ಭಾರತದ ಏಕೈಕ ಲೇಡಿ ಜೇಮ್ಸ್ ಬಾಂಡ್: ಒಮ್ಮೆ ಮನೆಕೆಲಸದಾಕೆ, ಮತ್ತೊಮ್ಮೆ ಗರ್ಭಿಣಿ ಮಹಿಳೆಯಂತೆ ಅನೇಕ ವೇಷ ಧರಿಸಿ ಭೇದಿಸಿದ್ದಾಳೆ 80 ಸಾವಿರಕ್ಕೂ ಅಧಿಕ ಕೇಸ್

in Kannada News/News/ಕನ್ನಡ ಮಾಹಿತಿ 893 views

ನಮ್ಮ‌ ದೇಶದ ಮೊಟ್ಟಮೊದಲ ಲೇಡಿ ಸ್ಪೈ (ಮಹಿಳಾ ಗೂಢಚಾರಿ) ಯಾರು ಅನ್ನೋದು ನಿಮಗೆ ಗೊತ್ತೇ? ಈ ಮಹಿಳೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಲೇಬೇಕು. ಬನ್ನಿ ಈ ಅಂಕಣದ ಮೂಲಕ ನಾವು ನಿಮಗೆ ನಮ್ಮ ದೇಶದ ಮೊಟ್ಟ ಮೊದಲ ಮಹಿಳಾ ಗೂಢಚಾರಿಯ ಬಗ್ಗೆ ತಿಳಿಸಲಿದ್ದೇವೆ. ಕೆಲ ಜನರು ಉತ್ತಮ ವಿದ್ಯಾಭ್ಯಾಸ ಮಾಡಿದ ಬಳಿಕವೂ ಕೆಲಸ ಮಾಡಲು ಇಚ್ಛಿಸಲ್ಲ ಆದರೆ ಇನ್ನು ಕೆಲವರು ಅಷ್ಟಾಗಿ ಓದಿರದಿದ್ದರೂ ತಮ್ಮ ಅನುಭವದ ಆಧಾರದ ಮೇಲೆ ಯಾವುದೇ ಕೆಲಸ ಕೊಟ್ಟರೂ ಶೃದ್ಧೆಯಿಂದ ಮಾಡುತ್ತಾರೆ. ಹೌದು ಅಂತಹುದೇ ಒಬ್ಬ ಮಹಿಳೆಯಿದ್ದಾರೆ, ಅವರ ಹೆಸರೇ ರಂಜನಿ ಪಂಡಿತ್ (Ranjani Pandit). ಬನ್ನಿ ಇವರ ಬಗ್ಗೆ ನಿಮಗೆ ವಿಸ್ತಾರವಾಗಿ ತಿಳಿಸುತ್ತೇವೆ.

Advertisement

ನಮ್ಮ ದೇಶದ ಮೊದಲ ಲೇಡಿ ಜೇಮ್ಸ್ ಬಾಂಡ್ ಯಾರು ಗೊತ್ತಾ?

ನಮ್ಮ ದೇಶದ ಲೇಡಿ ಜೇಮ್ಸ್ ಬಾಂಡ್ ಎಂದು ಕರೆಯಲ್ಪಡುವ ರಜನಿ ಪಂಡಿತ್ ಅವರ ಹೆಸರನ್ನ ಬಹುಶಃ ನೀವು ಕೇಳಿರಯವುದಿಲ್ಲ. ಹೌದು ರಜನಿ ಪಂಡಿತ್ ಅಂತಹ ಹೆಗ್ಗಳಿಕೆ ಪಡೆದ ಮಹಿಳೆಯಾಗಿದ್ದಾರೆ. ತನ್ನ ಅನುಭವದೊಂದಿಗೆ ಮುಂದೆ ಸಾಗುತ್ತಿದ್ದ ರಜನಿ ಪಂಡಿತ್ ಹೇಗೆ ಪತ್ತೇದಾರಿ ರಜನಿ ಪಂಡಿತ್ ಆದರು ಎಂಬ ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ.

ರಜನಿ ಪಂಡಿತ್ ಬಾಲ್ಯದಿಂದಲೂ ತುಂಬಾ ಮೂಡಿ ಹುಡುಗಿಯಾಗಿದ್ದಳು. ಆಕೆಯ ಹಳ್ಳಿಯ ಜನರೂ ರಜನಿ ಪಂಡಿತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ರಜನಿ ಪಂಡಿತ್ ತನ್ನ ಪ್ರತಿಭೆಯ ಆಧಾರದ ಮೇಲೆ ಲೇಡಿ ಜೇಮ್ಸ್ ಬಾಂಡ್ ಆದಂತಹ ಮಹಿಳೆ. ರಜನಿ ಪಂಡಿತ್ ನಮ್ಮ ದೇಶದ ಮೊದಲ ಮಹಿಳಾ ಗೂಢಚಾರಿಯೆಂದೇ ಖ್ಯಾತಿ ಪಡೆದಿದ್ದಾರೆ.

