“ಬಿಕಿನಿ, ಸ್ಟ್ರಾಬೆರಿ, ಸೆ#ಕ್ಸ್ & ದೀಪಿಕಾ…”: ತನ್ನ ಮುಂಬರುವ ‘ಪಠಾಣ್’ ಚಿತ್ರವನ್ನ ಬಾಯ್‌ಕಾಟ್ ನಿಂದ ಗೆಲ್ಲಿಸಲು ಅಸಹ್ಯಕರ ಕೆಲಸ ಮಾಡಲು ಮುಂದಾದ ಶಾರುಖ್ ಖಾನ್, ಸಿಡಿದೆದ್ದ ಅಭಿಮಾನಿಗಳು

in Uncategorized 2,076 views

ಶಾರುಖ್ ಖಾನ್ ಅಭಿನಯದ ಮುಂಬರುವ ಚಿತ್ರ ‘ಪಠಾಣ್’ ಚಿತ್ರದ ಮೊದಲ ಹಾಡು ‘ಬೇಷರಂ ರಂಗ್’ ಬಿಡುಗಡೆಯಾಗಿದೆ. ಹಾಡಿನಲ್ಲಿ ಸಂಪೂರ್ಣ ಫೋಕಸ್ ದೀಪಿಕಾ ಪಡುಕೋಣೆಯನ್ನು ‘ಗ್ಲಾಮರಸ್’ ಆಗಿ ಕಾಣುವಂತೆ ಮಾಡುತ್ತದೆ. ಹಾಡಿನ ಬಹುತೇಕ ಭಾಗಗಳಲ್ಲಿ ಆಕೆಯನ್ನು ಬಿಕಿನಿಯಲ್ಲಿ ತೋರಿಸಲಾಗಿದೆ. YRF (ಯಶ್ ರಾಜ್ ಫಿಲ್ಮ್ಸ್) ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ‘ಬೇಷರಂ ರಂಗ್’ 9 ಗಂಟೆಗಳಲ್ಲಿ ಸುಮಾರು 80 ಲಕ್ಷ ಜನರು ನೋಡಿದ್ದರೆ, 3 ನಿಮಿಷ 13 ಸೆಕೆಂಡುಗಳ ಈ ವೀಡಿಯೊವನ್ನು 5.70 ಲಕ್ಷ ಜನರು ಲೈಕ್ ಮಾಡಿದ್ದಾರೆ.

ದೀಪಿಕಾ ಪಡುಕೋಣೆಯ ‘ಮೋನೋಕಿನಿ ಅವತಾರ’ದ ಮೇಲೆ ಫೋಕಸ್ ಮಾಡಿದ ನಂತರ, ಶಾರುಖ್ ಖಾನ್ ಈಗ ದೀಪಿಕಾ ಪಡುಕೋಣೆಯ ‘ಸೆಕ್ಸಿ ಹಾಡುಗಳನ್ನು’ ತೋರಿಸುವ ಮೂಲಕ ತಮ್ಮ ‘ಪಠಾಣ್’ ಚಿತ್ರವನ್ನು ಹಿಟ್ ಮಾಡಲು ಬಯಸುತ್ತಾರೆಯೇ ಎಂದು ಊಹಿಸಬಹುದು. ಗೀತರಚನೆಕಾರ ಕುಮಾರ್ ಬರೆದಿರುವ ಈ ಹಾಡನ್ನು ಸಂಗೀತ ನಿರ್ದೇಶಕರಾದ ವಿಶಾಲ್-ಶೇಖರ್ ಸಂಯೋಜಿಸಿದ್ದರೆ ಶಿಲ್ಪಾ ರಾವ್ ಮತ್ತು ಕರಾಲಿಸಾ ಮೊಂಟೆರಿಯೊ ಇದಕ್ಕೆ ಧ್ವನಿ ನೀಡಿದ್ದಾರೆ. ‘ಪಠಾಣ್’ ಚಿತ್ರದವನ್ನ ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ.

