ಪ್ರಾಚೀನ ಕಾಲದಲ್ಲೇ ಲಭ್ಯವಿತ್ತು QR Code, ಬಯಲಾಯ್ತು ಅಚ್ಚರಿಯ ರೋಚಕ ಇತಿಹಾಸದ ಮಾಹಿತಿ

in Kannada News/News/Story/ಕನ್ನಡ ಮಾಹಿತಿ 6,760 views

ನವದೆಹಲಿ: ನ-ಶಿ-ಸಿ ಹೋಗಿರುವ ಮಾಯನ್ ನಾಗರಿಕತೆಗೆ ಸಂಬಂಧಿಸಿದ ಅನೇಕ ಅವಶೇಷಗಳನ್ನು ಈಗಾಗಲೇ ಪತ್ತೆ ಮಾಡಲಾಗಿದೆ ಮತ್ತು ಅಲ್ಲಿ ಸಿಕ್ಕ ಅನೇಕ ವಸ್ತುಗಳನ್ನ ವಸ್ತು ಸಂಗ್ರಹಾಲಯಗಳಲ್ಲಿ ಇರಿಸಲಾಗಿದೆ, ಮೆಕ್ಸಿಕೊದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಮಾಯನ್ ನಾಗರಿಕತೆಯು ನಮಗೆ ಅತ್ಯಂತ ಆಸಕ್ತಿದಾಯಕ ಮತ್ತು ನಿ-ಗೂ-ಢ ನಾಗರಿಕತೆಗಳಲ್ಲಿ ಒಂದಾಗಿದೆ. ಮಾಯನ್ ನಾಗರಿಕತೆಯ ಬಗ್ಗೆ ರಿಸರ್ಚ್ ಮಾಡಿದ ತಜ್ಞರು ಸಂಪೂರ್ಣವಾಗಿ ಆಶ್ಚರ್ಯಚಕಿತರಾಗಿದ್ದಾರೆ, ಅಂತಹ ವಸ್ತುಗಳ ಪೈಕಿ ಇದೀಗ ನಾವು ಈಗ ಆನಲೈನ್ ಟ್ರಾನ್ಸ್ಯಾಕ್ಷನ್, UPI ಗಾಗಿ ಬಳಸುವಂತಹ ಕ್ಯೂಆರ್ ಕೋಡ್ ನಂತೆಯೇ ಇರುವ ಕಲಾಕೃತಿ ಅದೂ ಕ್ಯೂಆರ್ ಕೋಡ್ ಮುಖವನ್ನು ಪತ್ತೆ ಹಚ್ಚಿದ್ದಾರೆ.

Advertisement

ಅಂತಹ ವಿಷಯವನ್ನು ನಾವು ಹೇಗೆ ವಿವರಿಸಬಹುದು?  ಏಲಿಯನ್ ಗಳು ಪ್ರಾಚೀನ ನಾಗರಿಕತೆಯೊಂದಿಗೆ ಸಂಪರ್ಕವನ್ನು ಸ್ಥಾಪಿಸಿತ್ತು ಎಂಬುದಕ್ಕೆ ಇದು ಮತ್ತೊಂದು ಸಾಕ್ಷಿಯೇ? ಅಥವಾ ಬಹುಶಃ ಮಾಯನ್ನರು ಸ್ವತಃ ಅ-ನ್ಯ-ಗ್ರ-ಹ ಜೀವಿಗಳೇ ಆಗಿದ್ದರಾ?  ನೀವು ನೋಡುವಂತೆ, ಪ್ರತಿಮೆಯ ಮುಖವು ಕೇವಲ ಸಮತಟ್ಟಾದ ಟ್ಯಾಬ್ಲೆಟ್ (ಕ್ಯೂಆರ್ ಕೋಡ್) ನಂತೆ ಇದ್ದು, ಈ ದಿನಗಳಲ್ಲಿ ನಾವು ಬಳಸುವ ಕ್ಯೂಆರ್ ಕೋಡ್‌ನಂತೆಯೇ ಕಾಣುತ್ತದೆ. ಈ ಎನಿಗ್ಮಾಕ್ಕೆ ಒಂದು ಸಂಭಾವ್ಯ ಉತ್ತರವೆಂದರೆ, ಕೆತ್ತಿದ ಈ ಸಂಕೇತದ ಉದ್ದೇಶವು ಭವಿಷ್ಯದಲ್ಲಿ ಜನರಿಗೆ ಒಂದು ರೀತಿಯ ಸಂದೇಶ ಅಥವಾ ರ-ಹ-ಸ್ಯ-ವನ್ನು ತಿಳಿಸುವುದು‌ ಆಗಿದ್ದರೂ ಆಗಿರಬಹುದು.

