ಲಾಕ್ಡೌನ್ ನಿಂದ ಮನೆಯಲ್ಲಿ ಬಂಧಿಯಾಗಿರೋ ಎಷ್ಟೋ ಜನಕ್ಕೆ ಹೊಸ ರುಚಿ ನೀಡಬೇಕೆಂದು ಕಾಯುತ್ತಿದ್ದಾರೆ. ಹೊರಗೆ ಹೋಗಿ ತರೋಣ ಅಂದ್ರೆ ಲಾಕ್ಡೌನ್. ಇನ್ನು ಮತ್ತೆ ಕೆಲವರಿಗೆ ವರ್ಕ್ ಫ್ರಂ ಹೋಮ್ ಇರೋದರಿಂದ ಹೊರಗೆ ಹೋಗಕ್ಕೂ ಆಗಲ್ಲ. ಮನೆಯಲ್ಲಿ ಅಡುಗೆ ಮಾಡಿಕೊಳ್ಳೋಕು ಸಮಯ ಇರಲ್ಲ. ಮನೆಯಲ್ಲಿ ಮೊಟ್ಟೆ, ಆಲೂಗಡ್ಡೆ ಮತ್ತು ಟೊಮಾಟೋ ಇದ್ರೆ ರುಚಿಯಾದ ಅಫ್ಘಾನಿ ಆಮ್ಲೆಟ್ ಟ್ರೈ ಮಾಡಿ. ಬೇಗನೂ ಆಗುತ್ತೆ, ಬಾಯಿಗೆ ಹೊಸ ರುಚಿ ಸಿಕ್ಕಂತೆ ಆಗುತ್ತೆ.
ಆಲೂಗಡ್ಡೆ – ಒಂದು ಮಧ್ಯಮ ಗಾತ್ರದ್ದು, ಟೊಮಾಟೋ – ಒಂದು ಅಥವಾ ಎರಡು, ಈರುಳ್ಳಿ– 1 (ಚಿಕ್ಕದು), ಮೊಟ್ಟೆ – 4 ರಿಂದ 5, ಅಡುಗೆ ಎಣ್ಣೆ – 1/4 ಕಪ್, ಉಪ್ಪು– ರುಚಿಗೆ ತಕ್ಕಷ್ಟು, ಬ್ಲ್ಯಾಕ್ ಪೆಪ್ಪರ್ ಪೌಡರ್ – 1/4 ಟೀ ಸ್ಪೂನ್, ಹಸಿ ಮೆಣಸಿನಕಾಯಿ– 2, ಕೋತಂಬರಿ ಸೊಪ್ಪು
ಮಾಡುವ ವಿಧಾನ
* ಮೊದಲಿಗೆ ಸ್ಟೌವ್ ಮೇಲೆ ಪ್ಯಾನ್ ಇರಿಸಿ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಆಲೂಗಡ್ಡೆಯ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿ ಪ್ಯಾನ್ಗೆ ಹಾಕಿ. ಹೀಗೆ ಆಲೂಗಡ್ಡೆಯನ್ನು ಕಡಿಮೆ ಉರಿಯಲ್ಲಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ.
* ಆಲೂಗಡ್ಡೆ ಬೇಯುತ್ತಿದ್ದಂತೆ ಸಣ್ಣದಾಗಿ ಕತ್ತರಿಸಿರುವ ಈರುಳ್ಳಿ ಸೇರಿಸಿ ಚೆನ್ನಾಗಿ ಕಲಕಿ. ಈರುಳ್ಳಿ ಹಸಿ ವಾಸನೆ ಹೋದ ನಂತ್ರ ಕತ್ತರಿಸಿದ ಟೊಮಾಟೋ ಮಿಕ್ಸ್ ಮಾಡಿಕೊಂಡು ಎರಡರಿಂದ ಮೂರು ನಿಮಿಷ ಫ್ರೈ ಮಾಡಿಕೊಳ್ಳಿ.
* ಆಲೂಗಡ್ಡೆ, ಟೊಮಾಟೋ ಮತ್ತು ಈರುಳ್ಳಿ ಮಿಶ್ರಣ ಬೇಯುತ್ತಿದ್ದಂತೆ ಬ್ಲ್ಯಾಕ್ ಪೆಪ್ಪರ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಕಿ. ನಂತರ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ನಾಲ್ಕರಿಂದ ಐದು ನಿಮಿಷ ಬೇಯಿಸಿ.
