ಹರಿಯಾಣದ ಗುರುಗ್ರಾಮದಲ್ಲಿ ಮತ್ತೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವ ಪ್ರಕರಣ ಬೆಳಕಿಗೆ ಬಂದಿದೆ. ಶುಕ್ರವಾರ (ಡಿಸೆಂಬರ್ 23, 2022) ಸೆಕ್ಟರ್-69 ರಲ್ಲಿ ನಮಾಝ್ ಅನ್ನು ಬಹಿರಂಗವಾಗಿ ಮಾಡುತ್ತಿರುವುದನ್ನ ಹಿಂದೂ ಸಂಘಟನೆಗಳು ಬಲವಾಗಿ ವಿರೋಧಿಸಿವೆ. ಸ್ಥಳಕ್ಕಾಗಮಿಸಿದ ಬಜರಂಗದಳ ಕಾರ್ಯಕರ್ತರು ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಮುಸ್ಲಿಮರನ್ನು ಓಡಿಸಿದರು. ಈ ವೇಳೆ ಪೊಲೀಸರು ಹಾಜರಿದ್ದರು.
ಇಲ್ಲಿ ಬಯಲಿನಲ್ಲಿ ನಮಾಜ್ ಮಾಡಲು ನೂರಾರು ಜನರನ್ನು ಬೇರೆಡೆಯಿಂದ ಕರೆಸಲಾಗುತ್ತಿದೆ. ಹಿಂದೂಗಳ ವಿರುದ್ಧ ದೊಡ್ಡ ಷಡ್ಯಂತ್ರ ರೂಪಿಸಲಾಗುತ್ತಿದೆ. ಬಯಲಿನಲ್ಲಿ ನಮಾಜ್ ಮಾಡಲು ಈ ಭೂಮಿ ನೀಡಿಲ್ಲ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಬಹಿರಂಗವಾಗಿ ಯಾರೂ ನಮಾಜ್ ಮಾಡುವಂತಿಲ್ಲ ಎಂದು ಆದೇಶಿಸಿದ್ದಾರೆ. ಬೇರೆ ಜಿಲ್ಲೆಗಳಿಂದ ಸಾಕಷ್ಟು ಮಂದಿ ಇಲ್ಲಿಗೆ ಬಂದಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸುತ್ತಿವೆ.
#BreakingNow: गुरुग्राम में खुले में नमाज पर हंगामा, सैकड़ों की संख्या में नमाज पढ़ने पहुंचे लोग.. हिंदू संगठनों का आरोप दूसरे जिलों से बुलाए गए लोग
ग्राउंड जीरो से ज्यादा जानकारी दे रहे हैं संवाददाता @PreritTweet @himanshdxt @NAINAYADAV_06 #Gurugram #LandJihad pic.twitter.com/alzkB71zfY
— Times Now Navbharat (@TNNavbharat) December 23, 2022
ವರದಿಗಳ ಪ್ರಕಾರ, “ಮುಸ್ಲಿಮರು ಹೊರಗಿನಿಂದ ಬಂದು ಇಲ್ಲಿ ನಮಾಜ್ ಮಾಡುತ್ತಾರೆ. ಮೌಲ್ವಿ ಪಲ್ವಾಲ್ನಿಂದ ಇಲ್ಲಿಗೆ ನಮಾಜ್ ಮಾಡಲು ಬರುತ್ತಿದ್ದಾರೆ. ಪ್ರತಿ ಶುಕ್ರವಾರ ಇಲ್ಲಿಗೆ ಬಂದು ಲ್ಯಾಂಡ್ ಜಿಹಾದ್ ಮಾಡುತ್ತಾರೆ. ಅಲ್ಲದೆ, “ನಾವು 15 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಕೆಲ ದಿನಗಳ ನಂತರ ಇಲ್ಲಿ ಗೋರಿ ನಿರ್ಮಿಸಿ 25 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎನ್ನುತ್ತಾರೆ. ಬಯಲಲ್ಲಿ ನಮಾಜ್ ಮಾಡುವಂತಿಲ್ಲ ಎಂದು ಸಿಎಂ ಸ್ಪಷ್ಟ ಆದೇಶವಿದ್ದರೂ ಈ ರೀತಿ ಮಾಡುತ್ತಿದ್ದಾರೆ” ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಗರಂ ಆಗಿದ್ದಾರೆ. ಎರಡೂ ಕಡೆಯವರನ್ನು ನಿಯಂತ್ರಿಸಲು ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬಜರಂಗದಳದ ಕಾರ್ಯಕರ್ತರು ಮುಸ್ಲಿಮರು ಬಯಲಿನಲ್ಲಿ ನಮಾಜ್ ಮಾಡುವುದನ್ನು ವಿರೋಧಿಸುತ್ತಿದ್ದಾರೆ. ಬಜರಂಗದಳದ ಕಾರ್ಯಕರ್ತರು, “ಓಪನ್ ಜಾಗದಲ್ಲಿ ನಡೆಯುವ 6 ಸಾರ್ವಜನಿಕ ಸ್ಥಳಗಳನ್ನೂ ಸಹ ಖಾಲಿ ಮಾಡಿಸಲಾಗುವುದು. ಬಯಲಿನಲ್ಲಿ ನಮಾಝ್ ಮಾಡಲು ನಿಮಗೆ ಯಾರು ಅನುಮತಿ ನೀಡಿದ್ದಾರೆ?” ಎಂದು ಹೇಳುತ್ತಿದ್ದಾರೆ. ಆಗ ಮತ್ತೋರ್ವ ಕಾರ್ಯಕರ್ತ ಹಿಂದಿನಿಂದ ಹೇಳುತ್ತಾರೆ, ಈ ಜನರು 15 ವರ್ಷಗಳಿಂದ ಇಲ್ಲಿ ಬಯಲಿನಲ್ಲೇ ನಮಾಜ್ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ, ಆದರೆ ಈ ರಸ್ತೆಯನ್ನು ನಿರ್ಮಿಸಿ ಇನ್ನೂ 15 ವರ್ಷಗಳೂ ಆಗಿಲ್ಲ ಎಂದು ಹೇಳುತ್ತಿದ್ದಾರೆ.
