ಯಾವ ಊರಿನಲ್ಲಿ ಹಣ್ಣು, ಜ್ಯೂಸ್ ಮಾರುತ್ತಿದ್ದಳೋ ಈಗ ಅದೇ ಊರಿಗೆ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿ ಬಂದ ಯುವತಿ

in News/Story/ಕನ್ನಡ ಮಾಹಿತಿ 9,282 views

ತಿರುವನಂತಪುರಂ: ಕೇರಳದ ವರ್ಕಳ ಎಂಬ ಊರಲ್ಲಿರುವ ಶಿವಗಿರಿ ಆಸ್ರಮ ಪ್ರದೇಶದಲ್ಲಿ ಹತ್ತು ವರ್ಷಗಳ ಹಿಂದೆ ಅಲ್ಲಿಗೆ ಬರುತ್ತಿದ್ದ ಪ್ರವಾಸಿಗರಿಗೆ ಜ್ಯೂಸ್‌ ಹಾಗೂ ಐಸ್‌ ಕ್ರೀಮ್‌ ಗಳನ್ನು ಮಾರುತ್ತಿದ್ದ ಯುವತಿ ಇದೀಗ ಅದೇ ಊರಲ್ಲಿ ಪೊಲೀಸ್‌ ಇನ್‌ ಸ್ಪೆಕ್ಟರ್‌ ಆಗಿ ನೇಮಕವಾದ ಸ್ಫೂರ್ತಿಯುತ ಘಟನೆ ನಡೆದಿದೆ. ಜೂನ್‌ 25ರಂದು ವರ್ಕಳ ಪೊಲೀಸ್‌ ಠಾಣೆಗೆ ಸಬ್‌ ಇನ್‌ ಸ್ಪೆಕ್ಟರ್‌ ಆಗಿ 31ರ ಹರೆಯದ ಆನಿ ಶಿವ ನೇಮಕಗೊಂಡಿದ್ದಾರೆ.

Advertisement
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪೊಲೀಸ್‌ ಸೇವೆಗೆ 2016ರಲ್ಲಿ ಆನಿ ನೇಮಕಗೊಂಡರೂ ಈಗ ಸಬ್‌ ಇನ್‌ ಸ್ಪೆಕ್ಟರ್‌ ಆಗಿ ನೇಮಕಗವಾಗಿರುವುದು ಅದ್ಭುತ ಸಾಧನೆಯೆಂದೇ ಆನಿ ಪರಿಗಣಿಸಿದ್ದಾರೆ ಎಂದು newindianexpress.com ವರದಿ ಮಾಡಿದೆ. “10 ವರ್ಷಗಳ ಹಿಂದೆ ವರ್ಕಳದ ಶಿವಗಿರಿಗೆ ಬರುತ್ತಿದ್ದ ಯಾತ್ರಾರ್ಥಿಗಳಿಗೆ ಲೆಮನ್ ಜ್ಯೂಸ್‌, ಐಸ್‌ ಕ್ರೀಮ್‌ ಗಳನ್ನು ಮಾರುತ್ತಿದ್ದೆನೋ, ಅದೇ ಸ್ಥಳಕ್ಕೆ ಇದೀಗ ಸಬ್‌ ಇನ್ ಸ್ಪೆಕ್ಟರ್‌ ಆಗಿ ನೇಮಕಗೊಂಡಿದ್ದೇನೆ. ನಾನು ಇದಕ್ಕಿಂತ ಉತ್ತಮವಾಗಿ ನನ್ನ ನಿನ್ನೆಗಳೊಂದಿಗೆ ಹೇಗೆ ಸೇಡು ತೀರಿಸಿಕೊಳ್ಳಲಿ?” ಎಂದು ಅವರು ತಮ್ಮ ಫೇಸ್‌ ಬುಕ್‌ ನಲ್ಲಿ ಬರೆದುಕೊಂಡಿದ್ದಾರೆ.

“ಮೊದಲು ನಾನು ಮಸಾಲ ಹುಡಿಗಳು ಹಾಗೂ ಸಾಬೂನುಗಳ ಮಾರಾಟ ಮಾಡುತ್ತಿದ್ದೆ. ಬಳಿಕ ನಾನು ಇನ್ಶೂರೆನ್ಸ್‌ ಏಜೆಂಟ್‌ ಆಗಿ ಕೆಲಸ ಮಾಡಿದೆ. ನಂತರ ಹಲವು ಮನೆಗಳಿಗೆ ಬೇಕಾದ ಸಾಮಗ್ರಿಗಳನ್ನು ಅಂಗಡಿಯಿಂದ ಖರೀದಿಸಿ ನನ್ನ ದ್ವಿಚಕ್ರ ವಾಹನದ ಮೂಲಕ ಮನೆ ಬಾಗಿಲಿಗೆ ತಲುಪಿಸುತ್ತಿದ್ದೆ. ಹೀಗೆ ಕೆಲಸ ಮಾಡಿಯೇ ನಾನು ಸೋಶಿಯಾಲಜಿಯಲ್ಲಿ ಪದವಿ ಪಡೆದುಕೊಂಡೆ” ಎಂದು ಅವರು ತಮ್ಮ ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ.

