ಪಾಲಿಗ್ರಾಫ್ ಟೆಸ್ಟ್ ನಲ್ಲಿ ಮತ್ತಷ್ಟು ಸ್ಪೋಟಕ ಮಾಹಿತಿಗಳನ್ನ ಬಿಚ್ಚಿಟ್ಟ ಅಫ್ತಾಬ್: ಬೆಚ್ಚಿಬಿದ್ದ ಪೋಲಿಸ್ ಅಧಿಕಾರಿಗಳು

in Uncategorized 2,709 views

ಶ್ರದ್ಧಾ ವಾಕರ್ ಕೊ-ಲೆ ಪ್ರಕರಣದಲ್ಲಿ ಹಲವು ದೊಡ್ಡ ರಹಸ್ಯಗಳು ಮುನ್ನೆಲೆಗೆ ಬರುತ್ತಿವೆ. ಪಾಲಿಗ್ರಾಫ್ ಟೆಸ್ಟ್ ನಲ್ಲಿ, ಅಫ್ತಾಬ್ ಅಮೀನ್ ಪೂನಾವಾಲಾ ತನ್ನ ಲಿವ್-ಇನ್ ಪಾರ್ಟನರ್‌ನ್ನ ಭೀಕರ ರೀತಿಯಲ್ಲಿ ಕೊ-ಲೆ ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆದಾಗ್ಯೂ, ತನ್ನ ಈ ಕ್ರೂರ ಕೃತ್ಯದ ಬಗ್ಗೆ ಅವನಿಗೆ ಯಾವುದೇ ಪಶ್ಚಾತ್ತಾಪವೂ ಇಲ್ಲ.

Advertisement

ನವದೆಹಲಿ: ಶ್ರದ್ಧಾ ವಾಕರ್ ಭೀಕರ ಹ-ತ್ಯೆ ಪ್ರಕರಣದಲ್ಲಿ ಹಲವು ದೊಡ್ಡ ರಹಸ್ಯಗಳು ಬಯಲಿಗೆ ಬರುತ್ತಿವೆ. ಪಾಲಿಗ್ರಾಫ್ ಪರೀಕ್ಷೆಯಲ್ಲಿ, ಅಫ್ತಾಬ್ ಅಮೀನ್ ಪೂನಾವಾಲಾ ತನ್ನ ಲಿವ್-ಇನ್ ಪಾರ್ಟನರ್‌ನ್ನ ಭೀಕರ ರೀತಿಯಲ್ಲಿ ಕೊ-ಲೆ ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆದಾಗ್ಯೂ, ತನ್ನ ಕಾರ್ಯಗಳಿಗೆ ಅವನಿಗೆ ಯಾವುದೇ ಪಶ್ಚಾತ್ತಾಪವಿಲ್ಲ. ಪಾಲಿಗ್ರಾಫ್ ಟೆಸ್ಟ್ ನಡೆಸಿದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಡಿರುವ ವರದಿಯ ಪ್ರಕಾರ, ಅಫ್ತಾಬ್ ತಾಳ್ಮೆ ಕಳೆದುಕೊಂಡಿದ್ದಾನೆ ಎಂದು ತಿಳಿಸಿವೆ. ಶ್ರದ್ಧಾಳನ್ನ ಕೊ-ಲೆ ಮಾಡಿರುವ ವಿಚಾರವನ್ನ ಆತ ಒಪ್ಪಿಕೊಂಡಿದ್ದಾನೆ. ಆದರೆ ಆತ ಮಾಡಿದ ಆ ಕ್ರೂರ ಕೃತ್ಯದ ಬಗ್ಗೆ ಆತನಿಗೆ ಯಾವುದೇ ಪಶ್ಚಾತ್ತಾಪವೂ ಇಲ್ಲವೆಂದು ಹೇಳಿದ್ದಾನೆ. ಪಾಲಿಗ್ರಾಫ್ ಟೆಸ್ಟ್ ನಲ್ಲಿ, ಅಫ್ತಾಬ್ ತನಗೆ ಅನೇಕ ಹುಡುಗಿಯರೊಂದಿಗೆ ಸಂಬಂಧವಿದೆ ಎಂದು ಒಪ್ಪಿಕೊಂಡಿದ್ದಾನೆ.

