ಭಾರತದಲ್ಲೂ ಮತ್ತೆ ಮಿತಿ‌ ಮೀರುತ್ತೆ ಕೊರೋನಾ? IMA ಯಿಂದ ದೇಶಾದ್ಯಂತ ಜಾರಿಯಾಯ್ತು ಕೊರೊನಾದ ಹೊಸ ಗೈಡ್‌ಲೈನ್ಸ್

in Uncategorized 340 views

ಪ್ರಸ್ತುತ ಭಾರತದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿಲ್ಲ, ಆದ್ದರಿಂದ ಭಯಪಡುವ ಅಗತ್ಯವಿಲ್ಲ. ಕೇವಲ ತಡೆಗಟ್ಟುವಿಕೆಗೆ ಗಮನ ಕೊಡಿ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (IMA) ಹೇಳಿದೆ. ಆದ್ದರಿಂದ, ಪ್ರತಿಯೊಬ್ಬರೂ ಕರೋನಾ ತಡೆಗಟ್ಟುವ ನಿಯಮಗಳನ್ನು ಅನುಸರಿಸಲು IMA ಸೂಚಿಸಿದೆ.

Advertisement

ಚೀನಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ (IMA) ಅಡ್ವೈಸರಿ ಜಾರಿ ಮಾಡಿದೆ. ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು IMA ಜನರಿಗೆ ಸಲಹೆ ನೀಡಿದೆ. ಭಾರತ ಹಿಂದಿನಂತೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಮರ್ಥವಾಗಿದೆ ಎಂದು IMA ಹೇಳಿದೆ. ಕೋವಿಡ್ ಅನ್ನು ನಿಯಂತ್ರಣದಲ್ಲಿಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ IMA ಜನರಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಿದೆ.

ಭಾರತವು ತನ್ನ ಅಸ್ತಿತ್ವದಲ್ಲಿರುವ ವೈದ್ಯಕೀಯ ಮೂಲಸೌಕರ್ಯ, ಸಾಕಷ್ಟು ಔಷಧಿಗಳು ಮತ್ತು ಲಸಿಕೆಗಳ ಸಹಾಯದಿಂದ ಕರೋನಾಗೆ ಸಂಬಂಧಿಸಿದ ಯಾವುದೇ ಸವಾಲನ್ನು ಎದುರಿಸಬಹುದು ಎಂದು IMA ಹೇಳಿದೆ. ಅಗತ್ಯ ಔಷಧಿಗಳ ಲಭ್ಯತೆ, ಆಕ್ಸಿಜನ್ ಸಪ್ಲೈ ಮತ್ತು ಸಾಕಷ್ಟು ಆಂಬ್ಯುಲೆನ್ಸ್ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಆದೇಶ ನೀಡುವಂತೆ IMA ಸರ್ಕಾರಕ್ಕೆ ಮನವಿ ಮಾಡಿದೆ. ಅದರ ಪ್ರಕಾರ ಭಾರತವು ಹಿಂದಿನ ಕರೋನಾ ಅಲೆಯನ್ನು ಸುಲಭವಾಗಿ ಎದುರಿಸಿದ ರೀತಿ. ಅದೇ ರೀತಿ, ಬರುವ ಯಾವುದೇ ಗಂಭೀರ ಅಪಾಯವನ್ನು ಎದುರಿಸಬಹುದು ಎಂಬುದಾಗಿದೆ.

ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ತನ್ನ ರಾಜ್ಯ ಮತ್ತು ಸ್ಥಳೀಯ ಶಾಖೆಗಳಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಲಹೆಯನ್ನು ನೀಡಿದೆ. IMA ತನ್ನ ಎಲ್ಲಾ ಸದಸ್ಯರಿಗೆ ಕೋವಿಡ್ ಬಗ್ಗೆ ಎಚ್ಚರದಿಂದ ಇರುವಂತೆ ಕೇಳಿಕೊಂಡಿದೆ. ಪ್ರಸ್ತುತ ಭಾರತದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿಲ್ಲ, ಆದ್ದರಿಂದ ಭಯಪಡುವ ಅಗತ್ಯವಿಲ್ಲ. ತಡೆಗಟ್ಟುವಿಕೆಯತ್ತ ಮಾತ್ರ ಗಮನಹರಿಸಬೇಕು ಎಂದು ಐಎಂಎ ಹೇಳಿದೆ. ಆದ್ದರಿಂದ ಕೋವಿಡ್‌ನಿಂದ ಹೊರಬರಲು ಪ್ರತಿಯೊಬ್ಬರೂ ಕೊರೊನಾ ತಡೆಗಟ್ಟುವ ನಿಯಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ಇದಕ್ಕಾಗಿ, ಈ ಎಂಟು ಪ್ರಮುಖ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ಹೇಳಲಾಗಿದೆ.

  1. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಬಳಸಬೇಕು.
  2. ಸೋಶಿಯಲ್ ಡಿಸ್ಟೆನ್ಸಿಂಗ್ ಪಾಲಿಸಬೇಕು
  3. ಸಾಬೂನು ಮತ್ತು ನೀರು ಅಥವಾ ಸ್ಯಾನಿಟೈಸರ್‌ನಿಂದ ನಿಯಮಿತವಾಗಿ ಕೈಗಳನ್ನು ತೊಳೆಯುವುದು.
  4. ಮದುವೆಗಳು, ರಾಜಕೀಯ ಅಥವಾ ಸಾಮಾಜಿಕ ಸಭೆಗಳು ಮುಂತಾದ ಸಾರ್ವಜನಿಕ ಸಭೆಗಳನ್ನು ತಪ್ಪಿಸಬೇಕು.
  5. ಅಂತರಾಷ್ಟ್ರೀಯ ಪ್ರಯಾಣವನ್ನ ಮಾಡುವುದನ್ನು ತಪ್ಪಿಸಿ.
  6. ನಿಮಗೆ ಜ್ವರ, ಗಂಟಲು ನೋವು, ಕೆಮ್ಮು, ಲೂಸ್ ಮೋಷನ್ ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ.
  7. ನಿಮ್ಮ ಕೋವಿಡ್ ವ್ಯಾಕ್ಸಿನೇಷನ್ ಅನ್ನು ಬೂಸ್ಟರ್ ಡೋಸ್‌ನೊಂದಿಗೆ ಸಾಧ್ಯವಾದಷ್ಟು ಬೇಗ ಮಾಡಿ.
  8. ಕಾಲಕಾಲಕ್ಕೆ ನೀಡಿರುವ ಸರ್ಕಾರದ ಅಡ್ವೈಸರಿಯನ್ನು ಅನುಸರಿಸಿ.

ದೇಶಾದ್ಯಂತ 3.5 ಲಕ್ಷಕ್ಕೂ ಹೆಚ್ಚು ವೈದ್ಯರನ್ನು ಹೊಂದಿರುವ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (IMA) ಈ ಕೊರೋನಾ ರೋಗದ ವಿರುದ್ಧ ಹೋರಾಡಲು ಬದ್ಧವಾಗಿದೆ. IMA ಸರ್ಕಾರಕ್ಕೆ ತನ್ನ ಸಂಪೂರ್ಣ ಸಹಕಾರದ ಭರವಸೆ ನೀಡುತ್ತಿದೆ. ಕೋವಿಡ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಸಹಕರಿಸಲು IMA ಸಂಪೂರ್ಣವಾಗಿ ಸಿದ್ಧವಾಗಿದೆ.

ಚೀನಾದಲ್ಲಿ ವಿನಾಶ ಸೃಷ್ಟಿಸುತ್ತಿದೆ ಕೊರೋನಾ

ಚೀನಾದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳನ್ನು ನೋಡಿ, ಭಾರತವೂ ಅಲರ್ಟ್ ಮೋಡ್‌ನಲ್ಲಿದೆ. ಕೋವಿಡ್ ತಡೆಗಟ್ಟುವ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸರ್ಕಾರ ಜನರಿಗೆ ಸಲಹೆ ನೀಡಿದೆ.

Advertisement
Share this on...