ನಮ್ಮ ದೇಶದ ಪ್ರಧಾನಿಯನ್ನು ನೋಡಲು, ಭೇಟಿಯಾಗಲು ಹಲವರಿಗೆ ಆಸೆ ಇರುತ್ತದೆ. 130 ಕೋಟಿ ಜನಸಂಖ್ಯೆಯುಳ್ಳ ದೇಶದಲ್ಲಿ ನೋಡಲು ಇಷ್ಟವಿರುವವರು ಬಹಳಷ್ಟು ಮಂದಿ ಇರುತ್ತಾರೆ. ಆದರೆ, ಹಾಗೆ ಭೇಟಿಯಾಗಲು ಎಲ್ಲರಿಗೂ ಸಾಧ್ಯವಾಗೋದಿಲ್ಲ. ಆದರೆ, 10 ವರ್ಷ ವಯಸ್ಸಿನ ಬಾಲಕಿ ಅನೀಶಾ ಪಾಟೀಲ್ ಪ್ರಧಾನಿ ನರೇಂದ್ರ ಮೋದಿಯನ್ನು ಬುಧವಾರ ಭೇಟಿ ಮಾಡುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಸಂಸತ್ ಭವನದಲ್ಲಿ ಈ ಭೇಟಿ ನಡೆದಿದೆ. ಈಕೆ ಪ್ರಧಾನಿ ಮೋದಿಯನ್ನು ಭೇಟಿಯಾಗಲು ಹತಾಶಳಾಗಿದ್ದಳು ಹಾಗೂ ತನ್ನನ್ನು ಭೇಟಿ ಮಾಡಿಸುವಂತೆ ತನ್ನ ತಂದೆಯನ್ನು ಆಗಾಗ್ಗೆ ಕೇಳುತ್ತಿದ್ದಳು. ಆದರೆ, ಕಾರ್ಯನಿರತ ವ್ಯಕ್ತಿಯ ಅಪಾಯಿಟ್ಮೆಂಟ್ ಪಡೆಯೋದು ಅಷ್ಟು ಸುಲಭನಾ..? ನಿಜಕ್ಕೂ ಅಲ್ಲ. ಆದರೂ, ಆಕೆ ಅಪಾಯಿಟ್ಮೆಂಟ್ ಪಡೆದುಕೊಂಡಿದ್ದು ಹೇಗೆ ಅಂತೀರಾ.. ಮುಂದೆ ಓದಿ..
ಅಹ್ಮದ್‌ನಗರದ ಸಂಸತ್ ಸದಸ್ಯ ಡಾ. ಸುಜಯ್ ವಿಖೆ ಪಾಟೀಲ್ ಮಗಳಾದ ಮತ್ತು ಮಹಾರಾಷ್ಟ್ರದ ಹಿರಿಯ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಮೊಮ್ಮಗಳಾದ ಅನೀಶಾ, ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ಹತಾಶಳಾಗಿದ್ದಳು ಮತ್ತು ತನ್ನನ್ನು ಕರೆದುಕೊಂಡು ಹೋಗುವಂತೆ ತನ್ನ ತಂದೆಯನ್ನು ಕೇಳುತ್ತಿದ್ದಳು. ಆದರೆ ಪ್ರಧಾನಮಂತ್ರಿ ಕಾರ್ಯನಿರತ ವ್ಯಕ್ತಿಯಾಗಿದ್ದರಿಂದ ಮತ್ತು ಅವಳಿಗೆ ಅಪಾಯಿಂಟ್‌ಮೆಂಟ್ ನೀಡಲು ಸಾಧ್ಯವಾಗದಿರುವುದರಿಂದ ಅವಳು ಕೇಳುತ್ತಿರುವುದು ಕಷ್ಟದ ಕೆಲಸ ಎಂದು ತಂದೆ ಅವಳಿಗೆ ವಿವರಿಸಿದ್ದರು.
ನಂತರ ಬೇರೆ ದಾರಿ ಕಾಣದೆ ಅನೀಶಾ ಒಂದು ದಿನ ತನ್ನ ತಂದೆಯ ಲ್ಯಾಪ್ ಟಾಪ್‌ಗೆ ಲಾಗ್ ಇನ್ ಮಾಡಿ ಪ್ರಧಾನಿಗೆ ಇಮೇಲ್ ಕಳುಹಿಸಿದಳು. “ಹಲೋ ಸರ್, ನಾನು ಅನೀಶಾ ಮತ್ತು ನಾನು ನಿಜವಾಗಿಯೂ ಬಂದು ನಿಮ್ಮನ್ನು ಭೇಟಿ ಮಾಡಲು ಬಯಸುತ್ತೇನೆ” ಎಂದು 10 ವರ್ಷದ ಬಾಲಕಿ ಮೇಲ್‌ನಲ್ಲಿ ಬರೆದಿದ್ದಾಳೆ.
ಇನ್ನು, ಈ ಇಮೇಲ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆಯನ್ನೂ ನೀಡಿದ್ದು, ದೌಡ್ ಕೆ ಚಲಿ ಆವೋ ಬೇಟಾ ಅಂದರೆ ದಯವಿಟ್ಟು ಓಡಿ ಬಂದು ಬೇಗನೇ ಭೇಟಿ ಮಾಡು ಮಗಳೇ ಎಂದಾಗ ಅನೀಶಾಳ ಸಂತೋಷಕ್ಕೆ ಪಾರವೇ ಇರಲಿಲ್ಲ.