ಈಗಾಗಲೇ ಮುಂದೆ ಬಂದಿರುವ ಅಫ್ತಾಬ್‌ನ ಮತ್ತೊಬ್ಬ ಗರ್ಲ್ ಫ್ರೆಂಡ್

ಇತ್ತೀಚೆಗಷ್ಟೇ ಶ್ರದ್ಧಾ ಹೊರತುಪಡಿಸಿ ಅಫ್ತಾಬ್‌ನ ಇತರ ಗರ್ಲ್ ಫ್ರೆಂಡ್ ಗಳು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದರು. ಪೊಲೀಸರು ಆಕೆಯನ್ನ ವಿಚಾರಣೆಗೆ ಒಳಪಡಿಸಿದ್ದರು. ವರದಿಗಳ ಪ್ರಕಾರ, ಅಫ್ತಾಬ್‌ನ ಎರಡನೇ ಗೆಳತಿ ವೃತ್ತಿಯಲ್ಲಿ ಮನಶ್ಶಾಸ್ತ್ರಜ್ಞ (Psychiatrist). ಅಫ್ತಾಬ್ ಡೇಟಿಂಗ್ ಆಪ್ ಮೂಲಕ ಆಕೆಯನ್ನು ಭೇಟಿಯಾಗಿದ್ದ. ಯುವತಿಯ ಪ್ರಕಾರ, ಅಫ್ತಾಬ್ ಶ್ರದ್ಧಾಳನ್ನು ಕೊಂ-ದ ಅದೇ ಫ್ಲಾಟ್‌ಗೆ ಆಕೆಯನ್ನ ಕರೆದಿದ್ದನು. ವಿಚಾರಣೆ ವೇಳೆ ಪೊಲೀಸರು ಅಫ್ತಾಬ್‌ನ ಕ್ರೌರ್ಯದ ಬಗ್ಗೆ ಆಕೆಗೆ ಹೇಳಿದಾಗ, ಆತನ ಕ್ರೌರ್ಯವನ್ನು ಕೇಳಿ ಆಕೆಯೂ ಬೆಚ್ಚಿಬಿದ್ದಿದ್ದಾಳೆ. ಮೂಲಗಳ ಪ್ರಕಾರ, ಪೊಲೀಸ್ ವಿಚಾರಣೆಯ ಸಮಯದಲ್ಲಿ, ಅಫ್ತಾಬ್ ತನ್ನ ಜೊತೆ ಸಂಪೂರ್ಣವಾಗಿ ವಿಭಿನ್ನವಾಗಿ ವರ್ತಿಸುತ್ತಿದ್ದ. ತಾನು ಪ್ರೀತಿಸಿದ ವ್ಯಕ್ತಿ ಕೊಲೆಗಾರ ಎಂದು ನಂಬಲು ಸಾಧ್ಯವಿಲ್ಲ ಎಂದು ಯುವತಿ ಹೇಳಿದ್ದಾಳೆ.

ಡಿಸೆಂಬರ್ 1 ಅಂದರೆ ನಾಳೆ ನಡೆಯಲಿದೆ ನಾರ್ಕೋ ಟೆಸ್ಟ್

ಮಂಗಳವಾರ (ನವೆಂಬರ್ 29) ದೆಹಲಿ ನ್ಯಾಯಾಲಯವು ಅಫ್ತಾಬ್ ಅಮೀನ್ ಪೂನಾವಾಲಾನ ನಾರ್ಕೋ ಟೆಸ್ಟ್ ನಡೆಸಲು ದೆಹಲಿ ಪೊಲೀಸರಿಗೆ ಅನುಮತಿ ನೀಡಿದೆ. ಪೂನಾವಾಲಾ ಪರ ವಕೀಲ ಅವಿನಾಶ್ ಕುಮಾರ್ ಪ್ರಕಾರ, ಪೊಲೀಸರು ಪೂನವಾಲಾನನ್ನ ವಿಧಿ ವಿಜ್ಞಾನ ಪ್ರಯೋಗಾಲಯ, ರೋಹಿಣಿಗೆ ಡಿಸೆಂಬರ್ 1 ಮತ್ತು ಡಿಸೆಂಬರ್ 5 ರ ದಿನಾಂಕ ಉಲ್ಲೇಖಿಸಿ ಕರೆದೊಯ್ಯಲು ಅರ್ಜಿ ಸಲ್ಲಿಸಿದ್ದರು, ಅದನ್ನು ನ್ಯಾಯಾಲಯ ಸ್ವೀಕರಿಸಿದೆ. ರೋಹಿಣಿಯಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಎಫ್‌ಎಸ್‌ಎಲ್‌ನ ತಜ್ಞರ ತಂಡದಿಂದ ನಾರ್ಕೋ ಟೆಸ್ಟ್ ನಡೆಸಲಾಗುವುದು ಎಂದು ಪೊಲೀಸರು ಈ ಹಿಂದೆ ಹೇಳಿದ್ದರು.