Advertisement

ಈ ಹಾಡಿನ ಮೂಲಕ ದೀಪಿಕಾ ಪಡುಕೋಣೆಯನ್ನು ಅತ್ಯಂತ ಗ್ಲಾಮರಸ್ ಆಗಿ ತೋರಿಸುವುದು ಗುರಿಯಾಗಿತ್ತು ಎಂದು ಶಾರುಖ್ ಖಾನ್ ಹೇಳಿದ್ದಾರೆ. ಅವರು ದೀಪಿಕಾ ಪಡುಕೋಣೆಯನ್ನು ‘ಬಾಲಿವುಡ್‌ನ ಮೋಸ್ಟ್ ಗ್ಲಾಮರಸ್ ಬ್ಯೂಟಿ’ ಎಂದು ಕರೆದಿದ್ದಾರೆ. ಹಾಡಿನ ಬಿಡುಗಡೆಗೂ ಮುನ್ನ ಅವರು ಹಳದಿ ಬಿಕಿನಿಯಲ್ಲಿರುವ ದೀಪಿಕಾ ಪಡುಕೋಣೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ 15 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಅವರು ದೀಪಿಕಾ ಪಡುಕೋಣೆಗೆ ಶುಭಹಾರೈಸಿದರು. ‘ಪಠಾಣ್’ ಒಂದು ಆ್ಯಕ್ಷನ್ ಚಿತ್ರ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ಮೆಕ್ಕಾದಲ್ಲಿ ‘ಉಮ್ರಾ’ ಮಾಡಿ ವೈಷ್ಣೋದೇವಿ ತಲುಪಿದ್ದ ಶಾರುಖ್ ಖಾನ್, ತಮ್ಮದೇ ಸಮುದಾಯದ ಮತಾಂಧರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಹಿಂದೂ ದೇವಾಲಯಕ್ಕೆ ಅವರ ಭೇಟಿಯಿಂದ ಮೂಲಭೂತವಾದಿಗಳು ಕೋಪಗೊಂಡಿದ್ದಾರೆ. ಅಲಿ ಬಿನ್ ಮುಹಮ್ಮದ್ ಎಂಬ ಯೂಸರ್, “ಮಜಹಬ್‌ನ್ನ ಈತ ಕಾಮಿಡಿ ಮಾಡಿ ಬಿಟ್ಟಿದ್ದಾನೆ” ಎಂದು ಬರೆದುಕೊಂಡಿದ್ದಾರೆ. ಶನಾಮನ್ ಎಂಬ ಯೂಸರ್, “ನೀವು ಏನು ಮಾಡಿದರೂ, ನಿಮ್ಮ ಪ್ರತಿ ಚಿತ್ರವೂ ವಿರೋಧಿಸಲ್ಪಡುತ್ತದೆ” ಎಂದಿದ್ದಾರೆ. ಟ್ವಿಟರ್‌ನಲ್ಲಿ ‘@Real_Immu’ ಹೆಸರಿನ ಖಾತೆಯು ನಟನಿಗೆ “ಸಜ್ದಾ ಖಾಲಿಕ್ ಕೋ, ಇಬ್ಲಿಸ್ ಸೆ ಯಾರನಾ ಭಿ” ಎಂದು ಬರೆದಿದ್ದಾರೆ.

ಗಣೇಶನ ಪೂಜೆ ಮಾಡಿದ್ದಕ್ಕೂ ಸಿಟ್ಟಿಗೆದ್ದಿದ್ದ ಮೂಲಭೂತವಾದಿಗಳು

ಬಾಲಿವುಡ್ ನಟ ಶಾರುಖ್ ಖಾನ್ ಆಗಸ್ಟ್ 31, 2022 ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಚಿತ್ರವನ್ನು ಹಂಚಿಕೊಂಡಿದ್ದರು. ಇದು ಅವರ ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದ ಚಿತ್ರವಾಗಿತ್ತು. ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ, ಅವರು ಗಣೇಶ ಚತುರ್ಥಿಯಂದು ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದ್ದರು. ಆದರೆ ಬಹುಶಃ ಅವರ ಸ್ವಂತ ಧರ್ಮದ ಕೆಲವರು ನಟನ ಬಗೆಗಿನ ಈ ವಿಷಯವನ್ನು ಇಷ್ಟಪಡಲಿಲ್ಲ. ಈ ಪೋಸ್ಟ್‌ಗಾಗಿ ಕೆಲವು ಮುಸ್ಲಿಮರು ಅವರನ್ನು ಸೋಶಿಯಲ್ ಮೀಡಿಯಾಗಳಲ್ಲಿ ನಿಂದಿಸಲು ಪ್ರಾರಂಭಿಸಿದರು.

