ನವದೆಹಲಿ :
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ನಾನು ಹೋಗುವುದಿಲ್ಲ. ಮಂದಿರ ಉದ್ಘಾಟನೆಯ ದಿನ, ಬಾಬರಿ ಮಸೀದಿಯನ್ನು ಮರಳಿ ಪಡೆಯಲು ಅಲ್ಲಾಹನನ್ನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು.
ಎಲ್ಲಾ ಧರ್ಮದ ಜನರು ಪ್ರಪಂಚದ ಒಳಗೆ ಇದ್ದಾರೆ, ಆದರೆ ಈ ರೀತಿ ಮಸೀದಿಯನ್ನು ಒಡೆಯುವ ಅಥವಾ ನಾಶಪಡಿಸುವ ಮೂಲಕ, ಮಸೀದಿಯನ್ನು ದೇವಾಲಯವಾಗಿ ಬದಲಾಯಿಸಬಾರದು, ಇದು ಯಾವ ರೀತಿಯ ಮಾನವೀಯತೆ, ಇದು ಮಾನವೀಯತೆಯ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಇದು ಧರ್ಮಕ್ಕೆ ವಿರುದ್ಧವಾಗಿದೆ ಮತ್ತು ಸಂವಿಧಾನಕ್ಕೂ ವಿರುದ್ಧವಾಗಿದೆ ಎಂದು ಅವರು ಹೇಳಿದರು.
ನನ್ನ ಮಸೀದಿಯನ್ನು ಎಲ್ಲರೂ ಒಟ್ಟಾಗಿ ನಾಶಪಡಿಸಿದರು. ನಮ್ಮ ಮಸೀದಿ ಬಲವಂತದಿಂದ ಹುತಾತ್ಮವಾಯಿತು ಮತ್ತು ಈಗ ಅದರ ಮೇಲೆ ದೇವಾಲಯವನ್ನು ನಿರ್ಮಿಸಲಾಗುತ್ತಿದೆ, ನ್ಯಾಯಾಲಯವು ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ತೀರ್ಪು ನೀಡಿತು. ನಮ್ಮ ಬಾಬರಿ ಮಸೀದಿ ನಮಗೆ ಮರಳಲಿ ಎಂದು ನಾನು ಅಲ್ಲಾಹನನ್ನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ನಡುವೆ ಎಸ್ಪಿ ಸಂಸದ ಶಫೀಕರ್ ರೆಹಮಾನ್ ಬರ್ಕ್ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ರಾಮಮಂದಿರ ಉದ್ಘಾಟನೆಗೆ ಯಾವುದೇ ಕಾರಣಕ್ಕೂ ಬರೋದಿಲ್ಲ . ಅವರುಗಳು ಬಲದ ಮೂಲಕ ನಮ್ಮ ಮಸೀದಿಯನ್ನು ವಶಪಡಿಸಿಕೊಂಡಿದ್ದಾರೆ. ಜನವರಿ 22ರ ದಿನದಂದು ನಮ್ಮಿಂದ ಕಿತ್ತುಕೊಂಡಿರುವ ಬಾಬ್ರ ಮಸೀದಿಯ ಜಾಗವನ್ನು ನಮಗೆ ಮರಳಿ ಕೊಡಬೇಕು ಎಂದು ನಾವು ಅಲ್ಲಾಹ್ನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ್ ಲಾಲಾ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ದೇವಾಲಯದ ಉದ್ಘಾಟನೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ, ಸರ್ ಸಂಘಚಾಲಕ್ ಮೋಹನ್ ಭಾಗವತ್, ಯುಪಿ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲರು ಮತ್ತು ಎಲ್ಲಾ ಟ್ರಸ್ಟಿಗಳು ರಾಮಮಂದಿರದ ಎದುರು ಉಪಸ್ಥಿತರಿರುತ್ತಾರೆ. ಇದಲ್ಲದೆ ಇನ್ನೂ ಹಲವು ಗಣ್ಯರು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ನಿಟ್ಟಿನಲ್ಲಿ, ಎಸ್ಪಿ ಸಂಸದ ಶಫೀಕರ್ ರಹಮಾನ್ ಬರ್ಕ್ ಅವರಿಗೆ ದೇವಸ್ಥಾನದ ಉದ್ಘಾಟನೆಗೆ ಹೋಗುತ್ತೀರಾ ಎಂದು ಪ್ರಶ್ನೆ ಕೇಳಲಾಯಿತು. ಈ ಕುರಿತು ಅವರು, ನಾನು ಹೋಗುವುದೇ ಇಲ್ಲ. ನಾನು ಅಲ್ಲಿರುವ ಪ್ರಶ್ನೆಯೇ ಇಲ್ಲ. ನನ್ನ ಮಸೀದಿಯನ್ನು ಅಲ್ಲಿ ಬಹಳ ಹಿಂದಿನಿಂದಲೂ ನಿರ್ಮಿಸಲಾಗಿತ್ತು, ಆದರೆ ಅದು ನಾಶವಾಯಿತು. ಬಲವಂತದ ಎಲ್ಲರೂ ಸೇರಿ ಮಸೀದಿಯನ್ನು ಧ್ವಂಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಮಸೀದಿಯನ್ನು ಬಲವಂತವಾಗಿ ವಶಪಡಿಸಿಕೊಂಡರು. ನಮ್ಮಿಂದ ಕಿತ್ತುಕೊಂಡಿರುವ ಬಾಬರಿ ಮಸೀದಿಯನ್ನು ನಮಗೆ ಮರಳಿ ಕೊಡಬೇಕೆಂದು ನಾವು ಅಲ್ಲಾಹನಲ್ಲಿ ಅದೇ ದಿನ ಪ್ರಾರ್ಥಿಸುತ್ತೇವೆ. ನಮ್ಮ ಪ್ರಕರಣ ನ್ಯಾಯಾಲಯದ ಎದುರು ಕೂಡ ಹೋಗಿತ್ತು. ಆದರೆ, ಕೋರ್ಟ್ನಲ್ಲಿಯೂ ತೀರ್ಪು ನಮ್ಮ ನಿರೀಕ್ಷೆಗೆ ವಿರುದ್ಧವಾಗಿಯೇ ಬಂದಿದೆ. ಎಷ್ಟರಮಟ್ಟಿಗೆಂದರೆ ಈಗ ಅದರ ಮೇಲೆ ದೇವಸ್ಥಾನ ಕಟ್ಟುವ ಆದೇಶ ಬಂದಿದೆ. ಹುತಾತ್ಮರ ನೆನಪಿಗಾಗಿ ಕಟ್ಟಿದದ ಮಸೀದಿಯ ಮೇಲೆ ಇಂದು ಮಂದಿರ ನಿರ್ಮಾಣವಾಗಿದೆ. ಇದು ಸಂಪುರ್ಣವಾಗಿ ಕಾನೂನಿನ ವಿರುದ್ಧವಾಗಿದೆ. ಮಾನವೀಯತೆಗೆ ವಿರುದ್ಧವಾಗಿದೆ. ಜಗತ್ತಿನ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.