ಅಫ್ತಾಬ್ ಮೇಲಿನ ದಾ-ಳಿಯನ್ನು ವಿಫಲಗೊಳಿಸಿದ ಪೋಲಿಸ್ ತಂಡವನ್ನು ಶ್ಕಾಘಿಸಿದ ದೆಹಲಿ ಪೊಲೀಸ್ ಮುಖ್ಯಸ್ಥರು

ಶ್ರದ್ಧಾ ವಾಕರ್ ಹ-ತ್ಯೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನ ಸೋಮವಾರ ಜೈಲಿಗೆ ಕರೆದೊಯ್ಯುತ್ತಿದ್ದ ವ್ಯಾನ್ ಮೇಲೆ ದಾ-ಳಿಯ ಸಂದರ್ಭದಲ್ಲಿ ಸಂಯಮ ತೋರಿದ್ದಕ್ಕಾಗಿ ಪೊಲೀಸ್ ಬೆಂಗಾವಲು ತಂಡವನ್ನು ದೆಹಲಿ ಪೊಲೀಸ್ ಮುಖ್ಯಸ್ಥರು ಶ್ಲಾಘಿಸಿದ್ದಾರೆ. ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಮಂಗಳವಾರ ದೆಹಲಿ ಸಶಸ್ತ್ರ ಪೊಲೀಸರ 3 ನೇ ಬೆಟಾಲಿಯನ್ ವಿಕಾಸ್ ಪುರಿ ಪೊಲೀಸ್ ಲೈನ್ ಕಚೇರಿಗೆ ಭೇಟಿ ನೀಡಿ ತಂಡವನ್ನು ಶ್ಲಾಘಿಸಿದರು. ಪ್ರತಿ ಸದಸ್ಯರಿಗೆ ನಗದು ಬಹುಮಾನವನ್ನೂ ನೀಡಿದರು. ಇಬ್ಬರು ಸಬ್ ಇನ್ಸ್ ಪೆಕ್ಟರ್ ಗಳಿಗೆ ತಲಾ 10 ಸಾವಿರ ರೂ., ಇಬ್ಬರು ಹೆಡ್ ಕಾನ್ ಸ್ಟೆಬಲ್ ಗಳಿಗೆ ತಲಾ 5 ಸಾವಿರ ರೂ., ಪ್ರತಿ ಕಾನ್ ಸ್ಟೆಬಲ್ ಗೆ 5 ಸಾವಿರ ರೂ. ಬಹುಮಾನ ನೀಡಲಾಯಿತು.

