ಬಿಡುಗಡೆಯಾಯ್ತು 2021 ರ T20 ತಂಡಗಳ ವೇಳಾಪಟ್ಟಿ: ಪಾಕ್ ಹೊರಹೋಗೋದು ಖಚಿತ? ಇಲ್ಲಿದೆ ಮಾಹಿತಿ

in Kannada News/News/ಕ್ರೀಡೆ 126 views

ಕದನ ಕುತೂಹಲಕ್ಕೆ ಮತ್ತೆ ವೇದಿಕೆ ಸಿದ್ದವಾಗಿದ್ದು ಭಾರತ ಮತ್ತು ಪಾಕಿಸ್ತಾನ  ಒಂದೇ ಗುಂಪಿನಲ್ಲಿ ಮುಖಾಮುಖಿಯಾಗುತ್ತಿವೆ. ಇದೇ ಅಕ್ಟೋಬರ್‌ 17ರಿಂದ ನವೆಂಬರ್‌ 14ರವರೆಗೆ ದುಬೈನಲ್ಲಿ  ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಲಿದ್ದು ಇಲ್ಲಿ ಉಭಯ ತಂಡಗಳು ಒಂದೇ ಗುಂಪಿನಲ್ಲಿ ಇವೆ ಎಂದು ಐಸಿಸಿ ಸ್ಪಷ್ಟ ಪಡಿಸಿದೆ.

Advertisement

2007ರಲ್ಲಿ ಮೊದಲ ಬಾರಿಗೆ ನಡೆದ  ಟಿ20 ಚುಟುಕು ಕ್ರಿಕೆಟ್​ನ ವಿಶ್ವಕಪ್ ಪಂದ್ಯದ ಫೈನಲ್‌ನಲ್ಲಿ ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕ್‌ ವಿರುದ್ಧ ಗೆದ್ದು ಚಾಂಪಿಯನ್​ ಆಗಿ ಹೊರಹೊಮ್ಮಿತ್ತು.

ಭಾರತವು ಸೂಪರ್ 12 ರ ಗ್ರೂಪ್ 2 ರಲ್ಲಿ ಸ್ಥಾನ ಪಡೆದಿದೆ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ರೌಂಡ್ 1 ರಿಂದ ಎರಡು ಕ್ವಾಲಿಫಯರ್​ ತಂಡಗಳು. ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗಳು ಗ್ರೂಪ್ 1 ರಲ್ಲಿದ್ದಾರೆ ಮತ್ತು ರೌಂಡ್ 1 ರಿಂದ ಎರಡು ಕ್ವಾಲಿಫಯರ್​ ತಂಡಗಳು.

ಗುಂಪು 1: ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವಿನ್ನರ್ ಗ್ರೂಪ್ ಎ, ರನ್ನರ್ ಅಪ್ ಗ್ರೂಪ್ ಬಿ

ಗುಂಪು 2: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ರನ್ನರ್ ಅಪ್ ಗುಂಪು ಎ, ವಿಜೇತ ಗುಂಪು ಬಿ.