ತಂದೆಯಿಂದ ಗೂಢಚಾರಿ ಕಲೆ ಕಲಿತಿದ್ದ ರಜನಿ

ರಜನಿ ಪಂಡಿತ್ ಬಾಲ್ಯದಿಂದಲೂ ಎಲ್ಲ ವಿಷಯ, ವಸ್ತುಗಳನ್ನೂ ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಿದ್ದರು. ರಜನಿ ಪಂಡಿತ್ ಈ ಗುಣಗಳನ್ನ ಹೆಚ್ಚಾಗಿ ತಮ್ಮ ತಂದೆಯಿಂದಲೇ ಕಲಿತವರು. ರಜನಿ ಪಂಡಿತ್ 24 ವರ್ಷದವರಾಗಿದ್ದಾಗ ಅವರು ಗುಮಾಸ್ತಳಾಗಿ ಕೆಲಸ ಮಾಡುತ್ತಿದ್ದಳು. ತಮ್ಮ ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ರಜನಿಯ ಸಹೋದ್ಯೋಗಿ ಹೇಳುತ್ತಾನೆ.

ತನ್ನ ಮನೆಯ ಹೊಸ ಸೊಸೆಯನ್ನು ಬಿಟ್ಟು ಈ ಕೆಲಸ ಮಾಡದಿರಲು ಸಾಧ್ಯವೇ ಇಲ್ಲ ಎಂದು ಅವರು ರಜನಿಗೆ ಹೇಳಿದರು. ಮೊದಲ ಬಾರಿಗೆ ರಜನಿ ಪಂಡಿತ್ ಈ ವಿಷಯವನ್ನು ತಮ್ಮ ಕೈಗೆ ತೆಗೆದುಕೊಂಡರು. ಈ ವಿಷಯವನ್ನು ತನ್ನ ಕೈಗೆ ತೆಗೆದುಕೊಂಡ ನಂತರವೇ ರಜನಿ ಪಂಡಿತ್ ಗೂಢಚಾರಿ ಎಂದು ಕರೆಯಲ್ಪಟ್ಟರು.

ಒಮ್ಮೆ ಮನೆಕೆಲಸದಾಕೆಯಾದರೆ ಇನ್ನೊಮ ಗರ್ಭಿಣಿ ಮಹಿಳೆಯಾಗಿ ಪತ್ತೆದಾರಿ

ರಜನಿ ಪಂಡಿತ್ ಎಂತಹ ಮಹಿಳೆಯೆಂದರೆ ಆಕೆ ತನ್ನ ಕೆಲಸವನ್ನು ತುಂಬಾ ಪ್ರೀತಿಸುತ್ತಿದ್ದರು. ಅವರು ಯಾವುದೇ ರೀತಿಯ ವಿಷಯಗಳೇ ಆಗಿರಲಿ ಅದನ್ನ ಬೇಧಿಸಲು ತನ್ನ ಕೈಗೆತ್ತುಕೊಳ್ಳುತ್ತಿದ್ದರು. ಅದು ಮನೆಯ ವಿಷಯವೇ ಇರಲಿ ಅಥವಾ ಮನೆಯ ಹೊರಗಿರನ ವಿಷಯವೇ ಆಗಿರಲಿ, ರಜನಿ ಪಂಡಿತ್ ಅದನ್ನು ಪರಿಹರಿಸುವಲ್ಲಿ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದರು.

ರಜನಿ ಪಂಡಿತ್ ಕೆಲವೊಮ್ಮೆ ಗರ್ಭಿಣಿ ಮಹಿಳೆಯಾಗಿ, ಕೆಲವೊಮ್ಮೆ ಮನೆಕೆಲಸದಾಕೆಯಾಗಿ ಕೆಲಸ ಮಾಡುವ ಮೂಲಕ ಪ್ರಕರಣ ಭೇದಿಸುತ್ತಿದ್ದರು. ಈ ಮೂಲಕ ಇದುವರೆಗೂ 80,000 ಪ್ರಕರಣಗಳನ್ನು ಬಗೆಹರಿಸಿದ್ದಾರೆ. ಹೌದು ಅಂತಹ ಧೈರ್ಯಶಾಲಿ ಮಹಿಳೆ ರಜನಿ ಪಂಡಿತ್. ಅನುಭವದ ಆಧಾರದ ಮೇಲೆ ಜನರಿಂದ ಕಲಿತ ನಂತರವೇ ಪತ್ತೆದಾರರಾದರು. ರಜನಿ ಪಂಡಿತ್ ಎಂದಿಗೂ ಬೇಹುಗಾರಿಕೆಯ ಕೋರ್ಸ್ ತೆಗೆದುಕೊಂಡಿಲ್ಲ ಅನ್ನೋದು ಗಮನಿಸಬೇಕಾದ ಸಂಗತಿ.

Advertisement
Share this on...