ಸೋಮವಾರದಂದು ವಿಚಾರಣಾಧೀನ ಕೈದಿ (UTP) ಪೂನವಾಲಾನನ್ನ ಕೇಂದ್ರ ಕಾರಾಗೃಹದಿಂದ (ತಿಹಾರ್) ವಿಧಿ ವಿಜ್ಞಾನ ಪ್ರಯೋಗಾಲಯ ರೋಹಿಣಿಗೆ ಕರೆದೊಯ್ಯಲಾಯಿತು ಎಂದು ಪೊಲೀಸ್ ಕಮಿಷನರ್ (3ನೇ ಬೆಟಾಲಿಯನ್) ಧಾಲ್ ಸಿಂಗ್ ತಿಳಿಸಿದ್ದಾರೆ. ಜೈಲು ವ್ಯಾನ್ ಎಫ್‌ಎಸ್‌ಎಲ್ ರೋಹಿಣಿ ಕಚೇರಿಯಿಂದ ಹೊರಟು ಗೇಟ್ ದಾಟಿದಾಗ ಇದ್ದಕ್ಕಿದ್ದಂತೆ ಕೈಯಲ್ಲಿ ಕತ್ತಿಗಳನ್ನು ಹಿಡಿದ ಜನರ ಗುಂಪು ವ್ಯಾನ್ ಮೇಲೆ ದಾ-ಳಿ ಮಾಡಿತು, ಆದರೆ 3 ನೇ ಬೆಟಾಲಿಯನ್ ಡಿಎಪಿಯ ಕಮಾಂಡ್ ಸಮಯ ಪ್ರಜ್ಞೆ ತೋರಿಸಿ ವ್ಯಾನ್ ಅನ್ನು ಅಲ್ಲಿಂದ ತೆಗೆದರು. ಹೀಗಾಗಿ ಬೆಂಗಾವಲು ತಂಡವು ದೊಡ್ಡ ಅಪಘಾತವನ್ನು ತಪ್ಪಿಸಿತು ಮತ್ತು ವಿಚಾರಣಾಧೀನ ಕೈದಿಯನ್ನು ಸುರಕ್ಷಿತವಾಗಿ ಕೇಂದ್ರ ಕಾರಾಗೃಹಕ್ಕೆ (ತಿಹಾರ್) ಕರೆತಂದಿತು ಎಂದಿದ್ದಾರೆ.

ಏನಿದು ಪ್ರಕರಣ?

ಮೇ 18 ರಂದು ರಾತ್ರಿ 10 ಗಂಟೆಗೆ ಶ್ರದ್ಧಾಳ ಲಿವ್-ಇನ್ ಪಾರ್ಟನರ್ ಅಫ್ತಾಬ್ ಅಮೀನ್ ಶ್ರದ್ಧಾಳನ್ನು ಕೊಂ-ದಿದ್ದ. ಆ ದಿನ ಇಬ್ಬರೂ ಜಗಳವಾಡಿದ್ದರು. ವಾಸ್ತವವಾಗಿ, ಶ್ರದ್ಧಾ ಅಫ್ತಾಬ್‌ಗೆ ಮದುವೆಗಾಗಿ ನಿರಂತರವಾಗಿ ಒತ್ತಡ ಹೇರುತ್ತಿದ್ದಳು, ಆದರೆ ಅವನು ಅದನ್ನು ತಪ್ಪಿಸುತ್ತಲೇ ಬಂದಿದ್ದ. ಪೂನಾವಾಲಾ 27 ವರ್ಷದ ಶ್ರದ್ಧಾ ವಾಲ್ಕರ್‌ನನ್ನು ಕ-ತ್ತು ಹಿಸುಕಿ ಹ-ತ್ಯೆ ಮಾಡಿದ್ದ. ಆಕೆಯ ದೇ-ಹ-ವನ್ನು 35 ರಿಂದ 36 ತುಂಡುಗಳಾಗಿ ಕ-ತ್ತ-ರಿಸಿ, ದಕ್ಷಿಣ ದೆಹಲಿಯ ಮೆಹ್ರೌಲಿ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ 300-ಲೀಟರ್ ಫ್ರಿಜ್‌ನಲ್ಲಿ ಇರಿಸಿದ್ದ, ನಂತರ ಅದನ್ನು ನಗರದಾದ್ಯಂತ ಹಲವಾರು ದಿನಗಳವರೆಗೆ ಎಸೆದಿದ್ದ.

ನವೆಂಬರ್ 12 ರಂದು ಅಫ್ತಾಬ್ ಅವರನ್ನು ಬಂಧಿಸಲಾಗಿತ್ತು. ನಂತರ ಆತನನ್ನ ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು, ಅದನ್ನು ನವೆಂಬರ್ 17 ರಂದು ಇನ್ನೂ ಐದು ದಿನಗಳವರೆಗೆ ವಿಸ್ತರಿಸಲಾಯಿತು. ನವೆಂಬರ್ 22 ರಂದು ಅಫ್ತಾಬ್‌ನನ್ನ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು. ನವೆಂಬರ್ 26 ರಂದು ನ್ಯಾಯಾಲಯವು ಆತನನ್ನ ಮತ್ತೆ 13 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು.

Advertisement
Share this on...