“ಬಾಬ್ರೀ ಮಸೀದಿಯನ್ನ ಎಂದಿಗೂ ಮರೆಯಲ್ಲ, ಎಷ್ಟೇ ಸಮಯ ಆಗ್ಲಿ ರಾಮಮಂದಿರ ಜಾಗದಲ್ಲೇ ಬಾಬ್ರೀ ಮಸ್ಜಿದ್ ಕಟ್ಟುತ್ತೇವೆ”: ಸೈಯದ್ ಮೊಹಿನ್ ಫೈಸಲ್

in Uncategorized 303 views

ಕಲಬುರಗಿ: ನಾವು ಬಾಬರಿ ಮಸೀದಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಷ್ಟು ಸಮಯವನ್ನು ಕಳೆದರೂ ಸರಿ ಬಾಬರಿ ಮಸೀದಿಯಲ್ಲಿದ್ದ ಸ್ಥಳದಲ್ಲಿಯೇ ಮತ್ತೊಮ್ಮೆ ದೊಡ್ಡ ಮಸೀದಿಯನ್ನು ನಿರ್ಮಾಣ ಮಾಡುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಕಲಬುರಗಿಯ ಮುಸ್ಲಿಂ ಯುವಕನ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

Advertisement

ಹೌದು, ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮುಸ್ಲಿಂ ಆಡಳಿತದ ಅವಧಿಯಲ್ಲಿ ಬಾಬರ್ ರಾಮ ಮಂದಿರವನ್ನು ಒಡೆದು ಅಲ್ಲಿ ಬಾಬರಿ ಮಸೀದಿನಯನ್ನು ನಿರ್ಮಾಣ ಮಾಡಿದ್ದನು. ಆದರೆ, 500 ವರ್ಷಗಳ ಕಾಲ ರಾಮಮಂದಿರ ಕುರಿತ ವಿವಾದ ಬಗೆಹರಿಯದ ಕಾರಣ ಕಳೆದ 31 ವರ್ಷಗಳ ಹಿಂದೆ 1991ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಲಾಯಿತು. ನಂತರ ದೀರ್ಘಕಾಲವಾಗಿ ನ್ಯಾಯಾಲಯದಲ್ಲಿ ರಾಮ ಜನ್ಮಭೂಮಿ ಕುರಿತ ವಿವಾದವನ್ನು ವಿಚಾರಣೆ ನಡೆಸಿದಿ ಇದೊಂದು ಪ್ರಕರಣದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಯಿತು.

ರಾಮ ಮಂದಿರ ಟ್ರಸ್ಟ್‌ನಿಂದ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ ಬೃಹತ್ ರಾಮ ಮಂದಿರವನ್ನು ನಿರ್ಮಿಸಿ ಉದ್ಘಾಟನೆ ಮಾಡಿ, ರಾಮಲಲ್ಲಾ ಪ್ರಾಣ ಪ್ರತಿಷ್ಠೆಯನ್ನೂ ಮಾಡಲಾಗಿದೆ. ಆದರೆ, ರಾಮ ಮಂದಿರ ಉದ್ಘಾಟನೆಯ ವೇಳೆ ಕಲಬುರಗಿಯ ಮುಸ್ಲಿಂ ಯುವಕನೊಬ್ಬ ನಾವು ಎಷ್ಟೇ ಸಮಯವಾದರೂ ಸರಿ ಬಾಬರಿ ಮಸೀದಿ ಇದ್ದ ಸ್ಥಳದಲ್ಲಿಯೇ ಮತ್ತೊಮ್ಮೆ ಮಸೀದಿಯನ್ನು ನಿರ್ಮಾಣ ಮಾಡುತ್ತೇವೆ. ಬಾಬರಿ ಮಸೀದಿ ನಮಗೆ ಅತ್ಯಂತ ಮಹತ್ವವಾದದುದು ಎಂದು ಸಾಮಾಜಿಕ ಜಾಲತಾಣ ಎಕ್ಸ್‌ (ಹಳೆಯ ಟ್ವಿಟಟರ್)ನಲ್ಲಿ ಪೋಸ್ಟ್ ಹಂಚಿಕೊಂಡಿದ್ದನು. ಆ ಕ್ಷಣಕ್ಕೆ ಯುವಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ ಕೈ ಬಿಟ್ಟಿದ್ದರು. ಆದರೆ, ಈಗ ಯುವಕನ ವಿರುದ್ಧ ಎಫ್‌ಐಅರ್ ದಾಖಲಿಸಲಾಗಿದೆ.

ಬಾಬರಿ ಮಸೀದಿ ಪರವಾಗಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ಯುವಕನನ್ನು ಕಲಬುರಗಿಯ ಇಕ್ಬಾಲ್ ಕಾಲೋನಿ ನಿವಾಸಿ ಸೈಯದ್ ಮೊಹಿನ್ ಫೈಸಲ್ (23) ಎಂದು ಗುರುತಿಸಲಾಗುದೆ. ಈತನ ವಿರುದ್ಧ ಕಲಬುರಗಿ ನಗರದ ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿರುವ ಪೋಸ್ಟ್ ಆಧಾರದಲ್ಲಿಯೇ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಹಾಳು ಮಾಡುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಯುವಕನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ನ್ಯೂ ರಾಘವೇಂದ್ರ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153(A), 295(A) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ರಾಮ ಮಂದಿರದ ಮೇಲೆ ಮುಸ್ಲಿಂ ಧ್ವಜ ಹಾರಿಸಿದ ಫೋಟೋ ಹಂಚಿಕೆ:

ಇನ್ನು ರಾಮ ಮಂದಿರ ಉದ್ಘಾಟನೆಯ ವೇಳೆ ಗದಗ ಜಿಲ್ಲೆಯ ಮುಸ್ಲಿಂ ಯುವಕನೊಬ್ಬ ಬೃಹತ್ ರಾಮಮಂದಿರ ನಿರ್ಮಾಣದ ಸ್ಥಳದಲ್ಲಿ ಬಾಬರಿ ಮಸೀದಿ ಇತ್ತು. ಮಸೀದಿ ಇದ್ದ ಜಾಗದಲ್ಲಿ ನೀವು ರಾಮಮಂದಿರ ನಿರ್ಮಾಣ ಮಾಡಿದರೆ, ನಿಮ್ಮ ಮಂದಿರದ ಮೇಲೆ ನಾವು ಇಸ್ಲಾಂ ಧ್ವಜವನ್ನು ಹಾರಿಸುತ್ತೇವೆ ಎಂದು ಫೋಟೋ ಹಂಚಿಕೊಂಡಿದ್ದನು. ರಾಮಮಂದಿರ ಭಾವಚಿತ್ರದ ಮೇಲೆ ಮುಸ್ಲಿಂ ಧರ್ಮದ ಹಸಿರು ಧ್ವಜವನ್ನು ಹಾರಿಸಿದ ಎಡಿಟೆಡ್ ಫೋಟೋವನ್ನು ಹಂಚಿಕೊಂಡು ವಿಕೃತಿ ಮೆರೆದಿದ್ದನು. ತಕ್ಷಣ ಇದನ್ನು ಗಮನಿಸಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು.

Advertisement
Share this on...