ಭಾರತದ ಮಿನಿ‌ ಲಂಡನ್ ಹಾಗು ಜಗತ್ತಿನ ಅತೀ‌‌ ಶ್ರೀಮಂತ ಹಳ್ಳಿಯಿದು: ಈ ಹಳ್ಳಿಯ ಪ್ರತಿಯೊಬ್ಬನೂ ಕೋಟ್ಯಾಧೀಶ್ವರರೇ, ಎಲ್ಲರ ಬಳಿಯೂ ಇದೆ BMW, Audi

in Kannada News/News/Story 431 views

ಹಳ್ಳಿ,‌ ಈ ಹೆಸರು ಕೇಳಿದಾಕ್ಷಣ ನಮ್ಮ ಕಣ್ಣೆದುರಿಗೆ ಬರುವ ಚಿತ್ರಣವೆಂದರೆ ಕಚ್ಚಾ ಪಕ್ಕಾ ಮನೆಗಳು, ಎತ್ತಿನ ಬಂಡಿ, ರಸ್ತೆಯೇ ಕಾಣದ ಮಣ್ಣಿನ ರಸ್ತೆಗಳು, ಹೊಲ ಗದ್ದೆಗಳು. ಆದರೆ ಇಂದು ನಾವು ನಿಮಗೆ ಭಾರತದ ಎಂತಹ ಹಳ್ಳಿಯ ಬಗ್ಗೆ ಹೇಳಲು ಹೊರಟಿದೀವೆಂದರೆ ಬಹುಶಃ ಬಹಳಷ್ಟು ಜನರಿಗೆ ಈ ಹಳ್ಳಿಯ ಬಗ್ಗೆಯಾಗಲಿ ಈ ಹಳ್ಳಿಯ ಜನರ ಬಗ್ಗೆಯಾಗಲಿ ಗೊತ್ತಿಲ್ಲ‌.

Advertisement

ಭಾರತದ ಈ ಹಳ್ಳಿಯಲ್ಲಿ ಅನ್ಯ ಹಳ್ಳಿಗಳಲ್ಲಿದ್ದಂತೆ ಕಚ್ಚಾ ಮನೆಗಳಿಲ್ಲ, ಧೂಳು ತುಂಬಿದ ಮಣ್ಣಿನ ರಸ್ತೆಗಳಿಲ್ಲ. ಈ ಹಳ್ಳಿಯ ರಸ್ತೆಗಳಲ್ಲಿ ಎತ್ತಿನ ಬಂಡಿ ತಿರುಗಾಡಲ್ಲ ಬದಲಾಗಿ ಈ ಹಳ್ಳಿಯ ಜನ ಮರ್ಸಿಡಿಸ್, BMW, Audi ಕಾರುಗಳಲ್ಲಿ ಓಡಾಡುತ್ತಾರೆ. ಈ ಹಳ್ಳಿಯನ್ನ ನೋಡಿದರೆ ಅದನ್ನ ಹಳ್ಳಿಯಲ್ಲ ಬದಲಾಗಿ ಮಿನಿ ಲಂಡನ್ ಅಂತ ಕರೆಯಬಹುದೇನೋ.

ಹೌದು ನಾವು ಮಾತನಾಡುತ್ತಿರುವ ಹಳ್ಳಿಯ ಹೆಸರು ‘ಧರ್ಮಜ’ ಅಂತ, ಈ ಹಳ್ಳಿ ಗುಜರಾತ್ ರಾಜ್ಯದಲ್ಲಿದೆ. ಇಲ್ಲಿನ ಜನ ನಗರವಾಸಿಗಳು ಹಾಗು ಹಳ್ಳಿಗರಂತೆ ಎರಡೂ ರೀತಿಯ ಜೀವನವನ್ನ ನಡೆಸುತ್ತಿದ್ದಾರೆ. ಧರ್ಮಜ ಹಳ್ಳಿಯ ವಿಶೇಷತೆಯೇನೆಂದರೆ ಈ ಹಳ್ಳಿ ಇಡೀ ದೇಶದಲ್ಲೇ ಆರ್ಥಿಕವಾಗಿ ಸಂಪನ್ನವಾದ ಹಳ್ಳಿಯೆಂದೇ ಖ್ಯಾತವಾಗಿದೆ. ಮತ್ತೂ ವಿಶೇಷತೆಯೆಂದರೆ ಈ ಹಳ್ಳಿಯ ಜನ ಸರ್ಕಾರದ ಯೋಜನೆಗಳಾಗಲಿ ಅಥವ ಸರ್ಕಾರದ ಸಹಾಯದಿಂದ ಇಷ್ಟು ಶ್ರೀಮಂತವಾಗಿಲ್ಲ‌.

