ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಂಪುಟವನ್ನು ವಿಸ್ತರಿಸಿದ್ದಾರೆ. ಈ ಸಂಪುಟದಲ್ಲಿ ಒಟ್ಟು 43 ಸಂಸದರನ್ನು ಸಚಿವರನ್ನಾಗಿ ಮಾಡಲಾಗಿದೆ. 36 ಹೊಸ ನಾಯಕರು ಮೋದಿ ಕ್ಯಾಬಿನೆಟ್ ಗೆ ಪ್ರವೇಶ ಪಡೆದಿದ್ದಾರೆ. ಈ ಸಂಪುಟದಲ್ಲಿ ಯುವ ನಾಯಕರಿಗೆ ಸಚಿವರಾಗಲು ಅವಕಾಶ ನೀಡಲಾಗಿದೆ. ಈ ಕ್ಯಾಬಿನೆಟ್ ವಿಸ್ತರಣೆಯಲ್ಲಿ 15 ನಾಯಕರನ್ನು ಕ್ಯಾಬಿನೆಟ್ ಮತ್ತು 28 ನಾಯಕರನ್ನು ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ. ಪ್ರಧಾನಿ ಮೋದಿಯವರ ಈ ಸಂಪುಟದಲ್ಲಿ ಪುನರ್ರಚನೆಯ ನಂತರ ಒಟ್ಟು ಕ್ಯಾಬಿನೆಟ್ ಸಂಖ್ಯೆ 78 ಕ್ಕೆ ಏರಿದೆ. ಹೊಸ ಸಂಪುಟದಲ್ಲಿ ಒಟ್ಟು ಮಹಿಳಾ ಮಂತ್ರಿಗಳ ಸಂಖ್ಯೆ 11 ಆಗಿದೆ. ಇಂದು ನಾವು ನಿಮ್ಮನ್ನು ಪ್ರಧಾನಿ ಮೋದಿ ಕ್ಯಾಬಿನೆಟ್‌ನ ಬಡ ಸಚಿವರನ್ನ ಪರಿಚಯಿಸಲಿದ್ದೇವೆ.
ಈ ಸಂಪುಟದಲ್ಲಿ ಬಹುತೇಕ ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ಮಂತ್ರಿಮಂಡಲದ ಹೆಚ್ಚಿನ ನಾಯಕರು ಬಹಳ ಶ್ರೀಮಂತರು. ಹೌದು ಮೋದಿ ಸಂಪುಟದಲ್ಲಿ 50 ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿರುವ ಅಂತಹ 4 ನಾಯಕರು ಇದ್ದಾರೆ ಎಂದು ಕೇಳಿದಾಗ ನಿಮಗೆ ಆಶ್ಚರ್ಯವಾಗುತ್ತದೆ. ಅಷ್ಟೇ ಅಲ್ಲದೆ ಒಂದು ಕೋಟಿ ಮೌಲ್ಯದ ಆಸ್ತಿಯೂ ಇಲ್ಲದ 8 ಮಂತ್ರಿಗಳೂ ಇದ್ದಾರೆ.
ಪ್ರಧಾನಿ ಮೋದಿ ಸಂಪುಟದ ಶ್ರೀಮಂತ ಸಚಿವ
ಪ್ರಧಾನಿ ಮೋದಿಯವರ ಸಂಪುಟದಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿದ ಜ್ಯೋತಿರಾಧಿತ್ಯ ಸಿಂಧಿಯಾ ಕೂಡ ಇದ್ದಾರೆ. ಅವರಿಗೆ ನಾಗರಿಕ ವಿಮಾನಯಾನ ಸಚಿವಾಲಯ ನೀಡಲಾಗಿದೆ. ಜ್ಯೋತಿರಾಧಿತ್ಯ ಸಿಂಧಿಯಾ ಅವರು ಮೋದಿ ಸಂಪುಟದ ಶ್ರೀಮಂತ ನಾಯಕರು. ಜ್ಯೋತಿರಾಧಿತ್ಯ ಸಿಂಧಿಯಾ ಸಾಕಷ್ಟು ಆಸ್ತಿ ಹೊಂದಿದ್ದಾರೆ. ಒಂದು ಅಂದಾಜಿನ ಪ್ರಕಾರ, ಅವರ ಒಟ್ಟು ಆಸ್ತಿ ಬರೋಬ್ಬರಿ 379 ಕೋಟಿ. ಅವರ ಆಸ್ತಿಯ ಬಹುಪಾಲು ಅವರ ಪೂರ್ವಜರಿಂದ ಆನುವಂಶಿಕವಾಗಿ ಬಂದಿದ್ದಾಗಿದೆ. ಉಳಿದ ಆಸ್ತಿಯನ್ನು ಅವರು ಸಂಪಾದಿಸಿದ್ದಾಗಿದೆ. ಜ್ಯೋತಿರಾಧಿತ್ಯ ಸಿಂಧಿಯಾ ರಾಜಮನೆತನಕ್ಕೆ ಸೇರಿದವರಾಗಿದ್ದು ಅವರ ಕುಟುಂಬ ಮಧ್ಯಪ್ರದೇಶದಲ್ಲಿ ಆಳ್ವಿಕೆ ನಡೆಸುತ್ತಿತ್ತು.
ಪ್ರಧಾನಿ ಮೋದಿಯವರ ಈ ಹೊಸ ಸಂಪುಟದಲ್ಲಿ ಬಿಜೆಪಿ ಮಹಿಳಾ ಸಂಸದೆ ಪ್ರತಿಮಾ ಭೌಮಿಕ್ ಅವರನ್ನು ಬಡ ಮಂತ್ರಿ ಎಂದು ಹೇಳಲಾಗುತ್ತಿದೆ. ಪ್ರತಿಮಾ ಭೌಮಿಕ್ ಕನಿಷ್ಠ ಆಸ್ತಿ ಹೊಂದಿದ್ದಾರೆ. ಪ್ರತಿಮಾ ಭೌಮಿಕ್ ಕೇವಲ 10 ಲಕ್ಷ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅವರು ಸಲ್ಲಿಸಿದ ಚುನಾವಣಾ ಅಫಿಡವಿಟ್‌ನಿಂದ ಇದು ತಿಳಿದುಬಂದಿದೆ. ಅಷ್ಟೇ ಅಲ್ಲ, ಪ್ರತಿಮಾ ಭೌಮಿಕ್ ಅವರನ್ನು ಮೊದಲ ಬಾರಿಗೆ ಸಚಿವರನ್ನಾಗಿ ಮಾಡಲಾಗಿದೆ. ಈ ಮೂಲಕ ಸ್ವಾತಂತ್ರ್ಯಾ ನಂತರ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾದ ತ್ರಿಪುರಾ ರಾಜ್ಯದ ಮೊದಲ ವ್ಯಕ್ತಿ ಪ್ರತಿಮಾ ಭೌಮಿಕ್ ಆಗಿದ್ದಾರೆ.