ಡಚ್ ಸಂಸದ ಗೀರ್ಟ್ ವಿಲ್ಡರ್ಸ್ (Geert Wilders) ಮತ್ತೊಮ್ಮೆ ಬಿಜೆಪಿಯ ಮಾಜಿ ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಾರೆ. ನೂಪೂರ್ ಶರ್ಮಾ ಯಾವುದಕ್ಕೂ ಜವಾಬ್ದಾರರಲ್ಲ ಮತ್ತು ಪ್ರಾಫೆಟ್ ಮೊಹಮ್ಮದ್ ಬಗ್ಗೆ ಸತ್ಯವನ್ನು ಮಾತನಾಡಿದ್ದಕ್ಕಾಗಿ ಅವರು ಎಂದಿಗೂ ಕ್ಷಮೆಯಾಚಿಸಬಾರದು ಎಂದು ಶರ್ಮಾ ಅವರನ್ನು ಸಮರ್ಥಿಸಿಕೊಂಡರು. ಅದೇ ಸಮಯದಲ್ಲಿ, ಭಾರತದ ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಾಧೀಶರು ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಅವರ ಕ್ರೂ-ರ ಹ-ತ್ಯೆ-ಗೆ ಮಾಜಿ ಬಿಜೆಪಿ ವಕ್ತಾರೆ ‘ಜವಾಬ್ದಾರರು’ ಎಂದು ಹೇಳಿದ್ದಾರೆ.
ವಿಲ್ಡರ್ಸ್ ಶುಕ್ರವಾರ (ಜುಲೈ 1, 2022) ತಮ್ಮ ಟ್ವೀಟ್ನಲ್ಲಿ, “ಭಾರತದಲ್ಲಿ ಷರಿಯಾ ಕೋರ್ಟ್ ಗಳಿಲ್ಲ ಅಂತ ನಾನು ಅಂದುಕೊಂಡಿದ್ದೆ. ಮೊಹಮ್ಮದ್ ಬಗ್ಗೆ ಸತ್ಯವನ್ನು ಮಾತನಾಡಿದ್ದಕ್ಕಾಗಿ ನುಪುರ್ ಶರ್ಮಾ ಎಂದಿಗೂ ಕ್ಷಮೆಯಾಚಿಸಬಾರದು. ಅವರು ಉದಯಪುರದ ಘಟನೆಗಡ ಕಾರಣರಲ್ಲ. ಅದಕ್ಕೆ ಕಟ್ಟರಪಂಥೀಯ ಅಸಹಿಷ್ಣು ಜಿಹಾದಿ ಮುಸ್ಲಿಮರು ಹೊಣೆಗಾರರೇ ಹೊರತು ಬೇರಾರೂ ಅಲ್ಲ. ನೂಪುರ್ ಶರ್ಮಾ ಒಬ್ಬ ಹೀರೋ” ಎಂದಿದ್ದಾರೆ.
ಕೆಲವು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮಾಡಿದ ಟೀಕೆಗಳಿಗೆ ಅಂದರೆ ನೂಪುರ್ ಶರ್ಮಾ ಅವರ ಹೇಳಿಕೆಯಿಂದಲೇ ಇಡೀ ರಾಷ್ಟ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದೆ ಎಂಬ ಟಿಪ್ಪಣಿಗಳಿಗೆ ಪ್ರತಿಕ್ರಿಯೆಯಾಗಿ ವಿಲ್ಡರ್ಸ್ ಅವರ ಈ ಟ್ವೀಟ್ ಬಂದಿದ್ದು, ಮೂಲಭೂತವಾದಿಗಳು ಹರಡಿದ ಅರಾಜಕತೆ ಮತ್ತು ಹಿಂಸಾಚಾರಕ್ಕೆ ನೂಪುರ್ ಶರ್ಮಾ ಹೊಣೆಗಾರರಲ್ಲ ಎಂದು ಹೇಳಿದ್ದಾರೆ.
I thought India had no sharia courts.
She should never apologize for speaking the truth about #Muhammad. She is not responsible for Udaipur. Radical intolerant jihadi Muslims are responsible and nobody else.
