ನವದೆಹಲಿ: ಉದ್ಧವ್ ಸರ್ಕಾರಕ್ಕೆ ಸೋಮವಾರ ಬಾಂಬೆ ಹೈಕೋರ್ಟ್ ಭಾರೀ ಹೊಡೆತ ಕೊಟ್ಟಿದ್ದು ಮಹಾರಾಷ್ಟ್ರ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅವರ ಮನವಿಯನ್ನು ಆಲಿಸಿದ ಹೈಕೋರ್ಟ್ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ವಾಸ್ತವವಾಗಿ, ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. ನ್ಯಾಯಾಲಯ ಸೋಮವಾರ ಬೆಳಿಗ್ಗೆ ತನ್ನ ತೀರ್ಪು ನೀಡಿದ್ದು, ಸಿಬಿಐಗೆ 15 ದಿನಗಳಲ್ಲಿ ತನಿಖೆ ಆರಂಭಿಸುವಂತೆ ಆದೇಶಿಸಿದೆ.
Bombay High Court has asked the CBI director to conduct a preliminary inquiry within 15 days and to register an FIR if any cognizable offence is found: Petitioner Dr Jaishri Patil https://t.co/eCgxRuepwN pic.twitter.com/VRTEzDXQBA
— ANI (@ANI) April 5, 2021
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಪರಂಬೀರ್ ಸಿಂಗ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಪರಂಬೀರ್ ಸಿಂಗ್ ಅವರು ಆಂಟಿಲಿಯಾ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಎಪಿಐ ಸಚಿನ್ ವಾಜೆ ಮತ್ತು ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಬಗ್ಗೆ ಗಂಭೀರ ಆರೋಪಗಳನ್ನ ಮಾಡುತ್ತ ಸಂವೇದನಾಶೀಲ ಹೇಳಿಕೆ ನೀಡಿದ್ದರು.
ಈ ಪತ್ರದಲ್ಲಿ ಅವರು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಸಚಿನ್ ವಾಜೆಗೆ ಪ್ರತಿ ತಿಂಗಳು 100 ಕೋಟಿ ರೂ. ವಸೂಲಿ ಮಾಡುವಂತೆ ಹೇಳಿದ್ದರು ಎಂದು ತಿಳಿಸಿದ್ದರು. ಮುಂಬೈ ಪೊಲೀಸರ ಅಪರಾಧ ವಿಭಾಗದ ಗುಪ್ತಚರ ಘಟಕದ ಉಸ್ತುವಾರಿ ವಹಿಸಿಕೊಳ್ಳುವ ಸಚಿನ್ ವಾಜೆ ಅವರನ್ನು ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ತಮ್ಮ ಅಧಿಕೃತ ನಿವಾಸ ಜ್ಞಾನೇಶ್ವರಕ್ಕೆ ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಬಾರಿ ಕರೆಸಿದರು ಎಂದು ಅವರು ಬರೆದಿದ್ದಾರೆ. ಗೃಹ ಸಚಿವರು ಹಣ ಸಂಗ್ರಹಿಸುವಂತೆ ವಾಜೆಗೆ ಪದೇ ಪದೇ ಸೂಚನೆ ನೀಡಲಾಗಿತ್ತು ಎಂಬ ಮಾಹಿತಿಯನ್ನೂ ತಮ್ಮ ಪತ್ರದಲ್ಲಿ ತಿಳಿಸಿದ್ದರು.
ಮಹಾರಾಷ್ಟ್ರ ಸರ್ಕಾರ ಬೀಳಿಸಿ ರಾಷ್ಟ್ರಪತಿ ಆಡಳಿತದಿಂದ ಹಿಡಿದು ಮಧ್ಯಂತರ ಚುನಾವಣೆಯವರೆಗಿನ ಪ್ಲ್ಯಾನ್ ರೆಡಿ ಮಾಡಿದ ಬಿಜೆಪಿ
ಮುಂಬೈ: ಮಹಾರಾಷ್ಟ್ರದಲ್ಲಿ ಆಂಟಿಲಿಯಾ ಪ್ರಕರಣ, ಮನ್ಸುಖ್ ಹಿರೆನ್ ಸಾ-ವು, ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಮೇಲೆ ಮಾಜಿ ಪೊಲೀಸ್ ಆಯುಕ್ತರ ಆ-ರೋ-ಪ ಮತ್ತು ಸಚಿನ್ ವಾಝೆ ಪ್ರಕರಣಗಳಲ್ಲಿ ಉದ್ಧವ್ ಸರ್ಕಾರದ ಸಮಸ್ಯೆಗಳು ಹೆಚ್ಚುತ್ತಿವೆ. ಏತನ್ಮಧ್ಯೆ, ಬಿಜೆಪಿ ಉದ್ಧವ್ ಸರ್ಕಾರವನ್ನು ಉರುಳಿಸಲು ಯೋಜನೆಯನ್ನು ಪ್ರಾರಂಭಿಸಿದೆ. ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇ-ರ-ಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಕಾನೂನು ಸುವ್ಯವಸ್ಥೆ ಕುರಿತು ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಸುತ್ತುವರಿಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ ಕಾನೂನು ಮತ್ತು ಸುವ್ಯವಸ್ಥೆಯ ಕ್ಷೀಣತೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಬಿಜೆಪಿ ನಿರಂತರವಾಗಿ ಎತ್ತುತ್ತಿದೆ.
