ಕೊರೊನಾ ಸಮಯದಲ್ಲಿ ಕಚೇರಿಗೆ ಹೋಗಿ ದುಡಿಯುವ ಬದಲು ಜನರು ಮನೆಯಲ್ಲೇ ಹಣ ಗಳಿಸುವ ವಿಧಾನಗಳನ್ನು ಹುಡುಕುತ್ತಿದ್ದಾರೆ. ಮನೆಯಲ್ಲೇ ಹಣ ಗಳಿಸಲು ಬಯಸುವವರಿಗೆ ಎಸ್ಬಿಐ ಉತ್ತಮ ಅವಕಾಶ ನೀಡ್ತಿದೆ. ಮನೆಯಲ್ಲಿ ಕುಳಿತು ತಿಂಗಳಿಗೆ 60 ಸಾವಿರ ರೂಪಾಯಿವರೆಗೆ ಗಳಿಸುವ ಅವಕಾಶವಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಫ್ರ್ಯಾಂಚೈಸ್ ತೆಗೆದುಕೊಳ್ಳುವ ಮೂಲಕ ಸುಲಭವಾಗಿ ಹಣ ಗಳಿಸಬಹುದು. ಯಾವುದೇ ಬ್ಯಾಂಕ್, ಬ್ಯಾಂಕ್ ಎಟಿಎಂ ಸ್ಥಾಪನೆ ಮಾಡುವುದಿಲ್ಲ. ಅದಕ್ಕೆ ಪ್ರತ್ಯೇಕ ಕಂಪನಿಯಿದೆ. ಆ ಕಂಪನಿಗೆ ಬ್ಯಾಂಕ್ ಗುತ್ತಿಗೆ ನೀಡುತ್ತದೆ.
ಆ ಕಂಪನಿಯಿಂದ ನೀವು ಎಟಿಎಂ ಫ್ರಾಂಚೈಸಿ ತೆಗೆದುಕೊಳ್ಳುವ ಮೂಲಕ ಉತ್ತಮ ಹಣ ಗಳಿಸಬಹುದು. ಎಸ್ಬಿಐನ ಎಟಿಎಂ ಫ್ರ್ಯಾಂಚೈಸ್ ತೆಗೆದುಕೊಳ್ಳಲು 50-80 ಚದರ ಅಡಿ ಜಾಗವನ್ನು ಹೊಂದಿರಬೇಕು. ಇತರ ಎಟಿಎಂಗಳಿಂದ ಇದರ ದೂರವು 100 ಮೀಟರ್ ಆಗಿರಬೇಕು. ನೆಲ ಮಹಡಿಯಲ್ಲಿ ಜಾಗವಿರಬೇಕು. 24 ಗಂಟೆಗಳ ವಿದ್ಯುತ್ ಪೂರೈಕೆ ಇರಬೇಕು. 1 ಕೆಡಬ್ಲ್ಯ ವಿದ್ಯುತ್ ಸಂಪರ್ಕ ಕಡ್ಡಾಯ. ಎಟಿಎಂ ದಿನಕ್ಕೆ ಸುಮಾರು 300 ವಹಿವಾಟುಗಳ ಸಾಮರ್ಥ್ಯವನ್ನು ಹೊಂದಿರಬೇಕು. ಎಟಿಎಂ ಜಾಗವು ಕಾಂಕ್ರೀಟ್ ಛಾವಣಿಯನ್ನು ಹೊಂದಿರಬೇಕು.
ಎಟಿಎಂ ಸ್ಥಾಪಿಸಲು ಬಯಸಿದ್ದರೆ ಐಡಿ ಪುರಾವೆಯಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಕಾರ್ಡ್ ನೀಡಬೇಕು. ವಿಳಾಸ ಪುರಾವೆಯಾಗಿ ಪಡಿತರ ಚೀಟಿ, ವಿದ್ಯುತ್ ಬಿಲ್ ನೀಡಬೇಕು. ಬ್ಯಾಂಕ್ ಖಾತೆ ಮತ್ತು ಪಾಸ್ ಬುಕ್ ನೀಡಬೇಕು. ಫೋಟೋ, ಇ-ಮೇಲ್ ಐಡಿ, ಫೋನ್ ಸಂಖ್ಯೆ, ಜಿಎಸ್ಟಿ ಸಂಖ್ಯೆ ನೀಡಬೇಕಾಗುತ್ತದೆ.
ಫ್ರ್ಯಾಂಚೈಸಿಗೆ ಅರ್ಜಿ ಸಲ್ಲಿಸಬಯಸುವವರು, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಟಾಟಾ ಇಂಡಿಕಾಶ್ – www.indicash.co.in . ಮುತ್ತೂಟ್ ಎಟಿಎಂ-www.muthootatm.com/suggest- atm.html. ಇಂಡಿಯಾ ಒನ್ ಎಟಿಎಂ india1atm.in/rent-your-space. ಇದ್ರಲ್ಲಿ ಒಂದನ್ನು ಆಯ್ದು ಅರ್ಜಿ ಸಲ್ಲಿಸಬೇಕು. ಈ ಕಂಪನಿಗಳ ಭದ್ರತಾ ಠೇವಣಿ ಬೆಲೆ ಬೇರೆ ಬೇರೆ ಇದೆ.