NupurSharma is a hero. #NupurSharma #IsupportNupurSharma
— Geert Wilders (@geertwilderspvv) July 1, 2022
ನೆದರ್ಲ್ಯಾಂಡ್ಸ್ ಸಂಸದ ಗೀರ್ಟ್ ವಿಲ್ಡರ್ಸ್ ಜೂನ್ 29 ರಂದು ಟ್ವೀಟ್ ಮಾಡುವ ಮೂಲಕ ಇಸ್ಲಾಮಿಕ್ ಮೂಲಭೂತವಾದದ ವಿರುದ್ಧ ಭಾರತಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದರು. ಉದಯಪುರ ಘಟನೆಯ ನಂತರ ವಿಲ್ಡರ್ಸ್ ಹಿಂದುತ್ವವನ್ನು ಮೂಲಭೂತವಾದ, ಭಯೋತ್ಪಾದನೆ ಮತ್ತು ಜಿಹಾದಿಗಳಿಂದ ರಕ್ಷಿಸುವುದು ಅಗತ್ಯ ಎಂದು ಹೇಳಿದ್ದರು. ಅವರು ಟ್ವೀಟ್ ಮಾಡುತ್ತ, “ಒಬ್ಬ ಸ್ನೇಹಿತನಾಗಿ ನಾನು ಭಾರತಕ್ಕೆ ಅಸಹಿಷ್ಣುತೆಯ ಬಗ್ಗೆ ಸಹಿಷ್ಣುತೆಯನ್ನು ನಿಲ್ಲಿಸುವಂತೆ ಸಲಹೆ ನೀಡುತ್ತಿದ್ದೇನೆ. ಜಿಹಾದಿಗಳು, ಭ-ಯೋ-ತ್ಪಾ-ದಕರು ಮತ್ತು ಮೂಲಭೂತವಾದಿಗಳಿಂದ ಹಿಂದುತ್ವವನ್ನು ರಕ್ಷಿಸಿ. ಇಸ್ಲಾಂನ್ನ ತುಷ್ಟೀಕರಣ ಮಾಡುತ್ತ ಸಮಾಧಾನಪಡಿಸಬೇಡಿ, ಇಲ್ಲದಿದ್ದರೆ ನೀವು ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಹಿಂದೂಗಳಿಗೆ ಅವರ ರಕ್ಷಣೆಗೆ 100% ಬದ್ಧರಾಗಿರುವ ನಾಯಕರು ಬೇಕು” ಎಂದು ಹೇಳಿದ್ದರು.
ಬಾಲ್ಯದಲ್ಲಿ ಪ್ರಧಾನಿ ಮೋದಿ ಚಹಾ ಮಾರಿದ್ದ ಜಾಗ?| Tea Stall where PM Modi Sold Tea |ತಿನ್ನಲು ಅನ್ನವಿಲ್ಲದೆ ಮಣ್ಣಿನ ರೊಟ್ಟಿ ತಿನ್ನುತ್ತಿದ್ದಾರೆ ಈ ದೇಶದ ಜನ | This country people eating Mud Rotis|Most Amazing 30 facts
Watch and Subscribe to the Channel to get such amazing facts
ಮತ್ತೊಂದು ಟ್ವೀಟ್ ನಲ್ಲಿ ಅವರು, “ಭಾರತದಲ್ಲಿರುವ ಹಿಂದೂಗಳು ಸುರಕ್ಷಿತವಾಗಿರಬೇಕು. ಅದು ಅವರ ದೇಶ. ಅದು ಅವರ ತಾಯ್ನಾಡು. ಭಾರತ ಅವರದ್ದು. ಭಾರತ ಇಸ್ಲಾಮಿಕ್ ರಾಷ್ಟ್ರವಲ್ಲ” ಎಂದಿದ್ದರು. ಜೂನ್ ಆರಂಭದಲ್ಲಿ, ವಿಲ್ಡರ್ಸ್ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದರು, ಅಪರಾಧಿಗಳು ಮತ್ತು ಭಯೋತ್ಪಾದಕರು ತಮ್ಮ ಧಾರ್ಮಿಕ ಅಸಹಿಷ್ಣುತೆ ಮತ್ತು ದ್ವೇಷವನ್ನು ವ್ಯಕ್ತಪಡಿಸಲು ಬೀದಿ ಹಿಂಸಾಚಾರದಲ್ಲಿ ತೊಡಗುತ್ತಾರೆ ಎಂದು ಹೇಳಿದ್ದರು.
ತನ್ನ ಮುಂದಿನ ಟ್ವೀಟ್ನಲ್ಲಿ, ಮೂಲಭೂತವಾದಿಗಳಿಂದ ನೂಪುರ್ ಶರ್ಮಾಗೆ ಬೆದರಿಕೆ ಹಾಕುವ ಬೆದರಿಕೆಯ ಸ್ಕ್ರೀನ್ಶಾಟ್ ಅನ್ನು ಗೀರ್ಟ್ ಹಂಚಿಕೊಳ್ಳುತ್ತ, “ಇದಕ್ಕಾಗಿಯೇ ನಾನು ಧೈರ್ಯಶಾಲಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸುತ್ತಿದ್ದೇನೆ. ನೂರಾರು ಕೊಲೆ ಬೆದರಿಕೆಗಳು. ಇದು ಅವರನ್ನು ಬೆಂಬಲಿಸಲು ನನ್ನನ್ನು ಇನ್ನಷ್ಟು ಗಟ್ಟಿಗೊಳಿಸಿದಡ. ಏಕೆಂದರೆ, ದುಷ್ಟತನ ಎಂದಿಗೂ ಎಂದೆಂದಿಗೂ ಗೆಲ್ಲಲಾರದು” ಎಂದಿದ್ದರು.
