“ಮೋದಿ ಬಂದ ಬಳಿಕ ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಿದೆ, ಕಾಂಗ್ರೆಸ್ ಆಡಳಿತವಿದ್ದಾಗ ಇಡೀ ಭಾರತ ದೇಶವೇ….”: ಪ್ರಧಾನಿ ಮೋದಿ ಪರ ಹಾಗು ಕಾಂಗ್ರೆಸ್ ಬಗ್ಗೆ ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿದ್ದೇನು ನೋಡಿ

in Uncategorized 300 views

ಟೆಕ್ನಾಲಜಿ ಸೆಕ್ಟರ್‌ನ ದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ (Infosys) ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ದೇಶದ ಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ಮಾತನಾಡಿದ್ದಾರೆ.

Advertisement

ನಾರಾಯಣ ಮೂರ್ತಿ ಅವರು ಶುಕ್ರವಾರ (ಸೆಪ್ಟೆಂಬರ್ 23, 2022) ಕೇಂದ್ರದ ಯುಪಿಎ ಸರ್ಕಾರದ ಅವಧಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಳಂಬವಾಗುತ್ತಿತ್ತು. ಹಾಗಾಗಿಯೇ ಮನಮೋಹನ್ ಸಿಂಗ್ ಅವರಂತಹ ಅರ್ಥಶಾಸ್ತ್ರಜ್ಞರು ಪ್ರಧಾನಿಯಾಗಿದ್ದರೂ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ (IIM-A) ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ನಾರಾಯಣ ಮೂರ್ತಿ ಅವರು ಮನಮೋಹನ್ ಸಿಂಗ್ ಅವರನ್ನು ಅಸಾಮಾನ್ಯ ವ್ಯಕ್ತಿ ಎಂದು ಕರೆದರು.

ಇನ್ಫೋಸಿಸ್ ಸಹ-ಸಂಸ್ಥಾಪಕರು ಮಾತನಾಡುತ್ತ, “ನಾನು ಲಂಡನ್‌ನಲ್ಲಿ (2008 ಮತ್ತು 2012 ರ ನಡುವೆ) HSBC ಬೋರ್ಡ್ ನಲ್ಲಿದ್ದೆ. ಮೊದಲ ಕೆಲವು ವರ್ಷಗಳಲ್ಲಿ ಬೋರ್ಡ್ ರೂಮಿನಲ್ಲಿ (ಸಭೆಗಳಲ್ಲಿ) ಚೀನಾದ ಹೆಸರನ್ನು ಎರಡರಿಂದ ಮೂರು ಬಾರಿ ಪ್ರಸ್ತಾಪಿಸಲಾಯಿತು. ಆದರೆ ಭಾರತದ ಹೆಸರನ್ನು ಒಮ್ಮೆ ಮಾತ್ರ ಉಲ್ಲೇಖಿಸಲಾಗಿತ್ತು” ಎಂದರು.

ಬಿಜೆಪಿ ನೇತೃತ್ವದ ಪ್ರಸ್ತುತ ಎನ್‌ಡಿಎ ಸರ್ಕಾರವನ್ನು ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರದೊಂದಿಗೆ ಹೋಲಿಸಿದ ನಾರಾಯಣ ಮೂರ್ತಿ, “ಯುಪಿಎ ಸರ್ಕಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿನ ವಿಳಂಬವು ಭಾರತದ ಆರ್ಥಿಕತೆಗೆ ಭಾರಿ ಹಾನಿಯನ್ನುಂಟುಮಾಡಿದೆ” ಎಂದು ಹೇಳಿದರು.