ವಿಖೇ ಪಾಟೀಲ್ ಸಂಸತ್ತಿಗೆ ಬಂದ ನಂತರ, ಪ್ರಧಾನಿ ಮೋದಿ ”ಅನೀಶಾ ಎಲ್ಲಿದ್ದಾಳೆ” ಎಂದು ಅವರನ್ನು ನೋಡಿದ ಕೂಡಲೇ ಮೊದಲ ಪ್ರಶ್ನೆ ಕೇಳಿದ್ದರು. ನಂತರ ಅನೀಶಾ ಪ್ರಧಾನಿ ಮೋದಿಯನ್ನು ಭೇಟಿಯಾದ ಮೇಲೆ ಆಕೆ ಸಂತೃಪ್ತರಾದಳು. ಸಂತೋಷ ಮತ್ತು ವಿಸ್ಮಯ ಉಂಟಾಯಿತು.
ಪ್ರಧಾನಿಯ ವಿಶಾಲವಾದ ಮತ್ತು ಸಂಪದ್ಭರಿತ ಕಚೇರಿಯ ಬಗ್ಗೆ ಹಾಗೂ ಹಲವು ಪ್ರಶ್ನೆಗಳನ್ನು ಹೊಂದಿದ್ದಳು. ಇದೇ ರೀತಿ, “ಇದು ನಿಮ್ಮ ಕಚೇರಿಯೇ? ನಿಮ್ಮ ಕಚೇರಿ ಎಷ್ಟು ದೊಡ್ಡದು! ನೀವು ಇಡೀ ದಿನ ಇಲ್ಲಿ ಕುಳಿತುಕೊಳ್ಳುತ್ತೀರಾ? ಎಂದು ಕೇಳಿದಳು. ಅಲ್ಲದೆ, ಆಕೆ ಪ್ರಧಾನಿಯನ್ನು ಭೇಟಿಯಾದ ಸಮಯದಲ್ಲಿ ನಾನಾ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಳು ಎಂದು ತಿಳಿದುಬಂದಿದೆ.
ಮಕ್ಕಳ ಜತೆ ಕಾಲ ಕಳೆಯಲು ಆನಂದಿಸುವ ಮತ್ತು ಅವರ ಅಸಂಬದ್ಧತೆಯನ್ನು ಸುಲಭವಾಗಿ ನಿಭಾಯಿಸುವಲ್ಲಿ ಸಾಕಷ್ಟು ಪ್ರವೀಣರೆಂದು ತಿಳಿದಿರುವ ಪ್ರಧಾನಿ ಮೋದಿ ಅನೀಶಾಳ ಎಲ್ಲಾ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದರು.
ತಾನು ಕೂತಿರುವ ಕಚೇರಿಯು ಸಂಸತ್ತಿನ ಅಧಿವೇಶನದ ಸಮಯದಲ್ಲಿ ಬಳಸುವ ಕಚೇರಿಯಾಗಿದೆ ಎಂದು ಮೋದಿ ಅನೀಶಾಳ ಪ್ರಶ್ನೆಗೆ ಉತ್ತರ ಹೇಳಿದಳು. ”ಆದರೆ ನಿನ್ನನ್ನು ಭೇಟಿಯಾಗಲು ನಾನು ಇಂದು ಇಲ್ಲಿದ್ದೇನೆ ಮತ್ತು ನಾನು ನಿನ್ನೊಂದಿಗೆ ಮಾತನಾಡಲು ಬಯಸುತ್ತೇನೆ” ಎಂದು ಪ್ರಧಾನಿ ಮೋದಿ ಪುಟ್ಟ ಬಾಲಕಿಗೆ ಹೇಳಿದರು.
10 ನಿಮಿಷಗಳ ಕಾಲ ಈ ವಿಶೇಷ ಭೇಟಿ ನಡೆದಿದ್ದು, ಈ ವೇಳೆ ಅನೀಶಾ ಮತ್ತು ಪ್ರಧಾನಿ ಮೋದಿ ಕ್ರೀಡೆಗಳು, ಅಧ್ಯಯನಗಳು ಮತ್ತು ಅವರ ವೈಯಕ್ತಿಕ ಆಸಕ್ತಿಯ ಕ್ಷೇತ್ರಗಳಿಂದ ಹಿಡಿದು ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಆದರೂ, ಆಕೆಯ ನಿರ್ಗಮನವು ಅವರ ಭೇಟಿಯ ಪ್ರಮುಖ ಅಂಶವಾಗಿತ್ತು.
”ನೀವು ಗುಜರಾತ್‌ನವರು, ಹಾಗಾದರೆ ನೀವು ಯಾವಾಗ ಭಾರತದ ರಾಷ್ಟ್ರಪತಿಯಾಗುತ್ತೀರಿ?” ಎಂದು ಅನೀಶಾ ಪ್ರಧಾನಿ ಕಚೇರಿಯಿಂದ ಹೊರ ಹೋಗುವ ಮುನ್ನ ಕೇಳಿದ್ದಾಳೆ. ಇದಕ್ಕೆ ಪ್ರಧಾನಿ ಮೋದಿ ಸೇರಿ ಸ್ಥಳದಲ್ಲಿದ್ದವರೆಲ್ಲ ನಗೆಗಡಲಲ್ಲಿ ತೇಲಿದ್ದಾರೆ.