ಮತ್ತೊಂದು ಟ್ವೀಟ್ನಲ್ಲಿ, ವಿಲ್ಡರ್ಸ್, “ತುಷ್ಟೀಕರಣವು ಎಂದಿಗೂ ಕೆಲಸ ಮಾಡುವುದಿಲ್ಲ. ಇದು ದೇಶದ ಸ್ವಾಸ್ಥ್ಯವನ್ನ ಇನ್ನಷ್ಟು ಹದಗೆಡಿಸುತ್ತದೆ. ಆದ್ದರಿಂದ ಭಾರತದ ನನ್ನ ಆತ್ಮೀಯ ಸ್ನೇಹಿತರೇ, ಇಸ್ಲಾಮಿಕ್ ದೇಶಗಳ ಬಗ್ಗೆ ಭಯಪಡಬೇಡಿ. ಸ್ವಾತಂತ್ರ್ಯಕ್ಕಾಗಿ ನಿಂತುಕೊಳ್ಳಿ ಮತ್ತು ಪ್ರವಾದಿ ಮೊಹಮ್ಮದ್ ಬಗ್ಗೆ ಸತ್ಯವನ್ನು ಹೇಳಿದ ನಿಮ್ಮ ರಾಜಕಾರಣಿ ನೂಪುರ್ ಶರ್ಮಾ ಬಗ್ಗೆ ಹೆಮ್ಮೆಪಡಿ ಮತ್ತು ಅವರನ್ನು ರಕ್ಷಿಸಲು ಸಂಕಲ್ಪ ಮಾಡಿ” ಎಂದಿದ್ದರು.
“ಇಸ್ಲಾಂನ ಅಸಹಿಷ್ಣುತೆ ಮತ್ತು ಅದರ ಸಿದ್ಧಾಂತವು ಜಗತ್ತಿಗೆ ಮಾರಕವಾಗಿದೆ. ಭಾರತವನ್ನು ಕ್ಷಮೆಯಾಚಿಸಲು ಕೇಳುವ ದೇಶಗಳು ಅತ್ಯಂತ ಕ್ರೂರ ಷರಿಯಾ ಆಡಳಿತವನ್ನು ಅನುಸರಿಸುತ್ತವೆ ಮತ್ತು ಅತ್ಯಂತ ಕಳಪೆ ಮಾನವ ಹಕ್ಕುಗಳ ದಾಖಲೆಯನ್ನು ಹೊಂದಿವೆ.” ಎಂದು ಡಚ್ ಸಂಸದರು ಮುಸ್ಲಿಂ ರಾಷ್ಟ್ರಗಳನ್ನು ಖಂಡಿಸಿದ್ದರು.
ಜೂನ್ 28 ರಂದು ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಸಾಹು ಅವರನ್ನು ಬರ್ಬರವಾಗಿ ಹ-ತ್ಯೆ ಮಾಡಲಾಗಿತ್ತು. ಮೊಹಮ್ಮದ್ ರಿಯಾಜ್ ಮತ್ತು ಗೌಸ್ ಮೊಹಮ್ಮದ್ ಟೈಲರ್ ಅಂಗಡಿಗೆ ನುಗ್ಗಿ ಕನ್ಹಯ್ಯಾ ಲಾಲ್ ಅವರ ಕ-ತ್ತು ಸೀ-ಳಿ-ದ್ದರು. ಹಂತಕರು ಘಟನೆಯ ಭಯಾನಕ ವೀಡಿಯೊವನ್ನು ಸಹ ಮಾಡಿದ್ದರು. ಈ ಪ್ರಕರಣದಲ್ಲಿ ಕನ್ಹಯ್ಯಾ ಲಾಲ್ ಅವರ 20 ವರ್ಷದ ಮಗ ದಾಖಲಿಸಿರುವ ಎಫ್ಐಆರ್ ಕೂಡ ಹಲವು ಆಘಾತಕಾರಿ ಸಂಗತಿಗಳಿಗೆ ಕಾರಣವಾಗಿತ್ತು.