ದೈನಿಕ್ ಭಾಸ್ಕರ್ ವರದಿಯ ಪ್ರಕಾರ, ಪಕ್ಷಕ್ಕೆ ಮತ್ತೊಮ್ಮೆ ಅಜಿತ್ ಪವಾರ್ ಅವರಿಂದ ನಿರಾಶೆ ಎದುರಾಗಿದೆ ಎಂದು ಬಿಜೆಪಿಯ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಅಸಲಿಗೆ, ಅಜಿತ್ ಪವಾರ್ ಅವರನ್ನು ಮತ್ತೆ ತಮ್ಮ ಜೊತೆ ತರುವ ಬಿಜೆಪಿ ಯೋಜನೆ ವಿಫಲವಾಗುತ್ತಿದೆ. ಅಜಿತ್ ಪವಾರ್ ಈ ವಿಷಯಗಳ ಬಗ್ಗೆ ಎನ್ಸಿಪಿ ಶಾಸಕರ ಒಗ್ಗಟ್ಟನ್ನ ಮುರಿದು ಬಿಜೆಪಿ ಜೊತೆ ಬರುತ್ತಾರೆ ಮತ್ತು ಉದ್ಧವ್ ಸರ್ಕಾರ ಬೀಳುತ್ತದೆ ಎಂದು ಬಿಜೆಪಿ ನಂಬಿತ್ತು. ಅದೇ ಸಮಯದಲ್ಲಿ, ಶರದ್ ಪವಾರ್ ಅವರ ಕಟ್ಟುನಿಟ್ಟಿನ ನಡೆ ಮತ್ತೊಮ್ಮೆ ಬಿಜೆಪಿಯ ಯೋಜನೆಯನ್ನು ಫೇಲ್ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಪ್ಲ್ಯಾನ್ ‘ಬಿ’ ಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ.
ಬಿಜೆಪಿಯ ಹೊಸ ಪ್ಲ್ಯಾನ್ ಏನು?
ಬಿಜೆಪಿ ಮೂಲಗಳ ಪ್ರಕಾರ, ಸಚಿನ್ ವಾಝೆ ಪ್ರಕರಣದಲ್ಲಿ ಎನ್ಸಿಪಿ ಪಕ್ಷದ ವರ್ಚಸ್ಸು ಹಾಳಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಬಿಜೆಪಿ ರಣತಂತ್ರಜ್ಞರು ಎನ್ಸಿಪಿಯೊಂದಿಗೆ ಸರ್ಕಾರ ರಚಿಸುವ ಪರವಾಗಿಲ್ಲ. ಆದ್ದರಿಂದ, ಈಗ ಬಿಜೆಪಿ ರಾಷ್ಟ್ರಪತಿ ಆಡಳಿತವನ್ನು ಹೇರುವ ಹಾದಿಯನ್ನು ಮತ್ತು ನಂತರ ಮಧ್ಯಂತರ ಚುನಾವಣೆಯ ಪ್ಲ್ಯಾನ್ B ಯನ್ನ ಆಯ್ಕೆ ಮಾಡಿದೆ.
ಬದಲಾಗಬಹುದು ಬಿಜೆಪಿ ಅಧ್ಯಕ್ಷ
ರಾಜ್ಯ ಅಧ್ಯಕ್ಷರನ್ನು ಬದಲಾಯಿಸಲು ಬಿಜೆಪಿಯೂ ಮನಸ್ಸು ಮಾಡಿದೆ. ಚಂದ್ರಕಾಂತ್ ಪಾಟೀಲ್ ಬದಲಿಗೆ ಮಾಜಿ ಹಣಕಾಸು ಸಚಿವ ಸುಧೀರ್ ಮುಂಗಂಟಿವಾರ್ ಅವರನ್ನು ಅಧ್ಯಕ್ಷ ಮಾಡುವ ನಿರ್ಧಾರದ ಪರ ಬಿಜೆಪಿ ನಿಂತಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಚುನಾವಣೆಯಲ್ಲೂ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಹುದ್ದೆಯ ಮುಖವಾಗಲಿದ್ದಾರೆ. ಅದೇ ಸಮಯದಲ್ಲಿ, ಮುಂಗಂಟಿವಾರ್ ಬಿಜೆಪಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಅವರನ್ನು ಕೇಂದ್ರಕ್ಕೆ ಕಳುಹಿಸುವ ಯೋಜನೆಯೂ ಇದೆ.