2014ರಲ್ಲಿ ಸಬ್‌ ಇನ್‌ ಸ್ಪೆಕ್ಟರ್‌ ಹುದ್ದೆಗೆ ಪರೀಕ್ಷೆ ಬರೆಯಲು ತಿರುವನಂತಪುರಂನ ತರಬೇತಿ ಕೇಂದ್ರಕ್ಕೆ ಸೇರ್ಪಡೆಗೊಂಡರು. ಮೂರು ವರ್ಷಗಳ ಕಾಲ ಮಹಿಳಾ ಪೊಲೀಸ್‌ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಬಳಿಕ 2019ರಲ್ಲಿ ನಡೆದ ಎಸ್ಸೈ ಆಯ್ಕೆ ಪರೀಕ್ಷೆಯನ್ನು ಬರೆದು ಅದರಲ್ಲಿ ಯಶಸ್ವಿಯಾದರು. ಒಂದೂವರೆ ವರ್ಷಗಳ ತರಬೇತಿಯ ಬಳಿಕ ಇದೀಗ ಟ್ರೈನೀ ಅನ್‌ ಇನ್‌ ಸ್ಪೆಕ್ಟರ್‌ ಆಗಿ ನೇಮಕಗೊಂಡಿದ್ದಾರೆ.

ಆನಿಯ ಯಶಸ್ಸನ್ನು ಮನಗಂಡ ಕೇರಳದ ಪ್ರಸಿದ್ಧ ಸಿನಿಮಾ ನಟ ಮೋಹನ್ ಲಾಲ್‌ ಫೇಸ್‌ ಬುಕ್‌ ನಲ್ಲಿ ಅಭಿನಂದಿಸಿದ್ದಾರೆ. ” ಮನೋರ್ದಾಢ್ಯದ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಿದ ಆನಿಗೆ ಅಭಿನಂದನೆಗಳು. ಹಲವರ ಜೀವನದ ಕನಸುಗಳಿಗೆ ತಮ್ಮ ಸಾಧನೆಯು ಮಾದರಿಯಾಗಲಿ” ಎಂದು ಅವರು ತಮ್ಮ ಫೇಸ್‌ ಬುಕ್‌ ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೈಯಲ್ಲಿ ಬಿಡಿಗಾಸು ಹಿಡಿದುಕೊಂಡು ಬಂದ ಹಳ್ಳಿಯ ಬಡ ಯುವತಿ ಈಗ ಕೋಟ್ಯಾಧೀಶ್ವರಳು: ಈಗ ಈಕೆಯ ಪ್ರತಿ ತಿಂಗಳ ಸಂಪಾದನೆ ಎಷ್ಟು ಕೋಟಿ ಗೊತ್ತಾ?

ಗೀತಾ ಯೆಲ್ಲೊ ಕಾಯಿನ್ ಕಮ್ಯೂನಿಕೇಶನ್ ಎಂಬ ಪಿಆರ್ ಮತ್ತು ಕಮ್ಯೂನಿಕೇಶನ್ ಸಂಸ್ಥೆಯನ್ನು 2012 ರಲ್ಲಿ ಹುಟ್ಟುಹಾಕಿದರು. ಇದರ ಬಂಡವಾಳ ರೂ 50,000. ಒಬ್ಬರೇ ಉದ್ಯೋಗಿಯ ಮೂಲಕ ಗೀತಾ ಸಂಸ್ಥೆಯನ್ನು ಕಟ್ಟಿದರು.

ಏನಾದರೂ ಮಾಡಬೇಕು ಎನ್ನುವ ಛಲವೊಂದಿದ್ದರೆ ಯಾವುದೇ ಕೆಲಸವು ಕಷ್ಟವಲ್ಲ ಎಂಬುದನ್ನು ಉತ್ತರಾಖಾಂಡದ ಗೀತಾಸಿಂಗ್ ನಮಗೆ ತೋರಿಸಿಕೊಟ್ಟಿದ್ದಾರೆ. ಹೌದು ಹಳ್ಳಿಯಿಂದ ಬಂದ ಗೀತಾ ದಿಲ್ಲಿಯಲ್ಲಿ ತನ್ನದೇ ಆದ ಕಂಪೆನಿ ಕಟ್ಟಿದ ಪರಿಶ್ರಮದ ಕಥೆ ಇಂದಿನ ಲೇಖನದಲ್ಲಿದೆ. ಗೀತಾ ಉತ್ತರಾಖಾಂಡದ ದೂರದ ಹಳ್ಳಿಯಾದ ಮೀರತ್‌ನವರು. ಮಾಧ್ಯಮದಲ್ಲಿ ತಮ್ಮ ವೃತ್ತಿರಂಗವನ್ನು ಆರಂಭಿಸಿ ನಂತರ ದೆಹಲಿಯಲ್ಲಿ ತಮ್ಮದೇ ಆದ ಸಂಸ್ಥೆಯೊಂದನ್ನು ನಿರ್ಮಿಸಿದ್ದಾರೆ.