ಕೋಡ್ ಅನ್ನು ಸ್ಕ್ಯಾನ್ ಮಾಡುವುದು ಅಸಾಧ್ಯವೆಂದು ತಿಳಿದಿದ್ದರೂ ಸಹ, ಆ ಕೋಡ್‌ನ ಸಂದೇಶವು ಭವಿಷ್ಯದಲ್ಲಿ ಸಂಭವಿಸಬಹುದಾದ ಅ-ನಾ-ಹು-ತಕ್ಕೆ ಒಂದು ಎ-ಚ್ಚ-ರಿ-ಕೆ-ಯಾಗಿರಬಹುದು ಎಂಬ ತೀರ್ಮಾನಕ್ಕೆ ಸಂಶೋಧನಾಕಾರರು ಬಂದರು, ಆದ್ದರಿಂದ ಈ ಚಿತ್ರದ ನಿಖರವಾದ ಸಂದೇಶದ ಬಗ್ಗೆ ಯಾರಿಗೂ ತಿಳಿದಿಲ್ಲ. ಮಾಯನ್ ನಾಗರಿಕತೆಗೆ ಸಂಬಂಧಿಸಿದ ಈ ಕ್ಯೂಆರ್ ಕೋಡ್ ಅನ್ನು 1994 ರಲ್ಲಿ ಪ-ತ್ತೆ-ಹಚ್ಚಲಾಗಿತ್ತು. ಆದ್ದರಿಂದ ಇದು ನಿಜವಾಗಿಯೂ ನಾವಿಂದು ಬಳಸುವ ಕ್ಯೂಆರ್ ಕೋಡ್ ನಂತೇಯೇ ಆಗಿದ್ದರೆ ಅದು ಅಂತಿಮವಾಗಿ ನಮ್ಮ ಗ್ರಹದಿಂದ ಅ-ನ್ಯ-ಗ್ರ-ಹ-ದ ಜೀವಿಗಳ ಸಂಪರ್ಕಕ್ಕೆ ಬಳಸಲಾದ ಸಾಧನವೆಂದೂ ನಾವು ಊಹಿಸಬಹುದಾಗಿದೆ.

ಗ್ವಾಟೆಮಾಲಾ ಸಿಟಿ

ಮಾಯನ್ ನಾಗರಿಕತೆಯ ಕ-ಳೆ-ದು-ಹೋದ ಭಾಗಗಳನ್ನು ಪತ್ತೆಹಚ್ಚಲು ಪುರಾತತ್ತ್ವಜ್ಞರು ನಕ್ಷೆಯನ್ನು ಸಿದ್ಧಪಡಿಸಿದ್ದಾರೆ.  ಅದರ ಸಹಾಯದಿಂದ, ಈಗ ಅನೇಕ ರ-ಹ-ಸ್ಯ-ಗಳನ್ನು ಪತ್ತೆಹಚ್ಚಬಹುದಾಗಿದೆ. ಕ್ರಿ.ಪೂ 2000 ರ ಹೊತ್ತಿಗೆ ಮಾಯನ್ ನಾಗರಿಕತೆಯ ಅನೇಕ ನಿರ್ಮಾಣ ಕಾರ್ಯಗಳು ಹೇಗಿದ್ದವೆಂದರೆ ಅವುಗಳ ಕುರುಹುಗಳು ಈಗಲೂ ಮೆಕ್ಸಿಕೊ, ಗ್ವಾಟೆಮಾಲಾ, ಬೆಲೀಜ್ ಮತ್ತು ಹೊಂಡುರಾಸ್‌ನ ಪಶ್ಚಿಮ ಭಾಗಗಳಲ್ಲಿ ಕಂಡುಬರುತ್ತವೆ.