ರಾಷ್ಟ್ರಪತಿ ಆಡಳಿತ ಹೇರುವಂತೆ ಪತ್ರ ಬರೆದ ಸಚಿವ
ಮಹಾರಾಷ್ಟ್ರದಲ್ಲಿ ಹಲವಾರು ಪ್ರಕರಣಗಳ ಕುರಿತಾಗಿ ರಾಜಕೀಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಿಪಕ್ಷಗಳು ನಿರಂತರವಾಗಿ ಶಿವಸೇನೆ ಸರ್ಕಾರದ ವಿ-ರು-ದ್ಧ ವಾ-ಗ್ದಾ-ಳಿ ನಡೆಸುತ್ತಿವೆ. ಈಗ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂಬ ಕೂಗು ಕೂಡ ಕೇಳಿಬಂದಿದ್ದು ಶಿವಸೇನೆಯಲ್ಲೂ ಈ ಕುರಿತು ಇದೀಗ ತಲ್ಲಣ ಸೃಷ್ಟಿಯಾಗಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಶಿವಸೇನೆ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತ ಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದೆ. ಮತ್ತೊಂದು ಕಡೆ ಮಹಾರಾಷ್ಟ್ರದ ರಾಜ್ಯಸಭಾ ಸಂಸದ ಹಾಗು ಕೇಂದ್ರೀಯ ರಾಜ್ಯಸಚಿವ ರಾಮದಾಸ್ ಅಠವಲೆ ಯವರು ಮಾತನಾಡುತ್ತ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂಬ ಬೇಡಿಕೆಯನ್ನ ಮುಂದಿಟ್ಟಿದ್ದಾರೆ.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ನೂರು ಕೋಟಿ ರೂಪಾಯಿಗಳನ್ನು ವ-ಸೂ-ಲಿ ಮಾಡಿದ್ದಾರೆ ಎಂಬ ಆರೋಪದ ನಂತರ ಕೇಂದ್ರ ಸಚಿವ ಅಠವಲೆ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಮೋದಿ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠವಲೆ ಅವರು ಮಹಾರಾಷ್ಟ್ರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಷಾ ಅವರಿಗೆ ಬರೆದ ಪತ್ರದಲ್ಲಿ ಐದು ದೊಡ್ಡ ವಿಷಯಗಳನ್ನು ಎತ್ತಿದ್ದಾರೆ.
ಫೆಬ್ರವರಿ 25 ರಂದು ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯ ಮನೆಯ ಹೊರಗೆ ಸ್ಫೋ-ಟ-ಕ ಸಾಮಗ್ರಿಗಳನ್ನು ಹೊಂದಿರುವ ಕಾರು ಪತ್ತೆಯಾಗಿದ್ದರ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ. ಮುಂಬೈ ಆಯುಕ್ತರ ಹುದ್ದೆಯಿಂದ ತೆಗೆದುಹಾಕಲ್ಪಟ್ಟ ಪರಮವೀರ್ ಸಿಂಗ್ ಅವರು ಬರೆದ ಪತ್ರದಲ್ಲಿ ನೂರು ಕೋಟಿ ವ-ಸೂ-ಲಿ-ಗಾಗಿ ಸಚಿನ್ ವಾಜೆಯನ್ನು ಬಳಸಿಕೊಂಡಿದ್ದಕ್ಕಾಗಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ವಿರುದ್ಧವೂ ರಾಮದಾಸ್ ಅಠವಲೆ ವಾ-ಗ್ದಾ-ಳಿ ನಡೆಸಿದ್ದಾರೆ.
ಈ ಎಲ್ಲ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ಸರಕಾರ ಇದೆಯೋ ಇಲ್ಲವೋ ಅಂತ ಗೊತ್ತೇ ಆಗುತ್ತಿಲ್ಲ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೇಂದ್ರ ರಾಜ್ಯ ಸಚಿವ ಅಠವಲೆ ಹೇಳಿದ್ದಾರೆ. ಅಠವಲೆ ಪ್ರಕಾರ, ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರ ಕಾನೂನು ಸುವ್ಯವಸ್ಥೆ ಮಾತ್ರವಲ್ಲದೆ ಕೋವಿಡ್-19 ನಿರ್ವಹಣೆಯಲ್ಲೂ ವಿಫಲವಾಗಿದೆ. ಕರೋನಾ ಪ್ರಕರಣಗಳು ಹೆಚ್ಚುತ್ತಿವೆ. ಈ ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇ-ರು-ವ ಅವಶ್ಯಕತೆಯಿದೆ ಎಂದಿದ್ದಾರೆ.