ಧರ್ಮಜ ಹಳ್ಳಿಯಲ್ಲಿನ ಜನ ವಿದೇಶದಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿನ ಜನ ತಮ್ಮ ಹಳ್ಳಿಯ ಅಭಿವೃದ್ಧಿಗಾಗಿ ವಿದೇಶದಿಂದ ಸಾಕಷ್ಟು ಹಣ ಕಳಿಸುತ್ತಾರೆ. ಇದರ ಎಫೆಕ್ಟ್ ನಿಮಗೆ ಈ ಹಳ್ಳಿಯ ಅಭಿವೃದ್ಧಿ ಹಾಗು ಶ್ರೀಮಂತಿಕೆಯ ಮೇಲೂ ಕಂಡು ಬರುತ್ತದೆ. ಬಹುಶ ಭಾರತದ ಇತಿಹಾಸದಲ್ಲೇ ಧರ್ಮಜ ಹಳ್ಳಿಯ ಬಗ್ಗೆ ಮಾತ್ರ ಇತಿಹಾಸ, ವರ್ತಮಾನ ಹಾಗು ಭೂಗೋಳದ ಬಗ್ಗೆ ಸಾಕಷ್ಟು ಟೇಬಲ್‌ಬುಕ್ ಗಳು ಪ್ರಕಾಶಿತವಾಗಿವೆ.

ಮತ್ತೊಂದು ಅಚ್ಚರಿಯ ವಿಷಯವೇನೆಂದರೆ ಈ ಹಳ್ಳಿಯದ್ದೇ ಆದ ಒಂದು ವೆಬಸೈಟ್ ಕೂಡ ಇದೆ. ಹಳ್ಳಿಗಾಗಿ ಒಂದು ವಿಶೇಷವಾದ ಹಾಡು ಕೂಡ ಇದೆ. ಈ ಹಳ್ಳಿಗರು ಹೇಳುವಂತೆ ಏನಿಲ್ಲವೆಂದರೂ ತಮ್ಮ ಹಳ್ಳಿಯ 1500 ಕುಟುಂಬಗಳು ಬ್ರಿಟನ್ ನಲ್ಲಿ, ಕೆನಡಾದಲ್ಲಿ 200, ಅಮೇರಿಕಾದಲ್ಲಿ 300 ಲ್ಲೂ ಅಧಿಕ ಕುಟುಂಬಗಳು ವಾಸವಾಗಿದ್ದಾರೆ. ಹಳ್ಳಿಗರು ಹೇಳುವ ಪ್ರಕಾರ ಧರ್ಮಜ ಹಳ್ಳಿಯ ಪ್ರತಿಯೊಂದು ಕುಟುಂಬದಲ್ಲೂ ಏನಿಲ್ಲವೆಂದರೂ 5 ಜನ ವಿದೇಶದಲ್ಲಿ ನೆಲೆಸಿದ್ದಾರಂತೆ.

ತಮ್ಮ ಹಳ್ಳಿಯ ಎಷ್ಟು ಜನ ವಿದೇಶದಲ್ಲಿ ವಾಸಿಸುತ್ತಿದ್ದಾರೆ ಅನ್ನೋ ಲೆಕ್ಕವಿಡಲು ಈ ಹಳ್ಳಿಯ ಜನ ಒಂದು ಡೈರೆಕ್ಟರಿಯನ್ನೇ ಮಾಡಿಟ್ಟಿದ್ದಾರೆ. ಅದರಲ್ಲಿ ಯಾವ ಕುಟುಂಬದ ಯಾವ ಸದಸ್ಯರು ಯಾವ ರಾಷ್ಟ್ರದಲ್ಲಿದ್ದಾರೆ, ಯಾವ ದಿನ ಅವರು ವಿದೇಶಕ್ಕೆ ತೆರಳಿದ್ದಾರೆ, ಅವರ ಕುಟುಂಬದ ಪ್ರತಿಯೊಂದು ಮಾಹಿತಿಯನ್ನೂ ಈ ಹಳ್ಳಿಯ ಜನ ಡೈರೆಕ್ಟರಿ ಯಲ್ಲಿ ದಾಖಲು ಮಾಡಿಟ್ಟಿದ್ದಾರೆ. ವಿದೇಶದಲ್ಲಿರುವ ತಮ್ಮ ಹಳ್ಳಿಗರ ಸಂಪೂರ್ಣ ಮಾಹಿತಿಯನ್ನೇ ಅವರು ಇಂಚಿಂಚೂ ದಾಖಲು ಮಾಡಿದ್ದಾರೆ.

