ಬಿಗ್ ಬ್ರೇಕಿಂಗ್: ಬಿವೈ ವಿಜಯೇಂದ್ರಗೆ ಡಿಸಿಎಂ ಪಟ್ಟ? ಗರಿಗೆದರಿದ ಕುತೂಹಲ, ಕಾರಣವೇನು ನೋಡಿ

in Kannada News/News 528 views

ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ನೂತನ ಮಂತ್ರಿಮಂಡಲದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.

ವಿಜಯೇಂದ್ರಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಯಡಿಯೂರಪ್ಪ ಒತ್ತಡ ಹೇರಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನ ಕೊಡದಿದ್ದರೆ ಸಚಿವ ಸ್ಥಾನದೊಂದಿಗೆ ಪ್ರಮುಖ ಖಾತೆ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆಗೆದುಕೊಂಡು ಹೋಗಿದ್ದ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ವಿಜಯೇಂದ್ರ ಅವರ ಹೆಸರು ಕೂಡ ಇದ್ದು, ನಿನ್ನೆ ರಾತ್ರಿ ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತಂತೆ ಕೇಂದ್ರ ನಾಯಕರ ನಡುವೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಇಂದು ಸಂಜೆಗೆ ಸಂಪುಟ ಸೇರುವವರ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ವಿಜಯೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಬಹುದು ಎಂದು ಹೇಳಲಾಗಿದೆ. ಉಪಚುನಾವಣೆಗಳಲ್ಲಿ ವಿಜಯೇಂದ್ರ ತಂತ್ರಗಾರಿಕೆ ತೋರಿದ್ದರು. ಬಿಜೆಪಿ ಗೆಲ್ಲದಂತಹ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಿಜೆಪಿಗೆ ನೆಲೆ ಇಲ್ಲದಂತಹ ಕೆಆರ್ ಪೇಟೆ ಮತ್ತು ಶಿರಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಲ್ಲಿ ವಿಜಯೇಂದ್ರ ಪಾತ್ರ ಪ್ರಮುಖವಾಗಿದ್ದು, ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದರು. ಇವೆಲ್ಲವುಗಳ ನಡುವೆ ಸಂಪುಟಕ್ಕೆ ವಿಜಯೇಂದ್ರ ಕೂಡ ಸೇರ್ಪಡೆಯಾಗಬಹುದು ಎಂದು ಹೇಳಲಾಗುತ್ತಿದೆ.

ವಿಜಯೇಂದ್ರಗೆ ಮಂತ್ರಿಸ್ಥಾನದ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದೇನು?

ಮೊನ್ನೆಯಷ್ಟ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಸಂಜೆ ಪಕ್ಷದ ಸಭೆ ನಡೆಯಲಿದೆ. ಸಂಪುಟ ರಚನೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಮಾಜಿ ಸಚಿವರು ಶಾಸಕರ ಜೊತೆಗೆ ಚರ್ಚೆ ಮಾಡಿದ್ದೀನಿ. ಈಗಿನ ರಾಜಕೀಯ ಸನ್ನಿವೇಶದಲ್ಲಿ ಎಲ್ಲರನ್ನೂ ಒಟ್ಟು ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಬೇಕಿದೆ ಎಂದರು.

ಎಲ್ಲ ಶಾಸಕರಿಗೂ ಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಗೊತ್ತಿದೆ. ಪ್ರಾದೇಶಿಕ ಭಾಗವನ್ನು ಗಮನದಲ್ಲಿಟ್ಟುಕೊಂಡು ರಚನೆ ಮಾಡಲಾವುದು. ಇಂದು ಅಂತಿಮ ಸ್ವರೂಪಕ್ಕೆ ಬರಲಿದೆ. ಎಷ್ಟು ಹಂತದಲ್ಲಿ ಮಾಡಬೇಕು ಎಷ್ಟು ಜನರ ಇರಬೇಕು ಎಂದು ಇವತ್ತು ಚರ್ಚೆ ಆಗಲಿದೆ. ಇಂದು ರಾತ್ರಿಯೇ ನಿರ್ಣಯವಾಗಲಿದೆ ಎಂದು ಹೇಳಿದರು.

ನಾಳೆ ಬೆಂಗಳೂರು ವಾಪಸ್ ಹೋದ್ರೆ ನಾಡಿದ್ದು ಸಂಪುಟ ರಚನೆ ಪಕ್ಕಾ. ಸದ್ಯ ಅಮಿತ್ ಶಾ ಭೇಟಿಗೆ ಪ್ರಯತ್ನ ಮಾಡುತ್ತೇನೆ. ಇನ್ನು ವಿಜಯೇಂದ್ರ ಸಂಪುಟದಲ್ಲಿ ಇರುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಬೊಮ್ಮಾಯಿ ತಿಳಿಸಿದರು.

