ಬಿಗ್ ಬ್ರೇಕಿಂಗ್: ಲೀಕ್ ಆಯ್ತು ಜೋ ಬೈಡನ್ ಹಾಗು ಅಫ್ಘಾನಿಸ್ತಾನದಿಂದ ಪಲಾಯನವಾದ ಅಶ್ರಫ್ ಘನಿ ನಡುವಿನ ಫೋನ್ ಸಂಭಾಷಣೆ

in Kannada News/News 227 views

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅಫ್ಘಾನಿಸ್ತಾನದ ಮಾಜಿ ಪ್ರಧಾನಿ ಅಶ್ರಫ್ ಘನಿ ನಡುವಿನ 14 ನಿಮಿಷದ ಸಂಭಾಷಣೆಯ ಮಾಹಿತಿ ಹೊರ ಬಂದಿದೆ. ಕಾಬೂಲ್ ನಗರವನ್ನು ತಾಲಿಬಾನಿಗಳು ವಶಕ್ಕೆಪಡೆಯುವ 23 ದಿನ ಮೊದಲು ಈ ಮಾತುಕತೆ ನಡೆದಿತ್ತು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

Advertisement

23 ಜುಲೈ 2021 ರಂದು ಘನಿ ಮತ್ತು ಬೈಡನ್ ನಡುವೆ ಫೋನ್ ಸಂಭಾಷಣೆ ನಡೆದಿತ್ತು. ಅಂದು ಜೋ ಬೈಡನ್ ತಾಲಿಬಾನಿಗಳನ್ನು ತಡೆಯುವ ಪ್ಲಾನ್ ನೀಡುವಂತೆ ಅಶ್ರಫ್ ಘನಿಗೆ ಸೂಚಿಸಿದ್ದರು. ನಾವು ಸಹಾಯ ಮಾಡಲು ಸಿದ್ಧರಿದ್ದು, ನಿಮ್ಮ ಯೋಜನೆಯ ರೂಪರೇಷಗಳನ್ನು ಮೊದಲು ತಿಳಿಸಬೇಕು ಎಂದು ಷರತ್ತು ಹಾಕಿದ್ದರು. ಜೊತೆಗೆ ತಾಲಿಬಾನಿಗಳ ವಿರುದ್ಧದ ನಡೆಯುವ ಹೋರಾಟ ಅಫ್ಘಾನಿಸ್ತಾನದ ಜನರಲ್ ಬಿಸ್ಮಿಲ್ಲಾಹ ನೇತೃತ್ವದಲ್ಲಿ ಮುನ್ನಡೆಯಬೇಕು ಎಂದು ಹೇಳಿದ್ದರು.

ತಾಲಿಬಾನಿಗಳನ್ನು ತಡೆಯಲು ಅಮೆರಿಕ ಸಂಪೂರ್ಣ ಸಹಾಯಕ್ಕೆ ಮುಂದಾಗಿತ್ತು ಎಂಬುವುದು ಸಂಭಾಷಣೆಯಲ್ಲಿ ತಿಳಿದು ಬಂದಿದೆ. ಅಫ್ಘಾನಿಸ್ತಾನದ ರಕ್ಷಣೆಗಾಗಿಯೇ ಅಮೆರಿಕ ಏರ್ ಸ್ಟ್ರೈಕ್ ನಡೆಸಿತ್ತು ಸಹ ಎಂದು ವರದಿಗಳು ಪ್ರಕಟವಾಗುತ್ತಿವೆ.

ಇದೇ ಸಂಭಾಷಣೆಯಲ್ಲಿ ಅಶ್ರಫ್ ಘನಿ ಪಾಕಿಸ್ತಾನದ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ತಾಲಿಬಾನಿಗಳ ಸಪೋರ್ಟ್ ಗಾಗಿ ಪಾಕಿಸ್ತಾನ ತನ್ನ ದೇಶದ 10 ರಿಂದ 15 ಸಾವಿರ ಜನರನ್ನು ಅವರೊಂದಿಗೆ ಕಳುಹಿಸುತ್ತಿದೆ. ಅಫ್ಘಾನಿಸ್ತಾನದ ಹೋರಾಟದಲ್ಲಿ ಪಾಕ್ ಬೆಂಬಲ ಪಡೆದಿರುವ ತಾಲಿಬಾನಿಗಳು ಪ್ರಬಲವಾಗಿ ದಾಳಿ ಮಾಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಜುಲೈ 23ರಂದು ಇಬ್ಬರು ನಾಯಕರು ನಡೆದಿದೆ ಎನ್ನಲಾದ ಫೋನ್ ಸಂಭಾಷಣೆಯ ಮಾಹಿತಿಯನ್ನು ನ್ಯೂಸ್ ಏಜೆನ್ಸಿ ಹಂಚಿಕೊಂಡಿದೆ. ಈ ವರದಿ ಬಗ್ಗೆ ಜೋ ಬೈಡನ್ ಅಥವಾ ಶ್ವೇತ ಭವನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇತ್ತ ಅಶ್ರಫ್ ಘನಿ ಸಹ ಈ ವರದಿ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆಗೊಳಿಸಿಲ್ಲ. ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ

ಆಗಸ್ಟ್ 15ರಂದು ಅಶ್ರಫ್ ಘನಿ ದೇಶ ತೊರೆದ ನಂತರ ಫುಲ್ ಆ್ಯಕ್ಟಿವ್ ಆದ ತಾಲಿಬಾನಿಗಳು ಇಡೀ ನಗರವನ್ನು ತಮ್ಮ ತೆಕ್ಕಗೆ ತೆಗೆದುಕೊಂಡರು. ಆಗಸ್ಟ್ 31ರ ರಾತ್ರಿ ಅಮೆರಿಕ ಸೇನೆ ಹಿಂದಿರುಗುತ್ತಿದ್ದಂತೆ ಸ್ವತಂತ್ರ ಸಿಕ್ಕಿತು ಎಂದು ಗುಂಡಿನ ಮಳೆಗೈದು ಸಂಭ್ರಮಾಚರಣೆ ಮಾಡಿದ್ದವು. ನಂತರ ಅಮೆರಿಕ ಸೇನೆಯ ಹೆಲಿಕಾಪ್ಟರ್ ಗೆ ಶವ ಕಟ್ಟಿ ಹಾರಾಟ ನಡೆಸಿ ವಿಕೃತಿಯನ್ನು ಮೆರದಿದ್ದವು. ಇದೀಗ ಭಾರತ ಸೇರಿದಂತೆ ಹಲವು ದೇಶಗಳ ಜೊತೆ ತಾಲಿಬಾನಿಗಳು ಔಪಚಾರಿಕ ಮಾತುಕತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ

ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದುಕೊಂಡ ಅಧ್ಯಕ್ಷ ಜೋ ಬೈಡನ್ ನಿರ್ಧಾರ ಅಮೆರಿಕಾ ಇತಿಹಾಸದಲ್ಲಿ ದೊಡ್ಡ ಕಪ್ಪು ಚುಕ್ಕೆ ಆಗಲಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.

ಜೋ ಬೈಡನ್ ಸಮರ್ಥನೆ:

ಅಫ್ಘಾನಿಸ್ತಾನ ಸೇನೆಯೇ ಹೋರಾಟ ಮಾಡದಿರುವಾಗ ನಮ್ಮ ಸೈನಿಕರು ಅಲ್ಲಿ ಬಲಿ ಆಗುವುದರಲ್ಲಿ ಅರ್ಥ ಇಲ್ಲ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಪೂರ್ಣ ಕೈವಶ ಮಾಡಿಕೊಡ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಸೇನೆ ಹಿಂಪಡೆಯುವ ಬಗ್ಗೆ ಟ್ರಂಪ್ ಅವಧಿಯಲ್ಲಿ ಒಪ್ಪಂದ ಆಗಿತ್ತು. ಆ ಒಪ್ಪಂದವನ್ನು ಜಾರಿಗೊಳಿಸುತ್ತಿದ್ದೇನೆ ಎಂದು ಹೇಳಿದ್ದರು.

ಈ ಹಿಂದೆ ಮಾತುಕತೆ ವೇಳೆ ಅಫ್ಘಾನಿಸ್ತಾನ ಸೇನೆ ಹೋರಾಟ ಮಾಡುವುದಾಗಿ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದರು. ಆದರೆ ಅವರೇ ಓಡಿಹೋಗಿದ್ದಾರೆ. ಅಫ್ಘಾನ್ ಸೇನೆಯೇ ಹೋರಾಟ ಮಾಡದಿರುವಾಗ ನಮ್ಮ ಸೈನಿಕರು ಅಲ್ಲಿ ಬಲಿ ಆಗುವುದರಲ್ಲಿ ಅರ್ಥ ಇಲ್ಲ. ಈ ಹಿಂದೆ ಮಾಡಿದ ತಪ್ಪುಗಳನ್ನೇ ಮತ್ತೆ ಮಾಡುವುದಿಲ್ಲ. ಈಗಾಗಲೇ ನಾವು 3 ಶತಕೋಟಿ ಡಾಲರ್ ಹಣವನ್ನು ಖರ್ಚು ಮಾಡಿದ್ದೇವೆ. ಈ ಯುದ್ಧದಲ್ಲಿ ಇನ್ನೂ ಎಷ್ಟು ತಲೆಮಾರಿನವರೆಗೆ ಅಮೇರಿಕದ ಗಂಡು ಮತ್ತು ಹೆಣ್ಣು ಮಕ್ಕಳು ತಮ್ಮ ಜೀವವನ್ನು ಕಳೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದರು.

ತಾಲಿಬಾನ್ ಕುರಿತು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಎಂಪಿಎಲ್‍ಬಿ)ನ ವಕ್ತಾರ ನೋಮಾನಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಾಲಿಬಾನಿಗಳಿಗೆ ಶುಭಕೋರಿರುವ ನೋಮಾನಿ, ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದ್ದನು ಸಮರ್ಥಿಸಿಕೊಂಡು, ನಿಮಗೆ ಹಿಂದು ಮುಸ್ಲಿಮರು ಸಲಾಮ್ ಹೇಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Advertisement
Share this on...