ಬುರ್ಖಾ, ಜಾಲಿ ಟೋಪಿ ಕಳಚಿ ಹಿಂದೂ ಧರ್ಮಕ್ಕೆ ಘರ್‌ವಾಪಸಿ ಮಾಡಿದ 80 ಮುಸ್ಲಿಮರು: ಸ್ಥಳೀಯ ಮುಸ್ಲಿಂ ಶಾಸಕನ ಭಯದಿಂದ ಇಸ್ಲಾಂಗೆ ಮತಾಂತರವಾಗಿದ್ದ ಕುಟುಂಬಗಳು

in Uncategorized 12,863 views

ಡಿಸೆಂಬರ್ 8, 2022 ರಂದು ಉತ್ತರ ಪ್ರದೇಶದ ರಾಂಪುರ್‌ ಮೊದಲ ಹಿಂದೂ ಶಾಸಕರನ್ನು ಪಡೆದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ರಾಂಪುರ್ ದಲ್ಲಿ ಹಿಂದುವೊಬ್ಬ ಶಾಸಕನಾಗಿ ಆಯ್ಕೆಯಾಗಿದ್ದಾನೆ. 20 ಚುನಾವಣೆಗಳ ನಂತರ ಈ ಅವಕಾಶ ಸಿಕ್ಕಿದೆ. ಇದೀಗ ರಾಂಪುರ ಜಿಲ್ಲೆಯ ಸುಮಾರು ಹನ್ನೆರಡು ಕುಟುಂಬಗಳ 80 ಸದಸ್ಯರು ಹಿಂದೂ ಧರ್ಮಕ್ಕೆ ಘರ್‌ವಾಪಸಿ ಮಾಡಿದ್ದಾರೆ. ಆಜಂ ಖಾನ್‌ನ ಭಯದಿಂದ ತಾವು ಇಸ್ಲಾಂಗೆ ಮತಾಂತರವಾಗಿದ್ದೆವು ಎಂದು ಅವರು ಹೇಳುತ್ತಾರೆ.

Advertisement

ಈ ಜನರು ಮುಜಫರ್‌ನಗರದ ಆಶ್ರಮದಲ್ಲಿ ಘರ್‌ವಾಪಸಿ ಮಾಡಿದರು. ಭಾನುವಾರ (ಡಿಸೆಂಬರ್ 11, 2022) ಶುದ್ಧೀಕರಣದ ನಂತರ, ಮಹಾರಾಜ್ ಯಶ್ವೀರ್ ಇವರನ್ನು ಮತ್ತೆ ಹಿಂದೂ ಧರ್ಮಕ್ಕೆ ಘರ್‌ವಾಪಸಿ ಮಾಡಿಸಿದರು. ದಲಿತ ಸಮುದಾಯವರಾಗಿದ್ದ ಇವರು ಗಂಗಾಜಲ ಕುಡಿದು ಗಾಯತ್ರಿ ಮಂತ್ರ ಪಠಿಸಿದರು. ಇಸ್ಲಾಮಿಕ್ ಟೋಪಿಗಳು ಮತ್ತು ಬುರ್ಖಾಗಳನ್ನು ಧರಿಸಿ ಬಂದಿದ್ದ ಈ ಜನರು ಮನೆಗೆ ಹಿಂದಿರುಗುವಾಗ ಭಗವಾನ್ ಶ್ರೀರಾಮನ ಚಿತ್ರಗಳೊಂದಿಗೆ ತಮ್ಮ ಮನೆಗಳಿಗೆ ಮರಳಿದರು.

