ಮೂಡ್ ಆಫ್ ದಿ ನೇಷನ್ ಸರ್ವೇ: 2024 ರಲ್ಲಿ ಪ್ರಧಾನಿ ಮೋದಿ ಕೆಳಗಿಳಿಯಬೇಕೆ? ಯಾರಾದರೆ ಉತ್ತಮ? ಪ್ರಧಾನಿ ಮೋದಿಗೆಷ್ಟು ಜನರ ಬೆಂಬಲ?

in Kannada News/News 579 views

ಇಂಡಿಯಾ ಟುಡೇ ಸಮೂಹವು ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲು ‘ಮೂಡ್ ಆಫ್ ದ ನೇಷನ್’ ಹೆಸರಲ್ಲಿ ದೇಶವ್ಯಾಪಿ ನಡೆಸಿದ ಸಮೀಕ್ಷೆಯಲ್ಲಿ ಶೇ.24ರಷ್ಟು ಜನರು ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ಸೂಚಿಸಿದ್ದಾರೆ.

Advertisement

ಇದರ ಮೂಲಕ ಪ್ರಧಾನಿ ಮೋದಿ ನಂ.1 ಆಗಿ ಹೊರಹೊಮ್ಮಿದ್ದಾರೆ. ಆಶ್ಚರ್ಯಕರ ಸಂಗತಿ ಎಂದರೆ ಎರಡನೇ ಸ್ಥಾನದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇದ್ದಾರೆ. ಅವರಿಗೆ ಶೇ.11ರಷ್ಟು ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಶೇ.10, ದೆಹಲಿ ಸಿಎಂ ಕೇಜ್ರಿವಾಲ್, ಮಮತಾ ತಲಾ ಶೇ.8, ಅಮಿತ್ ಶಾ ಶೇ.7, ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾಗೆ ಶೇ.4ರಷ್ಟು ಬೆಂಬಲ ಸಿಕ್ಕಿದೆ.

2024 ರಲ್ಲಿ ಬಹುಮತದಿಂದ ಆಯ್ಕೆಯಾಗಲಿದ್ದಾರೆ ಪ್ರಧಾನಿ ಮೋದಿ: ಅಮೇರಿಕನ್ ಅಸ್ಟ್ರಾಲಾಜರ್

ಅಮೇರಿಕಾದ ಬೋಸ್ಟನ್ ನಗರ ನಿವಾಸಿಯಾಗಿರುವ ಪಿವಿಆರ್ ನರಸಿಂಹಾರಾವ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ ಹಾಗು ಜಗನ್ನಾಥ್ ಹೋರಾ ಎಂಬ ಫ್ರೀ ಜ್ಯೋತಿಷ್ಯ ಸಾಫ್ಟ್‌ವೇರ್ ಡೆವಲಪರ್ ಕೂಡ ಆಗಿದ್ದಾರೆ.‌ ಇವರು ತಮ್ಮ ಜ್ಯೋತಿಷ್ಯ ಶಾಸ್ತ್ರದ ಜ್ಞಾನದಿಂದ 2020 ರಿಂದ 2035 ರವರೆಗಿನ ಜಗತ್ತಿನ ಭವಿಷ್ಯವಾಣಿಯನ್ನ ಹೇಳಿದ್ದಾರೆ. ನರಸಿಂಹಾರಾವ್ ಇಂಡೋ-ಅಮೆರಿಕನ್ ಜ್ಯೋತಿಷಿಯಾಗಿದ್ದು ಐಐಟಿ ಮದ್ರಾಸ್‌ನಿಂದ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ! ಅಷ್ಟೇ ಅಲ್ಲ, ಅಮೆರಿಕದ ಹೂಸ್ಟನ್‌ನಲ್ಲಿರುವ ರೈಸ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಡಿಗ್ರಿಯನ್ನೂ ಪಡೆದಿದ್ದಾರೆ.

