ಟಾಪ್ ರ‌್ಯಾಂಕ್ ಪತ್ರಕರ್ತರು (Top Rank Journalists): ನ್ಯೂಸ್ ಚಾನೆಲ್‌ನಲ್ಲಿ ಸುದ್ದಿ ನಿರೂಪಕನ ಪಾತ್ರ ಬಹಳ ಮುಖ್ಯ. ಆಂಕರ್‌ನ ಕೆಲಸವು ಸುದ್ದಿಯನ್ನು ಪಡೆಯುವುದು ಮಾತ್ರವಲ್ಲ, ಆ ಸುದ್ದಿಗಳೊಂದಿಗೆ ಜನರನ್ನು ಸಂಪರ್ಕಿಸುವುದು. ಈ ವಿಷಯದ ಎಲ್ಲಾ ಜವಾಬ್ದಾರಿಯು ಆಂಕರ್‌ನ ಮೇಲೆಯೇ ಇರುತ್ತದೆ. ಆ ಸುದ್ದಿಯನ್ನು ಸರಿಯಾದ ರೀತಿಯಲ್ಲಿ ಹೇಳಬೇಕು ಇದರಿಂದ ಸಾಮಾನ್ಯ ಜನರು ಆ ಸುದ್ದಿಯೊಂದಿಗೆ ಸಂಪರ್ಕ ಸಾಧಿಸುವುದಾಗಿರುತ್ತದೆ.
ಈಗ ಈ ಎಲ್ಲದರ ಮಧ್ಯೆ, ಸುದ್ದಿ ನಿರೂಪಕನು ಚಾನಲ್‌ನ ಮುಖವಾಗಿದ್ದಾಗ, ಚಾನಲ್‌ನ ಶೋವನ್ನ ಯಶಸ್ವಿಯಾಗಿಸುವ ಜವಾಬ್ದಾರಿಯನ್ನು ಆತ ಹೊಂದಿರುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ನ್ಯೂಸ್ ಚಾನೆಲ್ ಗಳು, ಆ‌್ಯಂಕರ್ ಗೆ ಒಳ್ಳೆಯ ಸ್ಯಾಲರಿ ಕೂಡ ಕೊಡಬೇಕಾಗುತ್ತದೆ. ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಸಂಬಳ ರೂಪದಲ್ಲಿ ಲಕ್ಷಾಂತರ ಅಲ್ಲ ಕೋಟಿಗಳಲ್ಲಿ ಸಂಭಾವನೆ ಪಡೆಯುವ ಆ್ಯಂಕರ್ ಗಳ ಬಗ್ಗೆ
ಶ್ವೇತಾ ಸಿಂಗ್:
ಶ್ವೇತಾ ಸಿಂಗ್ ಖ್ಯಾತ ಪತ್ರಕರ್ತೆಯಾಗಿದ್ದಾರೆ. ಇವರು ಆಜ್ ತಕ್ ಚಾನೆಲ್ ನಲ್ಲಿ ಕೆಲಸ ಮಾಡುತ್ತಾರೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಇವರು ನ್ಯೂಸ್ ರೂಮ್ ಗಿಂತ ಗ್ರೌಂಡ್ ಝೀರೋ ನಲ್ಲಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಇವರ ವಾಯ್ಸ್ ಕೂಡ ವಿಶಿಷ್ಟ ಶೈಲಿಯದ್ದಾಗಿದೆ ಹಾಗು ಇವರು ಪ್ರತಿ ತಿಂಗಳು 8 ಲಕ್ಷ ಸಂಬಳ ಸಿಗುತ್ತದೆ.
ಅಂಜನಾ ಓಂ ಕಶ್ಯಪ್:
ಅಂಜನಾ ಓಂ ಕಶ್ಯಪ್ ಕೂಡ ಆಜ್ ತಕ್ ಚಾನೆಲ್ ಗಾಗಿ ಕೆಲಸ ಮಾಡುತ್ತಾರೆ. ಅಂಜನಾ ತಮ್ಮ ಸೌದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಖಡಕ್ ಆ್ಯಂಕರಿಂಗ್ ಗೂ ಖ್ಯಾತರಾಗಿದ್ದಾರೆ. ಆಜ್ ತಕ್‌ನ ಹಿಟ್ ಶೋ ಎಂದೇ ಕರೆಸಿಕೊಳ್ಳುವ ಹಲ್ಲಾ ಬೋಲ್ ನ್ನ ಇವರು ಹೋಸ್ಟ್ ಮಾಡುತ್ತಾರೆ. ಇವರ ಸಂಬಳದ ಬಗ್ಗೆ ಮಾತಮಾಡುವುದಾದರೆ ಇವರು ವಾರ್ಷಿಕವಾಗಿ 1 ಕೋಟಿ ಸಂಬಳ ಪಡೆಯುತ್ತಾರೆ.