ಗುಂಪು ಎ: ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್, ನಮೀಬಿಯಾ

ಗುಂಪು ಬಿ: ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ, ಓಮನ್

ಅರ್ಹತಾ ಸುತ್ತಿನ ಗ್ರೂಪ್‌ ‘ಎ’ ವಿಭಾಗದಲ್ಲಿ ಶ್ರೀಲಂಕಾ, ಐರ್ಲೆಂಡ್‌, ನೆದರ್ಲೆಂಡ್ಸ್‌ ಮತ್ತು ನಮಿಬಿಯಾ ತಂಡಗಳು ಸೆಣಸಲಿದ್ದು, ‘ಬಿ’ ಗುಂಪಿನಲ್ಲಿ ಬಾಂಗ್ಲಾದೇಶ ಒಮಾನ್‌, ಪಪುವಾ ನ್ಯೂ ಗಿನಿ ಮತ್ತು ಸ್ಕಾಟ್ಲೆಂಡ್‌ ತಂಡಗಳು ಪೈಪೋಟಿ ನಡೆಸಲಿವೆ ಎಂದು ಐಸಿಸಿ ಶುಕ್ರವಾರ ತನ್ನ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಭಾರತದ ಆತಿಥ್ಯದಲ್ಲಿ ನಡೆಯಬೇಕಿದ್ದ ಟಿ20 ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯನ್ನು ಕೋವಿಡ್​ 19 ಕಾರಣದಿಂದ ಯುಎಇಗೆ ವರ್ಗಾಯಿಸಲಾಗಿದೆ. ತವರು ನೆಲದಲ್ಲಿ ಪಂದ್ಯ ನಡೆಯುತ್ತದೆ ಎಂದು ಆಸೆಯಿಂದ ಇದ್ದ ಕ್ರಿಕೆಟ್​ ಪ್ರೇಮಿಗಳಿಗೆ ಇದು ಕೊಂಚ ಬೇಸರದ ಸಂಗತಿ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಒಮಾನ್​ಲ್ಲಿ ನಡೆಲಿರುವ ಪಂದ್ಯಾವಳಿಯ ಬಗ್ಗೆ ಮಾತಾಡಿದ್ದು, “ಐಸಿಸಿ ಪುರುಷರ ಟಿ 20 ವಿಶ್ವಕಪ್‌ನ ಆತಿಥ್ಯದೊಂದಿಗೆ ಒಮಾನ್ ದೇಶವು ಸಹ ವಿಶ್ವ ಕ್ರಿಕೆಟ್‌ನ ಚೌಕಟ್ಟಿನಲ್ಲಿ ಸೇರಿಸಿಕೊಳ್ಳುತ್ತಿರುವುದು ಅತ್ಯಂತ ಸಂತಸದಾಯಕ ಸಂಗತಿ. ಇದು ಬಹಳಷ್ಟು ಯುವ ಆಟಗಾರರು ಆಟದ ಬಗ್ಗೆ ಆಸಕ್ತಿ ವಹಿಸಲು ಸಹಾಯ ಮಾಡುತ್ತದೆ. ಇದು ವಿಶ್ವ ದರ್ಜೆಯ ಘಟನೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು. “ಗುಂಪುಗಳ ಘೋಷಣೆಯೊಂದಿಗೆ, ಐಸಿಸಿ ಟಿ 20 ವಿಶ್ವಕಪ್​ಗೆ ಕ್ಷಣಗಣನೆ ಎಣಿಸುವಂತಾಗಿದೆ. ಇಲ್ಲಿ ಗುಂಪುಗಳು ಎಂದು ನಾವು ನೋಡುವುದು ಬೇಡ. ರೋಚಕ ಆಟವನ್ನು ಸವಿಯುವ ಕಡೆಗೆ ನಮ್ಮ ಗಮನವನ್ನು ಇರಿಸೋಣ. ಈ ಬಾರಿಯಂತೂ ಅತ್ಯಂತ ಕುತೂಹಲಕಾರಿ ಹಾಗೂ ಕ್ರೀಡಾ ಅಭಿಮಾನಿಗಳೆಲ್ಲಾ ಉಗುರು ಕ ಚ್ಚು ವಂ ತಹ ಪಂದ್ಯಾವಳಿ ಇದಾಗಲಿದೆ ಎಂದಿದ್ದಾರೆ.

ಫೈನಲ್ ಗೂ ತಲುಪಲ್ಲ ಪಾಕ್

ಈ ಹಿಂದೆ ಭಾರತ ಪಾಕ್ ನಡುವಿನ ಬಹುತೇಕ ಪಂದ್ಯಗಳಲ್ಲಿ ಭಾರತವೇ ಗೆದ್ದಿದೆ. ಭಾರತ ಮತ್ತು ಪಾಕ್ ಒಂದೇ ಗ್ರೂಪ್ ನಲ್ಲಿರುವ ಕಾರಣ ಭಾರತ ಪಾಕ್‌ನ್ನ ಸೋಲಿಸಿ ಹೊರಹಾಕುತ್ತೆ, ಹಾಗಾಗಿ ಪಾಕ್ ಫೈನಲ್ ತಲುಪೋಕೆ ಸಾಧ್ಯವೇ ಇಲ್ಲ ಎಂದು ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಯನ್ನ ಸೋಶಿಯಲ್ ಮೀಡಿಯಾಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

Advertisement
Share this on...