ಬಡಬಗ್ಗರಿಗಾಗಿ ಮಿಡಿದ ಸನ್ನಿ ಲಿಯೋನ್ ಹೃದಯ: ಸಾವಿರಾರು ಜನರಿಗೆ ಬೀದಿಗಿಳಿದು ಖುದ್ದು ತಾವೇ ಮಾಡುತ್ತಿದ್ದಾರೆ ಈ ಸೇವಾ ಕಾರ್ಯ

in Kannada News/News 145 views

ಮುಂಬೈ :

Advertisement
ಇಡೀಯ ದೇಶವನ್ನೇ ಮಹಾಮಾರಿ ಕೊರೊನಾ ನುಂಗಿ ಹಾಕಿದೆ. ಲಕ್ಷಾಂತರ ಜನ ಕೊರೊನಾದಿಂದ ಬಾರಿ ತೊಂದರೆ ಅನುಭವಿಸುತ್ತಿದ್ದು ಒಪ್ಪೊತ್ತಿನ ಊಟಕ್ಕೂ ಪರದಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಿನಿ ತಾರೆಯರು ಸೇರಿದಂತೆ ಸಮಾಜದ ಅನೇಕ ವರ್ಗದ ಜನ ಬಡವರ ಸಂಕಷ್ಟಕ್ಕೆ ಬೆನ್ನುಲಾಬಿ ನಿಂತಿದ್ದು ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಸನ್ನಿ ಲಿಯೋನ್ ಸರದಿ.

ಸನ್ನಿ ಲಿಯೋನ್ ಮುಂಬೈ ಬೀದಿಗಳಲ್ಲಿ ಊಟ ವಿತರಣೆ ಮಾಡುತ್ತಾ ಬಡವರ ಕಷ್ಟಕ್ಕೆ ಸಹಾಯವನ್ನು ಮಾಡುತ್ತಾ ಹಸಿದವರ ಹೊಟ್ಟೆ ತುಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸನ್ನಿ ಲಿಯೋನ್ ಸಿನಿಮಾದ ಜೊತೆ ಜೊತೆಗೆ ಸಮಾಜ ಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಈಗ ಕೊರೊನಾ ಸಮಯದಲ್ಲೂ ಹೃದಯ ಶ್ರೀಮಂತಿಕೆ ಮೆರೆದಿರುವ ಸನ್ನಿ ಮುಂಬೈನಲ್ಲಿರುವ ಬಡವರಿಗೆ ಹಾಗೂ ನಿರ್ಗತಿಕರಿಗೆ ಊಟ ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಸನ್ನಿಯ ಈ ಸೇವೆಗೆ ಪತಿ ಡೇನಿಯಲ್ ವೆಬರ್ ಕೂಡ ಸಾಥ್ ನೀಡಿದ್ದಾರೆ. ಟ್ರಕ್‍ನಲ್ಲಿ ಊಟದ ಪ್ಯಾಕೇಟ್‍ಗಳನ್ನು ಇಟ್ಟುಕೊಂಡು, ಮುಂಬೈನ ಬೀದಿ ಬೀದಿಗೂ ಹೋಗಿ ಸನ್ನಿ ಲಿಯೋನ್ ಹಾಗೂ ಡೇನಿಯಲ್ ದಂಪತಿ ಆಹಾರ ವಿತರಿಸುತ್ತಿದ್ದಾರೆ.

ಈ ಕುರಿತಾಗಿ ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅನಾಥ ಮಕ್ಕಳನ್ನೂ ದತ್ತು ತೆಗೆದುಕೊಂಡಿದ್ದಾರೆ ಸನ್ನಿ ಲಿಯೋನ್

ಬಾಲಿವುಡ್ ನ ಖ್ಯಾತ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಸ್ಟಾರ್ ನಟಿ. ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ಈ ನಟಿ ಬಾಲಿವುಡ್ ನ ಅನ್ಯ ನಟಿಯರಿಗಿಂತ ತೀರಾ ಭಿನ್ನ ಎನ್ನುವಂತೆ ಬದುಕುತ್ತಿದ್ದಾರೆ. ಮೇ 13 ರಂದು ನಟಿ ಸನ್ನಿ ಲಿಯೋನಿ ಅವರ 40 ನೇ ಜನ್ಮ ದಿನ ವಾಗಿತ್ತು. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸನ್ನಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಜನ್ಮದಿನದ ಶುಭಾಶಯಗಳು ಹರಿದು ಬಂದಿದ್ದವು. ಸನ್ನಿ ಜನ್ಮ ದಿನದ ಹಿನ್ನೆಲೆಯಲ್ಲಿ ಕರ್ನಾಟಕದ ಗ್ರಾಮ ಒಂದರಲ್ಲಿ ನಿಲ್ಲಿಸಲಾಗಿದ್ದ, ಸನ್ನಿ ಅವರಿಗೆ ಶುಭಾಶಯ ನೀಡುವ ಒಂದು ಫ್ಲೆಕ್ಸ್ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಮಾತ್ರವೇ ಅಲ್ಲದೇ ಖುದ್ದು ಸನ್ನಿ ಕೂಡಾ ಅದನ್ನು ನೋಡಿ ಖುಷಿಗೊಂಡು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸಿನಿಮಾ ನಟ ನಟಿಯರ ಜನ್ಮದಿನದಂದು ಅವರ ಎತ್ತರದ ಫ್ಲೆಕ್ಸಿಗಳನ್ನು ನಿಲ್ಲಿಸುವುದು ದಕ್ಷಿಣದ ಸಿನಿ ಅಭಿಮಾನಿಗಳು ಮೊದಲಿನಿಂದಲೂ ಪಾಲಿಸಿಕೊಂಡಿರುವ ಒಂದು ಪದ್ಧತಿಯಾಗಿದೆ. ಅಂತಹುದೇ ಒಂದು ಗೌರವವನ್ನು ಈಗ ಅಭಿಮಾನಿಗಳು ನಟಿ ಸನ್ನಿ ಲಿಯೋನಿಗೆ ಕೂಡಾ ನೀಡಿದ್ದಾರೆ. ಹೌದು. ಮೇ 13ರಂದು ಸನ್ನಿ ಲಿಯೋನ್ ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಸನ್ನಿಲಿಯೋನ್ ಅವರು ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೇವಲ ನಟನೆ ಮಾತ್ರವಲ್ಲದೆ ಸನ್ನಿ, ಹಲವಾರು ಸಾಮಾಜಿಕ, ಮಾನವೀಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿಯ ಜನ್ಮದಿನದಂದು ಕರ್ನಾಟಕದಲ್ಲಿ ಅಭಿಮಾನಿಗಳು ವಿಶೇಷವಾಗಿ ತಮ್ಮ ಅಭಿಮಾನ ಮೆರೆದಿದ್ದಾರೆ.

