ಯಾವುದೇ ವೈದ್ಯರು ತಮ್ಮ ರೋಗಿಗೆ ಜೀವ ಖಾತ್ರಿ ಅಥವ ನಿನ್ನ ಜೀವ ಉಳಿಸುತ್ತೇನೆ ಎಂದು ಖಾತ್ರು ನೀಡಲು ಸಾಧ್ಯವಿಲ್ಲ. ವೈದ್ಯರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮಾತ್ರ ಗುಣಪಡಿಸಲು ಪ್ರಯತ್ನಿಸಬಹುದು. ಕೆಲವು ಕಾರಣಗಳಿಂದ ರೋಗಿಯು ಬದುಕುಳಿಯದಿದ್ದರೆ, ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ ವೈದ್ಯರನ್ನು ದೂಷಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ವೈದ್ಯರು ಒಬ್ಬ ರೋಗಿಯ ಬಗ್ಗೆಯೇ ಎಲ್ಲಾ ಸಮಯದಲ್ಲೂ ನಿಲ್ಲುವಂತಿಲ್ಲ ಎಂದ ನ್ಯಾಯಾಲಯ
ಜಸ್ಟಿಸ್ ಹೇಮಂತ್ ಗುಪ್ತಾ ಹಾಗು ಜಸ್ಟಿಸ್ ವಿ.ರಾಮ್ ಸುಬ್ರಮಣ್ಯಂ ರವರ ಪೀಠವು ಬಾಂಬೆ ಹಾಸ್ಪಿಟಲ್ & ವೈದ್ಯಕೀಯ ಸಂಶೋಧನಾ ಕೇಂದ್ರದ ಅರ್ಜಿಯನ್ನ ಸ್ವೀಕರಿಸುತ್ತ ವೈದ್ಯಕೀಯ ನಿರ್ಲಕ್ಷ್ಯದಿಂದ ರೋಗಿ ದಿನೇಶ್ ಜೈಸ್ವಾಲ್ ಸಾವಿಗೆ ಆಶಾ ಜೈಸ್ವಾಲ್ ಮತ್ತು ಇತರರಿಗೆ 14.18 ಲಕ್ಷ ರೂ.ಗಳನ್ನು ಪಾವತಿಸಲು ಆದೇಶಿಸಿದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶವನ್ನು ಹೊರಡಿಸಿದೆ.
ಪ್ರಕರಣದ ದಾಖಲೆಗಳು ಮತ್ತು ವಾದಗಳನ್ನು ಪರಿಶೀಲಿಸಿದ ನಂತರ, ಪೀಠವು, “ಇಲ್ಲಿ ರೋಗಿಯು ಆಸ್ಪತ್ರೆಗೆ ದಾಖಲಾಗುವ ಮೊದಲೇ ಆತನ ಸ್ಥಿತಿ ಗಂಭೀರವಾಗಿತ್ತು ಆದರೆ ಶಸ್ತ್ರಚಿಕಿತ್ಸೆ ಮತ್ತು ಮರು ಪರೀಕ್ಷೆಯ ನಂತರವೂ ರೋಗಿಯು ಬದುಕುಳಿಯದಿದ್ದರೆ, ಇದನ್ನು ವೈದ್ಯರ ಲೋಪವೆಂದು ಕರೆಯಲಾಗುವುದಿಲ್ಲ” ಎಂದಿದೆ. ಇದು ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವಲ್ಲ. ವೈದ್ಯರೇ ಶಸ್ತ್ರಚಿಕಿತ್ಸೆ ನಡೆಸಿರುವುದರಿಂದ ರೋಗಿಯ ಚಿಕಿತ್ಸೆಯ ವಿವಿಧ ಅಂಶಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ ಎಂಬ ದೂರುದಾರರ ವಾದವನ್ನು ಪೀಠ ತಿರಸ್ಕರಿಸಿತು. ಇದು ತಪ್ಪು ಕಲ್ಪನೆ ಎಂದು ಪೀಠ ಹೇಳಿದೆ.
ವೈದ್ಯ ಕೇವಲ ಒಬ್ಬ ರೋಗಿಯ ಹಿಂದೆಯೇ ಇರೋಕೆ ಸಾಧ್ಯವಿಲ್ಲ
ಆಸ್ಪತ್ರೆಯಲ್ಲಿ ರೋಗಿಯು ಹಾಸಿಗೆಯ ಪಕ್ಕದಲ್ಲೇ ವೈದ್ಯರು ಇರಬೇಕು ಎಂದು ನಿರೀಕ್ಷಿಸುವುದು ಅತಿರೇಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ದೂರುದಾರರೂ ಅದನ್ನೇ (ವೈದ್ಯರು ರೋಗಿಯ ಪಕ್ಕದಲ್ಲೇ ಇದ್ದು ನೋಡಿಕೊಳ್ಳಬೇಕಿತ್ತು) ನಿರೀಕ್ಷಿಸಿದ್ದರು. ವೈದ್ಯರು ಸರಿಯಾದ ಕಾಳಜಿಯನ್ನು ವಹಿಸಿದ್ದಾರೆ. ವೈದ್ಯರು ವಿದೇಶಕ್ಕೆ ಹೋಗಿದ್ದನ್ನು ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣ ಎಂದು ಕರೆಯಲಾಗದು.