ಮಾಧ್ಯಮ ವರದಿಗಳ ಪ್ರಕಾರ, ಮುಜಫರ್‌ನಗರದ ಬಾಘ್ರಾ ಬ್ಲಾಕ್‌ನಲ್ಲಿರುವ ಯೋಗ ಸಾಧನಾ ಆಶ್ರಮದಲ್ಲಿ ಈ ಘರ್‌ವಾಪಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದನ್ನು ಮಹಾರಾಜ್ ಯಶ್ವೀರ್ ಅವರು ಪೂರ್ಣಗೊಳಿಸಿದ್ದಾರೆ. ಘರ್‌ವಾಪಸಿ ಮಾಡಿದ ಸದಸ್ಯರ ಮೇಲೆ ಅಜಂ ಖಾನ್ ನಡೆಸಿದ ದೌರ್ಜನ್ಯದ ಬಗ್ಗೆ ಮಹಾರಾಜ್ ಯಶ್ವೀರ್ ಮಾಹಿತಿ ನೀಡಿದರು. ಈ ಎಲ್ಲಾ 80 ಜನರನ್ನು ದುರಾಸೆ ಮತ್ತು ಬೆದರಿಕೆಯಿಂದ ಇಸ್ಲಾಂಗೆ ಮತಾಂತರಿಸಲಾಗಿತ್ತು ಎಂದು ಅವರು ಹೇಳಿದರು. ಘರ್‌ವಾಪಸಿ ಮಾಡಿರುವ ಜನರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಅವರು ವೇದ ಮಂತ್ರಗಳ ನಡುವೆ ಹವನವನ್ನು ಮಾಡುತ್ತಿದ್ದಾರೆ.

ಘರ್‌ವಾಪಸಿ ಮಾಡಿದವರ ಹೆಸರನ್ನು ಈಗ ಹಿಂದೂ ಧರ್ಮದ ಪ್ರಕಾರ ಮರುನಾಮಕರಣ ಮಾಡಲಾಗಿದೆ. ಇಮ್ರಾನಾ ಅವರನ್ನು ಈಗ ಕವಿತಾ ಎಂದು ಕರೆಯಲಾಗುತ್ತದೆ ಮತ್ತು ಫರ್ಜಾನಾ ಈಗ ಸವಿತಾ ಎಂದು ಕರೆಯಲ್ಪಡುತ್ತಾರೆ. ಸಮಾಜವಾದಿ ಪಕ್ಷದ ಸರ್ಕಾರದಲ್ಲಿ ಅಜಂ ಖಾನ್ ತಮ್ಮ ಕುಟುಂಬ ಮಾತ್ರವಲ್ಲದೆ ಇನ್ನೂ ಅನೇಕ ಕುಟುಂಬಗಳು ಕಿರುಕುಳಕ್ಕೊಳಗಾಗಿದ್ದವು ಎಂದು ಕವಿತಾ ಹೇಳಿದರು. ಜನರ ಮನೆಗಳನ್ನೂ ಕೆಡವಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರತಿಯೊಬ್ಬರ ಪ್ರಕಾರ, ಅಜಂ ಖಾನ್‌ನ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು, ಇಸ್ಲಾಂಗೆ ಮತಾಂತರವಾಗುವುದೇ ತಮ್ಮ ಬಳಿ ಉಳಿದಿದ್ದ ಕೊನೆಯ ಆಯ್ಕೆಯಾಗಿತ್ತು ಎಂದು ತಿಳಿಸಿದರು.

ಇಮ್ರಾನಾ ಹಿಂದೂ ಧರ್ಮಕ್ಕೆ ಮರಳಿದ ನಂತರ ತುಂಬಾ ಸಂತೋಷವಾಗಿದೆ ಎಂದು ಹೇಳಿದರು. ಇಸ್ಲಾಂಗೆ ಮತಾಂತರಗೊಳ್ಳುವಂತೆ ಅಜಂ ಖಾನ್‌ನ ಹಿಂಬಾಲಕರು ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಿದರು. ಆಜಮ್‌ನಿಂದಾಗಿ ಪಾತ್ರೆಗಳು ಸಹ ಉಳಿದಿರಲಿಲ್ಲ ಎಂದು ಅವರು ಹೇಳಿದರು. ಮತ್ತೊಂದೆಡೆ, ಫರ್ಜಾನಾದಿಂದ ಸವಿತಾ ಆದ ಮಹಿಳೆ ಆಜಮ್ ಖಾನ್ ಒತ್ತಡದಿಂದ ಇಸ್ಲಾಂಗೆ ಮತಾಂತರವಾಗಬೇಕಾಯಿತು ಎಂದು ಹೇಳಿದರು. ಅವರ ಜಮೀನು ಮತ್ತು ಆಸ್ತಿಯನ್ನು ಸಹ ಕಸಿದುಕೊಳ್ಳಲಾಯಿತು. ಘರ್‌ವಾಪಸಿ ನಂತರ ಈ ಎಲ್ಲರಿಗೂ ಶ್ರೀರಾಮನ ಚಿತ್ರಗಳನ್ನು ನೀಡಲಾಯಿತು.

Advertisement
Share this on...