ಯಾರಿಗೆ ಸಿಗಲಿದೆ ಸಂಪುಟದಲ್ಲಿ ಜಾಗ? ಸಂಭಾವ್ಯ ಸಚಿವರ ಲಿಸ್ಟ್ ಹೀಗಿದೆ ನೋಡಿ

ಬೆಂಗಳೂರು, ಆ.2: ಸಚಿವ ಸಂಪುಟ ರಚನೆಗೆ ಸಂಬಂಧಿಸಿ ಪಕ್ಷದ ವರಿಷ್ಠರ ಭೇಟಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿಲ್ಲಿಗೆ ತೆರಳಿರುವ ಬೆನ್ನಲ್ಲೆ ಸಚಿವರ ಸಂಭಾವ್ಯ ಪಟ್ಟಿಯೊಂದಿಗೆ ಹರಿದಾಡುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ -ಗೃಹ, ಬಿಡಿಎ ಖಾತೆಯನ್ನು ತನ್ನಲ್ಲೆ ಉಳಿಸಿಕೊಳ್ಳಲಿದ್ದರೆ, ಉಪ ಮುಖ್ಯಮಂತ್ರಿಗಳಾಗಿ ಆರ್.ಅಶೋಕ್, ಬಿ.ಶ್ರೀರಾಮುಲು ಸ್ಥಾನ ಪಡೆಯಲಿದ್ದಾರೆ. ಅದೇರೀತಿ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ ಸಚಿವ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಗೋವಿಂದ ಕಾರಜೋಳ ಡಿಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ. ರೇಣುಕಾಚಾರ್ಯ, ಎಸ್.ರಾಮದಾಸ್ ಅವರಿಗೆ ಸಚಿವ ಸ್ಥಾನ ಲಭಿಸಲಿದೆ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸಂಜೆಯ ವೇಳೆ ಸಚಿವರ ಅಂತಿಮ ಪಟ್ಟಿ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.

ಸಂಭಾವ್ಯ ಸಚಿವರು ಎಂದು ಹರಿದಾಡುತ್ತಿರುವ ಪಟ್ಟಿ

ಬೊಮ್ಮಾಯಿ ಸಂಪುಟದಲ್ಲಿ ಯುವ ಶಾಸಕರಿಗೆ ಆದ್ಯತೆ?

ಯುವ ಪಡೆ

ಪೂರ್ಣಿಮಾ ಶ್ರೀನಿವಾಸ, ಪ್ರೀತಂಗೌಡ, ಸುನಿಲ್ ಕುಮಾರ್, ಅರಗಜ್ಞಾನೇಂದ್ರ, ರಾಜೂಗೌಡ ನಾಯಕ, ಅಂಗಾರ, ಡಾ.ಕೆ.ಸುಧಾಕರ್, ಅಶ್ವತ್ಥ ನಾರಾಯಣ್​, ರೇಣುಕಾಚಾರ್ಯ, ಪಿ. ರಾಜೀವ್್, ಮುನಿರತ್ನ

ಸಿನಿಯರ್ಸ್ ಲಿಸ್ಟ್

ಆರ್​.ಅಶೋಕ್, ಕೆ.ಈಶ್ವರಪ್ಪ, ಉಮೇಶ್ ಕತ್ತಿ, ಸುರೇಶ್ ಕುಮಾರ್, ಬಾಲಚಂದ್ರ ಜಾರಕಿಹೊಳಿ, ವಿ. ಸೋಮಣ್ಣ, ಮುರುಗೇಶ್​ ನಿರಾಣಿ, ಎಸ್​.ಟಿ. ಸೋಮಶೇಖರ್್, ಬೈರತಿ ಬಸವರಾಜ್, ಎಂಟಿಬಿ ನಾಗರಾಜ್, ಬಿ.ಸಿ. ಪಾಟೀಲ್, ಶಿವರಾಂ ಹೆಬ್ಬಾರ್

ಕಿಕ್ ಔಟ್ ಲಿಸ್ಟ್

ಪ್ರಭು ಚವ್ಹಾಣ್, ಕೋಟಾ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ, ಲಕ್ಷ್ಮಣ್​ ಸವದಿ, ಶ್ರೀಮಂತ ಪಾಟೀಲ್, ಗೋಪಾಲಯ್ಯ

Advertisement
Share this on...