ತಜ್ಞ ವೈದ್ಯರ ತಂಡವು ರೋಗಿಯ ಆರೈಕೆಯನ್ನು ಮಾಡಿತು ಆದರೆ ಆ ರೋಗಿಯ ಟೈಂ ಸರಿಯಿರಲಿಲ್ಲ ನ್ಯಾಯಾಲಯವು ಹೇಳಿದ್ದು. “ಕುಟುಂಬವು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವುದು ದುಃಖಕರವಾಗಿದೆ ಆದರೆ ಆಸ್ಪತ್ರೆ ಮತ್ತು ವೈದ್ಯರನ್ನು ದೂಷಿಸಲು ಸಾಧ್ಯವಿಲ್ಲ, ಏಕೆಂದರೆ ವೈದ್ಯರು ಎಲ್ಲಾ ಸಮಯದಲ್ಲೂ ಅಗತ್ಯ ಕಾಳಜಿಯನ್ನು ವಹಿಸಿಕೊಂಡಿದ್ದರು” ಎಂದು ಪೀಠ ಹೇಳಿದೆ.
ಒಬ್ಬ ವೈದ್ಯ ಎಲ್ಲರ ಸಮಸ್ಯೆಗಳನ್ನೂ ಪರಿಹರಿಸಲು ಸಾಧ್ಯವಿಲ್ಲ
ಇಂದಿನ ಸೂಪರ್ ಸ್ಪೆಷಲೈಸೇಶನ್ ಯುಗದಲ್ಲಿ, ಒಬ್ಬ ವೈದ್ಯರು ರೋಗಿಯ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಪ್ರತಿಯೊಂದು ಸಮಸ್ಯೆಯನ್ನು ಆಯಾ ಕ್ಷೇತ್ರದ ಪರಿಣಿತರು ಮಾತ್ರ ನೋಡಿಕೊಳ್ಳಬಹುದು. ವೈದ್ಯಕೀಯ ನಿರ್ಲಕ್ಷ್ಯಕ್ಕೆ ಆಸ್ಪತ್ರೆ ಮತ್ತು ವೈದ್ಯರನ್ನು ತಪ್ಪಿತಸ್ಥರೆಂದು ಹೊಂದಿರುವ ಆಯೋಗದ ಸಂಶೋಧನೆಗಳು ಕಾನೂನಿನ ಪ್ರಕಾರ ಸಮರ್ಥನೀಯವಲ್ಲ. ಮಧ್ಯಂತರ ಆದೇಶದ ಅಡಿಯಲ್ಲಿ ದೂರುದಾರರಿಗೆ ಪಾವತಿಸಿದ ಐದು ಲಕ್ಷ ರೂಪಾಯಿಗಳನ್ನು ಎಕ್ಸ್ ಗ್ರೇಷಿಯಾ ಪಾವತಿ ಎಂದು ಪರಿಗಣಿಸಲಾಗುತ್ತದೆ ಎಂದಿತು.
1998 ರ ಏಪ್ರಿಲ್ 22 ರಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿ, ದಿನೇಶ್ ಜೈಸ್ವಾಲ್, 12 ಜೂನ್ 1998 ರಂದು ಕೊನೆಯುಸಿರೆಳೆದರು. ಚಿಕಿತ್ಸೆಗಾಗಿ ಆಸ್ಪತ್ರೆಯವರು ಇವರಿಂದ 4.08 ಲಕ್ಷ ರೂಪಾಯಿ ಪಡೆದಿದ್ದರು. ಗ್ಯಾಂಗ್ರಿನ್‌ಗೆ ಆಪರೇಷನ್ ಮಾಡಿದ ನಂತರ ನಿರ್ಲಕ್ಷ್ಯ, ವೈದ್ಯರು ವಿದೇಶಿ ಪ್ರವಾಸದಲ್ಲಿದ್ದು, ತುರ್ತು ಆಪರೇಷನ್ ಥಿಯೇಟರ್ ಲಭ್ಯವಿಲ್ಲ ಎಂದಿದ್ದರಿಂದ ರೋಗಿ ಸಾವನ್ನಪ್ಪಿದರು ಎಂದು ಕುಟುಂಬಸ್ಥರು ಆರೋಪಿಸಿದ್ದರು.