ಇದಾದ ನಂತರ ಕಾರ್ಯಕರ್ತರು, “35 ತುಂಡುಗಳು ಇಲ್ಲಿ ಕೆಲಸ ಮಾಡುವುದಿಲ್ಲ. ಇದು ಉದಯಪುರ ಅಲ್ಲ, ಗುರಗಾಂವ್. ಇದು ಗುರಗಾಂವ್ನ ನಾಡು. ನೀವು ಹಗಲಿನಲ್ಲಿ ನಮಾಜ್ ಮಾಡುತ್ತೀರಿ. ನೀವು ನಮಾಜ್ ಮಾಡಲು ಅಲ್ಲಿಂದ ಇಲ್ಲಿಗೆ ಬರುತ್ತೀರಿ. ಪೊಲೀಸ್ ಆಡಳಿತ ಎಲ್ಲಿದೆ” ಎನ್ನುತ್ತಿದ್ದಾರೆ. ಇದಾದ ಬಳಿಕ ಎಲ್ಲ ಕಾರ್ಯಕರ್ತರು ಅಲ್ಲೇ ಪಕ್ಕದಲ್ಲಿ ನಿಂತಿದ್ದ ಪೊಲೀಸರಿಗೆ ಈ ಮುಸಲ್ಮಾನರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
#हरियाणा के #गुरुग्राम में एक बार फिर खुले में #नमाज़ पढ़ने का हुआ विरोध…
सेक्टर 69 में नमाज पढ़ रहे लोगो को #बजरंग_दल के कार्यकर्ताओं ने खदेड़ा…गुरुग्राम में पहले भी हो चुका है विरोध..#नमाज#खुले_में_नमाज़_का_विरोध#Namaj@gurgaonpolice @DC_Gurugram @nishantyadavIAS pic.twitter.com/zudvXd0c1m
— Dharamvir Sharma (@DharamvirNews) December 23, 2022
ಗಮನಿಸುವ ಸಂಗತಿಯೆಂದರೆ, ಕಳೆದ ವರ್ಷ ಡಿಸೆಂಬರ್ 10 ರಂದು, ಗುರುಗ್ರಾಮ್ನಲ್ಲಿ ನಮಾಜ್ ಮಾಡುವ ವಿಷಯದ ಬಗ್ಗೆ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, “ಯಾರಾದರೂ ಅವರವರ ಜಾಗದಲ್ಲಿ ನಮಾಜ್ ಮಾಡಿದರೆ, ಪಾಠ ಹೇಳಿದರೆ, ನಮಗೆ ಯಾವುದೇ ತೊಂದರೆ ಇಲ್ಲ, ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡಬಾರದು. ಬಯಲಿನಲ್ಲಿ ನಮಾಜ್ ಮಾಡುವ ಕ್ರಮವನ್ನು ಸಹಿಸುವುದಿಲ್ಲ” ಎಂದಿದ್ದರು.
कोई अगर अपनी जगह पर नमाज पढ़ता है, पाठ पढ़ता है उसमें हमें कोई दिक़्क़त नहीं है। खुले में ऐसे कार्यक्रम नहीं होने चाहिए। नमाज पढ़ने की यह प्रथा जो खुले में हुई है, यह बिल्कुल भी सहन नहीं की जाएगी: गुरुग्राम में खुले में नमाज पढ़ने के मामले पर हरियाणा CM मनोहर लाल खट्टर pic.twitter.com/Mh1JgKrwqG
— ANI_HindiNews (@AHindinews) December 10, 2021
ಗಮನಿಸುವ ಸಂಗತಿಯೇನೆಂದರೆ, ಕಳೆದ ವರ್ಷವೂ ಗುರುಗ್ರಾಮದಲ್ಲಿ ಬಯಲಿನಲ್ಲಿ ನಮಾಜ್ ಮಾಡಿದ್ದಕ್ಕಾಗಿ ಪ್ರತಿಭಟನೆ ನಡೆದಿತ್ತು. ಶುಕ್ರವಾರ (ಅಕ್ಟೋಬರ್ 15, 2021), ಗುರುಗ್ರಾಮ್ ಸೆಕ್ಟರ್ -47 ರಲ್ಲಿ ಸ್ಥಳೀಯ ಹಿಂದೂಗಳೂ ನಮಾಜ್ ವಿರೋದಿಸಿ ಸತತ ನಾಲ್ಕನೇ ವಾರ ಭಜನೆ-ಕೀರ್ತನೆ ಮಾಡಿದ್ದರು.