ಸ್ಮಶಾನ ಜಾಗವನ್ನು ತನ್ನದೆಂದು ವ್ಯಕ್ತಿಯೊಬ್ಬರು ಧ್ವಂಸ ಮಾಡಿದ ಘಟನೆ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ.
ಪಂಪಣ್ಣಗೌಡ ಎಂಬಾತನಿಂದ ಮುಸಲ್ಮಾನರ ಸ್ಮಶಾನ ಧ್ವಂಸಗೊಳಿಸಿ ಕೃತ್ಯ. ಜಮೀನು ತನಗೆ ಸೇರಿದ್ದೆಂದು, ಇಲ್ಲಿ ಯಾರೂ ಹೂಳುವಂತಿಲ್ಲ ಎಂದು ಎಚ್ಚರಿಕೆ ನೀಡಿ ಧ್ವಂಸಗೊಳಿಸಿರುವ ಪಂಪಣ್ಣಗೌಡ.
ಸ್ಮಶಾನ ಜಾಗದಲ್ಲಿ ಮುಸಲ್ಮಾನರು ಮೃತವ್ಯಕ್ತಿಗಳನ್ನು ಹೂಳುತ್ತಿರುವುದು ನಿನ್ನೆ ಮೊನ್ನೆಯಿಂದಲ್ಲ, ನೂರಾರು ವರ್ಷಗಳಿಂದ ಹೂಳುತ್ತಿದ್ದಾರೆ. ಈ ಜಾಗವನ್ನು ಮುಸಲ್ಮಾನರ ಸ್ಮಶಾನಕ್ಕೆ ಪಂಪನಗೌಡ ಕುಟುಂಬಸ್ಥರು ದಾನವಾಗಿ ನೀಡಿದ್ದರೆಂದು ಹೇಳಲಾಗಿದೆ. ಆದರೆ ಇದೀಗ ಜಮೀನನ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ ವಾಪಸ್ ಜಮೀನು ಪಡೆಯಲು ಮುಂದಾಗಿರೋ ಪಂಪನಗೌಡ. ಜೆಸಿಬಿ ಮೂಲಕ ನೂರಾರು ಗೋರಿಗಳು ನೆಲಸಮಗೊಳಿಸಲಾಗಿದೆ.
ಮುಸ್ಲಿಂ ಸಮುದಾಯದಿಂದ ಆಕ್ರೋಶ:
ನೂರಾರು ವರ್ಷಗಳಿಂದ ಹೂಳ್ತಿದ್ದ ಮುಸ್ಲಿಂರು ಇದೀಗ ಇದ್ದಕ್ಕಿದ್ದಂತೆ ಜೆಸಿಬಿ ಮೂಲಕ ಗೋರಿಗಳನ್ನು ಧ್ವಂಸಗೊಳಿಸಿರುವುದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಪಂಪನಗೌಡ ನಮ್ಮ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ. ಆತನ ವಿರುದ್ಧ ಸೂಕ್ತ ಕ್ರಮ ಆಗಬೇಕು ಎಂದು ಆಗ್ರಹಿಸಿರುವ ಮುಸ್ಲಿಂ ಸಮುದಾಯ. ಈ ಘಟನೆ ಸಂಬಂಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.