ಈ ಪೋಸ್ಟ್ ಅನ್ನು ಹಂಚಿಕೊಂಡ ನಟ, “ನಾನು ಮತ್ತು ನನ್ನ ಕಿರಿಯ ಮಗ (ಅಬ್ರಾಮ್) ಗಣಪತಿಜೀ ಯನ್ನ ಮನೆಗೆ ಸ್ವಾಗತಿಸಿದ್ದೇವೆ. ಮೋದಕ ರುಚಿಕರವಾಗಿತ್ತು. ಕಠಿಣ ಪರಿಶ್ರಮ, ದೃಢತೆ ಮತ್ತು ದೇವರ ಮೇಲಿನ ನಂಬಿಕೆಯ ಮೂಲಕ ನೀವು ನಿಮ್ಮ ಕನಸುಗಳನ್ನು ಬದುಕಬಹುದು ಎಂಬುದು ಪಾಠ. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು” ಎಂದು ಬರೆದಿದ್ದರು.

ಶಾರುಖ್ ಖಾನ್ ಈ ಪೋಸ್ಟ್‌ನಿಂದ ಕೆಲವರು ಕೋಪಗೊಂಡರು ಮತ್ತು ಅವರ ವಿರುದ್ಧ ವಾಗ್ದಾಳಿ ನಡೆಸಲು ಮುಂದಾದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ತೈಮೂರ್ ಉಲ್ ಹಸನ್ ಎಂಬ ಯೂಸರ್, “ಮುಸ್ಲಿಮರಿಗೆ ಎಂತಹ ಅವಮಾನ ಸರ್. ನೀವು ಮುಸ್ಲಿಂ ಅಥವಾ ಹಿಂದೂವೋ? ಯಾವುದಾದರೂ ಒಂದು ಧರ್ಮವನ್ನು ಆರಿಸಿಕೊಳ್ಳಬೇಕು. ಮುಸ್ಲಿಮರು ಅಲ್ಲಾನನ್ನು ಮಾತ್ರ ಆರಾಧಿಸುತ್ತಾರೆ ಮತ್ತು ಪ್ರವಾದಿ ಮೊಹಮ್ಮದರ ಮಾನವೀಯತೆಯ ಜೀವನವನ್ನು ಬದಲಾಯಿಸಲು ಬಂದರು ಎಂದು ನೀವು ತಿಳಿದಿರಬೇಕು. ಪ್ರವಾದಿಯವರು ನಮಗೆ ಸುಂದರವಾದ ಧರ್ಮವನ್ನು ನೀಡಿದ್ದಾರೆ” ಎಂದು ಕಮೆಂಟ್ ಮಾಡಿದ್ದಾನೆ.

ಜೀಶಾನ್ ಅಹ್ಮದ್ ಅನ್ಸಾರಿ ಎಂಬ ಯೂಸರ್, “ಎಲ್ಲಾ ಮುಸ್ಲಿಮರು ಶಾರುಖ್ ಖಾನ್ ಅವರ ಮುಂಬರುವ ಎಲ್ಲಾ ಚಲನಚಿತ್ರಗಳನ್ನು ಬಹಿಷ್ಕರಿಸಬೇಕು ಏಕೆಂದರೆ ಅಲ್ಲಾ ಹೊರತುಪಡಿಸಿ ಬೇರೆ ದೇವರು ಇಲ್ಲ ಮತ್ತು ಅವರು ಶಿರ್ಕ್ ನೌಜುಬಿಲ್ಲಾ ಮಾಡುತ್ತಿದ್ದಾರೆ. ಅಲ್ಲಾಹನು ಅವರನ್ನು ಸನ್ಮಾರ್ಗದಲ್ಲಿ ನಡೆಸಲಿ” ಎಂದು ಬರೆದಿದ್ದಾನೆ.