ಹಳ್ಳಿಯಲ್ಲಿದೆ ಪ್ರೈವೆಟ್ ಬ್ಯಾಂಕ್ ಹಾಗು ಖಾಸಗಿ ಶಾಲೆ:

ಈ ಹಳ್ಳಿಯ ಡಜನ್ ಗೂ ಹೆಚ್ಚು ಜನ ಪ್ರೈವೆಟ್ ಹಾಗು ಸರ್ಕಾರಿ ಬ್ಯಾಂಕುಗಳಲ್ಲಿದ್ದಾರೆ, ಆ ಬ್ಯಾಂಕುಗಳಲ್ಲಿ ಹಳ್ಳಿಗರ ಹೆಸರಲ್ಲೇ ಒಂದು ಸಾವಿರ ಕೋಟಿಗೂ ಅಧಿಕ ಹಣ ಡೆಪಾಸಿಟೆಡ್ ಇದೆ. ಈ ಹಳ್ಳಿಯಲ್ಲಿ ಮೆಕ್ ಡೊನಾಲ್ಡ್ಸ್ ನಂತಹ ಪಿಜ್ಜಾ ಪಾರ್ಲರ್ ಗಳೂ ಇವೆ‌. ಇದರ ಹೊರತಾಗಿ ಫೇಮಸ್ ರೆಸ್ಟಾರೆಂಟ್ ಗಳ ಫ್ರ್ಯಾಂಚೈಸಿಗಳೂ ಇವೆ‌. ಇವುಗಳ ಹೊರತಾಗಿ ಆಯುರ್ವೇದಿಕ್ ಆಸ್ಪತ್ರೆ ಯಿಂದ ಹಿಡಿದು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳೂ ಈ ಹಳ್ಳಿಯಲ್ಲಿವೆ.

ಪ್ರತಿ ವರ್ಷವೂ ಆಚರಿಸಲಾಗುತ್ತೆ ಧರ್ಮಜ-ಡೇ:

ಈ ಹಳ್ಳಿಯ ಜನ ಪ್ರತಿ ವರ್ಷ ಜನೇವರಿ 12 ರಂದು ಧರ್ಮಜ-ಡೇ ಎಂಬ ದಿನವನ್ನೂ ಆಚರಿಸುತ್ತಾರೆ, ಅದರಲ್ಲಿ ಭಾಗವಹಿಸಲು ಪ್ರಪಂಚದ ಮೂಲೇಮೆ ಮೂಲೆಗಳಲ್ಲಿ ವಾಸವಾಗಿರುವ ಈ ಹಳ್ಳಿಯ NRI ತಮ್ಮ ಇಡೀ ಕುಟುಂಬ ಸಮೇತ ಧರ್ಮಜ ಹಳ್ಳಿಗೆ ಬರುತ್ತಾರೆ‌. ವಿದೇಶದಿಂದ ಬಂದ ಈ ಕುಟುಂಬಗಳು ಒಂದು ತಿಂಗಳಿನವರೆಗೆ ತಮ್ಮ ಹಳ್ಳಿಯಲ್ಲೇ ಇದ್ದು ಖುಷಿಯ ಸಂಭ್ರಮಾಚರಣೆ ಆಚರಿಸುತ್ತಾರೆ. ತಮ್ಮ ಮಕ್ಕಳಿಗೆ ತಮ್ಮ ಹಳ್ಳಿಯ ಸಂಸ್ಕೃತಿಯನ್ನ ಇತಿಹಾಸವನ್ನ ತಾವೇ ಖುದ್ದಾಗಿ ಕೂತು ಹೇಳಿಕೊಡುತ್ತಾರೆ.

Advertisement
Share this on...