ನರಸಿಂಹಾರಾವ್ ಮುಂದಿನ 15 ವರ್ಷಗಳ ಕಾಲದ ಭವಿಷ್ಯವನ್ನ ನುಡಿದಿದ್ದಾರೆ. ನರಸಿಂಹಾರಾವ್ ಅವರ ಪ್ರಕಾರ, ಜಗತ್ತು ಈಗ ಮುಂದಿನ ಎರಡೂವರೆ ವರ್ಷಗಳ ಕಾಲ ಅಂದರೆ 2023 ರವರೆಗೆ ಅರಾಜಕತೆಯ ಸಮಯವನ್ನು ನೋಡುತ್ತದೆ. ಅದರ ನಂತರ ಮತ್ತೊಮ್ಮೆ ಪೂರ್ವನಿರ್ಮಾಣದ ಹಂತವು 2023 ರಲ್ಲಿ ಜಗತ್ತು ಮೊದಲಿನ ಸ್ಥಿತಿಗೆ ಮರಳು ಪ್ರಾರಂಭವಾಗುತ್ತದೆ. ಪ್ರಪಂಚವು ತನ್ನ ಆರ್ಥಿಕತೆಯನ್ನು ಸ್ಥಿರಗೊಳಿಸಲು 2034 ರವರೆಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ!

ವಿಶ್ವಗುರುವಾಗಲಿದೆ ಭಾರತ

ಮುಂಬರುವ ಸಮಯದಲ್ಲಿ, ಬಂಡವಾಳಶಾಹಿ ಮತ್ತು ಸಮಾಜವಾದದ ಏಕೀಕರಣವು ಹೊಸ ಹಣಕಾಸು ವ್ಯವಸ್ಥೆಯನ್ನು ರೂಪಿಸುತ್ತದೆ ಮತ್ತು ಈ ಅವಧಿಯಲ್ಲಿ ಭಾರತವು ಪ್ರಪಂಚದ ಪ್ರಮುಖ ದೇಶವಾಗಲಿದೆ. ಇದರಲ್ಲಿ ಭಾರತವನ್ನು ಹೊಸ ಸೂಪರ್ ಪವರ್ ಆಗಿ ಹೊರಹೊಮ್ಮಲಿದೆ.

ಮಗದೊಮ್ಮೆ ಪ್ರಧಾನಿಯಾಗಲಿದ್ದಾರೆ ನರೇಂದ್ರ ಮೋದಿ

ನರಸಿಂಹಾರಾವ್ ಅವರ ಪ್ರಕಾರ, ದೇಶದ ಕಲ್ಯಾಣ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿ ಅವರು ಧೈರ್ಯಶಾಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು 2022 ರಿಂದ 2024 ರವರೆಗೆ ಅನೇಕ ರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸುತ್ತಾರೆ. 2024 ರಲ್ಲಿ ಪ್ರಧಾನಿ ಮೋದಿ ಮೂರು ಪಟ್ಟು ಬಹುಮತದೊಂದಿಗೆ ಬರಲಿದ್ದಾರೆ. ಇದು ಮಾತ್ರವಲ್ಲ, ಮೋದಿಜೀ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ ನರಸಿಂಹ ರಾವ್ “ಮೂರನೆಯ ಅವಧಿಯ ಮಧ್ಯದಲ್ಲಿ, ಅವರು ತಮ್ಮ ಸಹೋದ್ಯೋಗಿಯೊಬ್ಬರಿಗೆ ಅಧಿಕಾರವನ್ನು ಹಸ್ತಾಂತರಿಸುತ್ತಾರೆ ಮತ್ತು ಸಾರ್ವಜನಿಕ ಜೀವನದಿಂದ ನಿವೃತ್ತರಾಗುತ್ತಾರೆ” ಎಂದು ಭವಿಷ್ಯ ನುಡಿದಿದ್ದಾರೆ.

Advertisement
Share this on...