ಅದೇ ಅನುಕ್ರಮದಲ್ಲಿ, ಶಾರುಖ್‌ಗೆ ಉತ್ತರಿಸಿದ ಅನ್ಸರ್ ಖಾನ್, “ಮುಸ್ಲಿಮನಾಗಿದ್ದು ಈ ತಪ್ಪು ಮಾಡುತ್ತಿದ್ದೀರಿ, ನೀವು ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳುತ್ತೀರಿ. ಇಂತಹ ವಿಷಯಗಳಿಂದ ದೂರವಿರಿ. ಆದರೆ, ಯಾವುದೇ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ” ಎಂದಿದ್ದಾನೆ.

ಮತ್ತೊಬ್ಬ ಯೂಸರ್ ಕಮೆಂಟ್ ಮಾಡಿ, “ನೀವು ಮುಸ್ಲಿಂ ಅಥವಾ ಹಿಂದೂ? ದಯವಿಟ್ಟು ದೃಢೀಕರಿಸಿ. ಇಸ್ಲಾಂನಲ್ಲಿ ನಾವು ಅಲ್ಲಾನನ್ನ ಮಾತ್ರ ನಂಬುತ್ತೇವೆ ಮತ್ತು ಪ್ರವಾದಿ ಮೊಹಮ್ಮದ್ ಅವರ ಸಂದೇಶವಾಹಕರು!” ಎಂದು ಬರೆದಿದ್ದಾನೆ.

ಶಾರುಖ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಝೈನಾಬ್ ಖಾನ್ ಎಂಬ ಯೂಸರ್ ಹೀಗೆ ಬರೆದಿದ್ದಾರೆ, “ನಬಿ ಪಾಕ್‌ನ ಬಗ್ಗೆ ತಪ್ಪು ಮಾತುಗಳನ್ನಾಡುತ್ತಾರೆ, ಆಗ ನಿಮ್ಮ ಬಾಯಿಂದ ಒಂದೇ ಒಂದು ಪದವೂ ಬರುವುದಿಲ್ಲ. ಹೆಸರಿಗಾಗಿ ಏನು ಮಾಡಬಾರದು. ಒಂದು ವಿಷಯ ಹೇಳಲೇ? ಇಲ್ಲಿ ಇರಬೇಡ”.

ಶಾರುಖ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮೌಲಾನಾ ಹಕೀಮುಲ್ಲಾ, “ಪಾಕಿಸ್ತಾನದ ಪ್ರವಾಹ ಪೀಡಿತ ಜನರು ಸೇರಿದಂತೆ ಎಲ್ಲಾ ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ನಿಮಗೆ ನಾಚಿಕೆಯಾಗಬೇಕು” ಎಂದು ಕಮೆಂಟ್ ಮಾಡಿದ್ದಾನೆ.

ಗಮನಿಸಬೇಕಾದ ಸಂಗತಿಯೆಂದರೆ, ಶಾರುಖ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲೂ ಇದೇ ಪೋಸ್ಟ್ ಮಾಡಿದ್ದಾರೆ, ಆದರೆ ಅಲ್ಲಿಯೂ ಜನರು ಶಾರುಖ್ ಅವರನ್ನು ಸುತ್ತುವರೆದಿದ್ದಾರೆ. ಒಬ್ಬ ಯೂಸರ್ ಈ ಪೋಸ್ಟ್‌ನ್ನ ಮುಂಬರುವ ಚಿತ್ರ ‘ಪಠಾಣ್’ ಗೆ ಲಿಂಕ್ ಮಾಡಿದ್ದಾರೆ ಮತ್ತು ”ಪಠಾಣ್‌ನ್ನ ಬಾಯ್‌ಕಾಟ್ ಮಾಡುವ ಭಯ” ಎಂದು ಬರೆದಿದ್ದಾರೆ. ಇನ್ನೊಬ್ಬ ಯೂಸರ್, “ಯೇ ಶಿರ್ಕ್ ಹೈ. ನೀವು ಮುಸ್ಲಿಂ, ಸತ್ಯವನ್ನು ಬೆಂಬಲಿಸಿ” ಎಂದು ಬರೆದಿದ್ದಾನೆ.

Advertisement
Share this on...