ಇದನ್ನೂ ಓದಿ: SBI ನಲ್ಲಿ ಭರ್ಜರಿ ಉದ್ಯೋವಕಾಶ, ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ SBI
SBI Recruitment 2021: ಅರ್ಜಿ ಹಾಕುವ ಮುನ್ನ ಸಂಪೂರ್ಣ ಅಧಿಸೂಚನೆಯನ್ನು ಓದಿ. ವಿದ್ಯಾರ್ಹತೆ, ವೇತನ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಇನ್ನೂ ಹೆಚ್ಚಿನ ವಿವರಗಳನ್ನು ಆ ಅಧಿಸೂಚನೆಯಲ್ಲಿ ತಿಳಿದುಕೊಳ್ಳಬಹುದು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಸಿಹಿ ಸುದ್ದಿ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಲವು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಎಸ್ಬಿಐ ಮ್ಯಾನೇಜರ್(SBI Manager), ಡೆಪ್ಯುಟಿ ಮ್ಯಾನೇಜರ್(Deputy Manager), ಎಕ್ಸಿಕ್ಯೂಟಿವ್(Executive), ಇನ್ವೆಸ್ಟ್ಮೆಂಟ್ ಆಫೀಸರ್(Investment Officer), ರಿಲೇಶನ್ಶಿಪ್ ಮ್ಯಾನೇಜರ್(Relationship Manager), ಸೆಂಟ್ರಲ್ ರಿಸರ್ಚ್ ಟೀಮ್(Central Research Team), ಕಸ್ಟಮರ್ ರಿಲೇಶನ್ಶಿಪ್ ಎಕ್ಸಿಕ್ಯೂಟಿವ್ ಹುದ್ದೆ(Customer Relationship Executive Jobs)ಗಳನ್ನು ಭರ್ತಿ ಮಾಡಲು ಎಸ್ಬಿಐ(SBI) ಅರ್ಜಿ ಆಹ್ವಾನಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ಹೆಚ್ಚಿನ ವಿವರಗಳಿವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 28ರಿಂದ ಅಕ್ಟೋಬರ್ 18ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಹಾಕುವ ಮುನ್ನ ಸಂಪೂರ್ಣ ಅಧಿಸೂಚನೆಯನ್ನು ಓದಿ. ವಿದ್ಯಾರ್ಹತೆ, ವೇತನ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಇನ್ನೂ ಹೆಚ್ಚಿನ ವಿವರಗಳನ್ನು ಆ ಅಧಿಸೂಚನೆಯಲ್ಲಿ ತಿಳಿದುಕೊಳ್ಳಬಹುದು.
ಎಸ್ಬಿಐ ನೇಮಕಾತಿ 2021 ಸಂಪೂರ್ಣ ಮಾಹಿತಿ
ನೇಮಕಾತಿ SBI Recruitment 2021: 606 ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್, ಎಕ್ಸಿಕ್ಯೂಟಿವ್, ಇನ್ವೆಸ್ಟ್ಮೆಂಟ್ ಆಫೀಸರ್, ರಿಲೇಶನ್ಶಿಪ್ ಮ್ಯಾನೇಜರ್, ಸೆಂಟ್ರಲ್ ರಿಸರ್ಚ್ ಟೀಂ, ಕಸ್ಟಮರ್ ರಿಲೇಶನ್ಶಿಪ್ ಎಕ್ಸಿಕ್ಯೂಟಿವ್ ಹುದ್ದೆಗಳು.
ನೇಮಕಾತಿ
ಎಸ್ಬಿಐ ನೇಮಕಾತಿ
ಅಡ್ವರ್ಟೈಸ್ ನಂಬರ್
CRPD/SCO-WEALTH/2021-22/17
ಹುದ್ದೆಯ ಹೆಸರು
ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್, ಎಕ್ಸಿಕ್ಯೂಟಿವ್, ಇನ್ವೆಸ್ಟ್ಮೆಂಟ್ ಆಫೀಸರ್, ರಿಲೇಶನ್ಶಿಪ್ ಮ್ಯಾನೇಜರ್, ಸೆಂಟ್ರಲ್ ರಿಸರ್ಚ್ ಟೀಂ, ಕಸ್ಟಮರ್ ರಿಲೇಶನ್ಶಿಪ್ ಎಕ್ಸಿಕ್ಯೂಟಿವ್ ಹುದ್ದೆಗಳು.
ಒಟ್ಟು ಹುದ್ದೆಗಳು: 606
ವಿದ್ಯಾರ್ಹತೆ: ಡಿಪ್ಲೋಮಾ, ಎಂಬಿಎ, ಪಿಜಿಡಿಎಂ, ಬ್ಯಾಚಲರ್ ಡಿಗ್ರಿ
ಕೆಲಸದ ಸ್ಥಳ: ಕೊಲ್ಕತ್ತಾ, ಮುಂಬೈ
ಸಂಬಳ: ಸಂಸ್ಥೆಯ ನಿಯಮಾನುಸಾರ
ಅರ್ಜಿ ಸಲ್ಲಿಕೆ: ಆನ್ಲೈನ್
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 28/09/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18/10/2021