* ಈಗ ಆಲೂಗಡ್ಡೆ ಸಾಫ್ಟ್ ಆಗಿರುತ್ತೆ. ಈಗ ಮೇಲೆ ಒಂದೊಂದರಂತೆ ಮೊಟ್ಟೆಗಳನ್ನು ಒಡೆದು ಹಾಕಿ. ತದನಂತರ ಮೇಲೆ ಸ್ವಲ್ಪ ಬ್ಲ್ಯಾಕ್ಪೆಪ್ಪರ್ ಪೌಡರ್ ಉದುರಿಸಿ. ಉದ್ದವಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಕಿ, ಕೊನೆಗೆ ಕೋತಂಬರಿ ಸೊಪ್ಪು ಉದುರಿಸಿ. ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಿಸಿದ್ರೆ ಸ್ಪೈಸಿ ಅಫ್ಘಾನಿ ಆಮ್ಲೆಟ್ ಸವಿಯಲು ಸಿದ್ಧ
ಮುಂದಿನ ರೆಸಿಪಿ: ಮಾಡಿದ ರೊಟ್ಟಿ ಹೆಚ್ಚಾದರೆ ಚಿಂತಿಸಬೇಡಿ, ಇದರಿಂದ ತಯಾರಿಸಬಹುದು ಟೆಸ್ಟೀ ಉಪ್ಪಿಟ್ಟು
ಬೆಳಿಗ್ಗೆ ತಿಂಡಿಗೆ ಮಾಡಿಕೊಂಡ ರೊಟ್ಟಿ ಹೆಚ್ಚಾದರೆ ಏನು ಮಾಡುವುದು ಎಂಬ ಚಿಂತೆಯಾಗುತ್ತದೆ. ಇನ್ಮುಂದೆ ಚಪಾತಿ ಹೆಚ್ಚಾದರೆ ಚಿಂತಿಸುವುದು ಬೇಡ. ಏಕೆಂದರೆ ರೊಟ್ಟಿಯಿಂದ ರುಚಿಯಾದ ಉಪ್ಪಿಟ್ಟು ತಯಾರಿಸಬಹುದು. ಉಪ್ಪಿಟ್ಟನ್ನು ಮದ್ಯಾಹ್ನ ಟೀ ಜೊತೆಗೂ ಸೇವಿಸಬಹುದು. ರೊಟ್ಟಿ ಉಪ್ಪಿಟ್ಟು ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ ಓದಿ.
ಬೇಕಾಗು ಪದಾರ್ಥಗಳು:
ರೊಟ್ಟಿ, ಈರುಳ್ಳಿ, ಟೊಮಾಟೊ, ಹಸಿ ಮೆಣಸು, ಅರಿಶಿಣ, ಕರಿ ಬೇವು, ಲಿಂಬು, ಎಣ್ಣೆ, ಸಾಸಿವೆ, ಇಂಗು, ಕೊತುಂಬರಿ ಸೊಪ್ಪು, ಉಪ್ಪು, ಸಕ್ಕರೆ
ರೊಟ್ಟಿ ಮಾಡಿ ಕನಿಷ್ಟ 1 ತಾಸಾದರೂ ಆಗಿರಬೇಕು.
ನಂತರ ರೊಟ್ಟಿಯನ್ನು ಸಣ್ಣ ಚೂರು ಚೂರು ಮಾಡಿಕೊಳ್ಳಿ.
ನಂತರ ಅದಕ್ಕೆ ಒಗ್ಗರಣೆ ಹಾಕಬೇಕು. ಮೊದಲಿಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಈರುಳ್ಳಿ, ಟೊಮಾಟೊ, ಸಾಸಿವೆ, ಹಸಿ ಮೆಣಸು, ಬೇವಿನ ಸೊಪ್ಪು, ಅರಿಶಿಣ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು.
ಚೂರು ಮಾಡಿಕೊಂಡ ಚಪಾತಿಯನ್ನು ಹಾಕಿ ಕಲಸಬೇಕು. ಆಮೇಲೆ ಕುತುಂಬರಿ ಸೊಪ್ಪು, ಉಪ್ಪು, ಸಕ್ಕರೆ, ಲಿಂಬು ಹಾಕಿ ಚೆನ್ನಾಗಿ ಬಿಸಿ ಮಾಡಬೇಕು.
ರುಚಿಯಾದ ರೊಟ್ಟಿ ಉಪ್ಪಿಟ್ಟು ರೆಡಿ. ಇದನ್ನು ಬೆಳ್ಳಿಗ್ಗೆ ತಿಂಡಿಯಾಗಿಯೂ ಸೇವಿಸಬಹುದು. ಮದ್ಯಾಹ್ನ ಟೀ ಜೊತೆಯೂ ಸೇವಿಸಬಹುದು.