ಕರ್ನಾಟಕದ ಹಳ್ಳಿಯೊಂದರಲ್ಲಿ ಎತ್ತರದ ಸನ್ನಿ ಲಿಯೋನಿ ಸಾಂಪ್ರದಾಯಿಕವಾಗಿ ಸೀರೆ ಉಟ್ಟಿರುವ ಫೋಟೋ ಹಾಕಲಾಗಿದ್ದು, ಇಂಗ್ಲೀಷ್ ನಲ್ಲಿ ಜನ್ಮದಿನದ ಶುಭಾಶಯವನ್ನು ಕೋರಲಾಗಿದೆ. ಅಲ್ಲದೇ ಕೆಳಗೆ ಕನ್ನಡದಲ್ಲಿ “ಅನಾಥ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ” ಎನ್ನುವ ಸಾಲುಗಳನ್ನು ಬರೆದು ಸನ್ನಿ ಗೆ ಗೌರವ ನೀಡಿದ್ದಾರೆ.

ಹೌದು ಸನ್ನಿ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕದ ಹಳ್ಳಿಯೊಂದರ ರಸ್ತೆ ಬದಿಯಲ್ಲಿ ದೊಡ್ಡ ಫ್ಲೆಕ್ಸ್ ಹಾಕಲಾಗಿದೆ. ಫ್ಲೆಕ್ಸ್ ನಲ್ಲಿ ನಟಿ ಹಳದಿ ಹಾಗೂ ಕಪ್ಪು ಬಣ್ಣ ಮಿಶ್ರಿತ ಸೀರೆಯಲ್ಲಿ ಮಿಂಚಿದ್ದಾರೆ. ಫೋಟೋದ ಮೇಲೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಇಂಗ್ಲಿಷ್ ನಲ್ಲಿ ಬರೆದರೆ, ಕೆಳಗೆ ಅನಾಥ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಎಂದು ಬರೆಯಲಾಗಿದೆ. ಈ ಫ್ಲೆಕ್ಸ್ ಗೆ ದೊಡ್ಡ ಹೂವಿನ ಹಾರವೊಂದನ್ನು ಕೂಡ ಹಾಕಲಾಗಿದ್ದು, ಈ ಮೂಲಕ ಅಭಿಮಾನಿಗಳು ಸನ್ನಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಈ ಫ್ಲೆಕ್ಸ್ ಎಲ್ಲಿ ಹಾಕಿರುವುದು ಎಂಬುದಾಗಿ ತಿಳಿದುಬಂದಿಲ್ಲ. ಆದರೆ ಫ್ಲೆಕ್ಸ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನಟಿಗೂ ತಲುಪಿದೆ. ಹೀಗಾಗಿ ನಟಿ ಕೂಡ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ಹಾರ್ಟ್ ಸಿಂಬಲ್ ಹಾಕಿ ಅಭಿಮಾನಿಗಳ ಅಭಿಮಾನಕ್ಕೆ ಫಿದಾ ಆಗಿದ್ದಾರೆ.

ಈ ಫ್ಲೆಕ್ಸ್ ವೈರಲ್ ಆಗಿದ್ದು, ಇದು ಸನ್ನಿ ಅವರನ್ನೂ ತಲುಪಿದೆ. ಇದನ್ನು ಕಂಡು ಖುಷಿಗೊಂಡ ಸನ್ನಿ ಲಿಯೋನಿ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಾರ್ಟ್ ಸಿಂಬಲ್ ಹಾಕಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಸನ್ನಿ ಲಿಯೋನಿ ನೀಲಿ ಸಿನಿಮಾಗಳಿಗೆ ವಿದಾಯ ಹೇಳಿದ ಮೇಲೆ ಬಾಲಿವುಡ್ ನಲ್ಲಿ ನಟಿಸುತ್ತಿದ್ದಾರೆ. ಅನ್ಯ ಭಾಷೆಯ ಸಿನಿಮಾಗಳಲ್ಲಿ ಸಹಾ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದುಂಟು. ಸನ್ನಿ ಸಿನಿಮಾ ಅಲ್ಲದೇ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅಗತ್ಯ ಇರುವ ಜನರಿಗೆ ನೆರವನ್ನು ನೀಡುವ ಮೂಲಕ ಅನೇಕರಿಗೆ ಸ್ಪೂರ್ತಿ ಹಾಗೂ ಮಾದರಿಯಾಗಿದ್ದಾರೆ.

 

Advertisement
Share this on...