ಗೀತಾ ಯೆಲ್ಲೊ ಕಾಯಿನ್ ಕಮ್ಯೂನಿಕೇಶನ್ ಎಂಬ ಪಿಆರ್ ಮತ್ತು ಕಮ್ಯೂನಿಕೇಶನ್ ಸಂಸ್ಥೆಯನ್ನು 2012 ರಲ್ಲಿ ಹುಟ್ಟುಹಾಕಿದರು. ಇದರ ಬಂಡವಾಳ ರೂ 50,000. ಒಬ್ಬರೇ ಉದ್ಯೋಗಿಯ ಮೂಲಕ ಗೀತಾ ಸಂಸ್ಥೆಯನ್ನು ಕಟ್ಟಿದರು. ಆದರೆ ಸಾಧಿಸಬೇಕೆಂಬ ಕನಸನ್ನು ಹೊತ್ತಿದ್ದ ಗೀತಾ ಎದೆಗುಂದಲಿಲ್ಲಕೆಲವೊಂದು ದೊಡ್ಡ ಸಂಸ್ಥೆಗಳು ಆಕೆಗೆ ಪ್ರಾಜೆಕ್ಟ್ ಪಡೆಯುವಲ್ಲಿ ನೆರವನ್ನು ನೀಡಿದವು. ಈಗ ಸಂಸ್ಥೆಯು 7 ಕೋಟಿ ಆದಾಯವನ್ನು ಗಳಿಸುತ್ತಿದ್ದು 50 ಉದ್ಯೋಗಿಗಳಿಗೆ ಗೀತಾ ಉದ್ಯೋಗ ನೀಡಿದ್ದಾರೆ 2,200 ಸ್ಕ್ವೇರ್ ಫೀಟ್‌ನ ತಮ್ಮದೇ ಆದ ಸಂಸ್ಥೆಯನ್ನು ಜಸೋಲಾದಲ್ಲಿ ಗೀತಾ ನಿರ್ಮಿಸಿದ್ದಾರೆ.

ಮೊಬೈಲ್ ಇಂಡಿಯಾ ಎಂಬ ವೆಬ್ ಪೋರ್ಟಲ್ ಆಕೆಯ ಮೊದಲ ಪ್ರಾಜೆಕ್ಟ್ ಆಗಿತ್ತು. ಇದೊಂದು ವೆಬ್‌ಸೈಟ್ ಆಗಿದ್ದು ಅವರಿಗೆ ಇಂಗ್ಲೀಷ್ ಮತ್ತು ಹಿಂದಿಲ್ಲಿ ಸುದ್ದಿಗಳು ಬೇಕಾಗಿತ್ತು. ಹೀಗೆ ಗೀತಾ ತಮ್ಮ ಬ್ಯುಸಿನೆಸ್‌ನ ದಿನಗಳನ್ನು ನೆನಪಿಸುತ್ತಾರೆ. ಗೀತಾ ಅವರ ತಂದೆ ಅವರಿಗೆ ಏನೂ ಸಹಾಯ ಮಾಡಿರಲಿಲ್ಲ. ತಮ್ಮ ಮಗಳು ಕೂಡ ತಮ್ಮಂತೆಯೇ ಸರಕಾರಿ ಉದ್ಯೋಗಿಯಾಗಬೇಕೆಂದು ಅವರು ಬಯಕೆಯಾಗಿತ್ತು. ಆದರೆ ಗೀತಾ ತನ್ನದೇ ಆದ ಸಂಸ್ಥೆಯನ್ನು ನಿರ್ಮಿಸಬೇಕೆಂಬ ಗುರಿಯನ್ನು ಹೊತ್ತಿದ್ದಾರೆ ಎಂದು ತಿಳಿದೊಡನೆ ತಂದೆ ಅನುಮತಿ ನೀಡಿರಲಿಲ್ಲ ಹಾಗೆಯೇ ಧನ ಸಹಾಯವನ್ನು ಮಾಡಿರಲಿಲ್ಲ. ಗೀತಾಳ ಹಳ್ಳಿ ಕೂಡ ಪಟ್ಟಣದಿಂದ ತುಂಬಾ ದೂರದಲ್ಲಿತ್ತು.ಪ್ರತಿಯೊಂದು ಮನೆಗಳೂ ತುಂಬಾ ದೂರವಿರುತ್ತಿತ್ತು. ಯಾವುದೇ ಮೂಲ ಸೌಕರ್ಯಗಳನ್ನು ಹಳ್ಳಿ ಹೊಂದಿರಲಿಲ್ಲ. ಗೀತಾ ಅವರ ತಂದೆ ತಮ್ಮ ಪತ್ನಿ ಮತ್ತು ಮಕ್ಕಳು ತನ್ನಂತೆ ಕಷ್ಟದ ಜೀವನವನ್ನು ಅನುಭವಿಸಬಾರದು ಎಂದು ಬಯಸಿದ್ದರು. ಗೀತಾ ಅವರ ತಂದೆಯೇ ಆ ಹಳ್ಳಿಯಲ್ಲಿ ಸರಕಾರಿ ಉದ್ಯೋಗ ದೊರೆತ ಮೊದಲ ವ್ಯಕ್ತಿಯಾಗಿದ್ದರು.