ಪುರಾತತ್ತ್ವಜ್ಞರು ಹಲವಾರು ದಶಕಗಳಿಂದ ನಕ್ಷೆಗಳನ್ನು ರಚಿಸುವ ಮೂಲಕ ಮಾಯನ್ ನಾಗರಿಕತೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದರು. LIDAR (ಲೈಟ್ ಡಿಟೆಕ್ಷನ್ ಮತ್ತು ರೇಂಜಿಂಗ್) ತಂತ್ರಜ್ಞಾನದ ಸಹಾಯದಿಂದ, ಈ ರಚನೆಗಳ ಮೇಲೆ ಇರುವ ಕಾಡುಗಳನ್ನು ಡಿಜಿಟಲ್ ಸಹಾಯದಿಂದ ತೆಗೆದುಹಾಕಿ ನೋಡಬಹುದಾಗಿದೆ. ಇದರೊಂದಿಗೆ, ಕೊಲಂಬಿಯಾದ ನಾಗರಿಕತೆಯ ಕುರುಹುಗಳು ಕೂಡ ಕಂಡುಬಂದಿವೆ.

ವಿಶಾಲವಾದ ಪ್ರಾಚೀನ ಮಂದಿರ

ಇಲ್ಲಿ ದೊಡ್ಡ ದೇವಾಲಯವಿದೆ ಎಂದು LIDAE ಡೇಟಾ ಸೂಚಿಸುತ್ತದೆ. ಈ ಪ್ರದೇಶ ಮಾಯನ್ ನಾಗರಿಕತೆಯ ಒಂದು ನಗರವಾಗಿತ್ತು. ತಜ್ಞತ ಅಂದಾಜಿನ ಪ್ರಕಾರ ಈ ಪ್ರದೇಶದಲ್ಲಿ ಲಕ್ಷಾಂತರ ಜನರು ವಾಸಿಸುತ್ತಿದ್ದರು ಎಂದು ನಂಬಲಾಗಿದೆ. ಈ ಕಾಡುಗಳ ಅಡಿಯಲ್ಲಿ ಅಡಗಿರುವ ಅನೇಕ ಪ್ರಾಚೀನ ರ-ಹ-ಸ್ಯ-ಗಳನ್ನು ಹೊಸ ತಂತ್ರಜ್ಞಾನದ ಸಹಾಯದಿಂದ ಕಂಡುಹಿಡಿಯಲಾಗುತ್ತಿದೆ. ತಜ್ಞರು ನಕ್ಷೆಯನ್ನು ಸಿದ್ಧಪಡಿಸುತ್ತಿದ್ದು ಇದರ ಮೂಲಕ ಪ್ರಾಚೀನ ನಾಗರಿಕತೆಯ ಅಂಶಗಳನ್ನು ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ.

ಸಾವಿರಾರು ಪುರಾತನ ಕಟ್ಟಡ, ರಸ್ತೆಗಳೂ ಸಿಕ್ಕಿವೆ

ಉತ್ತರ ಪೀಟನ್‌ನಲ್ಲಿ 810 ಚದರ ಮೈಲಿ ಪ್ರದೇಶದಲ್ಲಿ ಲೇಸರ್ ಸುಸಜ್ಜಿತ ವಿಮಾನವನ್ನು ಹಾರಿಸುವ ಮೂಲಕ ಸಂಶೋಧಕರು ಇಂತಹ ಸುಮಾರು 60,000 ರಚನೆಗಳು ಮತ್ತು ರಸ್ತೆಗಳನ್ನು ಕಂಡುಹಿಡಿದಿದ್ದಾರೆ. ಅವುಗಳ 3D ಮ್ಯಾಪ್ ಕೂಡ ಸಿದ್ಧಪಡಿಸಲಾಗಿದೆ. ಅಷ್ಟೇ ಅಲ್ಲ, ನೀರಾವರಿ ವ್ಯವಸ್ಥೆಯ ಕುರುಗುಗಳೂ ಇಲ್ಲಿ ಸಿಕ್ಕಿವೆ. ಅದರ ಸಹಾಯದಿಂದ, ಅತ್ಯಾಧುನಿಕ ಪ್ರಾಚೀನ ನಾಗರಿಕತೆಗಳಲ್ಲಿ ಬಳಸಲಾಸ ಕೃಷಿ ವಿಧಾನವನ್ನ ಬಳಸಿ ಈಗಿನ ಕೃಷಿಗೆ ಪೂರಕವಾಗುವಂತೆ ಬಳಸಬಹುದು ಎಂಬುದನ್ನೂ ತಜ್ಞರು ರಿಸರ್ಚ್ ನಡೆಸಿದ್ದಾರೆ.

Advertisement
Share this on...