ಅರ್ನಬ್ ಗೋಸ್ವಾಮಿ:
ಅರ್ನಬ್ ಗೋಸ್ವಾಮಿ ವಿಶಿಷ್ಡ ರೀತಿಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುವಲ್ಲಿ ಖ್ಯಾತರಾಗಿದ್ದಾರೆ. ಅರ್ನಬ್ ಗೋಸ್ವಾಮಿ ರಿಪಬ್ಲಿಕ್ ಭಾರತ್ ನ್ಯೂಸ್ ಚಾನರಲ್‌ನ ಸಿಇಓ ಕೂಡ ಆಗಿದ್ದು ‘ಪೂಛತಾ ಹೈ ಭಾರತ್’ ಕಾರ್ಯಕ್ರಮದಿಂದ ಫೇಮಸ್ ಆಗಿದ್ದಾರೆ. ಇವರ ಸಂಬಳದ ಬಗ್ಗೆ ಮಾತನಾಡುವುದಾದರೆ ಇವರು ವಾರ್ಷಿಕ 12 ಕೋಟಿ ಸಂಬಳ ಪಡೆಯುತ್ತಾರೆ.
ರಾಜದೀಪ್ ಸರದೇಸಾಯಿ:
ರಾಜದೀಪ್ ಸರದೇಸಾಯಿ ಒಬ್ಬ ಸೀನಿಯರ್ ಜರ್ನಲಿಸ್ಟ್ ಆಗಿದ್ದಾರೆ. ಜೊತೆಗೆ ಇವರು ಒಬ್ಬ ಪತ್ರಕರ್ತನ ಜೊತೆ ಜೊತೆಗೆ ಲೇಖಕರೂ ಹೌದು. ಇವರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ. ರಾಜದೀಪ್ ಸರದೇಸಾಯಿ ಇಂಡಿಯಾ ಟುಡೆ ಗಾಗಿ ಕೆಲಸ ಮಾಡುತ್ತಾರೆ. ಇವರ ಸಂಬಳ ವಾರ್ಷಿಕ 5 ಕೋಟಿಯಷ್ಟಿದೆ.
ಸುಧೀರ್ ಚೌಧರಿ:
ಸುಧೀರ್ ಚೌಧರಿ ಝೀ ನ್ಯೂಸ್ ಗಾಗಿ ಕೆಲಸ ಮಾಡುತ್ತಾರೆ ಹಾಗು ಚಾನೆಲ್‌ನ ವರಿಷ್ಠ ಸಂಪಾದಕ & ಬ್ಯುಸಿನೆಸ್ ಹೆಡ್ ಕೂಡ ಆಗಿದ್ದಾರೆ. ಇವರ ಪ್ರಸಿದ್ಧ ಡಿಎನ್‌ಎ ಶೋ ಜನಪ್ರೀಯ ಶೋ ಆಗಿದೆ. ಇವರ ಸಂಬಳದ ಬಗ್ಗೆ ಮಾತನಾಡುವುದಾದರೆ ಇವರಿಗೆ ವಾರ್ಷಿಕ 3 ಕೋಟಿ ಸಂಬಳವಿದೆ.
ವಿಕ್ರಮ್ ಚಂದಾ:
ವಿಕ್ರಮ್ ಚಂದಾ ಎನ್‌ಡಿಟಿವಿ ಗಾಗಿ ಕೆಲಸ ಮಾಡುತ್ತಾರೆ. ಚಾನೆಲ್ ನಲ್ಲಿ ಫೈಟ್ ಶೋ ಹಾಗು ಗೆಜೆಟ್ ಗುರು ಶೋ ಗಳನ್ನ ಹೋಸ್ಟ್ ಮಾಡುತ್ತಾರೆ. ವಿಕ್ರಮ್ ಚಂದಾ ರವರ ವಾರ್ಷಿಕ ಸಂಬಳ 2 ಕೋಟಿಯಷ್ಟಿದೆ.
ರವೀಶ್ ಕುಮಾರ್:
ರವೀಶ್ ಕುಮಾರ್ ಒಬ್ಬ ಆ್ಯಂಕರ್ ಅಷ್ಟೇ ಅಲ್ಲದೆ ಲೇಖಕರೂ ಹೌದಯು. ಇವರು ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಇವರು ದೇಶದ ಪ್ರಸಿದ್ಧ ಪತ್ರಕರ್ತರ ಪೈಕಿ ಒಬ್ಬರು ಹಾಗು ಎನ್‌ಡಿಟಿವಿ ಯಲ್ಲಿ ವರಿಷ್ಠ ಸಂಪಾದಕ ಹಾಗು ಆ್ಯಂಕರ್ ಆಗಿ ಕೆಲಸ ಮಾಡುತ್ತಾರೆ. ಇವರ ವಾರ್ಷಿಕ ಸಂಬಳ 2.16 ಕೋಟಿಯಷ್ಟಿದೆ.
ಬರ್ಖಾ ದತ್:
ಬರ್ಖಾ ದತ್ ವರಿಷ್ಠ ಪತ್ರಕರ್ತರಾಗಿದ್ದಾರೆ. ಬರ್ಖಾ ದತ್ ಗೆ ಅವರದೇ ಆದ ಫ್ಯಾನ್ ಬೇಸ್ ಇದೆ. ಇವರು ಮೊದಲು ಎನ್‌ಡಿಟಿವಿ ಯಲ್ಲಿ ಕೆಲಸ ಮಾಡುತ್ತಿದ್ದರು. ಬರ್ಖಾ ದತ್ ಗೆ ವಾರ್ಷಿಕ 1 ರಿಂದ 3 ಕೋಟಿ ಸಂಬಳ ಸಿಗುತ್ತದೆ.