ಗೀತಾ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೀರತ್‌ಗೆ ಬಂದಿದ್ದಾಗ ಅವರಿಗೆ ಹಿಂದಿ ಕೂಡ ಗೊತ್ತಿರಲಿಲ್ಲವಂತೆ. ಸಹಪಾಠಿಗಳು ಅವರನ್ನು ಗೇಲಿ ಮಾಡುತ್ತಿದ್ದರು. ಅಪಮಾನಗಳನ್ನು ಸಹಿಸಿಕೊಂಡೇ ಗೀತಾ ಯಶಸ್ಸಿನ ಶಿಖರವೇರಿದರು. ಗೀತಾ ಅವರ ತಂದೆ ಆಕೆಗೆ ಯಾವಾಗಲೂ ಯಶಸ್ವಿ ಮಹಿಳೆಯರ ಯಶೋಗಾಥೆಗಳನ್ನು ಹೇಳುತ್ತಿದ್ದರು. ಗೀತಾ ಐಎಎಸ್ ಅಧಿಕಾರಿಯಾಗಬೇಕೆಂಬುದು ಅವರ ತಂದೆಯ ಬಯಕೆಯಾಗಿತ್ತು.

ಕಲಿಕೆಯ ಜೊತೆಗೆ ಗೀತಾ ವೀಡಿಯೊಗಳನ್ನು ಎಡಿಟ್ ಮಾಡುವಂತಹ ತರಬೇತಿಗಳನ್ನು ಪಡೆದುಕೊಂಡರು. ವಿದ್ಯಾಬ್ಯಾಸದ ನಂತರ ಆಕೆ ಬಿಬಿಸಿ ಡಾಕ್ಯುಮೆಂಟರಿ ವಿಭಾಗದಲ್ಲಿ ಕೆಲಸ ಮಾಡಿದರು. ಆಕೆಯ ಮೊಲದ ಸಂಬಳ ರೂ 16,000 ಅಂತೆಯೇ ಫ್ರಿಲ್ಯಾನ್ಸ್ ವೀಡಿಯೊ ಎಡಿಟಿಂಗ್ ಮಾಡಿ ಗಂಟೆಗೆ ರೂ 2000 ದುಡಿಯುತ್ತಿದ್ದರು.

ಆರಂಭಿಕ ದಿನಗಳಲ್ಲಿ ಅವರು ಎಷ್ಟೋ ಜನರಿಗೆ ಉಚಿತವಾಗಿ ಕೆಲಸಮಾಡಿಕೊಡುತ್ತಿದ್ದರು. ಸಂಸ್ಥೆ ಹುಟ್ಟುಹಾಕಿದ ನಂತರ ಅವರೇ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ನೀಡುವಲ್ಲಿ ಸಹಾಯಮಾಡಿದರು ಎಂದು ಗೀತಾ ನೆನಪಿಸಿಕೊಳ್ಳುತ್ತಾರೆ. ಮೊದಲಿಗೆ ಸಣ್ಣ ಪ್ರಾಜೆಕ್ಟ್‌ಗಳಿಂದ ತೊಡಗಿ ನಂತರ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಗೀತಾ ಕೈಗೆತ್ತಿಕೊಂಡರು. ಗೀತಾ ನಡೆದು ಬಂದ ದಾರಿ ಸುಲಭದ್ದಾಗಿರಲಿಲ್ಲ.ಕಷ್ಟದ ಹಾದಿಯನ್ನೇ ಅವರು ಸವೆಸಿ ಬಂದಿದ್ದಾರೆ. ಆದರೆ ಸಾಧಿಸಬೇಕೆನ್ನುವ ಛಲ ಅವರಿಗಿದ್ದದರಿಂದ ಆಕೆ ಯಶಸ್ಸನ್ನು ಪಡೆದುಕೊಂಡರು.

Advertisement
Share this on...