ಅವರು ಮಾತನಾಡುತ್ತ, “ದುರದೃಷ್ಟವಶಾತ್ ನಂತರ ಏನಾಯಿತು ಎಂದು ನನಗೆ ಗೊತ್ತಿಲ್ಲ. ಅಸಾಧಾರಣ ವ್ಯಕ್ತಿ ಮನಮೋಹನ್ ಸಿಂಗ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಆದರೆ ಅವರ ಅವಧಿಯಲ್ಲಿ ಭಾರತ ನಿಂತಲ್ಲೇ ನಿಂತು ಬಿಟ್ಟಿತ್ತು. ತಕ್ಷಣವೇ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ ಮತ್ತು ಎಲ್ಲವೂ ಸ್ಥಗಿತಗೊಂಡಿತು. ನಾನು ಹೊರಡುವ ಸಮಯದವರೆಗೆ (HSBC), ಚೀನಾವನ್ನು 30 ಬಾರಿ ಹೆಸರಿಸಿದ್ದರೆ, ಭಾರತವನ್ನು ಒಮ್ಮೆ ಮಾತ್ರ ಉಲ್ಲೇಖಿಸಲಾಗಿತ್ತು” ಎಂದರು.

ನಾರಾಯಣ ಮೂರ್ತಿ ಅವರು 1991 ರ ಆರ್ಥಿಕ ಸುಧಾರಣೆಗಳಿಗಾಗಿ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರನ್ನು ಶ್ಲಾಘಿಸಿದರು. ಪಿವಿ ನರಸಿಂಹರಾವ್ ಅವರ ಸರ್ಕಾರದಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಲಾಯಿತು ಮತ್ತು ಆ ಸಮಯದಲ್ಲಿ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದರು.

ಭವಿಷ್ಯದಲ್ಲಿ ಭಾರತದ ಕಲ್ಪನೆ ನಿಮ್ಮ ದೃಷ್ಟಿಯಲ್ಲಿ ಹೇಗಿರಲಿದೆ? ಎಂದು ಅವರನ್ನು ಕೇಳಿದಾಗ, “ಇತರ ಯಾವುದೇ ದೇಶವನ್ನು, ವಿಶೇಷವಾಗಿ ಚೀನಾವನ್ನು ಹೆಸರಿಸಿದಾಗ, ಜನರು ಭಾರತದ ಹೆಸರನ್ನು ಉಲ್ಲೇಖಿಸುವುದು ಯುವ ಪೀಳಿಗೆಯ ಕೆಲಸ” ಎಂದು ಹೇಳಿದರು. ಈ ಕೆಲಸವನ್ನು ಯುವ ಪೀಳಿಗೆ ಉತ್ತಮವಾಗಿ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ಟಾರ್ಟಪ್ ಇಂಡಿಯಾ’ದಂತಹ ಅಭಿಯಾನಗಳಿಗಾಗಿ ಕೇಂದ್ರದ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಸರ್ಕಾರವನ್ನು (NDA Government) ನಾರಾಯಣ ಮೂರ್ತಿ ಶ್ಲಾಘಿಸಿದರು. “ಒಂದು ಕಾಲದಲ್ಲಿ ಬೇರೆ ದೇಶಗಳ ಜನರು ಭಾರತವನ್ನು ಕೀಳಾಗಿ ಕಾಣುವ ಕಾಲವಿತ್ತು, ಆದರೆ ಇಂದು ದೇಶದ ಬಗ್ಗೆ ಒಂದು ರೀತಿಯ ಗೌರವವಿದೆ, ಅದು ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ” ಎಂದು ಅವರು ಹೇಳಿದರು.

ಅವರು ಮುಂದೆ ಮಾತನಾಡುತ್ತ, “1978 ಮತ್ತು 2022 ರ ನಡುವಿನ 44 ವರ್ಷಗಳ ಅವಧಿಯಲ್ಲಿ ಚೀನಾ ಆರು ಬಾರಿ ಭಾರತವನ್ನು ಹಿಂದಿಕ್ಕಿದೆ. ಆದಾಗ್ಯೂ, ಈ ದಿಕ್ಕಿನಲ್ಲಿ ಕುಳಿತಿರುವ ಎಲ್ಲಾ ಅದ್ಭುತ ವ್ಯಕ್ತಿಗಳು ಒಟ್ಟಾಗಿ ಕೆಲಸ ಮಾಡಿದರೆ ಚೀನಾಕ್ಕೆ ಇಂದು ಸಿಗುವ ಗೌರವ ಭಾರತಕ್ಕೆ ಸಿಗುತ್ತದೆ ಎಂದು ನಾನು ನಂಬುತ್ತೇನೆ” ಎಂದರು.

Advertisement
Share this on...